Economic Crisis ಐಷಾರಾಮಿ ಮನೆಗಿಂತ ಈ ದೇಶದಲ್ಲಿ ಸೆಕೆಂಡ್ ಹ್ಯಾಂಡ್ ಕಾರು ದುಬಾರಿ!
*ನೆರೆ ಶ್ರೀಲಂಕಾದಲ್ಲಿ ಬಳಸಿದ ಕಾರಿಗೆ ಹೆಚ್ಚಿನ ಬೇಡಿಕೆ
* ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಆಮದಿನ ಮೇಲೆ ನಿರ್ಬಂಧ
* ಅವಶ್ಯಕ ವಸ್ತುಗಳ ಪಟ್ಟಿಯಿಂದ ಕಾರುಗಳು ಹೊರಗೆ
ನವದೆಹಲಿ(ಜ.26): ಇಲ್ಲಿ ಕಾರುಗಳ ಬಳಕೆ ಬಹಳ ದುಬಾರಿ! ಇಲ್ಲಿನ ಸೆಕೆಂಡ್ ಹ್ಯಾಂಡ್ (Second hand car)ಕಾರುಗಳು ಜನರ ಐಷಾರಾಮಿ (Luxury) ಬಂಗಲೆಗಳಿಗಿಂತ ದುಬಾರಿ ಎಂಬುದು ನಿಮಗೆ ಗೊತ್ತೆ? ಹೌದು, ಜಗತ್ತಿನಾದ್ಯಂತ ನಾಲ್ಕು ಚಕ್ರದ ವಾಹನಗಳ ದರ ಕೈಗೆಟಕುವ ದರಕ್ಕೆ ಇಳಿಯುತ್ತಿದ್ದು, ಕಾರುಗಳು ಬದುಕಿನ ಅಗತ್ಯ ಭಾಗವಾಗುತ್ತಿರುವಾಗ, ಇದೊಂದು ದೇಶದಲ್ಲಿ ಮಾತ್ರ ಕಾರು ಹೊಂದುವುದು ದುಬಾರಿಯಾಗಿದೆ.
ಈ ಪರಿಸ್ಥಿತಿ ಇರುವುದು ಭಾರತದ ನೆರೆ ರಾಷ್ಟ್ರ ಶ್ರೀಲಂಕಾದಲ್ಲಿ (Srilanka)! ಇಲ್ಲಿ ಐದು ವರ್ಷ ಹಳೆಯದಾದ ಟೊಯೋಟಾ ಲ್ಯಾಂಡ್ ಕ್ರೂಸರ್ (Toyota Land Cruiser) ಬೆಲೆ 3,12,500 ಡಾಲರ್ ಅಂದರೆ ಸರಾಸರಿ 2.34 ಕೋಟಿ ರೂ.ಗಳಷ್ಟಿದ್ದರೆ, 10 ವರ್ಷ ಹಳೆಯ ಫಿಯಟ್ ಕಾರಿನ ಬೆಲೆ 6.17 ಕೋಟಿ ರೂಗಳಷ್ಟಿದೆ. ಇಲ್ಲಿನ ಜನರು ಯಾವ ಇಂಜಿನ್ ಸಾಮರ್ಥ್ಯದ ಹಾಗೂ ಎಷ್ಟು ವರ್ಷ ಹಳೆಯ ಕಾರುಗಳನ್ನು ಅರಸುತ್ತಿದ್ದಾರೆ ಎಂಬುದರ ವ್ಯತ್ಯಾಸವಿಲ್ಲದೆ ಎಲ್ಲಾ ಕಾರುಗಳು ಇಲ್ಲಿ ಅತ್ಯಂತ ದುಬಾರಿ ಬೆಲೆಗೆ ಮಾರಾಟವಾಗುತ್ತದೆ. ಇದು ವಿಶ್ವದ ಇತರ ಎಲ್ಲಾ ದೇಶಗಳಿಗೆ ಹೋಲಿಸಿದರೆ ಅತಿ ಹೆಚ್ಚಿದೆ.
Sri Lanka food prices : ಹಸಿ ಮೆಣಸಿನಕಾಯಿ ಕೆಜಿಗೆ 710 ರೂಪಾಯಿ, ಬಟಾಟೆ ಕೆಜಿಗೆ 200 ರೂಪಾಯಿ!
ನಿಜ. ಒಂದು ಕಾಲದಲ್ಲಿ ಪ್ರವಾಸಿಗರ ಸ್ವರ್ಗವಾಗಿದ್ದ ಈ ದ್ವೀಪ ರಾಷ್ಟ್ರದಲ್ಲಿ (Island country) ಈಗ ಪರಿಸ್ಥಿತಿ ಬದಲಾಗಿದೆ. ಕಾರಣ. ಇಲ್ಲಿನ ಆರ್ಥಿಕ ದುರ್ಬರತೆ. ಏಕೆಂದರೆ ದೇಶವು ದಿವಾಳಿತನದ ಅಂಚಿನಲ್ಲಿದೆ ಮತ್ತು ಹಣದುಬ್ಬರ ಗಗನಕ್ಕೇರಿದೆ. ಆದ್ದರಿಂದ ಅಲ್ಲಿನ ಸರ್ಕಾರ, ಎಲ್ಲಾ ಅನಿವಾರ್ಯವಲ್ಲದ ಆಮದುಗಳ ಮೇಲೆ ನಿರ್ಬಂಧ ಹೇರಿದೆ. ಆದ್ದರಿಂದ ಇಲ್ಲಿನ ಜನರಿಗೆ ಸಂಚಾರಕ್ಕೆ ಮಾಧ್ಯಮವಾಗಿ ಬಳಸಲು ಸೆಕೆಂಡ್ ಹ್ಯಾಂಡ್ ಕಾರುಗಳ ಮೊರೆ ಹೋಗುವುದು ಅನಿವಾರ್ಯವಾಗಿದೆ.
ಈ ಹಿನ್ನೆಲೆಯಲ್ಲಿ ಬೇಡಿಕೆ ಹೆಚ್ಚುತ್ತಿದ್ದಂತೆ ಬಳಸಿದ ಕಾರುಗಳ ಬೆಲೆ ಆಕಾಶ ಮುಟ್ಟಿದೆ. ಕೆಲವು ಕಾರು ಮಾದರಿಗಳು ಅಲ್ಲಿನ ಪ್ರಮುಖ ಪ್ರದೇಶದಲ್ಲಿನ ಮನೆಗಿಂತಲೂ ಹೆಚ್ಚಿನ ಬೆಲೆಯನ್ನು ಹೇಳುತ್ತಿವೆ. ಕಾಂಪ್ಯಾಕ್ಟ್ (Compact) ವಾಹನಗಳು ಮತ್ತು ಬೇಸಿಕ್ ಸೆಡಾನ್ (Basic sedan)ಗಳು ದುಬಾರಿ ಬೆಲೆ ಹೊಂದಿದ್ದರೂ ಸಹ ಬಿಸಿ ಕೇಕ್ಗಳಂತೆ ಮಾರಾಟವಾಗುತ್ತಿವೆ, ಇದನ್ನು ಪ್ರಪಂಚದ ಇತರ ಭಾಗಗಳಲ್ಲಿ ಅತಿ ಹೆಚ್ಚು ಎಂದು ಪರಿಗಣಿಸಬಹುದು. ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಹಾಗೂ ಸೀಮಿತ ಆಯ್ಕೆಯ ಸೆಕೆಂಡ್ ಹ್ಯಾಂಡ್ ವಾಹನಗಳ ಬೆಲೆ ಇನ್ನೂ ಹೆಚ್ಚಾಗಿದೆ.
ಇಂಧನ ಖರೀದಿಗೆ ಭಾರತದಿಂದ 500 ಮಿಲಿಯನ್ ಡಾಲರ್ ಸಾಲ ಕೇಳಿದ ಶ್ರೀಲಂಕಾ!
ಇತ್ತೀಚಿನ ದಿನಗಳಲ್ಲಿ ಬೇಡಿಕೆ ಮತ್ತು ಬೆಲೆಗಳು ಎರಡೂ ಹೆಚ್ಚಿದೆ ಎಂದು ಮಾಧ್ಯಮವೊಂದರ ವರದಿ ತಿಳಿಸಿದೆ. ಕಾರುಗಳ ರೀ-ಸೇಲ್ ಮೌಲ್ಯ ಪರಿಗಣಿಸಿದರೆ, 2021ರ ಆರಂಭದಲ್ಲಿಯೇ ವಾಹನವನ್ನು ಖರೀದಿಸಿದವರಿಗೆ ಅದು ಅತ್ಯುತ್ತಮ ಹೂಡಿಕೆಯಾಗಲಿದೆ. 22 ಮಿಲಿಯನ್ ಜನಸಂಖ್ಯೆಯಿರುವ ಶ್ರೀಲಂಕಾ, ಸಂಪೂರ್ಣ ದಿವಾಳಿತನದ ಅಂಚು ತಲುಪಿದೆ. ಜನರು ಅಗತ್ಯ ವಸ್ತುಗಳಿಗೆ ಪರದಾಡುವಂತಾಗಿದೆ. ಸೂಪರ್ ಮಾರುಕಟ್ಟೆಗಳು ಖಾಲಿಯಾಗಿವೆ ಮತ್ತು ರೆಸ್ಟೋರೆಂಟ್ಗಳಲ್ಲಿ ಆಹಾರ ಸರಬರಾಜು ಆಗುತ್ತಿಲ್ಲ. ಸರ್ಕಾರ ಅನಗತ್ಯ ವಸ್ತುಗಳ ಮೇಲೆ ನಿರ್ಬಂಧ ಹೇರಿರುವುದರಿಂದ ಬಹುತೇಕ ಮಾರುಕಟ್ಟೆ ನಿಧಾನಗತಿಯತ್ತ ಸಾಗಿದೆ.
ಆದರೆ, ಇದೆಲ್ಲದರ ಲಾಭ ಆಗುತ್ತಿರುವುದು ಮಾತ್ರ ಕಾರು ಮಾರುಕಟ್ಟೆಗೆ. ಏಕೆಂದರೆ, ಶ್ರೀಲಂಕಾದಲ್ಲಿ ಸ್ಥಳೀಯ ಕಾರು ಉದ್ಯಮವು ಬಹುತೇಕ ಅಸ್ತಿತ್ವದಲ್ಲಿಲ್ಲ ಮತ್ತು ಖರೀದಿದಾರರು ಹೆಚ್ಚಾಗಿ ಯಾವಾಗಲೂ ಆಮದು ಮಾಡಿದ ಉತ್ಪನ್ನಗಳ ಮೇಲೆ ಅವಲಂಬಿತರಾಗಿದ್ದಾರೆ. ಆದರೆ, ಈಗ ಸರ್ಕಾರ ಸ್ಥಳೀಯ ರಸ್ತೆಗಳ ಮೇಲೆ ಫ್ಯಾಕ್ಟರಿಯಿಂದ ಹೊರಬಂದ ಹೊಸ ಆಟೊಮೊಬೈಲ್ಗಳ ಮೇಲೆ ಬರೋಬ್ಬರಿ 10 ವರ್ಷಗಳ ನಿರ್ಬಂಧ ಹೇರಿದೆ. ದೇಶದಲ್ಲಿ ಪ್ರಸ್ತುತ ಆರ್ಥಿಕ ಬಿಕ್ಕಟ್ಟಿನೊಂದಿಗೆ, ಈ ನಿರ್ಬಂಧ ಸದ್ಯಕ್ಕೆ ತೆರವಾಗುವ ಲಕ್ಷಣಗಳಿಲ್ಲ. ಆದ್ದರಿಂದ ಜನರು ಅನಿವಾರ್ಯವಾಗಿ ಬಳಸಿದ ಕಾರುಗಳ ಹಾಗೂ ಅವುಗಳ ಅತಿಯಾದ ಬೇಡಿಕೆಗಳಿಗೆ ಮಣಿಯಲೇಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.