ಭಾರತದಲ್ಲಿ ಸಣ್ಣ ಕಾರುಗಳ ಮಾರುಕಟ್ಟೆ ಅಧ್ಯಯನ ಮಾಡಲಿದೆ ವೋಕ್ಸ್ವ್ಯಾಗನ್

ಸ್ಕೋಡಾ ಆಟೋ ವೋಕ್ಸ್ವ್ಯಾಗನ್  (Skoda Auto Volkswagen)ಇಂಡಿಯಾ ಭಾರತೀಯ ಮಾರುಕಟ್ಟೆಗೆ ಸಣ್ಣ ಕಾರು EV ಅನ್ನು ಪರಿಚಯಿಸುವ ನಿಟ್ಟಿನಲ್ಲಿ ಅದ್ಯಯನ ನಡೆಸುತ್ತಿದೆ.

Volkswagen to study small EVs in India

ವೋಕ್ಸ್ವ್ಯಾಗನ್(Volkswagen) ಗ್ರೂಪ್ ಭಾರತೀಯ ಅಂಗಸಂಸ್ಥೆಯಾದ ಸ್ಕೋಡಾ ಆಟೋ ವೋಕ್ಸ್ವ್ಯಾಗನ್  (Skoda Auto Volkswagen)ಇಂಡಿಯಾ, ಭಾರತೀಯ ಮಾರುಕಟ್ಟೆಗೆ ಸಣ್ಣ ಕಾರು EV ಅನ್ನು ಪರಿಚಯಿಸುವ ನಿಟ್ಟಿನಲ್ಲಿ ಅದ್ಯಯನ ನಡೆಸುತ್ತಿದೆ. 

ಈ ಅಧ್ಯಯನದ ಬೆನ್ನಲ್ಲೇ 2025 ರ ನಂತರ ದೇಶದಲ್ಲಿ EV ಕಾರ್ಖಾನೆಯನ್ನು ಸ್ಥಾಪಿಸಲು ಕಂಪನಿ ಯೋಜನೆ ರೂಪಿಸಿದೆ ಎಂದು ಸ್ಕೋಡಾ ಆಟೋದ ಗ್ಲೋಬಲ್ ಸಿಇಒ ಥಾಮಸ್ ಸ್ಕೇಫರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಎಲೆಕ್ಟ್ರಿಕ್ ವಾಹನಗಳಿಗೆ ಭಾರತೀಯ ಮಾರುಕಟ್ಟೆ ಅತ್ಯುತ್ತಮವಾಗಿದೆ. ಇದು ಈ ದಶಕದ ಉತ್ತರಾರ್ಧದಲ್ಲಿ ಭಾರತಕ್ಕೆ ಮಾತ್ರವಲ್ಲದೆ ಇತರ ಉದಯೋನ್ಮುಖ ಮಾರುಕಟ್ಟೆಗಳಿಗೆ “ಕೈಗೆಟುಕುವ ದರದ” EV ಗಳನ್ನು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಹಳೆ ಕಾರುಗಳಿಗೆ ಹೈಟೆಕ್ ಸ್ಪರ್ಶ ನೀಡುವ ಜಾದೂಗಾರ!

"ವಿಶ್ವದ ಹಲವು ದೇಶಗಳಿಗೆ ಹೆಚ್ಚು ಕೈಗೆಟುಕುವ ಪ್ರವೇಶ EV ಗಳ ಅಗತ್ಯವಿದೆ. ಭಾರತದಲ್ಲಿ ಹೊಸ ಕಾರ್ಖಾನೆ ಸ್ಥಾಪಿಸುವ ಅಗತ್ಯವಿದೆ. ಶೀಘ್ರದಲ್ಲೇ ಈ ಯೋಜನೆಯನ್ನು ಪೂರ್ಣಗೊಳಿಸಲಾಗುವುದು. ಕಂಪನಿಯು ಪ್ರಸ್ತುತ ಭಾರತದಲ್ಲಿ ಎನ್ಯಾಕ್ ಪ್ರೀಮಿಯಂ ಎಲೆಕ್ಟ್ರಿಕ್ ವಾಹನದ ಕುರಿತು ಪ್ರಾಯೋಗಿಕ ಅಧ್ಯಯನವನ್ನು ನಡೆಸುತ್ತಿದೆ, ಮುಂಬರುವ ಕೆಲವು ವರ್ಷಗಳಲ್ಲಿ ಇನ್ನೂ ಮೂರು EV ಗಳನ್ನು ಸೇರಿಸುವ ಯೋಜನೆ ಹೊಂದಿದೆ ಮತ್ತು ಇವುಗಳಲ್ಲಿ ಕೆಲವು ಉತ್ಪನ್ನಗಳು ಭಾರತಕ್ಕೆ ಸೂಕ್ತವಾಗಿವೆ ಎಂದು ಸ್ಕೇಫರ್ ಹೇಳಿದ್ದಾರೆ.

ವೋಕ್ಸ್ವ್ಯಾಗನ್ ಸಮೂಹದ ಭವಿಷ್ಯದಲ್ಲಿ ಭಾರತವು ಹೆಚ್ಚು ಮಹತ್ವದ ಪಾತ್ರವನ್ನು ವಹಿಸುತ್ತದೆ. ಅದು ಕೇವಲ ಇವಿಗಳಲ್ಲಿ ಮಾತ್ರವಲ್ಲ, ಮುಂದಿನ 10-15 ವರ್ಷಗಳವರೆಗೆ ಸಾಂಪ್ರದಾಯಿಕ ಪೆಟ್ರೋಲ್ ಚಾಲನೆಯಲ್ಲಿರುವ ವಾಹನಗಳಲ್ಲಿಯೂ ಸಹ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮುಂಬರುವ 10-15 ವರ್ಷಗಳಲ್ಲಿ ಇವಿಗಳು ಸೇರಿದಂತೆ ಪೆಟ್ರೋಲ್ ಚಾಲನೆಯ ಕಾರುಗಳನ್ನು ಆಗ್ನೇಯ ಏಷ್ಯಾ, ಆಫ್ರಿಕಾದ ಮಾರುಕಟ್ಟೆಗಳಿಗೆ ಭಾರತ ವೇದಿಕೆಯಾಗಲಿದೆ. ಭಾರತದಲ್ಲಿನ 2.0 ಯೋಜನೆಯಡಿ ನಾಲ್ಕು ಕಾರುಗಳ ಬಿಡುಗಡೆಯಾಗಿ ವೋಕ್ಸ್‌ವ್ಯಾಗನ್ 1 ಬಿಲಿಯನ್ ಯೂರೋ ಹೂಡಿಕೆ ಮಾಡಿದೆ (ಸ್ಕೋಡಾ ಕುಶಾಕ್, ಸ್ಕೋಡಾ ಸ್ಲಾವಿಯಾ, ವೋಕ್ಸ್ವ್ಯಾಗನ್ ಟೈಗುನ್ ಮತ್ತು ವೋಕ್ಸ್ವ್ಯಾಗನ್ ವರ್ಟಸ್) 
ಈಗ, ಸ್ಕೋಡಾ ಆಟೋ ವೋಕ್ಸ್ವ್ಯಾಗನ್ ಈಗ "2.5 ಪ್ರಾಜೆಕ್ಟ್" ನಲ್ಲಿ ಸಣ್ಣ ಸಬ್ -4 ಮೀಟರ್ ಎಸ್ಯುವಿಗಳ ಬಿಡುಗಡೆಯತ್ತ ಕೆಲಸ ಮಾಡುತ್ತಿದೆ. ಈ ಯೋಜನೆಗೆ ಈಗಾಗಲೇ ಅನುಮೋದನೆ ದೊರೆತಿದ್ದು, ಇದರಡಿ ಭಾರತಕ್ಕೆ ಹಣ ಪೂರೈಕೆ ಮಾಡಲಾಗುವುದು.

ದೇಶಾದ್ಯಂತ ಆಟೊಮೊಬೈಲ್ ವಲಯವನ್ನು ಕಾಡುತ್ತಿರುವ ಸೆಮಿಕಂಡಕ್ಟರ್‌ ಕೊರತೆ 2022 ರ ದ್ವಿತೀಯಾರ್ಧದಿಂದ ಸುಧಾರಣೆಯಾಗಲಿದೆ ಎಂದು ಕಂಪನಿ ನಿರೀಕ್ಷಿಸುತ್ತದೆ ಎಂದಿರುವ ಸ್ಕೇಫರ್, ಸ್ಕೋಡಾ ಯುರೋಪ್ನ ಹೊರಗೆ ಭಾರತದಂತಹ ದೇಶಗಳಲ್ಲಿ ಯಶಸ್ಸು ಗಳಿಸಿದೆ ಎಂದರು.

ಬ್ರ್ಯಾಂಡ್ ದೇಶದಲ್ಲಿ ಹೊಸದಾಗಿ ಬಿಡುಗಡೆಯಾದ SUV ಕುಶಾಕ್ ಮತ್ತು ಸ್ಲಾವಿಯಾ ಮಧ್ಯಮ ಗಾತ್ರದ ಸೆಡಾನ್ಗಾಗಿ ಈಗಾಗಲೇ 35000 ಕ್ಕೂ ಹೆಚ್ಚು ಬುಕಿಂಗ್  ಪಡೆದುಕೊಂಡಿದೆ. ಸ್ಕೋಡಾ ಸ್ಲಾವಿಯಾ ಆರಂಭಿಕ  ಬೆಲೆ 10.69 ಲಕ್ಷ ರೂ. ಮತ್ತು  17.79 ಲಕ್ಷ ರೂ.ಗಳಷ್ಟಿದೆ. ಸ್ಕೋಡಾ ಸ್ಲಾವಿಯಾ 8 ರೂಪಾಂತರಗಳಲ್ಲಿ ದೊರೆಯುತ್ತದೆ. - ಸ್ಲಾವಿಯಾದ ಮೂಲ ಮಾದರಿಯು 1.0 TSI ಆಕ್ಟಿವ್ ಮತ್ತು ಟಾಪ್ ವೇರಿಯಂಟ್ ಸ್ಕೋಡಾ ಸ್ಲಾವಿಯಾ 1.5 TSI ಸ್ಟೈಲ್ DSG. 

ಎಲೆಕ್ಟ್ರಿಕ್ ಕಾರಿನ ಅನುಭೂತಿ: ವೋಕ್ಸ್ವ್ಯಾಗನ್ ಇಂಡಿಯಾ (Volkswagen India) 2025ರ ವೇಳೆಗೆ ಭಾರತದಲ್ಲಿ ತಮ್ಮ ಮೊದಲ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸುವ ನಿರೀಕ್ಷೆಯಿದೆ. ಜರ್ಮನ್ ಕಾರು ತಯಾರಕ ಕಂಪನಿ ಭಾರತದಲ್ಲಿ ಇವಿ (EV) ಕಾರುಗಳನ್ನು ಪರಿಚಯಿಸಲು ಮತ್ತು ದೇಶದಲ್ಲಿ ಗ್ರಾಹಕರನ್ನು ತಲುಪಲು ಉತ್ಸುಕವಾಗಿದೆ.  ವೋಕ್ಸ್ವ್ಯಾಗನ್ ಇಂಡಿಯಾದ ಬ್ರ್ಯಾಂಡ್ ನಿರ್ದೇಶಕ ಆಶಿಶ್ ಗುಪ್ತಾ ಈ ಬಗ್ಗೆ ಮಾಹಿತಿ ನೀಡಿದ್ದರು.

 

Latest Videos
Follow Us:
Download App:
  • android
  • ios