ಆಮ್‌ಸ್ಟ್ರಾಡಾಂ(ಮೇ.10); ಕೊರೋನಾ ವೈರಸ್ ಕಾರಣ ಬಂದ್ ಆಗಿದ್ದ ಬಹುತೇಕ ಸೇವೆಗಳು ಮತ್ತೆ ಆರಂಭಗೊಂಡಿದೆ. ಆದರೆ ಹೊಟೆಲ್, ರೆಸ್ಟೋರೆಂಟ್‌ ಇನ್ನು ಆರಂಭಗೊಂಡಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ತಿನಿಸುಗಳ ಮಜಾ ಸವಿಯುವ ಪರಿಸ್ಥಿತಿಯಲ್ಲಿ ಜನರಿಲ್ಲ. ಹಾಗಂತ ಬೇಸರ ಪಡುವ ಅಗತ್ಯವಿಲ್ಲ. ಇದೀಗ ರೆಸ್ಟೋರೆಂಟ್ ಒಂದು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕ್ವಾರಂಟೈನ್ ಗ್ರೀನ್‌ಹೌಸ್ ಪರಿಚಯಿಸಿದೆ.

ಗಾಜಿನ ಸಣ್ಣ ಕ್ವಾರಂಟೈನ್ ರೂಂ ರೀತಿ ಮಾಡಲಾಗಿದೆ. ಈ ಮೂಲಕ ಸಾಮಾಜಿಕ ಅಂತರಕ್ಕೆ ಪ್ರಮುಖ ಆದ್ಯತೆ ನೀಡಲಾಗಿದೆ. ಆಹಾರ ವಿತರಿಸುವವರು ಗಾಜಿನ ಮಾಸ್ಕ್ ಶೀಲ್ಡ್, ಗ್ಲೌಸ್, ಸ್ಯಾನಿಟೈಸರ್ ಬಳಸಲೇಬೇಕು. ಗಾಜಿನ ಮನೆಯೊಳಗೆ ಸೇರಿ ಇತರರಿಂದ ಕೊರೋನಾ ಹರಡುವ ಭೀತಿ ಇಲ್ಲದೆ ಆಹಾರ ಸೇವಿಸಬಹುದು. 

ಹಾಗಾದರೆ ಈಗಲೇ ಹೊರಟುಬಿಡೋಣ ಎಂಬ ಯೋಚನೆ ಇದ್ದರೆ ತಾಳ್ಮೆ ಇರಲಿ. ಈ ರೆಸ್ಟೋರೆಂಟ್ ಇರುವುದು ನೆದರ್ಲೆಂಡ್‌ನ ಆಮ್‌ಸ್ಟ್ರಾಡಾಂನಲ್ಲಿ. ಇಲ್ಲಿನ ಮಿಡಿಯಾಮ್ಯಾಟಿಕ್ ETEN ರೆಸ್ಟೋರೆಂಟ್ ಈ ಗ್ರೀನ್‌ಹೌಸ್ ಪರಚಯಿಸಿದೆ. ವಿಶೇಷ ಅಂದರೆ ಕೊರೋನಾ ವೈರಸ್ ಕಾರಣ ಸದ್ಯ ಸಸ್ಯಾಹಾರ ತಿನಿಸುಗಳು ಮಾತ್ರ ಲಭ್ಯ. 

ಇನ್ನು ಪ್ರಾಯೋಗಿಕವಾಗಿ ಈ ಹೊಟೆಲ್ ಕ್ವಾರಂಟೈನ್ ಗ್ರೀನ್‌ಹೌಸ್ ಆರಂಭಿಸಿದೆ. ಹೀಗಾಗಿ ಹೊಟೆಲ್‌ನ ಕುಟಂಬಸ್ಥರು, ಗೆಳೆಯರಿಗೆ ಮಾತ್ರ ಪ್ರವೇಶ ನೀಡಿದೆ. ಶೀಘ್ರದಲ್ಲೇ ಸಾರ್ವಜನಿಕರಿಗೆ ತೆರಯಲು ನಿರ್ಧರಿಸಿದೆ.