ಪ್ರತಿನಿತ್ಯ 1,300 ಇವಿ ಕಾರು ತಯಾರಿಸುತ್ತಿರುವ ವೋಕ್ಸ್‌ವ್ಯಾಗನ್
ಅದರಲ್ಲೂ ಎಲೆಕ್ಟ್ರಿಕ್ ವಲಯಕ್ಕೆ ಹೊಸದಾಗಿ ಕಾಲಿರಿಸಿರುವ ವೋಕ್ಸ್ವ್ಯಾಗನ್, ಮಾರುಕಟ್ಟೆಯಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಳ್ಳಲು ಹೊಸ ತಂತ್ರಗಳನ್ನು ರೂಪಿಸುತ್ತಿದೆ. ಸದ್ಯ ತನ್ನ ಜ್ಯುಕಾವ್ (Zwikau) ಉತ್ಪಾದನಾ ಘಟಕದಲ್ಲಿ ದಿನವೊಂದಕ್ಕೆ 1,300 ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದಿಸುವುದಾಗಿ ಕಂಪನಿ ತಿಳಿಸಿದೆ.
Auto Desk: ಜಗತ್ತಿನ ಆಟೊಮೊಬೈಲ್ ವಲಯವನ್ನು ಕಾಡುತ್ತಿರುವ ಸೆಮಿ ಕಂಡಕ್ಟರ್ ಕೊರತೆ ಮತ್ತು ಪೂರೈಕೆ ಸರಣಿಯ ಅವ್ಯವಸ್ಥೆಯಿಂದ ವಾಹನಗಳ ಉತ್ಪಾದನೆ ಕುಂಠಿತಗೊಂಡಿರುವ ಬೆನ್ನಲ್ಲೇ ಜರ್ಮನ್ ಮೂಲದ ಆಟೊಮೊಬೈಲ್ ಕಂಪನಿ ವೋಕ್ಸ್ವ್ಯಾಗನ್ (Volkswagen) ಮಾತ್ರ ತನ್ನ ಉತ್ಪಾದನಾ ಪ್ರಕ್ರಿಯೆಗೆ ಭಾರಿ ವೇಗ ನೀಡಿದೆ.ಅದರಲ್ಲೂ ಎಲೆಕ್ಟ್ರಿಕ್ ವಲಯಕ್ಕೆ ಹೊಸದಾಗಿ ಕಾಲಿರಿಸಿರುವ ವೋಕ್ಸ್ವ್ಯಾಗನ್, ಮಾರುಕಟ್ಟೆಯಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಳ್ಳಲು ಹೊಸ ತಂತ್ರಗಳನ್ನು ರೂಪಿಸುತ್ತಿದೆ. ಸದ್ಯ ತನ್ನ ಜ್ಯುಕಾವ್ (Zwikau) ಉತ್ಪಾದನಾ ಘಟಕದಲ್ಲಿ ದಿನವೊಂದಕ್ಕೆ 1,300 ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದಿಸುವುದಾಗಿ ಕಂಪನಿ ತಿಳಿಸಿದೆ. ಇದು ಕಂಪನಿಯ ಪ್ರಮುಖ ಇವಿ (EV) ಉತ್ಪಾದನಾ ಸೌಲಭ್ಯವಾಗಿದೆ.ಇದರಲ್ಲಿ ಮೂರು ಪಾಳಿಗಳಲ್ಲಿ ಉತ್ಪಾದನಾ ಪ್ರಕ್ರಿಯೆ ನಡೆಯುತ್ತಿದೆ ಎಂದು ಕಂಪನಿ ತಿಳಿಸಿದೆ.
ಕಳೆದ ಫೆಬ್ರವರಿಯಲ್ಲಿ ಪೂರೈಕೆ ಸರಣಿಯ ಸಮಸ್ಯೆಯಿಂದ ಘಟಕದ ಉತ್ಪಾದನೆ ಗಂಭೀರವಾಗಿ ಪರಿಣಾಮ ಬೀರಿದೆ. ಇದರಿಂದ ಕಂಪನಿ ಮೂರು ವಾರಗಳ ಕಾಲ ಉತ್ಪಾದನೆಯನ್ನು ಸ್ಥಗಿತಗೊಳಿಸಬೇಕಾಯಿತು. 2022ರ ಮಾರ್ಚ್ 29ರಂದು ಕಂಪನಿ ಉತ್ಪಾದನೆಯನ್ನು ಪುನಾರಂಭಿಸಿತಾದರೂ, ಪ್ರತಿನಿತ್ಯ 900 ಕಾರುಗಳನ್ನು ಮಾತ್ರ ಉತ್ಪಾದಿಸುತ್ತಿತ್ತು. ಆದರೆ, ಈಗ ಪೂರೈಕೆ ಸರಣಿ ಸಮಸ್ಯೆ ಸಾಕಷ್ಟು ಪರಿಹಾರಗೊಂಡಿರುವುದರಿಂದ, ಜೂನ್ 13ರಿಂದ ಉತ್ಪಾದನೆಯನ್ನು ಹೆಚ್ಚಿಸಿದೆ. ಮೂರು ಪಾಳಿಯ ಕೆಲಸ ಆರಂಭಿಸಿದ ಕಂಪನಿ, ಪ್ರತಿ ನಿತ್ಯ 1300 ವಾಹನಗಳನ್ನು ಉತ್ಪಾದಿಸುತ್ತಿದೆ.
ಇದನ್ನೂ ಓದಿ: ಎಲೆಕ್ಟ್ರಿಕ್ ವಾಹನಗಳ ಉಪಕರಣ ಉತ್ಪಾದನೆ ಚುರುಕು, ಮಹೀಂದ್ರ ವೋಕ್ಸ್‌ವ್ಯಾಗನ್ ಒಪ್ಪಂದ!
ಸದ್ಯ ಕಂಪನಿ ತನ್ನ ಘಟಕದಲ್ಲಿ ಆರು ಎಂಇಬಿ ಪ್ಲಾಟ್ಫಾರ್ಮ್ ಆಧಾರಿತ ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದಿಸುತ್ತಿದೆ. ಇದು ವೋಕ್ಸ್ವ್ಯಾಗನ್ ಐಡಿ.3 (Volkswagen ID.3), ವೋಕ್ಸ್ವ್ಯಾಗನ್ ಐಡಿ.4 (Volkswagen ID.4), ವೋಕ್ಸ್ವ್ಯಾಗನ್ ಐಡಿ.5 (Volkswagen ID.5), ಆಡಿ ಕ್ಯೂ4 ಇ-ಟ್ರಾನ್ (Audi Q4 E-tron), ಆಡಿ ಕ್ಯೂ4 ಸ್ಪೋರ್ಟ್ಬ್ಯಾಕ್ ಇ-ಟ್ರಾನ್ ಮತ್ತು ಕುಪ್ರಾ ಬಾರ್ನ್ ಕಾರುಗಳನ್ನು ಒಳಗೊಂಡಿದೆ. ಈ ಘಟಕ ಪ್ರತಿ ವರ್ಷ 3.30 ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.
ವೋಕ್ಸ್ವ್ಯಾಗನ್ ಇತ್ತೀಚೆಗೆ ಭಾರತದಲ್ಲಿ ಫೋಕ್ಸ್ವ್ಯಾಗನ್ ವರ್ಟಸ್ ಸೆಡಾನ್ನ ಬೆಲೆ ಮತ್ತು ವೇರಿಯಂಟ್ಗಳ ಶ್ರೇಣಿಯನ್ನು ಘೋಷಿಸಿತು. ಫೋಕ್ಸ್ವ್ಯಾಗನ್ ವರ್ಟಸ್ನ ಬೆಲೆ 11.22 ಲಕ್ಷ ರೂ.ಗಳಿಂದ ಪ್ರಾರಂಭವಾಗುತ್ತದೆ. ವೋಕ್ಸ್ವ್ಯಾಗನ್ ಈಗಾಘಲೇ ವರ್ಟಸ್ ಸೆಡಾನ್ ಉತ್ಪಾದನೆಯನ್ನು ಪ್ರಾರಂಭಿಸಿದೆ ಮತ್ತು ಇದು ದೇಶಾದ್ಯಂತದ ಡೀಲರ್ಶಿಪ್ಗಳನ್ನು ರವಾನಿಸಲು ಪ್ರಾರಂಭಿಸಿದೆ.
ಫೋಕ್ಸ್ವ್ಯಾಗನ್ ವರ್ಟಸ್ನ ಟಾಪ್ಲೈನ್ ವೇರಿಯಂಟ್ ಎಂದರೆ ಡೈನಾಮಿಕ್ ವೇರಿಯಂಟ್.ಇದು 1.0 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್, 19 ಕಿಮೀ ಮೈಲೇಜ್ ಹೊಂದಿದೆ.
ವರ್ಟಸ್ (Virtus) 1.0 ಟಿಎಸ್ಐ (TSI) ಮ್ಯಾನ್ಯುಯಲ್ ಮತ್ತು ಆಟೊಮೆಟಿಕ್ ಪ್ರಸರಣ ಆಯ್ಕೆಯೊಂದಿಗೆ ಲಭ್ಯವಿದೆ. ಮತ್ತೊಂದೆಡೆ 1.5 ಟಿಎಸ್ಐ ಡಿಎಸ್ಜಿ ಪ್ರಸರಣ ಮಾತ್ರ ಹೊಂದಿದೆ. 1.0 ಲೀಟರ್ TSI, 115 PS ಮತ್ತು 178 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. 1.5 ಲೀಟರ್ TSI 150 Ps ಮತ್ತು 250 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಇದನ್ನೂ ಓದಿ: ಇನ್ನು ಭಾರತಕ್ಕೆ ಬರಲ್ಲ: ವೋಕ್ಸ್ವ್ಯಾಗನ್ ಪೋಲೋ ಸ್ಪಷ್ಟನೆ
ಸೆಡಾನ್ ಜೊತೆಗೆ, ಜಾಗತಿಕ ಎಲೆಕ್ಟ್ರಿಕ್ ಮಾರುಕಟ್ಟೆಯಲ್ಲಿ ಕೂಡ ಮುಂದಿನ ದಿನಗಳಲ್ಲಿ ಪ್ರಾಬಲ್ಯ ಸಾಧಿಸುವ ಗುರಿಯನ್ನು ಕಂಪನಿ ಹೊಂದಿದೆ. ಸದ್ಯ ಅಮೆರಿಕದ ಜಾಗತಿಕ ಇವಿ ಮಾರುಕಟ್ಟೆಯಲ್ಲಿ ಟೆಸ್ಲಾ ಮುಂಚೂಣಿಯಲ್ಲಿದ್ದು, ಹಲವು ಕಂಪನಿಗಳು ಅದಕ್ಕೆ ಸ್ಪರ್ಧೆ ನೀಡಲು ಸಿದ್ಧತೆ ನಡೆಸಿವೆ. ಇದರಲ್ಲಿ ಸ್ಕೋಡಾ, ಆಡಿ ಮತ್ತು ಪೋರ್ಷೆ ಕಂಪನಿಗಳೂ ಸೇರಿವೆ. ಅಮೆರಿಕ ಮೂಲದ ಟೆಸ್ಲಾ, ಈಗಾಗಲೇ ತನ್ನ ಸ್ವಯಂಚಾಲಿತ ಸೌಲಭ್ಯಗಳು ಮತ್ತು ಐಷಾರಾಮಿ ಇಂಟೀರಿಯರ್ಗಳಿಂದ ಸಾಕಷ್ಟು ಸುದ್ದಿಯಲ್ಲಿದೆ.