Asianet Suvarna News Asianet Suvarna News

ಬೆಂಗಳೂರು: ರೀಲ್ಸ್‌ ಮಾಡಲು ಕಪ್ಪು ಬಣ್ಣದ 29 ಡಿಯೋ ಸ್ಕೂಟರ್‌ ಕಳುವು, ಮೂವರ ಬಂಧನ

ವೀರಸಾಗರದ ನಿವಾಸಿ ಮದನ್ ಹಾಗೂ ಆತನ ಸಹಚರರಾದ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರು ಬಂಧಿತರಾಗಿದ್ದು, ಆರೋಪಿಗಳಿಂದ ₹22 ಲಕ್ಷ ಮೌಲ್ಯದ 29 ಸ್ಕೂಟರ್‌ಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ತಿಂಡ್ಲು ಬಳಿ ಸ್ಕೂಟರ್‌ ಕಳ್ಳತನದ ಬಗ್ಗೆ ತನಿಖೆಗಿಳಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಖದೀಮರನ್ನು ಸೆರೆ ಹಿಡಿದಿದ್ದಾರೆ.

Three Arrested For Who Black 29 Deo Scooter Theft to make the Reels in Bengaluru grg
Author
First Published Apr 11, 2024, 6:19 AM IST

ಬೆಂಗಳೂರು(ಏ.11):  ‘ರೀಲ್ಸ್‌’ ವಿಡಿಯೋ ಮಾಡುವ ಸಲುವಾಗಿ ಕಪ್ಪು ಬಣ್ಣದ ಸ್ಕೂಟರ್‌ಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಅಪ್ರಾಪ್ತ ಬಾಲಕು ಸೇರಿದಂತೆ ಮೂವರನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ವೀರಸಾಗರದ ನಿವಾಸಿ ಮದನ್ ಹಾಗೂ ಆತನ ಸಹಚರರಾದ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರು ಬಂಧಿತರಾಗಿದ್ದು, ಆರೋಪಿಗಳಿಂದ ₹22 ಲಕ್ಷ ಮೌಲ್ಯದ 29 ಸ್ಕೂಟರ್‌ಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ತಿಂಡ್ಲು ಬಳಿ ಸ್ಕೂಟರ್‌ ಕಳ್ಳತನದ ಬಗ್ಗೆ ತನಿಖೆಗಿಳಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಖದೀಮರನ್ನು ಸೆರೆ ಹಿಡಿದಿದ್ದಾರೆ.

ಬೆಂಗಳೂರು: ಕುಡಿಬೇಡಿ ಎಂದು ಬುದ್ಧಿ ಹೇಳಿದ ಸಾಮಾಜಿಕ ಕಾರ್ಯಕರ್ತನ ಹತ್ಯೆ

ಇನ್‌ಸ್ಟಾಗ್ರಾಂ ಫಾಲೋವರ್ಸ್:

ಮದನ್ ವೃತ್ತಿಪರ ಕಳ್ಳನಾಗಿದ್ದು, ಆತನ ಮೇಲೆ ನಗರ ಹಾಗೂ ಹೊರ ಜಿಲ್ಲೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಇನ್‌ಸ್ಟಾಗ್ರಾಂಗೆ ಸ್ಕೂಟರ್‌ಗಳಲ್ಲಿ ವ್ಹೀಲಿಂಗ್‌ ಮೂಲಕ ‘ರೀಲ್ಸ್‌’ ಮಾಡಿ ಮದನ್ ಆಪ್‌ಲೋಡ್ ಮಾಡುತ್ತಿದ್ದ. ಆಗ ಆತನಿಗೆ ಇನ್‌ಸ್ಟಾಗ್ರಾಂ ಮೂಲಕ ಈ ಇಬ್ಬರು ಅಪ್ರಾಪ್ತರು ಸ್ನೇಹಿತರಾಗಿದ್ದಾರೆ. ಈ ಅಪ್ರಾಪ್ತರು ಸಹ ರೀಲ್ಸ್ ಕ್ರೇಜ್ ಇದ್ದವರೇ ಆಗಿದ್ದರು. ಹೀಗಾಗಿ ಸಮಾನ ಅಭಿರುಚಿ ಹೊಂದಿದ್ದ ಆರೋಪಿಗಳು, ರೀಲ್ಸ್ ಮಾಡಲು ಸ್ಕೂಟರ್‌ಗಳನ್ನು ಕದ್ದು ಮಾರುತ್ತಿದ್ದರು. ಇದರ ಹಿಂದೆ ಸುಲಭವಾಗಿ ಹಣ ಸಹ ಸಂಪಾದಿಸುವ ಇರಾದೆ ಇತ್ತು ಎಂದು ಪೊಲೀಸರು ಹೇಳಿದ್ದಾರೆ.

ಬೆಂಗಳೂರು: ಇಬ್ಬರು ಮಕ್ಕಳನ್ನ ಕೊಂದ ತಾಯಿ ಅರೆಸ್ಟ್‌

ಅದರಲ್ಲೂ ಕಪ್ಪು ಬಣ್ಣದ ಡಿಯೋ ಸ್ಕೂಟರ್‌ಗಳೇ ಇವರ ಟಾರ್ಗೆಟ್ ಆಗಿದ್ದವು. ಈ ಸ್ಕೂಟರ್‌ನಲ್ಲಿ ವ್ಹೀಲಿಂಗ್ ಸುಲಭ ಹಾಗೂ ರೀಲ್ಸ್ ವಿಡಿಯೋ ಸಹ ಚೆನ್ನಾಗಿ ಮೂಡಿ ಬರುತ್ತದೆ ಎಂಬುದು ಅವರ ಅಭಿಪ್ರಾಯವಾಗಿತ್ತು. ಅಂತೆಯೇ ಮನೆಗಳ ಮುಂದೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲುತ್ತಿದ್ದ ಸ್ಕೂಟರ್‌ಗಳನ್ನು ಆರೋಪಿಗಳು ಕಳವು ಮಾಡುತ್ತಿದ್ದರು. ಬಳಿಕ ಆ ಸ್ಕೂಟರ್‌ಗಳಲ್ಲಿ ರೀಲ್ಸ್ ಮಾಡಿದ ನಂತರ ಕಡಿಮೆ ಬೆಲೆ ಅವುಗಳನ್ನು ಅವರು ಬಿಕರಿ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ತಂಡದ ಬಂಧನದಿಂದ ಕೊಡಿಗೇಹಳ್ಳಿ, ಚಂದ್ರಲೇಔಟ್‌, ವಿದ್ಯಾರಣ್ಯಪುರ, ಯಶವಂತಪುರ, ಯಲಹಂಕ ಉಪನಗರ, ವಿಜಯನಗರ, ಬಾಗಲಗುಂಟೆ, ಬಸವೇಶ್ವರನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಗ್ರಾಮಾಂತರ, ಆವಲಹಳ್ಳಿ ಹಾಗೂ ದೊಡ್ಡಬ‍ಳ್ಳಾಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ 12 ದ್ವಿಚಕ್ರ ವಾಹನಗಳ ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Follow Us:
Download App:
  • android
  • ios