ಎಲೆಕ್ಟ್ರಿಕ್ ಕಾರು ತಯಾರಿಯಲ್ಲಿ ವೋಲ್ವೋ: 2021ರಿಂದ ಕೇವಲ ಹೈಬ್ರಿಡ್, ಎಲೆಕ್ಟ್ರಿಕ್ ಕಾರು ಮಾರಾಟ!
ಆಟೋಮೊಬೈಲ್ ಸೆಕ್ಟರ್ ಡೀಸೆಲ್ ಕಾರಿಗೆ ಗುಡ್‌ಬೈ ಹೇಳುತ್ತಿದೆ. ಬಹುತೇಕ ಆಟೋಮೇಕರ್ ಇದೀಗ ಪೆಟ್ರೋಲ್ ಕಾರು ಮಾತ್ರ ಉತ್ಪಾದನೆ ಮಾಡುತ್ತಿದೆ. ಇಷ್ಟೇ ಹಲವು ಆಟೋಮೊಬೈಲ್ ಕಂಪನಿಗಳು ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡುತ್ತಿದೆ. ಇದೀಗ ಸ್ವೀಡನ್‌ನ ಲಕ್ಸುರಿ ಕಾರು ಬ್ರ್ಯಾಂಡ್ ವೋಲ್ವೋ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ತಯಾರಿ ಮಾಡಿಕೊಳ್ಳುತ್ತಿದೆ.
ಬೆಂಗಳೂರು(ಅ.03): ಭಾರತದಲ್ಲಿ ಲಕ್ಸುರಿ ಕಾರು ವಿಭಾಗದಲ್ಲಿ ವೋಲ್ವೋ ಕಾರು ಮುಂಚೂಣಿಯಲ್ಲಿದೆ. ಇದೀಗ ವೋಲ್ವೋ ಭಾರತ ಸೇರಿದಂತೆ ವಿಶ್ವದಲ್ಲಿ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲು ತಯಾರಿ ಆರಂಭಿಸಿದೆ. ಬೆಲ್ಜಿಯಂ ಘಟಕದಲ್ಲಿ ಈಗಗಾಲೇ ವೋಲ್ವೋ XC40 ಎಲೆಕ್ಟ್ರಿಕ್ ಕಾರು ಉತ್ಪಾದನ ಆರಂಭಗೊಂಡಿದೆ.
ದುಬಾರಿ ಕಾರು ಖರೀದಿಸಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್!.
ವೋಲ್ಪೋ XC40 ಎಲೆಕ್ಟ್ರಿಕ್ ಕಾರಿನ ಜೊತೆಗೆ ಇನ್ನೆರಡು ಕಾರುಗಳ ಉತ್ಪಾದನಗೂ ವೋಲ್ವೋ ಚಿತ್ತ ಹರಿಸಿದೆ. ಮುಂದಿನ 2 ವರ್ಷದಲ್ಲಿ ಮೂರು SUV ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲು ನಿರ್ಧರಿಸಿರುವ ವೋಲ್ಪೋ ಕಂಪನಿ, ಭಾರತ ಸೇರಿದಂತೆ ವಿಶ್ವದ ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಬಹುದೊಡ್ಡ ಯೋಜನೆ ಹಾಕಿಕೊಂಡಿದೆ.
ಮಾಜಿ ಪ್ರಧಾನಿ ದೇವೇಗೌಡರಿಗೆ ಸರ್ಕಾರ ನೀಡಿದ ವೋಲ್ವೋ ಕಾರಿನ ವಿಶೇಷತೆ ಏನು?
ವೋಲ್ವೋ ಕಾರುಗಳ ಪೈಕಿ ಜನಪ್ರಿಯ SUV ಕಾರಾದ XC40 ಇದೀಗ ಎಲೆಕ್ಟ್ರಿಕ್ ಕಾರಾಗಿ ಬಿಡುಗಡೆಯಾಗಲಿದೆ. ಪೆಟ್ರೋಲ್ ಹಾಗೂ ಡೀಸೆಲ್ ಕಾರಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನ ನೀಡುವ ಮೂಲಕ ಹೆಸರುವಾಸಿಯಾಗಿರುವ ವೋಲ್ವೋ, ಎಲೆಕ್ಟ್ರಿಕ್ ಕಾರಿನಲ್ಲಿ ಯಾವ ರೀತಿ ಫೀಚರ್ಸ್ ನೀಡಲಿದೆ ಅನ್ನೋ ಕುತೂಹಲ ಮನೆ ಮಾಡಿದೆ. ಇಷ್ಟೇ ಅಲ್ಲ ನೂತನ ವೋಲ್ವೋ ಎಲೆಕ್ಟ್ರಿಕ್ ಕಾರಿನ ಮೈಲೇಜ್ ಹಾಗೂ ಬ್ಯಾಟರಿ ಜಾರ್ಜಿಂಗ್ ಕುರಿತು ಕೆಲ ಮಾಹಿತಿಗಳನ್ನು ಇನ್ನೂ ಬಹಿರಂಗವಾಗಿಲ್ಲ.
ಎಲೆಕ್ಟ್ರಿಕ್ ಕಾರು ಉತ್ಪಾದನೆ ಆರಂಭಿಸಿದ ಬೆನ್ನಲ್ಲೇ ಇದೀಗ ವೋಲ್ಪೋ ಹಂತ ಹಂತವಾಗಿ ಡೀಸೆಲ್ ಹಾಗೂ ಸಾಮಾನ್ಯ ಪೆಟ್ರೋಲ್ ಕಾರಿಗೆ ಗುಡ್‌ಬೈ ಹೇಳಲು ಮುಂದಾಗಿದೆ. 2022ರಿಂದ ವೋಲ್ವೋ ಪೆಟ್ರೋಲ್ ಹೈಬ್ರಿಡ್ ಹಾಗೂ ಎಲೆಕ್ಟ್ರಿಕ್ ಕಾರು ಮಾತ್ರ ಉತ್ಪಾದನೆ ಮಾಡಲು ಮುಂದಾಗಿದೆ.