ಪ್ರಿಯಾ ಕೆರ್ವಾಶೆ

ಯಾವತ್ತಾದ್ರೂ ಕತ್ರಿ ಹಿಡಿದು ಕಟ್ಟಿಂಗ್‌ ಮಾಡಿದ್ದೀರಾ?

ಖಂಡಿತಾ ಇಲ್ಲ. ಈ ಸಿನಿಮಾದಲ್ಲೇ ಕಟ್ಟಿಂಗ್‌ನ ಮೊದಲ ಅನುಭವವಾಯ್ತು.

ಈ ಪಾತ್ರ ಮಾಡ್ತಾ ಮಾಡ್ತಾ ನಿಮಗಾದ ಜ್ಞಾನೋದಯ?

ಕ್ಷೌರಿಕರದು ಬಹಳ ದೊಡ್ಡ ಸಮುದಾಯ. ಈ ಸಿನಿಮಾದಲ್ಲಿ ನಾನು ಅವರನ್ನು ಪ್ರತಿನಿಧಿಸುತ್ತಿದ್ದೀನಿ. ಹೀಗಾಗಿ ನನ್ನ ಮೇಲಿರುವುದು ದೊಡ್ಡ ಜವಾಬ್ದಾರಿ. ಜನ ಹೇಗೆ ಸ್ವೀಕರಿಸಬಹುದು ಅನ್ನುವ ಕುತೂಹಲ ಇದ್ದೇ ಇದೆ.

ಈ ಪಾತ್ರಕ್ಕೆ ನಿಮ್ಮ ಪ್ರಿಪರೇಶನ್ಸ್‌ ಏನಿತ್ತು?

ತುಂಬ ಕಾನ್ಶಿಯಸ್‌ ಆಗಿಲ್ಲದೇ ಇದ್ದರೂ, ಒಂದಿಷ್ಟುಸಿದ್ಧತೆ ಮಾಡಿಕೊಂಡಿದ್ದೆ. ಕ್ಷೌರಿಕರ ಚಾಕಚಕ್ಯತೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೆ. ಜೊತೆಗೆ ನಮ್ಮ ನಿರ್ದೇಶಕರು ಒಂದಿಷ್ಟುರೀಡಿಂಗ್‌ ಮೆಟೀರಿಯಲ್‌ ಕೊಟ್ಟಿದ್ರು. ಅದನ್ನು ಅಧ್ಯಯನ ಮಾಡಿದ್ದೇನೆ. ಒಟ್ಟಾರೆ ಈ ವ್ಯಕ್ತಿಯ ಕನಸುಗಳನ್ನು ಜೀವಿಸಲು ಪ್ರಯತ್ನಿಸಿದ್ದೇನೆ. ನಿಜ ಹೇಳ್ಬೇಕು ಅಂದ್ರೆ ನನ್ನ ಈ ಪಾತ್ರಕ್ಕೆ ಇನ್ನಷ್ಟುಸ್ಪೇಸ್‌ ಬೇಕಿತ್ತು ಅಂತ ಅನಿಸಿದೆ. ಬಟ್‌, ನನ್ನ ಗೆಳೆಯರೇ ಬೈತಿರ್ತಾರೆ, ನಿನಗೆ ಯಾವಾಗ್ಲೂ ಅತೃಪ್ತಿ ಅಂತ. ಇರುವ ಅವಕಾಶ ಬಳಸಿಕೊಂಡು ಬೆಸ್ಟ್‌ ಅಭಿನಯ ನೀಡಿದ್ದೇನೆ.

ಈ ಸಿನಿಮಾದಲ್ಲಿ ಪ್ರೇಕ್ಷಕ ಚಂದನ್‌ ಅವರಿಂದ ಏನನ್ನು ನಿರೀಕ್ಷಿಸಬಹುದು?

ಇದೊಂಥರ ಪ್ರೀತಿ ಮತ್ತು ಜವಾಬ್ದಾರಿ. ನಿಜ ಜೀವನದಲ್ಲೂ ಸುದೀಪ್‌ ಅವರ ಅಭಿನಯವನ್ನು ಬೆರಗಿನಿಂದ ನೋಡುವವನು ನಾನು. ಆದರೆ ಅದನ್ನು ನಟನೆಯಲ್ಲಿ ತರೋದು ಚಾಲೆಂಜಿಂಗ್‌. ನಂಗಂತೂ ತುಂಬಾ ಕಷ್ಟವೇ ಆಯ್ತು. ನನ್ನೆಲ್ಲ ಶ್ರಮ ಹಾಕಿ ಈ ಪಾತ್ರಕ್ಕೆ ಸುದೀಪ್‌ ಮೇಲಿರುವ ಅಭಿಮಾನ, ಪ್ರೀತಿ, ಹಪಿಹಪಿಯನ್ನು ಪ್ರತಿಬಿಂಬಿಸಲು ಪ್ರಯತ್ನಿಸಿದ್ದೇನೆ. ಜೊತೆಗೆ ಮನರಂಜನೆಯೂ ಇದೆ.

ಬಿಗ್‌ಬಾಸ್‌ ಚಂದನ್‌ಗೆ 'ಮಂಗಳವಾರ ರಜಾದಿನ'; ಸುದೀಪ್‌ಗೆ ಕೇಶ ವಿನ್ಯಾಸ ಮಾಡುತ್ತಾರಾ? 

ಈ ಪಾತ್ರ ಮಾಡಿದ ಮೇಲೆ ಕಟ್ಟಿಂಗ್‌ ಶಾಪ್‌ಗೆ ಹೋದಾಗ ಹೇಗನಿಸ್ತಿತ್ತು?

ನಾನು ಒಂದು ಪಾತ್ರವಾಗಿ ಅಭಿನಯಿಸಿದ ನಂತರ ಆ ಪಾತ್ರದಿಂದ ಸಂಪೂರ್ಣ ಹೊರ ಬರುತ್ತೇನೆ. ಯಾವತ್ತೂ ಪಾತ್ರವಾಗಿಯೇ ಇರೋದಿಲ್ಲ. ಹೀಗಾಗಿ ಏನೂ ಅನಿಸಲಿಲ್ಲ.

ನಟನೆ ಬಿಟ್ರೆ ಮತ್ತೆಲ್ಲಿ ಸಿಕ್ತಾರೆ ಚಂದನ್‌?

ರಂಗಭೂಮಿಯನ್ನು ಬಹಳ ಪ್ರೀತಿಸುವವನು ನಾನು. ಬಹುಶಃ ರಂಗಶಂಕರದಲ್ಲಿ ಸಿಗಬಹುದು.

ನಿಮ್ಮ ಊರು, ಆಸಕ್ತಿಗಳ ಬಗ್ಗೆ ಹೇಳ್ತೀರಾ?

ಊರು ಮೈಸೂರು. ನಾನು ಓದಿದ್ದು ಜರ್ನಲಿಸಂ. ಆದರೆ ಆಮೇಲೆ ನೀನಾಸಂನಲ್ಲಿ ಮೂರು ವರ್ಷ ನಟನೆಯ ಪಾಠ ಹೇಳಿಸಿಕೊಂಡೆ. ಆಸಕ್ತಿ, ಬದುಕು ಎಲ್ಲ ನಟನೆಯೇ.

ಬಿಗ್‌ಬಾಸ್‌ನಿಂದ ಹೊರಬಿದ್ದ ಚಂದನ್; ವಿನ್ನರ್ ಬಗ್ಗೆ ಕೊಟ್ರು ಶಾಕ್..! 

ಯಾವ ಜಾನರ್‌ ಸಿನಿಮಾ ಇಷ್ಟ? ಯಾವ ಥರದ ಪಾತ್ರ ಮಾಡೋಕೆ ಇಷ್ಟ?

ನನಗೆ ಎಲ್ಲ ಬಗೆಯ ಸಿನಿಮಾಗಳೂ ಇಷ್ಟಆಗುತ್ತವೆ. ಪಾತ್ರದ ಆಯ್ಕೆ ವಿಚಾರದಲ್ಲಿ ಚ್ಯೂಸಿಯೇ. ಆದರೆ ನನ್ನೊಳಗಿನ ನಟನಿಗೆ ತೃಪ್ತಿ ಅನಿಸುವ ಪಾತ್ರಗಳನ್ನು ಮಾಡುತ್ತೇನೆ.