ಎಲೆಕ್ಟ್ರಿಕ್ ಕಾರಿನಲ್ಲಿ BYD ಕ್ರಾಂತಿ, ಕೇವಲ 5 ನಿಮಿಷಕ್ಕೆ ಫುಲ್ ಚಾರ್ಜ್, 470 ಕಿ.ಮಿ ಮೈಲೇಜ್
ಎಲೆಕ್ಟ್ರಿಕ್ ಕಾರಿನಲ್ಲಿ ಜನಪ್ರಿಯ ಬಿವೈಡಿ ಬ್ರ್ಯಾಂಡ್ ಕ್ರಾಂತಿ ಮಾಡಿದೆ. ಕೇವಲ 5 ನಿಮಿಷ ಚಾರ್ಜ್ ಮಾಡಿದರೆ ಸಾಕು, ಫುಲ್ ಚಾರ್ಜ್ ಆಗಲಿದೆ. ಇಷ್ಟೇ ಅಲ್ಲ 470 ಕಿ.ಮೀ ಮೈಲೇಜ್ ನೀಡಲಿದೆ. ಇದು ಸಾರಿಗೆ ವ್ಯವಸ್ಥೆಯಲ್ಲೇ ಹೊಸ ಮೈಲಿಗಲ್ಲಾಗಿದೆ.

ನವದೆಹಲಿ(ಮಾ.18) ಎಲೆಕ್ಟ್ರಿಕ್ ವಾಹನ ವಿಭಾದಲ್ಲಿ ಪ್ರತಿ ದಿನ ಆವಿಷ್ಕಾರಗಳು, ಸಂಶೋಧನೆ ನಡೆಯುತ್ತಿದೆ. ಇದರ ಪರಿಣಾಮ ಹೊಸ ಹೊಸ ಇವಿ ವಾಹನ, ಅತ್ಯಾಧುನಿಕ ತಂತ್ರಜ್ಞಾನ, ಗರಿಷ್ಠ ಮೈಲೇಜ್ ಸೇರಿದಂತೆ ಹೊಸ ಹೊಸ ಫೀಚರ್ ಲಭ್ಯವಾಗುತ್ತಿದೆ. ಇದೀಗ ಜನಪ್ರಿಯ ಬಿವೈಡಿ ಎಲೆಕ್ಟ್ರಿಕ್ ಕಾರು ಕಂಪನಿ ಇವಿ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದೆ. ಎಲೆಕ್ಟ್ರಿಕ್ ಕಾರು ಅಥವಾ ಇವಿ ವಾಹನಗಳ ಪ್ರಮುಖ ಸಮಸ್ಸೆ ಚಾರ್ಜಿಂಗ್ ಸಮಯ. ಹೆಚ್ಚಿನ ಸಮಯ ಚಾರ್ಜಿಂಗ್ ಮಾಡಲು ವ್ಯರ್ಥವಾಗುವುದೇ ಅತೀ ದೊಡ್ಡ ಸವಾಲಾಗಿತ್ತು. ಇದೀಗ ಬಿವೈಡಿ ಹೊರ ತಂದಿರುವ ಕಾರು ಕೇವಲ 5 ನಿಮಿಷದಲ್ಲಿ ಸಂಪೂರ್ಣ ಚಾರ್ಜ್ ಆಗಲಿದೆ. ಒಮ್ಮೆ 5 ನಿಮಿಷ ಚಾರ್ಜ್ ಮಾಡಿದರೆ 470 ಕಿಲೋಮೀಟರ್ ಮೈಲೇಜ್ ನೀಡಲಿದೆ.
ಬಿವೈಡಿ ಎಲೆಕ್ಟ್ರಿಕ್ ಕಾರುಗಳು ಭಾರತದಲ್ಲೂ ಲಭ್ಯವಿದೆ.ಇದೀಗ ಇದೇ ಬ್ರ್ಯಾಂಡ್ ಹೊಸ ಕಾರು ಬಿಡುಗಡೆ ಮಾಡಿದೆ. ಪೆಟ್ರೋಲ್ ಅಥವಾ ಡೀಸೆಲ್ ಕಾರಿಗೆ ಇಂಧನ ತುಂಬಿಸಿಕೊಳ್ಳುವ ಸಮಯಕ್ಕಿಂತ ಕಡಿಮೆ ಸಮಯದಲ್ಲಿ ಬಿವೈಡಿ ಹೊಸ ಎಲೆಕ್ಟ್ರಿಕ್ ಕಾರು ಸಂಪೂರ್ಣ ಚಾರ್ಜ್ ಆಗಿಲಿದೆ. ಕಾರ ನಿಲ್ಲಿಸಿ ಒಂದು ಕಪ್ ಚಹಾ ಅಥವಾ ಕಾಫಿ ಕುಡಿದು ಮುಗಿಸುವುದಕ್ಕಿಂತ ಮೊದಲೇ ನಿಮ್ಮ ಬಿವೈಡಿ ಕಾರು ಸಂಪೂರ್ಣ ಚಾರ್ಜ್ ಆಗಲಿದೆ ಎಂದು ಬಿವೈಡಿ ಹೇಳಿಕೊಂಡಿದೆ. ಎರಡು ವೇರಿಯೆಂಟ್‌ನಲ್ಲಿ ಈ ಕಾರು ಲಭ್ಯವಿದೆ. ಹ್ಯಾನ್ ಎಲ್ ಇವಿ ಹಾಗೂ ಟ್ಯಾಂಗ್ ಎಲ್ ಇವಿ ಕಾರು.
ಹೊಸ ಎಲೆಕ್ಟ್ರಿಕ್ ಕಾರು ಖರೀದಿಸಿದ ನಟಿ ತಾರಾ, ದುಬಾರಿ ಬೆಲೆ ಕಾರಿನಲ್ಲಿದೆ ಹಲವು ವಿಶೇಷತೆ!
ಈ ಕಾರಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಬ್ಯಾಟರಿ ಪ್ಯಾಕ್ ಬಳಸಲಾಗಿದೆ. ಇದರಿಂದ ಕಾರು ಅತೀ ವೇಗವಾಗಿ ಚಾರ್ಜಿಂಗ್ ಪೂರ್ಣಗೊಳಿಸಲಿದೆ. ಇಷ್ಟೇ ಅಲ್ಲ ಮೈಲೇಜ್ ವಿಚಾರದಲ್ಲೂ ರಾಜಿಯಾಗಿಲ್ಲ. ಹೀಗಾಗಿ ಗ್ರಾಹಕರ ಅತೀ ದೊಡ್ಡ ಚಾರ್ಜಿಂಗ್ ಸಮಸ್ಯೆ ಹಾಗೂ ಸಮಯಕ್ಕೆ ನೂತನ ಬಿವೈಡಿ ಕಾರು ಉತ್ತರ ನೀಡಿದೆ.
ಎಲೆಕ್ಟ್ರಿಕ್ ವಾಹನಗಳಿಂದ ಜನರು ದೂರ ಸರಿಯಲು ಪ್ರಮುಖವಾಗಿ ಕಾರುಗಳ ಮೈಲೇಜ್, ಚಾರ್ಜಿಂಗ್ ಸಮಯ ಹಾಗೂ ಮೂಲ ಸೌಕರ್ಯದ ಕೊರತೆ. ಪ್ರಮುಖವಾಗಿ ತುರ್ತು ಅವಶ್ಯಕತೆ ವೇಳೆ ಎಲೆಕ್ಟ್ರಿಕ್ ಕಾರು ಬಳಸಲು ಸಾಧ್ಯವಾಗದ ಪರಿಸ್ಥಿತಿ ಎದುರಾಗುತ್ತದೆ. ಬಹುತೇಕ ಎಲ್ಲಾ ಕಾರುಗಳು ಫಾಸ್ಟ್ ಚಾರ್ಜಿಂಗ್ ಮೂಲಕ ಸಂಪೂರ್ಣ ಚಾರ್ಜ್ ಆಗಲು ಕನಿಷ್ಠ 1 ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಇನ್ನು ಸಾಮಾನ್ಯ ಚಾರ್ಜಿಂಗ್ ಸಾಕೆಂಟ್ ಮೂಲಕ ಕನಿಷ್ಠ 3 ರಿಂದ 4 ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಇದರಿಂದ ತುರ್ತಾಗಿ ತೆರಳವವರು, ದೂರ ಪ್ರಯಾಣ ಮಾಡಬೇಕಾದವರು ಇವಿ ಕಾರುಗಳಿಂದ ದೂರ ಉಳಿಯುತ್ತಿದ್ದರು.
ಇಷ್ಟೇ ಅಲ್ಲ ಚಾರ್ಜಿಂಗ್ ಸೌಲಭ್ಯದ ಕೊರತೆಗಳು ಮತ್ತೊಂದು ಕಾರಣವಾಗಿತ್ತು. ಕಾರಣ ಸರಿಯಾದ ಕಡೆಗಳಲ್ಲಿ, ಹೆಚ್ಚಿನ ಚಾರ್ಜಿಂಗ್ ಸೌಲಭ್ಯಗಳು ಇಲ್ಲದಿರುವ ಕಾರಣ ಜನರಿಗೆ ಹೊರೆಯಾಗುತ್ತಿತ್ತು. ಆದರೆ ಬಿವೈಡಿ ಕಾರು ಕೇವಲ 5 ನಿಮಿಷ ಚಾರ್ಜ್ ಮಾಡಿದರೆ ದೂರ ಪ್ರಯಾಣವಿರಲಿ, ಹತ್ತಿರವೇ ಇರಲಿ, ಯಾವುದೇ ಸಮಸ್ಯೆ ಇಲ್ಲದೆ ಪ್ರಯಾಣ ಮಾಡಬಹುದು. ಪ್ರಯಾಣದ ನಡುವೆ ಎಲ್ಲಿ ಚಾರ್ಜಿಂಗ್ ಸ್ಟೇಶನ್ ಇದೆಯೋ ಅಲ್ಲಿ ಕೇವಲ 5 ನಿಮಿಷ ನಿಲ್ಲಿಸಿ ಚಾರ್ಜ್ ಮಾಡಿದರೆ ಸಾಕು, ಬ್ಯಾಟರಿ ಫುಲ್. ಮತ್ತೆ 470 ಕಿ.ಮಿ ಮೈಲೇಜ್ ನೀಡುತ್ತದೆ.
ಸದ್ಯ ಈ ಕಾರು ಚೀನಾದಲ್ಲಿ ಬಿಡುಗಡೆಯಾಗಿದೆ. ಮುಂದಿನ ತಿಂಗಳಿನಿಂದ ಮಾರಾಟ ಆರಂಭಗೊಳ್ಳುತ್ತಿದೆ. ಶೀಘ್ರದಲ್ಲೇ ಭಾರತಕ್ಕೆ ಈ ಕಾರು ಎಂಟ್ರಿಕೊಡಲಿದೆ. ಭಾರತದಲ್ಲಿ ಈಗಾಗಲೇ ಬಿವೈಡಿ ಕಾರುಗಳು ಜನಪ್ರಿಯವಾಗಿದೆ. 5 ನಿಮಿಷದಲ್ಲಿ ಫುಲ್ ಚಾರ್ಜ್ ಆಗುವ ಕಾರಣ ಅತೀ ಶೀಘ್ರದಲ್ಲಿ ಭಾರತಕ್ಕೆ ಕಾಲಿಡಲಿದೆ. ಇದರ ಬೆಲೆ ಮಾಹಿತಿ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.
ಬೆಂಗಳೂರಲ್ಲಿ BYD ಎಲೆಕ್ಟ್ರಿಕ್ ಕಾರು ಶೋ ರೂಂ ಉದ್ಘಾಟನೆ, 415 ಕಿ.ಮೀ ಮೈಲೇಜ್!