ಪ್ರಶಸ್ತಿ ಅವಕಾಶ ಸೃಷ್ಟಿಸುತ್ತೆ ಅನ್ನುವ ಭರವಸೆಯಿಲ್ಲ: ಅಕ್ಷತಾ ಪಾಂಡವಪುರ

ನ್ಯೂಯಾರ್ಕ್ ಇಂಡಿಯನ್ ಫಿಲಂ ಫೆಸ್ಟಿವಲ್‌ನಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ವಿಜೇತೆ ಜೊತೆ ಮಾತುಕತೆ

Akshatha Pandavapura exclusive interview about Pinki elli vcs

ಪ್ರಿಯಾ ಕೆರ್ವಾಶೆ

ಅಕ್ಷತಾ ಪಾಂಡವಪುರ ಅವರ ‘ಪಿಂಕಿ ಎಲ್ಲಿ?’ ಸಿನಿಮಾಕ್ಕೆ ನ್ಯೂಯಾರ್ಕ್ ಇಂಡಿಯನ್ ಫಿಲಂ ಫೆಸ್ಟಿವಲ್‌ನಲ್ಲಿ ಅತ್ಯುತ್ತಮ ನಟಿ ಪುರಸ್ಕಾರ ಸಿಕ್ಕಿದೆ. ಈ ಹಿಂದೆ ‘ತಲ್ಲಣ’ ಸಿನಿಮಾಕ್ಕಾಗಿ ರಾಜ್ಯ ಪ್ರಶಸ್ತಿ ಪಡೆದವರು ಅಕ್ಷತಾ. ಅವರಿಲ್ಲಿ ಪ್ರಶಸ್ತಿ, ಅವಕಾಶಗಳು, ಸಿನಿಮಾದ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಈ ಪ್ರಶಸ್ತಿ ನಿಮ್ಮ ಉತ್ಸಾಹ, ಕಾನ್ಪಿಡೆನ್‌ಸ್ ಅನ್ನು ಹೆಚ್ಚಿಸಿರಬೇಕಲ್ಲಾ?

ಹೀಗೆ ಪ್ರಶಸ್ತಿಗಳು ಬಂದಾಗ ಎರಡು ಸಾಧ್ಯತೆಗಳಿರುತ್ತವೆ. ಕೆಲವೊಮ್ಮೆ ಅವಕಾಶಗಳು ಅರಸಿಕೊಂಡು ಬರುತ್ತವೆ, ಎಷ್ಟೋ ಸಲ ಬರುವ ಅವಕಾಶಗಳೂ ಬರಲ್ಲ. ಸದಭಿರುಚಿ ಇರುವವರಿಗೆ ಈಕೆಯನ್ನು ತಗೊಳ್ಳೋಣ ಅನಿಸಬಹುದು. ಇನ್ನೂ ಕೆಲವರಿಗೆ ಈಕೆಗೆ ಅವಾರ್ಡ್ ಬಂದಿದೆ, ನಮ್ಮ ಬಜೆಟ್‌ಗೆ ಸೂಟ್ ಆಗ್ತಾರಾ, ಇವರನ್ನು ಕಾಸ್‌ಟ್ ಮಾಡಿದ್ರೆ ಇವರಿಗೇ ಹೆಚ್ಚು ಪ್ರಚಾರ ಕೊಡಬೇಕಾಗುತ್ತೆ ಅಂತೆಲ್ಲ ಅನಿಸಿ ನಾವು ಬೇಡವಾಗುವ ಸಾಧ್ಯತೆಯೂ ಇದೆ.

ರೋಹಿಣಿ ಸಿಂಧೂರಿಯನ್ನು ಇಷ್ಟಪಡದಿರಲು ಸಾಧ್ಯವೇ?: ನಟಿ ಅಕ್ಷತಾ ಪಾಂಡವಪುರ! 

ಈ ಥರದ ಅನುಭವ ಆಗಿತ್ತಾ ಹಿಂದೆ?

ಹೌದು. ಪಲ್ಲಟ ಚಿತ್ರಕ್ಕೆ ನನಗೆ ರಾಜ್ಯಪ್ರಶಸ್ತಿ ಬಂದ ಮೇಲೆ ನನ್ನ ‘ಒಬ್ಬಳು’ ಅನ್ನುವ ರಂಗ ಪ್ರಯೋಗದ ಪ್ರದರ್ಶನಕ್ಕೆ ಬರುತ್ತಿದ್ದ ಕರೆಗಳು ಕಡಿಮೆಯಾಗತೊಡಗಿದವು. ಕೇಳಿದ್ರೆ, ‘ನಿಮಗೀಗ ಅವಾರ್ಡ್ ಬಂದಿದೆ. ಮೊದಲಿನ ದುಡ್ಡಿಗೆಲ್ಲ ಮಾಡ್ತೀರಾ’ ಅನ್ನುವ ಥರದ ಮಾತುಗಳು. ನಾಟಕದಲ್ಲೂ ಹೀಗೆಲ್ಲ ನಿರ್ಧಾರವಾಗುತ್ತಾ ಅಂತನಿಸಿತ್ತು ಆಗ. ನಾವು ನಟಿಯರು ಸ್ಟಾರ್ ಆಗಲಿಕ್ಕೆ ಇಷ್ಟಪಡಲ್ಲ. ಸೋ ಕಾಲ್‌ಡ್ ಸೆಲೆಬ್ರಿಟಿಗಳೂ ಆಗಲ್ಲ. ನೆಲದ ಮೇಲೇ ಉಳಿಯಲಿಕ್ಕೆ ಬೆಳೆಯಲಿಕ್ಕೆ ಇಷ್ಟ ಪಡ್ತೀವಿ. ನಮಗೆ ಸಿನಿಮಾದಲ್ಲೋ, ನಾಟಕದಲ್ಲೋ ಒಳ್ಳೆಯ ಪಾತ್ರ ಸಿಕ್ಕರೆ ಅದೇ ತೃಪ್ತಿ.

Akshatha Pandavapura exclusive interview about Pinki elli vcs

ಪಿಂಕಿ ಎಲ್ಲಿ ನಿಮ್ಮ ಅಭಿನಯದ ಬಗ್ಗೆ ಹೇಳಿ?

8 ತಿಂಗಳ ಮಗುವನ್ನು ಕಳೆದುಕೊಂಡ ಒಬ್ಬ ಹೌಸ್‌ವೈಫ್ ಪಾತ್ರ. ಸತ್ಯ ಘಟನೆಯನ್ನಾಧರಿಸಿದ ಸಿನಿಮಾ. ಬಹಳ ರಿಯಲ್ ಆಗಿ ಇಡೀ ಸಿನಿಮಾ ಚಿತ್ರೀಕರಿಸಿದ್ದಾರೆ. ಶುರುವಿಗೆ ಈ ಪಾತ್ರದ ಆಂತರ್ಯ ನನಗೆ ಗೊತ್ತಾಗಲಿಲ್ಲ. ನಿರ್ದೇಶಕ ಪೃಥ್ವಿ ಕೊಣನೂರ್ ವಿವರಿಸಿದ ರೀತಿ, ನನ್ನಿಂದ ಆ ನಟನೆ ತೆಗೆಸಿದ್ದು ರಿಯಲೀ ಗ್ರೇಟ್. ಭಾವನೆಗಳನ್ನು ಬಿಗಿದು ಒಳಗಿಟ್ಟಕೊಂಡು ಬಹಳ ಸೂಕ್ಷ್ಮವಾಗಿ ಕನ್ವೇ ಮಾಡೋದಿದೆಯಲ್ಲಾ, ಅದು ಬಹಳ ಚಾಲೆಂಜಿಂಗ್.

ಇಂಥಾ ಪ್ರಶಸ್ತಿಗಳೆಲ್ಲ ಬಂದ ಮೇಲೆ ನಿಮ್ಮ ಪ್ರತಿಭೆ ಬೆಳಗುವಂಥಾ ಪಾತ್ರಗಳು ಹೆಚ್ಚೆಚ್ಚು ಸಿಗಬಹುದು ಅನಿಸುತ್ತಾ?

ನನಗೆ ಆ ಭರವಸೆ ಇಲ್ಲ. ನಮ್ಮಲ್ಲಿ ಪ್ರತಿಭೆಗೆ ಅವಕಾಶ ಇರುವಂಥಾ ಮಹಿಳಾ ಪೋಷಕ ಪಾತ್ರಗಳನ್ನೇ ಸೃಷ್ಟಿಸಲ್ಲ. ಆದರೆ ಹುಡುಗರಿಗೆ ಪೋಷಕ ಪಾತ್ರಗಳಲ್ಲಿ ಬೆಳೆಯಲು ಸಾಕಷ್ಟು ಅವಕಾಶ ಇದೆ. ವಸಿಷ್ಠ ಸಿಂಹ, ಧನಂಜಯ ಅವರಂಥವರೆಲ್ಲ ಬೆಳೆದಿದ್ದಾರೆ. ಆದರೆ ಹೆಣ್ಮಕ್ಕಳಿಗೆ ಅಂಥಾ ಪಾತ್ರಗಳಿರೋದಿಲ್ಲ. ಕೇಳಿದರೆ ನಟಿಯರಿಲ್ಲ ಅಂತಾರೆ. ನಿಜದಲ್ಲಿ ಉತ್ತಮ ನಟಿಯಾಗಲು ಬೇಕಾದ ಎಲ್ಲ ಅರ್ಹತೆ ಇರುವ ಎಷ್ಟೋ ಹುಡುಗಿಯರು ನಮ್ಮಲ್ಲಿದ್ದಾರೆ. ನಮ್ಮ ಸ್ಯಾಂಡಲ್‌ವುಡ್ ಅವರ ಪ್ರತಿಭೆ ಹೊರಬರಲೂ ಅವಕಾಶ ನೀಡಬೇಕಿದೆ.

ಅಕ್ಷತಾ ಪಾಂಡವಪುರಗೆ ನ್ಯೂಯಾರ್ಕ್ ಫಿಲ್ಮ್‌ ಫೆಸ್ಟಿವಲ್‌ ಶ್ರೇಷ್ಠ ನಟಿ ಪ್ರಶಸ್ತಿ 

ವರ್ಚ್ಯುವಲ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿದ ಅನುಭವ ಹೇಗಿತ್ತು?

ಈ ಕೊರೋನಾ ಕಾಟ ಇಲ್ಲದಿದ್ದರೆ ಅಲ್ಲಿಗೇ ನ್ಯೂಯಾರ್ಕ್‌ಗೇ ಹೋಗಿ ಪ್ರಶಸ್ತಿ ಪಡೆಯುವ ಅವಕಾಶ ಇತ್ತು. ವರ್ಚ್ಯುವಲ್ ಕಾರ್ಯಕ್ರಮದಲ್ಲಿ ಭಾಗವಹಿಸುವಾಗ ನರ್ವಸ್ ಆಗಿದ್ದೆ. ಏನನ್ನೂ ಸರಿಯಾಗಿ ಗಮನಿಸೋದಕ್ಕೆ ಆಗುತ್ತಿರಲಿಲ್ಲ. ಆದರೆ ಪ್ರಶಸ್ತಿಗೆ ನನ್ನ ಹೆಸರು ಘೋಷಣೆ ಆದಾಗ ಬಹಳ ಖುಷಿಯಾಯ್ತು.

Latest Videos
Follow Us:
Download App:
  • android
  • ios