ಕನ್ನಡದ ನವನಾಯಕನಾಗಿ ಧಿರೇನ್ ಕೂಡ ಪ್ರವೇಶಿಸುತ್ತಿರುವ ಈ ಸಂದರ್ಭದಲ್ಲಿ ಈ ಸಹೋದರತ್ವದ ಮಾತುಗಳು ಓದುಗರಿಗೆ ಖುಷಿ ನೀಡುವುದೆಂದು ನಮ್ಮ ಆಶಯ.

- ಶಶಿಕರ ಪಾತೂರು

ಈ ಬಾರಿ ರಕ್ಷಾ ಬಂಧನಕ್ಕೆ ನೀವು ಧಿರೇನ್‌ ಗೆ ಏನು ಕೊಡುಗೆ ನೀಡಬೇಕು ಅಂತ ಇದ್ದೀರಿ?
ಧಿರೇನ್ ಜತೆಗೆ ಯಾವತ್ತೂ ಮೆಟಿರಿಯಲಿಸ್ಟಿಕ್ಕಾಗಿ ನೋಡಲ್ಲ. ಸಣ್ಣ ವಿಷಯವಾದರೂ ನಿಜಕ್ಕೂ ಖುಷಿಗೊಳಿಸುವಂಥದ್ದೊಂದು ಗಿಫ್ಟ್ ಕೊಡುತ್ತೇನೆ. ದಿನವನ್ನು ನೆನಪಿಸಿಕೊಂಡು ಪರಸ್ಪರ ವಿಶ್ ಮಾಡ್ಕೊಳ್ಳೋದೇ ದೊಡ್ಡ ವಿಷಯ ನಮ್ಮಿಬ್ಬರಿಗೂ. ಕಳೆದ ವರ್ಷ ಅವನಿಗೆ ಪಂಚಿಂಗ್ ಹ್ಯಾಂಡ್ ಇರುವ ಒಂದು ರಾಖಿ ಗಿಫ್ಟ್ ಮಾಡಿದ್ದೆ. ಯಾಕೆಂದರೆ ಆತನಿಗೆ ವರ್ಕೌಟ್ ಮಾಡೋದು ಇಷ್ಟ. ಅದರ ಸೂಚನೆಯಾಗಿ ಅಂಥದೊಂದು ರಾಖಿ ಗಿಫ್ಟ್ ಮಾಡಿದ್ದೆ. ಈ ಬಾರಿ ಅವನದೊಂದು ಸ್ಪೆಷಲ್ ರಿಕ್ವೆಸ್ಟ್ ಇದೆ. ನಾನು ಮಾಸ್ಕ್ ಹಾಕಿ ತೆಗೆಸಿರುವ ಫೊಟೋ ಒಂದನ್ನು ಇನ್ಸ್ಟಾಗ್ರಾಂನಲ್ಲಿ ಹಾಕಿದ್ದೆ. ಆ ಫೊಟೊ ಕೆಳಗೆ "ವೇರ್ ಈಸ್ ಮೈ ಮಾಸ್ಕ್" ಅಂತ ಕಮೆಂಟ್ ಮಾಡಿದ್ದಾನೆ. ಹಾಗಾಗಿ  ನಾನು ಮಾಸ್ಕನ್ನೇ ಗಿಫ್ಟ್ ಮಾಡೋಣ ಅಂತ ಇದ್ದೀನಿ. ಅವನಿಗೆ ಇದುವರೆಗೂ ಗೊತ್ತಿಲ್ಲ. ಆದರೆ ಸರ್‌ಪ್ರೈಸ್ ಗಿಫ್ಟ್ ಮಾಡೋಣ ಅಂತ ಇದ್ದೀನಿ. 

ನೀವು ಚಿತ್ರನಟಿಯಾಗುವ ಬಗ್ಗೆ ಧಿರೇನ್ ಅನಿಸಿಕೆ ಏನಾಗಿತ್ತು? 
ಆತ ನನಗೆ ಸಪೋರ್ಟಿವ್ ಆಗಿದ್ದ. ಹುಡುಗರಷ್ಟೇ ರೈಟ್ಸ್ ಹುಡುಗೀರಿಗೂ ಇದೆ ಅಂತ ಮನಸಾರೆ ಅಂದ್ಕೊಂಡಿರುವವನು ಧಿರೇನ್. ಹಾಗಾಗಿಯೇ ಅವಳಿಗೆ ಇಷ್ಟ ಇದ್ರೆ ಆಕ್ಟ್ ಮಾಡಲಿ. ಯಾಕೆಂದರೆ ಅದು ಅವಳ ಪ್ಯಾಷನ್. ಅವಳು ಕಷ್ಟಪಟ್ಟು ಶ್ರದ್ಧೆಯಿಂದ ಕೆಲಸ ಮಾಡೋದಾದರೆ ಮಾಡಲಿ ಅಂತಾನೇ ಮೊದಲಿನಿಂದಲೂ ಸಪೋರ್ಟ್ ಮಾಡಿಕೊಂಡು ಬಂದಿದ್ದಾನೆ. ಆದರೆ  ನನ್ನ ಆಯ್ಕೆಗಳ ಬಗ್ಗೆ ಯಾವತ್ತೂ ಇಂಟರ್‌ಫಿಯರ್ ಆಗಿಲ್ಲ. ನನ್ನ ಸಿನಿಮಾ ಶೂಟಿಂಗ್ ನಡೆಯಬೇಕಾದರೆ ಅಲ್ಲಿಗೆ ಬಂದಿದ್ದ. ನನಗೊಂದು ರೊಮ್ಯಾಂಟಿಕ್ ಸೀನ್ ಇತ್ತು. ಅದಕ್ಕೆ ನನಗೆ ಎಷ್ಟು ಸಹಾಯ ಮಾಡಿದ ಅಂದರೆ, ಮುಜುಗರ ಮರೆತು ಹೇಗೆ ಭಾಗಿಯಾಗಬಹುದು ಎಂದು ನನಗೆ ಅವನೇ ವಿವರಿಸಿದ. ನಮ್ಮದು ಆ ರೀತಿಯ ಸಂಬಂಧ. ತುಂಬಾ ಓಪನ್ ಮತ್ತು ಅದೇ ವೇಳೆ ತುಂಬಾ ಬ್ಯಾಲೆನ್ಸ್ಡ್‌.

ನಗು, ಅಳು ಎರಡನ್ನೂ ದಯಪಾಲಿಸಿದ ದಿನಗಳಿವು; ಧನ್ಯಾ ರಾಮ್‌ಕುಮಾರ್‌ ಲಾಕ್‌ಡೌನ್‌ ಬದುಕು! 

ನಿಮ್ಮ ನಡುವೆ ಜಗಳ ಅಥವಾ ಎಮೋಶನಲ್ ಘಟನೆಗಳು ನಡೆದಿವೆಯೇ? 
ವಯಸ್ಸಲ್ಲಿ ಸಣ್ಣವರಾಗಿದ್ದ ದಿನಗಳಲ್ಲಿ ಜಗಳವಂತೂ ಇತ್ತು. ಆದರೆ ಅವು ಬುದ್ಧಿ ಇರದ ಕಾಲದಲ್ಲಿನ ಫೈಟ್. ಟಿವಿ ರಿಮೋಟ್‌ಗೆ ಜಗಳವಾಡಿದ್ದೇವೆ. ಬೆಳೆಯುತ್ತಾ ನಮ್ಮ ಸಂಬಂಧ ತುಂಬ ಚೆನ್ನಾಗಿ ಮೂಡಿ ಬಂದಿದೆ. ಅಂದರೆ ಅವನ ಪರ್ಸನಲ್ ಸ್ಪೇಸ್‌ ನ ನಾನು ಅವನಿಗೆ ಕೊಡುತ್ತೀನಿ. ಅದೇ ರೀತಿ ಅವನೂ ನನಗೆ ಬಿಟ್ಟು ಕೊಡುತ್ತಾನೆ. ಆದರೆ ಅದೇ ಸಮಯದಲ್ಲಿ ಪರಸ್ಪರ ತುಂಬ ಕೇರ್ ಮಾಡುತ್ತಿರುತ್ತೇವೆ. ನಾನು ಆತನಿಗಾಗಿ ಏನನ್ನು ಬೇಕಾದರೂ ಬಿಟ್ಟು ಕೊಡಲು ಸಿದ್ಧಳಿರುತ್ತೇನೆ. ಅದೇ ಸಂದರ್ಭದಲ್ಲಿ ಧಿರೇನ್ ಕೂಡ ಅದಕ್ಕೆ ರೆಡಿ ಇರುತ್ತಾನೆ. ನಿರೀಕ್ಷೆಯೇ ಇಟ್ಟುಕೊಳ್ಳದಿದ್ದರೂ ಆ ಕೇರ್ ಹಾಗೆಯೇ ಇರುತ್ತೆ. ಇನ್ನು ಎಮೋಶನಲ್ ಸಂಗತಿ. ಅದು ಅವನ ಸಿನಿಮಾದ ಬೈಟ್ ನೋಡಿದಾಗ ನಾನು ನಿಜಕ್ಕೂ ಸ್ವಲ್ಪ ಎಮೋಶನಲ್ ಆದೆ. ಅದಕ್ಕೆ ಕಾರಣ ಈಗ ಏನು ಸಿನಿಮಾ ತಯಾರಾಗ್ತಿದೆ ಅದು ಧಿರೇನ್ ಕನಸು. ನನಗೆ ಬುದ್ಧಿ ಬಂದಾಗಿನಿಂದಾನೂ ಅವನಿಗೆ ಸಿನಿಮಾ ಡ್ರೀಮ್ ಇರೋದು ನೋಡಿದ್ದೇನೆ. ಅದು ನನಸಾಗ್ತಿರೋದು ಮತ್ತು ಅದರಲ್ಲಿ ಎಷ್ಟು ಚೆನ್ನಾಗಿ ಕೆಲಸ ಮಾಡಿದ್ದಾನೆ ಎನ್ನುವುದನ್ನು ನೋಡುವಾಗ ನಿಜಕ್ಕೂ ನನನಗೆ ಭಾವೋದ್ರೇಕವಾಯ್ತು. ಆತ ನಿಜಕ್ಕೂ ಕಲಾವಿದನಾಗಲೆಂದೇ ಹುಟ್ಟಿದವನು. ಖುಷಿಯಲ್ಲೇ ಅತ್ತುಬಿಟ್ಟಿದ್ದೀನಿ ನಾನು. 

ಅಣ್ಣ ಯಶ್ ಗುಟ್ಟು ಬಿಟ್ಟು ಕೊಟ್ಟ ತಂಗಿ ನಂದಿನಿ

ನಿಮ್ಮಿಬ್ಬರಿಗೂ ನಡುವೆ ಇರುವ ಪ್ರಮುಖ ಹೋಲಿಕೆಗಳೇನು?
ಕಾಲೇಜಲ್ಲಿದ್ದಾಗ ನಾವಿಬ್ಬರೂ ಸ್ಪೋರ್ಟ್ಸ್‌ನಲ್ಲಿ ತುಂಬ ಆಕ್ಟಿವ್ ಆಗಿದ್ದೆವು. ಓಡೋದು, ಲಾಂಗ್ ಜಂಪಲ್ಲಿ ಚೆನ್ನಾಗಿದ್ದೆವು. ತಿನ್ನೋ ವಿಷಯದಲ್ಲಿಯೂ ಅಷ್ಟೇ;  ನಮಗೆ ಇಬ್ಬರಿಗೂ ಫೇವರಿಟ್ ಡಿಶ್ ಅಂದರೆ ಬಟರ್ ಚಿಕನ್, ಬಿರ್ಯಾನಿ ಮತ್ತು ಪರೊಟ. ಒಬೆರಾಯ್ ಹೋಟೆಲ್‌ ರೆಸ್ಟೋರೆಂಟಲ್ಲಿ ನಮಗಿಬ್ಬರಿಗು ಫೇವರಿಟ್ ಆಗಿರುವ ಡಿಶ್ ಅದು. ನಮ್ಮನೇಲಿ ಯಾರಿಗೆ ಭಿನ್ನಾಭಿಪ್ರಾಯ ಬಂದು ಜಗಳ ಆಗ್ತಿದೆ ಅಂದರೂ ಅದನ್ನು ತಡೆಯೋದು ಅವನೇ. ನನಗೂ ಮಮ್ಮಿಗೂ, ನನಗೂ ಡ್ಯಾಡಿಗೂ ಮಾತ್ರವಲ್ಲ, ಮಮ್ಮಿಗೂ ಡ್ಯಾಡಿಗೂ ಜಗಳ ಆದರೂ ಆತನೇ ತಡೆಯೋದು. ಖಂಡಿತವಾಗಿ ಧಿರೇನ್ ನನಗೆ ಎಂದಿಗೂ ಆತ್ಮೀಯ.