Used Cars ಸೆಕೆಂಡ್ ಹ್ಯಾಂಡ್ ಕಾರು ಖರೀದಿಯಲ್ಲಿ ಬೆಂಗಳೂರು ಮಹಿಳೆಯರೇ ನಂಬರ್ 1
- ಶೇಕಡಾ 35ರಷ್ಟು ಮಹಿಳೆಯರಿಂದ ಸೆಕೆಂಡ್ ಹ್ಯಾಂಡ್ ಕಾರು ಖರೀದಿ
- SUV ಕಾರು ಖರೀದಿಗೆ ಮಹಿಳೆಯರ ಆಸಕ್ತಿ,
- ಮಾರುತಿ, ಹುಂಡೈ, ಹೋಂಡಾ ಪ್ರಮುಖ ಬ್ರ್ಯಾಂಡ್
ಬೆಂಗಳೂರು(ಮಾ.11): ಭಾರತದಲ್ಲಿ ಹೊಸ ಕಾರುಗಳ ಬೆಲೆ ಗಗನಕ್ಕೇರಿರುವ ಬೆನ್ನಲ್ಲೇ ಸೆಕೆಂಡ್ ಹ್ಯಾಂಡ್ ಕಾರುಗಳಿಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ.ಸೆಕೆಂಡ್ ಹ್ಯಾಂಡ್ ಕಾರು ಖರೀದಿಯಲ್ಲಿ ಮಹಿಳೆಯರೇ ಮುಂದಿದ್ದಾರೆ. ಅದರಲ್ಲೂ ಬೆಂಗಳೂರಿನಲ್ಲಿ ಶೇಕಡಾ 35 ರಷ್ಟು ಮಹಿಳೆಯರು ಸೆಕೆಂಡ್ ಹ್ಯಾಂಡ್ ಖರೀದಿಸುತ್ತಿರುವುದು ಬಹಿರಂಗವಾಗಿದೆ.ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರು ಪ್ರಮುಖ ಪಾತ್ರ ನಿರ್ವಹಿಸುತ್ತ ಗಮನ ಸೆಳೆಯುತ್ತಿರುವ ಇಂದಿನ ದಿನಗಳಲ್ಲಿ, ಬಳಸಿದ ಕಾರುಗಳ ಖರೀದಿದಾರರಲ್ಲಿಯೂ ಮಹಿಳೆಯರ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆಯಾಗಿದೆ. ಮಹಿಳೆಯರಿಂದ ಕಾಂಪ್ಯಾಕ್ಟ್ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್‌ಗಳ (SUಗಿ) ಬೇಡಿಕೆಯಲ್ಲಿ ಸ್ಪಷ್ಟವಾದ ಹೆಚ್ಚಳಕ್ಕೆ ತಾನು ಸಾಕ್ಷಿಯಾದೆ.
25 ರಿಂದ 35 ವರ್ಷದ ಒಳಗಿನ ಮಹಿಳೆಯರು ಈ ವಿಷಯದಲ್ಲಿ ಮುಂಚೂಣಿಯಲ್ಲಿ ಇದ್ದಾರೆ ಎಂಬುದನ್ನು ಬಳಸಿದ ಕಾರ್‌ಗಳ ಭಾರತದ ಪ್ರಮುಖ ಆನ್‌ಲೈನ್ ಮಾರಾಟ ತಾಣವಾಗಿರುವ ಸ್ಪಿನ್ನಿ ಹೇಳಿದೆ. ನಗರದ ಮಹಿಳಾ ಖರೀದಿದಾರರಲ್ಲಿ ಹ್ಯಾಚ್‌ಬ್ಯಾಕ್ ಮತ್ತು ಕಾಂಪ್ಯಾಕ್ಟ್ ಎಸ್‌ಯುವಿಗಳು ಹೆಚ್ಚು ಜನಪ್ರಿಯವಾಗಿವೆ. ಮಾರುತಿ, ಹುಂಡೈ ಮತ್ತು ಹೋಂಡಾ ವಾಹನಗಳು ಪ್ರಮುಖ ಬ್ರ್ಯಾಂಡ್ ಮಹಿಳಾ ಖರೀದಿದಾರರ ಗಮನ ಸೆಳೆಯುತ್ತಿವೆ. ಇದಲ್ಲದೆ, ಮಹಿಳಾ ಖರೀದಿದಾರರು ಸಂಪೂರ್ಣವಾಗಿ ಹೊಸ ಕಾರು ಖರೀದಿಯ ಅನುಭವಕ್ಕಾಗಿ ಮನೆ ಬಾಗಿಲಲ್ಲಿ ಪರೀಕ್ಷಾರ್ಥ ಚಾಲನೆ ಸೌಲಭ್ಯ ಬಳಸಿಕೊಳ್ಳಲು ಮತ್ತು ಆನ್‌ಲೈನ್‌ನಲ್ಲಿ ಕಾರುಗಳನ್ನು ಬುಕಿಂಗ್ ಮಾಡಲು ಹೆಚ್ಚು ಒಲವು ತೋರುತ್ತಿದ್ದಾರೆ.
Economic Crisis ಐಷಾರಾಮಿ ಮನೆಗಿಂತ ಈ ದೇಶದಲ್ಲಿ ಸೆಕೆಂಡ್ ಹ್ಯಾಂಡ್ ಕಾರು ದುಬಾರಿ!
ಗುಣಮಟ್ಟದ ಮೇಲೆ ಸ್ಪಿನ್ನಿ ಗಮನಹರಿಸುತ್ತದೆ. ಕಾರು ಖರೀದಿ ಮತ್ತು ಮಾರಾಟ ಪ್ರಕ್ರಿಯೆಯನ್ನು ನಾವು ತುಂಬ ಸರಳಗೊಳಿಸುತ್ತೇವೆ. ಇಂದಿನ ಕಾರು ಖರೀದಿದಾರರು ಏನನ್ನು ಬಯಸುತ್ತಾರೆ ಎಂಬುದನ್ನು ನಿರ್ಧರಿಸುವಲ್ಲಿ ನಾವು ತುಂಬ ವಿಶ್ವಾಸ ಇರಿಸುತ್ತೇವೆ. ದೇಶದಲ್ಲಿ ಸರಿಸಾಟಿಯಿಲ್ಲದ ಕಾರು ಖರೀದಿ ಮತ್ತು ಮಾರಾಟದ ಅನುಭವವನ್ನು ಒದಗಿಸುತ್ತೇವೆ. ಕ್ರೀಡಾ ತಾರೆ ಪಿವಿ ಸಿಂಧು ಅವರೂ ನಮ್ಮ ಗ್ರಾಹಕರಾಗಿದ್ದಾರೆ. ಅವರು ಈಗ ಸ್ಪಿನ್ನಿ ತಂಡದ ಕ್ಯಾಪ್ಟನ್ ಕೂಡ ಆಗಿದ್ದಾರೆ. ಪಿವಿ ಸಿಂಧು ಅವರ ಪರಿಶ್ರಮ ಮತ್ತು ಸಾಮರ್ಥ್ಯವು ನಮ್ಮ ಬ್ರಾ÷್ಯಂಡ್ ದೃಷ್ಟಿಯನ್ನು ಬಲಪಡಿಸಿದೆ. ಜೊತೆಗೆ ಮಹಿಳೆಯರು ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಲು ಮತ್ತು ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಅವರು ಪ್ರೇರಣೆಯಾಗಿದ್ದಾರೆ ಎಂದು ಸ್ಪಿನ್ನಿ ಸಂಸ್ಥಾಪಕ ಮತ್ತು ಸಿಇಒ ನೀರಜ್ ಸಿಂಗ್ ಹೇಳಿದ್ದಾರೆ.
ವಿರಾಟ್ ಕೊಹ್ಲಿ to ಬಾದ್‌ಶಾ; ಸೆಲೆಬ್ರೆಟಿಗಳಲ್ಲಿದೆ ಸೆಕೆಂಡ್ ಹ್ಯಾಂಡ್ ಕಾರು!
ಸಂಪರ್ಕರಹಿತ ಮತ್ತು ಸಂಪೂರ್ಣ ಡಿಜಿಟಲ್ ವಹಿವಾಟನ್ನು ಬಳಕೆಗೆ ತಂದಿರುವುದರಲ್ಲಿ ಮುಂಚೂಣಿಯಲ್ಲಿ ಇರುವ ಕಂಪನಿಯ ವೃತ್ತಿಪರ ಕೌಶಲ್ಯವು, ವಾಹನ ಮಾಲೀಕರು ಮನೆಯಲ್ಲಿ ಇದ್ದುಕೊಂಡೇ ಕಾರುಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಹೆಚ್ಚಿನ ಅನುಕೂಲತೆ ಒದಗಿಸುತ್ತದೆ. ಖರೀದಿ ಮತ್ತು ಮಾರಾಟದ ಸಂಪೂರ್ಣ ಕಾರ್ಯವಿಧಾನವು ಆನ್‌ಲೈನ್ ಅನುಭವವಾಗಿರುತ್ತದೆ. ಎಲ್ಲಾ ಸಂಬಂಧಿತ ವಿವರಗಳು ಸ್ಪಿನ್ನಿ ತಾಣದಲ್ಲಿ ಲಭ್ಯ ಇರುತ್ತವೆ. ಪ್ರತಿ ವಾಹನದ ೩೬೦-ಡಿಗ್ರಿ ವೀಕ್ಷಣೆ ಸೌಲಭ್ಯವನ್ನು ಇದು ಒಳಗೊಂಡಿದೆ. ಒಂದೊಮ್ಮೆ ಸ್ಪಿನ್ನಿ ಅಶ್ಯೂರ್ಡ್ ಕಾರ್‌ನ ಪಾವತಿ ಸ್ವೀಕರಿಸಿದ ನಂತರ, ವಾಹನವು ಗ್ರಾಹಕರ ಮನೆ ಬಾಗಿಲಿಗೆ ತಕ್ಷಣವೇ ತಲುಪಿಸಲು ಸಿದ್ಧವಾಗಿರುತ್ತದೆ. ಇದು ಖರೀದಿದಾರರಿಗೆ ಸುರಕ್ಷತೆ ಒದಗಿಸುವುದರ ಜೊತೆಗೆ ಅವರು ನಗರಗಳಲ್ಲಿನ ಜನ ಮತ್ತು ವಾಹನ ದಟ್ಟಣೆಯ ಕಿರಿಕಿರಿಗೆ ಒಡ್ಡಿಕೊಳ್ಳುವುದನ್ನು ಸೀಮಿತಗೊಳಿಸುತ್ತದೆ.
ಇತರ ರಾಜ್ಯಗಳಲ್ಲೂ ಸೆಕೆಂಡ್ ಹ್ಯಾಂಡ್ ಕಾರಿಗೆ ಬೇಡಿಕೆ ಹೆಚ್ಚಾಗುತ್ತಿದೆ. ದೆಹಲಿ ನಗರಗಳಲ್ಲಿ ಹಳೇ ಕಾರುಗಳನ್ನು ಜನ ಮಾರಾಟ ಮಾಡುತ್ತಿದ್ದಾರೆ. ಮಾಲಿನ್ಯ ಕಾರಣ ಗುಜುರಿ ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ. ಹೀಗಾಗಿ ದೆಹಲಿ ಹೊರವಲಯಗಳಿಗೆ ಬಳಸಿದ ಕಾರುಗಳನ್ನು ಮಾರಾಟ ಮಾಡಲಾಗುತ್ತಿದೆ.