Asianet Suvarna News Asianet Suvarna News

Used Car Buying: ಸೆಕೆಂಡ್‌ ಹ್ಯಾಂಡ್‌ ಕಾರು ಕೊಳ್ಳುವ ಮುನ್ನ ನೀವು ಗಮನಿಸಬೇಕಾದ್ದು ಏನನ್ನು?

ಇತ್ತೀಚೆಗೆ ಬಳಸಿದ, ಸೆಕೆಂಡ್‌ಹ್ಯಾಂಡ್ ಅಥವಾ ಪ್ರಿ ಓನ್‌ಡ್ ಕಾರುಗಳ ಕೊಳ್ಳುವಿಕೆ ಹೆಚ್ಚಾಗಿದೆ. ಆದರೆ ಅವುಗಳನ್ನು ಕೊಳ್ಳುವ ಮುನ್ನ ಹಲವು ಎಚ್ಚರಿಕೆ ವಹಿಸಿದ್ದರೆ ಮೋಸವಾದೀತು.
 

What are the aspects to see when purchasing used cars
Author
Bengaluru, First Published Dec 10, 2021, 3:59 PM IST

ಇತ್ತೀಚೆಗೆ ಬಳಸಿದ ಕಾರುಗಳ (Used cars) ಮಾರಾಟ ಹಾಗೂ ಕೊಳ್ಳುವಿಕೆ ಜೋರಾಗಿದೆ. ಹೊಸ ಕಾರು ಕೊಳ್ಳಬೇಕೆಂದಿದ್ದವರು ಕೂಡ ಕೊರೊನಾ (corona) ಕಾರಣದಿಂದಾಗಿ ಬಜೆಟ್‌ ಸಮಸ್ಯೆಯಾಗಿ ಸೆಕೆಂಡ್ ಹ್ಯಾಂಡ್ ಕಾರಿಗೆ ಬಂದಿದ್ದಾರೆ. ಸಾರ್ವಜನಿಕ ಸಾರಿಗೆ ಬಳಸಲು ಇಷ್ಟಪಡದವರೂ ಬಂದಿದ್ದಾರೆ. ಬಜೆಟ್ ಕಾರಣ ಹೇಗೂ ಇದ್ದೇ ಇದೆ. ಕಷ್ಟಪಟ್ಟು ಕೂಡಿಟ್ಟ ಹಣದಲ್ಲಿ ತಮ್ಮ ಓಡಾಟಕ್ಕೆ ಎಂದು ಒಂದು ಕಾರು ಕೊಳ್ಳುವವರ ಸಾಲು ದೊಡ್ಡದಿದೆ. ಕನಿಷ್ಠ ಒಂದೆರಡು ವರ್ಷಗಳ ಬಳಕೆಗಾದರೂ ಬಳಸಿದ ಕಾರು ಕೊಳ್ಳಬೇಕೆನ್ನುವವರೂ ಸಾಕಷ್ಟು ಮಂದಿ ಇದ್ದಾರೆ. ಆದರೆ ಬಳಸಿದ ಕಾರುಗಳ ಖರೀದಿ ಮತ್ತು ಮಾರಾಟದ ವೇಳೆ ಗಮನಹರಿಸಬೇಕಾದ ಅಂಶಗಳು ಇಲ್ಲಿವೆ. 

ನೈಜ ಮಾಹಿತಿ ಪಡೆಯುವುದು (Information)
ಹೊಸ ಕಾರುಗಳನ್ನು ಹೋಲಿಸಿದರೆ ಬಳಕೆಯಾದ ಕಾರುಗಳನ್ನು ಖರೀದಿಸುವುದು ತುಂಬಾನೇ ಕಷ್ಟಕರ. ಹೊಸ ಕಾರು ಖರೀದಿಸುವಾಗ ನಮಗೆ ನೈಜ ಮಾಹಿತಿ ಗಿಟ್ಟಿಸಿಕೊಳ್ಳುವುದು ತುಂಬಾನೇ ಸುಲಭ. ಆದರೆ ಹಳೆ ಕಾರು ಖರೀದಿ ವಿಚಾರಕ್ಕೆ ಬಂದಾಗ ಅನೇಕ ಅಂಶಗಳ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ತುಂಬಾನೇ ಜಾಗರೂಕರಾಗಿರಬೇಕಾಗುತ್ತದೆ. 

Winter care tips: ಚಳಿಗಾಲದಲ್ಲಿ ಕಾರ್, ಬೈಕ್ ಬಗ್ಗೆ ಕೇರ್ ತೆಗೆದುಕೊಳ್ಳುವುದು ಹೇಗೆ?
ಬಜೆಟ್  (Budget)
ಹೊಸ ಕಾರಿನಂತೆ ಹಳೆ ಕಾರು ಖರೀದಿ ವಿಚಾರದಲ್ಲೂ ಮೊದಲು ನೀವು ಕೊಂಡುಕೊಳ್ಳುವ ಕಾರಿನ ಬಜೆಟ್ ಬಗ್ಗೆ ಸ್ಪಷ್ಟ ಅರಿವನ್ನು ಹೊಂದಿರಬೇಕಾಗುತ್ತದೆ. ನಿಮ್ಮದು ಸಣ್ಣ ಕುಟುಂಬವಾಗಿದ್ದು, ನಾಲ್ಕು ಪ್ರಯಾಣಿಕರನ್ನಷ್ಟೇ ಹೊಂದಿದ್ದಲ್ಲಿ ಹ್ಯಾಚ್‌ಬ್ಯಾಕ್ ಕಾರು ಹೆಚ್ಚು ಸೂಕ್ತವೆನಿಸುವುದು. ದೀರ್ಘ ಪಯಣ ಬಯಸುವವರಾದಲ್ಲಿ ಹಾಗೆಯೇ 5ಕ್ಕಿಂತ ಹೆಚ್ಚು ಸದಸ್ಯರನ್ನು ನಿಮ್ಮ ಕುಟುಂಬ ಹೊಂದಿದ್ದರೆ ಸೆಡಾನ್, ಎಸ್‌ಯುವಿ ಅಥವಾ ಎಂಪಿವಿ ಆಯ್ಕೆ ಮಾಡಿಕೊಳ್ಳಬಹುದು. 

ಅವಲೋಕನ 
ಮಾರುಕಟ್ಟೆ ಪರಿಸ್ಥಿತಿಯನ್ನು ಸರಿಯಾಗಿ ಅವಲೋಕನ ಮಾಡಿಕೊಳ್ಳುವುದು ತುಂಬಾ ಮುಖ್ಯ. ಸದ್ಯದ ಮಾರುಕಟ್ಟೆ ಪರಿಸ್ಥಿತಿ ಹೇಗಿದೆ ಇತ್ಯಾದಿ ವಿಚಾರಗಳ ಬಗ್ಗೆ ಗಮನಹರಿಸಬೇಕಾಗುತ್ತದೆ. ಸದ್ಯ ಕಾರಿನ ಮಾಡೆಲ್ ಕುರಿತು ಸರಿಯಾದ ಮಾಹಿತಿ ಪಡೆಯಲು ಇಂಟರ್ ನೆಟ್ ನಿಮ್ಮ ನೆರವಿಗೆ ಬರುತ್ತದೆ. ಹಾಗಾಗಿ ಸ್ವಲ್ಪ ಹೊತ್ತು ಅಂತರ್ಜಾಲದಲ್ಲಿ ಜಾಲಾಡಿದರೆ ಒಳಿತು. 

ಸರಿಯಾದ ಡೀಲರ್‌ಗಳ ಆಯ್ಕೆ (Best dealers) 
ಹಳೆ ಕಾರು ಖರೀದಿ ವೇಳೆ ಸರಿಯಾದ ವಿತರಕರನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಯಾಕೆಂದರೆ ಡೀಲರುಗಳು ತಮ್ಮ ವ್ಯಾಪಾರ ಕುದುರಿಸಿಕೊಳ್ಳುವ ನಿಟ್ಟಿನಲ್ಲಿ ಮೋಸ ಮಾಡುವ ಸಾಧ್ಯತೆಯಿದೆ. ಹಾಗಾಗಿ ಸ್ಟಾಂಡರ್ಡ್ ಡೀಲರುಗಳನ್ನು ಆಯ್ಕೆ ಮಾಡಿಕೊಳ್ಳಿರಿ.

ಹಣಕಾಸಿನ ನೆರವು (Finance)
ನಿಮ್ಮ ಕಾರು ಖರೀದಿ ಆಸೆಯನ್ನು ಪೂರೈಸಲು ಮಾರುಕಟ್ಟೆಯಲ್ಲಿ ಹಲವಾರು ಫೈನಾನ್ಸ್ ಅಥವಾ ಬ್ಯಾಂಕ್‌ಗಳು ಸಾಲ ನೀಡಲು ಮುಂದಾಗುತ್ತವೆ. ಹಳೆ ಕಾರು ಖರೀದಿಗೆ ಯಾವ ಸ್ಕೀಮ್ ಸರಿಹೊಂದುತ್ತದೆ ಎಂಬುದನ್ನು ತಜ್ಞರಿಂದ ಅರಿತುಕೊಳ್ಳುವುದು ಉತ್ತಮ. ಉದಾಹರಣೆಗೆ ನಿಮ್ಮ ಆದಾಯಕ್ಕೆ ಅನುಸರಿಸಿ ಹೆಚ್ಚು ನಂಬಿಕೆಯುಕ್ತ ಫೈನಾನ್ಸ್‌ಗಳಿಂದ ಸ್ಪಷ್ಟ ಮಾಹಿತಿ ಪಡೆದು ಸಾಲ ಪಡೆದುಕೊಳ್ಳಿರಿ. 

ಫಿಟ್‌ನೆಸ್ ಸರ್ಟಿಫಿಕೇಟ್  (Fitness certificate)
ಕಾರಿನ ಎಫ್‌ಸಿ ಅರ್ಥಾತ್ ಫಿಟ್‌ನೆಸ್ ಸರ್ಟಿಫಿಕೇಟ್ ಚಾಲ್ತಿಯಲ್ಲಿರಬೇಕು. 15 ವರ್ಷಕ್ಕಿಂತ ಹೆಚ್ಚು ವಯಸ್ಸಾದ ಕಾರುಗಳನ್ನು ಕೊಳ್ಳುವಾಗ ಇದನ್ನು ಗಮನಿಸುವುದು ಒಳಿತು. ಎಫ್‌ಸಿ ಇಲ್ಲದ ಕಾರುಗಳನ್ನು, ವಾಹನಗಳನ್ನು ರಸ್ತೆಗೆ ಇಳಿಸುವುದು ದಂಡನಾರ್ಹ ಅಪರಾಧ. ಎಫ್‌ಸಿ ರದ್ದಾಗಿರುವುದರಿಂದ ಒಂದೆರಡು ಸಾವಿರದಷ್ಟು ಬೆಲೆ ಇಳಿಸಬಹುದು ಅಥವಾ ನಗಣ್ಯ ಎಂದು ಬಿಡಬಹುದು. ಇದರಿಂದ ಎಚ್ಚರ ವಹಿಸಿ.

ಟೆಸ್ಟ್ ಡ್ರೈವ್ (Test drive)
ನೀವು ಖರೀದಿಸುವ ಹಳೆ ಕಾರು ನೋಡಲು ತುಂಬಾನೇ ಅಂದವಾಗಿರಬಹುದು. ಆದರೆ ಅದರ ಎಂಜಿನ್ ಅಥವಾ ಬಿಡಿಭಾಗಗಳ ದೌರ್ಬಲ್ಯ ಬಗ್ಗೆ ಅರಿಯಲು ನಿಮ್ಮಿಂದ ಹೇಗೆ ಸಾಧ್ಯ? ಹಾಗಿರುವಾಗ ಹಳೆ ಕಾರುಗಳನ್ನು ಸಹ ಒಂದೆರಡು ಬಾರಿ ಓಡಿಸಿ ನೋಡುವುದು ಹೆಚ್ಚು ಸೂಕ್ತ. ನೀವು, ನಿಮಗೆ ಪರಿಚಯಿವಿರುವ ಮೆಕ್ಯಾನಿಕ್ ಅಥವಾ ಡ್ರೈವಿಂಗ್ ಮತ್ತು ಕಾರಿನ ಬಗ್ಗೆ ಹೆಚ್ಚು ತಿಳುವಳಿಕೆಯನ್ನು ಹೊಂದಿರುವ ನಿಮ್ಮ ಆಪ್ತ ಸ್ನೇಹಿತರ ನೆರವು ಪಡೆದುಕೊಳ್ಳಬಹುದು. ಈ ಮೂಲಕ ಕಾರು ಎಷ್ಟು ಕೀ.ಮೀ. ಓಡಾಟ ನಡೆಸಿದೆ, ಆಕ್ಸಿಡೆಂಟ್ ಏನಾದರೂ ಸಂಭವಿಸಿದೆಯೇ, ಬಿಡಿಭಾಗ ಡ್ಯಾಮೇಜ್ ಆಗಿದೆಯೇ ಹೀಗೆ ಹಲವಾರು ವಿಚಾರಗಳ ಬಗ್ಗೆ ಸ್ಪಷ್ಟ ಮಾಹಿತಿ ಪಡೆದುಕೊಳ್ಳಬೇಕು.

Apple Electric Car: 2025ಕ್ಕೆ ಸ್ಟೀರಿಂಗ್ ಇಲ್ಲದ, ಸ್ವಯಂಚಾಲಿತ ಕಾರ್?!

ಹಳೆ ಕಾರಿನ ದಾಖಲೆ ಪತ್ರ (Documents)
ಕಾರಿನ ಆರ್‌ಸಿ ಬುಕ್, ಎಮಿಷನ್ ಟೆಸ್ಟ್ ಕಾರ್ಡ್, ವಿಮಾ ಕಾರ್ಡ್ ಎಲ್ಲವೂ ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿರಿ. ಹಾಗೆಯೇ ಕಾರಿನ ಮಾಡೆಲ್ ಯಾವುದು? ಲೋನ್ ಕ್ಲಿಯರ್ ಆಗಿದೆಯೇ? ಎಂಬುದರ ಬಗ್ಗೆಯೂ ಮಾಹಿತಿ ಪಡೆದುಕೊಳ್ಳಿರಿ. ಇನ್ನೊಂದು ವಿಚಾರ ಏನೆಂದರೆ ಕಳವಾದ ಕಾರು ಮಾರಾಟ ಮಾಡುವ ಸಾಧ್ಯತೆ ಜಾಸ್ತಿಯಾಗಿದ್ದು, ಹಾಗಾಗಿ ಕಾರು ಸರ್ವಿಸ್ ಬುಕ್ ಬಗ್ಗೆಯೂ ಸರಿಯಾದ ಮಾಹಿತಿ ಪಡೆಯಿರಿ.

ಚೌಕಾಶಿ (Deal)
ಮೇಲೆ ತಿಳಿಸಿದ ಎಲ್ಲ ವಿಷಯವೂ ಓಕೆ ಆಗಿದ್ದಲ್ಲಿ ಕಾರು ಉತ್ತಮ ಕಂಡೀಷನ್‌ನಲ್ಲಿದ್ದು, ಖರೀದಿಗೆ ಸೂಕ್ತ ಎಂಬ ವಿಚಾರ ಮನಗಂಡಲ್ಲಿ ಮಾತ್ರ ಡೀಲ್‌ಗೆ ಸಿದ್ಧರಾಗಿರಿ. ಆದರೆ ಡೀಲರುಗಳು ಮುಂದಿಡುವ ಆಫರ್‌ಗೆ ಮುಂದಾಗದೇ ಆದಷ್ಟು ಚೌಕಾಶಿ ಮಾಡಿಕೊಂಡು ಡೀಲ್ ಮುಗಿಸಿ. 

ದಾಖಲೆ ನಿಮ್ಮ ಹೆಸರಿಗೆ
ಅಂತಿಮವಾಗಿ ವ್ಯವಹಾರ ಮುಗಿದ ನಂತರ ನಿಗದಿತ ಅವಧಿಯಲ್ಲಿ ಖರೀದಿಸಿದ ಕಾರನ್ನು ನಿಮ್ಮ ಹೆಸರಿಗೆ ಬದಲಾಯಿಸಿಕೊಳ್ಳಿರಿ. 
ಒಟ್ಟಿನಲ್ಲಿ ಹೊಸ ಕಾರಿನಂತೆ ಹಳೆ ಕಾರು ಖರೀದಿ ವೇಳೆಯೂ ಹೆಚ್ಚು ಜಾಗರೂಕರಾಗಬೇಕಾಗಿರುವುದು ಅಷ್ಟೇ ಮುಖ್ಯ. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸದಿರಿ. ಇತ್ತೀಚೆಗೆ ಬಳಸಿದ ಕಾರುಗಳ ಮಾರಾಟಕ್ಕೆ ಆನ್‌ಲೈನ್‌ನ ದಾರಿ ರೆಕ್ಕೆಪುಕ್ಕ ಹಚ್ಚಿದೆ. ನೀವು ಕಾರು ಮಾರಾಟ ಮಾಡುವ ಮುನ್ನ ಅಗತ್ಯ ದಾಖಲೆಗಳನ್ನು ನೀಡಿದ್ದಲ್ಲಿ ಮೂಲಕ ಉತ್ತಮ ಬೆಲೆಯನ್ನು ಗಿಟ್ಟಿಸಿಕೊಳ್ಳಬಹುದು. 

ನಿಮ್ಮ ಕಾರ್ ನಿರ್ವಹಣೆ ದುಬಾರಿಯಾಗಬಾರದು ಎಂದಿದ್ದರೆ ಈ ಟಿಪ್ಸ್ ಪಾಲಿಸಿ

Follow Us:
Download App:
  • android
  • ios