Asianet Suvarna News Asianet Suvarna News

ರೌಡಿ ಆಗಿದ್ದವನನ್ನು ಲವರ್‌ ಬಾಯ್‌ ಮಾಡಿದ್ರು ಮೇಷ್ಟ್ರು: ವಸಿಷ್ಠ ಸಿಂಹ

ಕಂಚಿನ ಕಂಠದ ವಸಿಷ್ಠ ಸಿಂಹ, ತೆರೆ ಮೇಲೂ ಸಿಂಹದಂತೆ ಗರ್ಜಿಸುವ ಪ್ರತಿಭೆ. ಅಂಥ ಖದರ್‌ ಇರೋ ನಟನನ್ನು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಲವರ್‌ಬಾಯ್‌ ಗೆಟಪ್‌ನಲ್ಲಿ ತೋರಿಸುತ್ತಿದ್ದಾರೆ. ಜ.24ರಂದು ಸಿನಿಮಾ ತೆರೆಗೆ ಬರುತ್ತಿದೆ. ಈ ಬಗ್ಗೆ ಸಿಂಹ ಆಡಿದ ಮಾತುಗಳು ಇಲ್ಲಿವೆ.

Actor vasishta simha India versus England exclusive Interview
Author
Bangalore, First Published Jan 23, 2020, 8:53 AM IST
  • Facebook
  • Twitter
  • Whatsapp

ಆರ್‌ ಕೇಶವಮೂರ್ತಿ

ಈ ಚಿತ್ರಕ್ಕೆ ನೀವೇ ಹೀರೋ ಅಂದಾಗ ಆ ಕ್ಷಣ ನಿಮಗೆ ಅನಿಸಿದ್ದು ಏನು?

ಅಚ್ಚರಿ ಆಯ್ತು. ನಾಗತಿಹಳ್ಳಿ ಮೇಷ್ಟುಸಿನಿಮಾದಲ್ಲಿ ನಾನು ಹೀರೋನಾ ಎಂದು ಒಂದು ಕ್ಷಣ ಯೋಚಿಸಿ, ತಮಾಶೆ ಮಾಡಬೇಡಿ ಮೇಷ್ಟೆ್ರ ಅಂದಿದ್ದೆ. ಆ ಮೇಲೆ ಟೈಟಲ್‌ ಜತೆಗೆ ಚಿತ್ರದ ಕತೆ ಹೇಳಿದ ಮೇಲೂ ‘ನಿಜ ಹೇಳಿ, ನಾನೇ ಹೀರೋ?’ ಅಂತ ಕೇಳಿದೆ.

ನೀವೇ ಹೀರೋ ಅಂದಾಗ, ತಮಾಷೆ ಅನ್ಕೊಂಡಿದ್ದೆ: ವಸಿಷ್ಠ ಸಿಂಹ!

ನೀವೇ ಹೀರೋ ಆಗಬೇಕು ಅಂದುಕೊಂಡಿದ್ದು ಯಾಕೆ?

ರೆಗ್ಯೂಲರ್‌ ನಾಲ್ಕು ಫೈಟ್‌ ಮಾಡುವ, ಡ್ಯಾನ್ಸ್‌ ಮಾಡಿ, ಡೈಲಾಗ್‌ ಹೇಳುವ ಹೀರೋಗಿಂತ ಕಲಾವಿದ ಬೇಕು. ಈ ಚಿತ್ರದ ಮೂಲಕ ನಾನು ಹೊಸ ಕತೆ ಹೇಳುತ್ತಿರುವೆ. ನನ್ನ ಆ ಕತೆಗೆ ಉತ್ಸಾಹಿ ಆರ್ಟಿಸ್ಟ್‌ ಬೇಕು ಎಂದುಕೊಂಡೆ. ಅದಕ್ಕೆ ನೀವು ಸೂಕ್ತ... ಇದು ನಾಗತಿಹಳ್ಳಿ ಚಂದ್ರಶೇಖರ್‌ ನನಗೆ ಹೇಳಿದ ಮಾತು.

ಈ ಚಿತ್ರ ಒಪ್ಪಿಕೊಂಡಿದ್ದು ಹೀರೋ ಪಟ್ಟಕ್ಕಾ, ನಾಗತಿಹಳ್ಳಿ ಅವರಿಗಾಗಿನಾ?

ಈಗಾಗಲೇ ನಾನು ಹೀರೋ ಆಗಿದ್ದೇನೆ. ಕತೆಗಾಗಿಯೇ ಈ ಚಿತ್ರ ಒಪ್ಪಿಕೊಂಡೆ. ಆದರೆ, ಇದೇ ಕತೆಯನ್ನು ಬೇರೆಯವರು ಹೇಳಿದರೆ ಒಪ್ಪುತ್ತಿರಲಿಲ್ಲ. ಯಾಕೆಂದರೆ ಇಂಥ ಕತೆಯನ್ನು ಹೇಳಕ್ಕೆ ನಾಗತಿಹಳ್ಳಿ ಚಂದ್ರಶೇಖರ್‌ ಅಂಥವರಿಂದಲೇ ಸಾಧ್ಯ. ಕತೆ ಮತ್ತು ಮೇಷ್ಟು್ರ ಕಾರಣಕ್ಕೆ ಈ ಚಿತ್ರ ಒಪ್ಪಿದೆ.

ಇಂಡಿಯಾ ವರ್ಸಸ್‌ ಇಂಗ್ಲೆಡ್‌ ಚಿತ್ರದ ಕತೆ ಏನು?

ಒಬ್ಬ ಮನುಷ್ಯನಿಗೆ ವರ್ತಮಾನದಷ್ಟೆಚರಿತ್ರೆಯೂ ಮುಖ್ಯ. ಚರಿತ್ರೆ ಮರೆತವನು ಭವಿಷ್ಯ ಕಟ್ಟಲಾರೆ. ಪ್ರತಿಯೊಬ್ಬನಿಗೂ ಒಂದು ಚರಿತ್ರೆ ಇದೆ. ಅದರ ಸತ್ಯಾನ್ವೇಷಣೆಯೇ ಈ ಚಿತ್ರದ್ದು. ಅನಿವಾಸಿ ಭಾರತೀಯನೊಬ್ಬನ ಕತೆ ಇದು. ಸರಿ- ತಪ್ಪುಗಳು, ಚರಿತ್ರೆ ಮತ್ತು ಸಂಬಂಧಗಳು ಇವು ಚಿತ್ರದಲ್ಲಿ ಹೇಗೆ ಮೂಡಿವೆ ಎಂಬುದೇ ಈ ಚಿತ್ರದ ಶಕ್ತಿ.

ರಚಿತಾ ರಾಮ್‌, ವಸಿಷ್ಠ ಸಿಂಹ ಜೋಡಿಯ ಹೊಸ ' ಪಂಥ'!

ನೀವು ಎಂಥ ಕತೆಯನ್ನು ನಿರೀಕ್ಷೆ ಮಾಡಿಕೊಂಡು ಮೇಷ್ಟು್ರ ಮನೆಗೆ ಹೋದ್ರಿ?

ಬಾ ನಲ್ಲೆ ಮಧುಚಂದ್ರಕೆ ಚಿತ್ರದಂತೆ ಯಾವುದೋ ಒಂದು ಥ್ರಿಲ್ಲರ್‌ ಕತೆ ಮಾಡಿದ್ದಾರೆ. ಅದರಲ್ಲಿ ಒಂದು ಆ್ಯಕ್ಷನ್‌ ಇರುತ್ತದೆ. ಅದಕ್ಕೆ ನಾನು ಬೇಕಾಗಬಹುದು ಅಂದುಕೊಂಡು ಹೋದೆ. ಆದರೆ, ನನ್ನ ಊಹೆಯೇ ಸುಳ್ಳಾಗಿ, ನಾನು ನಿರೀಕ್ಷೆಯೇ ಮಾಡದ ಕತೆಯೊಂದನ್ನು ನಾಗತಿಹಳ್ಳಿ ಅವರು ರೆಡಿ ಮಾಡಿಕೊಂಡಿದ್ದರು.

ಹೀರೋ ಮತ್ತು ಕ್ಯಾರೆಕ್ಟರ್‌ ನಡುವಿನ ವ್ಯಾತ್ಯಾಸ ಏನು?

ಕಲಾವಿದನಾಗಿ ನೋಡುದಾದರೆ ವ್ಯತ್ಯಾಸವಿಲ್ಲ. ಕ್ಯಾರೆಕ್ಟರ್‌ ಆಗಿದ್ದಾಗ ಎಷ್ಟುಕೆಲಸ ಮಾಡುತ್ತೇವೋ, ಹೀರೋ ಆಗಿದ್ದಾಗಲೂ ಅಷ್ಟೇ ಮಾಡುತ್ತೇವೆ. ಆದರೆ, ಹೀರೋ ಆಗಿದ್ದಾಗ ಜವಾಬ್ದಾರಿ ಹೆಚ್ಚಾಗುತ್ತದೆ. ನಮ್ಮ ಹೆಸರಿನಲ್ಲಿ ಥಿಯೇಟರ್‌ಗಳ ಸೆಟಪ್‌ ಮಾಡುತ್ತಾರೆ, ಚಿತ್ರದ ಬ್ಯುಸಿನೆಸ್‌ ಓಪನ್‌ ಮಾಡುತ್ತಾರೆ, ಬಿಡುಗಡೆಯ ಹೊತ್ತಿನಲ್ಲಿ ಇಡೀ ಸಿನಿಮಾ ಹೀರೋ ಕಡೆ ನೋಡುತ್ತಿರುತ್ತದೆ.

ನಾಯಕನಾಗಿ ಈ ಚಿತ್ರದಿಂದ ನೀವು ಕಲಿತಿದ್ದೇನು?

ನಮ್ಮ ಹೀರೋಗಳಿಗೆ ಎಷ್ಟುತಾಳ್ಮೆ ಇದೆ, ಅವರು ಪ್ರತಿ ಚಿತ್ರ ಬಿಡುಗಡೆಯಾದಾಗಲೂ ಎಷ್ಟುಒತ್ತಡದಲ್ಲಿರುತ್ತಾರೆ, ಎಷ್ಟುಭಾರ ಹೊತ್ತುಕೊಂಡಿರುತ್ತಾರೆ ಎಂಬುದನ್ನು ಈ ಚಿತ್ರದಿಂದ ನಾನು ಅರಿತೆ.

ಈ ಸಿನಿಮಾ ನಿಮಗೆ ಕೊಟ್ಟಖುಷಿಗಳೇನು?

ಮೊದಲ ಬಾರಿಗೆ ಸಮುದ್ರದ ನಡುವೆ ಫೈಟ್‌ ಮಾಡಿದ್ದು, ದೇಹ ತೂಕ ಇಳಿಸಿಕೊಂಡೆ. ಮೊದಲ ಬಾರಿಗೆ ಅತಿ ಹೆಚ್ಚು ದಿನ ವಿದೇಶದಲ್ಲಿ ಚಿತ್ರೀಕರಣದಲ್ಲಿ ಭಾಗವಹಿಸುವ ಖುಷಿ ಕೊಟ್ಟಿತು. ತೆರೆ ಮೇಲೆ ರೌಡಿ ಆಗಿದ್ದವನನ್ನು ಲವರ್‌ ಬಾಯ್‌ ಮಾಡಿತು. ಒಂದಷ್ಟುವರ್ಷ ಕಳೆದ ಮೇಲೆ ಹಿಂತಿರುಗಿ ನೋಡಿದಾಗ ನೆನಪಿನಲ್ಲಿ ಉಳಿಯುವಂತಹ ನಿರ್ದೇಶಕರ ಜತೆ ಕೆಲಸ ಮಾಡಿದ್ದೇನೆಂಬ ಸಂಭ್ರಮ ಉಳಿಸಿದೆ. ‘ವಿಶಿಷ್ಟತಾರೆ, ವಸಿಷ್ಠ ಸಿಂಹ’ ಎಂದು ಮೆಚ್ಚಿಕೊಂಡು ಶರೀರ ಮತ್ತು ಶಾರೀರ ದೇವರು ಕೊಟ್ಟವರ ಕಣಯ್ಯ ನಿನಗೆ ಎಂದು ಬೆನ್ನು ತಟ್ಟುವ ಮೇಷ್ಟು್ರ, ಹೀಗೆ ಹಲವು ಸಂಗತಿಗಳು ಈ ಚಿತ್ರ ನನಗೆ ಕೊಟ್ಟಿದೆ.

Follow Us:
Download App:
  • android
  • ios