ಕೈಗೆಟುಕುವ ಬೆಲೆಯಲ್ಲಿ ಸಿಯೆರಾ ಬಿಡುಗಡೆ ಮಾಡಿ ಹ್ಯುಂಡೈ, ಮಹೀಂದ್ರಗೆ ಶಾಕ್ ಕೊಟ್ಟ ಟಾಟಾ
ಕೈಗೆಟುಕುವ ಬೆಲೆಯಲ್ಲಿ ಸಿಯೆರಾ ಬಿಡುಗಡೆ ಮಾಡಿ ಹ್ಯುಂಡೈ, ಮಹೀಂದ್ರಗೆ ಶಾಕ್ ಕೊಟ್ಟ ಟಾಟಾ, ದೊಡ್ಡ ವಾಹನ ಕ್ರೆಟಾ ಹಾಗೂ ಸೆಲ್ಟೋಸ್ ಕಾರಿನ ಬೆಲೆಯಲ್ಲಿ, ಜೊತಗೆ ಗರಿಷ್ಠ ಸುರಕ್ಷತೆ, ರೇಂಜ್ ರೋವರ್ ರೀತಿಯ ಪ್ರೀಮಿಯಂ ಕ್ಲಾಸ್ ಸೇರಿದಂತೆ ಹಲವು ವಿಶೇಷತೆ ಇದರಲ್ಲಿದೆ.

ಐಕಾನಿಕ್ ಟಾಟಾ ಸಿಯೆರಾ ಕಾರು ಬಿಡುಗಡೆ
ಟಾಟಾ ಮೋಟಾರ್ಸ್ ಕಾರುಗಳು ಭಾರತದ ಮಾರುಕಟ್ಟೆಯಲ್ಲಿ ಅತ್ಯಂತ ಬೇಡಿಕೆಯ ಕಾರುಗಳಾಗಿದೆ. ಪ್ರಮುಖವಾಗಿ ಟಾಟಾ ಕಾರುಗಳು ಸುರಕ್ಷತೆಗೆ ಮೊದಲ ಆದ್ಯತೆ ನೀಡಿದೆ. ಇನ್ನು ಪ್ರೀಮಂ ಕ್ಲಾಸ್, ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅತೀ ಕಡಿಮೆ ಬೆಲೆಯಲ್ಲಿ ಲಭ್ಯವಾಗುವಂತೆ ಮಾಡಿದೆ. ಇದೀಗ ಟಾಟಾ ಸಿಯೆರಾ ಕಾರು ಬಿಡುಗಡೆಯಾಗಿದ್ದು, ಹೊಸ ದಾಖಲೆ ನಿರ್ಮಿಸುವ ಸೂಚನೆ ನೀಡಿದೆ.
ಟಾಟಾ ಸಿಯೆರಾ ಕಾರಿನ ಬೆಲೆ
ಟಾಟಾ ಸಿಯೆರಾ ಕಾರು ಕ್ರೆಟಾ, ಸೆಲ್ಟೋಸ್ ಕಾರಿಗಿಂತ ದೊಡ್ಡದ ಗಾತ್ರದ ಕಾರು. ಹೆಚ್ಚಿನ ಸ್ಥಳವಕಾಶ, ಆಕರ್ಷಕ ವಿನ್ಯಾಸ, ಪ್ರೀಮಿಯಂ ಕ್ವಾಲಿಟಿ ಸೇರದಂತೆ ಹಲವು ವಿಶೇಷತೆ ಹೊಂದಿದೆ. ಹೊಸ ಸಿಯೆರಾ ಕಾರಿನ ಬೆಲೆ 11.49 ಲಕ್ಷ ರೂಪಾಯಿ ಬೆಲೆಯಲ್ಲಿ ಆರಂಭಗೊಳ್ಳುತ್ತಿದೆ. ಇದು ಎಕ್ಸ್ ಶೋ ರೂಂ ಬೆಲೆ.
20 ವರ್ಷಗಳ ಬಳಿಕ ಸಿಯೆರಾ ಕಮ್ ಬ್ಯಾಕ್
ಟಾಟಾ ಸಿಯೆರಾ ಕಾರು ಭಾರತದಲ್ಲಿ ಭಾರಿ ಮೋಡಿ ಮಾಡಿದ್ದ ಕಾರು. ಟಾಟಾದ ಕಾರುಗಳಾಗ ಟಾಟಾ ಸುಮೋ, ಟಾಟಾ ಸಫಾರಿ ಹಾಗೂ ಟಾಟಾ ಸಿಯೆರಾ ಭಾರತದಲ್ಲಿ ಹೊಸ ದಾಖಲೆ ಬರೆದಿತ್ತು. 20 ವರ್ಷಗಳ ಹಿಂದೆ ಭಾರತದ ರಸ್ತೆಗಳಲ್ಲಿ ರಾಜನಂತೆ ಮೆರೆದಾಡಿದ್ದ ಕಾರು ಬಳಿಕ ಸ್ಥಗಿತಕೊಂಡಿತ್ತು. ಇದೀಗ 20 ವರ್ಷಬಳಿಕ ಟಾಟಾ ಸಿಯೆರಾ ಹೊಸ ವಿನ್ಯಾಸ, ಹಳೇ ಖದರ್‌ನೊಂದಿಗೆ ಲಾಂಚ್ ಆಗಿದೆ.
ಇತರ ಕಾರುಗಳಿಗೆ ಠಕ್ಕರ್
ಎಸ್‌ಯುವಿ ಸಗ್ಮೆಂಟ್‌ನಲ್ಲಿ ಇದೀಗ ಟಾಟಾ ಕಾರುಗಳಲ್ಲಿ ಹಲವು ಆಯ್ಕೆಗಳಿಗೆ. ಇದಕ್ಕೆ ಟಾಟಾ ಸಿಯೆರಾ ಸೇರಿಕೊಂಡಿದೆ. ಇದರ ಬೆಲೆ, ಹಾಗೂ ಫೀಚರ್‌ಗಳಿಂದ ಇದೀಗ ಹ್ಯುಂಡೈ ಕ್ರೆಟಾ, ಮಹೀಂದ್ರ ಕಾರುಗಳಿಗೆ ತೀವ್ರ ಪೋಪೋಟಿ ಎದುರಾಗಿದೆ. ಕಾರಣ ಟಾಟಾ ಸಿಯೆರಾ ಕೇವಲ 11.49 ಲಕ್ಷ ರೂಪಾಯಿ ಆರಂಭಿಕ ಬೆಲೆಯಲ್ಲಿ ಲಭ್ಯವಾದರೆ ಕ್ರೆಟಾ 10.73 ಲಕ್ಷ ರೂಪಾಯಿ, ಸೆಲ್ಟೋಸ್ ಆರಂಭಿಕ ಬೆಲೆ 10.79 ಲಕ್ಷ ರೂಪಾಯಿ.
ಹಲವು ಆಕರ್ಷಕ ಬಣ್ಣಗಳಲ್ಲಿ ಲಭ್ಯ
ಟಾಟಾ ಸಿಯೆರಾ ಕಾರು ಹಲವು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ. ಡ್ಯುಯೆಲ್ ಟೋನ್, ಮೋನೋಟೋನ್, ಶೇಡ್ಸ್ ಸೇರಿದಂತೆ ಹಲವು ಬಣ್ಣದಲ್ಲಿ ಕಾರು ಲಭ್ಯವಿದೆ.ಗ್ರಾಹಕರು ತಮ್ಮ ಆಸಕ್ತಿ, ಇಷ್ಟ, ಪ್ರೀತಿಗೆ ಅನುಗುಣವಾಗಿ ಬಣ್ಣ ಆಯ್ಕೆ ಮಾಡಿಕೊಳ್ಳಬಹುದು. ವಿಶೇಷ ಅಂದರೆ ಅಡ್ವೆಂಚರ್‌ನಿಂದ ಹಿಡಿದು ಎಲ್ಲಾ ರೀತಿಯಲ್ಲೂ ಸೂಟ್ ಆಗುವ ಬಣ್ಣಗಳು ಲಭ್ಯವಿದೆ.
ಹಲವು ಆಕರ್ಷಕ ಬಣ್ಣಗಳಲ್ಲಿ ಲಭ್ಯ
7 ವೇರಿಯೆಂಟ್‌ನಲ್ಲಿ ಟಾಟಾ ಸಿಯೆರಾ ಕಾರು ಲಾಂಚ್
ಬರೋಬ್ಬರಿ 7 ವೇರಿಯೆಂಟ್‌ಗಳಲ್ಲಿ ಟಾಟಾ ಸಿಯೆರಾ ಕಾರು ಬಿಡುಗಡೆಯಾಗಿದೆ. ಬೇಸ್ ಮಾಡೆಲ್ ಆಗಿರುವ ಸ್ಮಾರ್ಟ್ ಪ್ಲಸ್‌ನಿಂದ ಹಿಡಿದು ಪ್ಯೂರ್ ವರೆಗೂ 7 ವೇರಿಯೆಂಟ್‌ನಲ್ಲಿ ಕಾರು ಲಭ್ಯವಿದೆ. ಹೀಗಾಗಿ ಗ್ರಾಹಕರಿಗೆ ಹಲವು ಆಯ್ಕೆಗಳು ಲಭ್ಯವಿದೆ. ಟಾಟಾ ಸಿಯೆರಾ ಕಾರನ್ನು ಡೀಲರ್ ಬಳಿ ಅಥವಾ ಟಾಟಾ ಮೋಟಾರ್ಸ್ ಅಧಿಕೃತ ವೆಬ್‌ಸೈಟ್ ಮೂಲಕವೂ ಬುಕಿಂಗ್ ಮಾಡಿಕೊಳ್ಳಬಹುದು.

