Asianet Suvarna News Asianet Suvarna News

Electric Vehilce ಎಲೆಕ್ಟ್ರಿಕ್ ವಾಹನಗಳ ಉಪಕರಣ ಉತ್ಪಾದನೆ ಚುರುಕು, ಮಹೀಂದ್ರ ವೋಕ್ಸ್‌ವ್ಯಾಗನ್ ಒಪ್ಪಂದ!

  • ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆ ವಿಸ್ತರಣೆ
  • ಎಲೆಕ್ಟ್ರಿಕ್ ಮಾರುಕಟ್ಟೆಗೆ  ಮಹೀಂದ್ರ ಹಾಗೂ ವೋಕ್ಸ್‌ವ್ಯಾಗನ್
  •   ಇ-ಮೊಬಿಲಿಟಿಯ ಪ್ರಮುಖ ಮುಕ್ತ ವೇದಿಕೆಯಾಗಿ  ಅಭಿವೃದ್ಧಿ
Volkswagen and Mahindra sign Partnering Agreement for MEB electric components in Chennai ckm
Author
Bengaluru, First Published May 21, 2022, 4:52 PM IST

ಚೆನ್ನೈ(ಮೇ.21) : ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಹಾಗೂ ಬೇಡಿಕೆ ಹೆಚ್ಚಾಗಿದೆ. ಪರಿಣಾಮ ಎಲೆಕ್ಟ್ರಿಕ್ ವಾಹನಗಳ ಸಲಕರಣಗಳ ಉತ್ಪಾದನೆ ಬೇಡಿಕೆಯೂ ಹಚ್ಚಾಗಿದೆ. ಇದೀಗ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಸಲಕರಣೆ ಉತ್ಪಾದನೆ ಸಜ್ಜುಗೊಳಿಸಲು ಮಹೀಂದ್ರ ಹಾಗೂ ವೋಕ್ಸ್‌ವ್ಯಾಗನ್ ಒಪ್ಪಂದ ಮಾಡಿಕೊಂಡಿದೆ. 

ಮಹೀಂದ್ರಾ ಅಂಗ ಸಂಸ್ಥೆ ಬಾರ್ನ್ ಎಲೆಕ್ಟ್ರಿಕ್ ಪ್ಲಾಟ್‌ಫಾರ್ಮ್‌ಗಾಗಿ  ʻಎಂಇಬಿʼ ಎಲೆಕ್ಟ್ರಿಕ್ ಉಪಕರಣಗಳ ಬಳಕೆಯನ್ನು ವೋಕ್ಸ್‌ವ್ಯಾಗನ್ ಮತ್ತು ಮಹೀಂದ್ರಾ & ಮಹೀಂದ್ರಾ ಲಿಮಿಟೆಡ್ (ಎಂ&ಎಂ) ಸಂಸ್ಥೆಗಳು ಅನ್ವೇಷಿಸುತ್ತಿವೆ.  ಮಹೀಂದ್ರಾ ತನ್ನ "ಬಾರ್ನ್ ಎಲೆಕ್ಟ್ರಿಕ್ ಪ್ಲಾಟ್‌ಫಾರ್ಮ್" ಅನ್ನು ಎಲೆಕ್ಟ್ರಿಕ್ ಮೋಟಾರ್‌ಗಳು, ಬ್ಯಾಟರಿ ಸಿಸ್ಟಮ್ ಉಪಕರಣಗಳು ಮತ್ತು ಬ್ಯಾಟರಿ ಕೋಶಗಳಂತ ʻಎಂಇಬಿʼ ಎಲೆಕ್ಟ್ರಿಕ್ ಉಪಕರಣʼಗಳೊಂದಿಗೆ ಸಜ್ಜುಗೊಳಿಸಲು ಉದ್ದೇಶಿಸಿದೆ. ಪಾಲುದಾರಿಕೆ ಒಪ್ಪಂದವು ಸಹಯೋಗದ ವ್ಯಾಪ್ತಿಯನ್ನು ಮೌಲ್ಯಮಾಪನ ಮಾಡಲಿದೆ - ಇದು ಮೌಲ್ಯಮಾಪನದ ಹಂತಕ್ಕಾಗಿ ಬದ್ಧತೆಯ ನಿಯಮಗಳನ್ನು ಸೂಚಿಸುತ್ತದೆ. ಜೊತೆಗೆ ಬದ್ಧತೆ ರಹಿತ ಪೂರೈಕೆ ಹಂತದ ವ್ಯಾಪ್ತಿಯನ್ನೂ ಇದು ಸೂಚಿಸುತ್ತದೆ.  ಬದ್ಧತೆಯುಕ್ತ ಪೂರೈಕೆ ಒಪ್ಪಂದವನ್ನು 2022ರ ಅಂತ್ಯದ ವೇಳೆಗೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ಸತತ ರಚನಾತ್ಮಕ ಮತ್ತು ಕಾನೂನಾತ್ಮಕ ರೀತಿಯಲ್ಲಿ ಒಪ್ಪಂದವನ್ನು ಮುಂದುವರಿಸಲಾಗುವುದು. ಮುಕ್ತ ವಾಹನ ವೇದಿಕೆಯಾಗಿ ವಿನ್ಯಾಸಗೊಳಿಸಲಾದ, ʻಎಂಇಬಿʼ ಎಲೆಕ್ಟ್ರಿಕ್ ವೇದಿಕೆ ಮತ್ತು ಅದರ ಉಪಕರಣಗಳು ಕಾರು ತಯಾರಕರಿಗೆ ತ್ವರಿತವಾಗಿ ಮತ್ತು ವೆಚ್ಚ-ಪರಿಣಾಮಕಾರಿಯಾಗಿ ತಮ್ಮ ಎಲೆಕ್ಟ್ರಿಕ್‌ ವಾಹನಗಳ ಶ್ರೇಣಿಯನ್ನು ನಿರ್ಮಿಸಲು ಅನುವು ಮಾಡಿಕೊಡುತ್ತದೆ.

ಕೆಜಿಎಫ್ 2 ದೊಡ್ಡಮ್ಮನ ಥರ ಮಹೀಂದ್ರಾದ ಬಿಗ್‌ ಡ್ಯಾಡಿ Mahindra Scorpio 2022

ಭಾರತೀಯ ವಾಹನ ಮಾರುಕಟ್ಟೆಯಲ್ಲಿ ವಿದ್ಯುತ್‌ ಚಾಲಿತ ವಾಹನಗಳ ವ್ಯಾಪ್ತಿಯನ್ನು ಹೆಚ್ಚಿಸುವುದು ಎರಡೂ ಕಂಪನಿಗಳ ಸಮಾನ ಉದ್ದೇಶವಾಗಿದೆ. ಇದು ವೇಗವಾಗಿ ಬೆಳೆಯುತ್ತಿರುವ ವಾಹನ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಅಲ್ಲದೆ, ವಾಹನ ವಲಯವನ್ನು ಜಾಗತಿಕ ಮಟ್ಟದಲ್ಲಿ ಇಂಗಾಲಮುಕ್ತಗೊಳಿಸುವಲ್ಲೂ ಪ್ರಮುಖ ಪಾತ್ರ ವಹಿಸಲಿದೆ.

ಮಹೀಂದ್ರಾ ಭಾರತದಲ್ಲಿ ಎಲೆಕ್ಟ್ರಿಕ್ ಮೊಬಿಲಿಟಿ ಕ್ಷೇತ್ರದಲ್ಲಿ ಪ್ರವರ್ತಕ ಸ್ಥಾನದಲ್ಲಿದೆ ಮತ್ತು ನಮ್ಮ ʻಎಂಇಬಿʼ ಎಲೆಕ್ಟ್ರಿಕ್ ವೇದಿಕೆಗೆ ಉತ್ತಮ ಪಾಲುದಾರನಾಗಿದೆ. ಮಹೀಂದ್ರಾದೊಂದಿಗೆ, ನಾವು ಭಾರತದಲ್ಲಿ ವಿದ್ಯುತ್‌ ಚಾಲಿತ ವಾಹನ ವಲಯದ ವೇಗವರ್ಧನೆಗೆ ಗಮನಾರ್ಹ ಕೊಡುಗೆ ನೀಡಲು ಬಯಸುತ್ತೇವೆ. ಇದು ಅಗಾಧವಾದ ಬೆಳವಣಿಗೆಯ ಸಾಮರ್ಥ್ಯವನ್ನು ಹೊಂದಿರುವ ಮತ್ತು ಹವಾಮಾನ ಸಂರಕ್ಷಣೆಗೆ ಹೆಚ್ಚಿನ ಪ್ರಸ್ತುತತೆಯನ್ನು ಹೊಂದಿರುವ ಬೃಹತ್ ವಾಹನ ಮಾರುಕಟ್ಟೆಯಾಗಿದೆ. ʻಎಂಇಬಿʼ ತಾಂತ್ರಿಕವಾಗಿ ಅತ್ಯಾಧುನಿಕ ಮತ್ತು ವೆಚ್ಚದ ವಿಷಯದಲ್ಲಿ ಹೆಚ್ಚು ಸ್ಪರ್ಧಾತ್ಮಕವಾಗಿದೆ ಎಂಬುದಕ್ಕೆ ಇದು ಮತ್ತೊಂದು ಪುರಾವೆಯಾಗಿದೆ. ಹೀಗಾಗಿ ʻಎಂಇಬಿʼ ಹಂತಹಂತವಾಗಿ ಇ-ಮೊಬಿಲಿಟಿಯ ಪ್ರಮುಖ ಮುಕ್ತ ವೇದಿಕೆಯಾಗಿ ಅಭಿವೃದ್ಧಿ ಹೊಂದುತ್ತಿದೆ. ಇದು ಪರಿಮಾಣ ಮತ್ತು ಪ್ರಮಾಣಾನುಗುಣದ ಲಾಭವನ್ನು ಗಮನಾರ್ಹ ಮಟ್ಟದಲ್ಲಿ ಒದಗಿಸುತ್ತಿದೆ. ಇದು ವಿದ್ಯುತ್‌ ಚಾಲಿತ ವಾಹನ ವಲಯದ ಪ್ರತಿಯೊಂದು ಕಂಪನಿಗೆ ನಿರ್ಣಾಯಕವಾಗಿದೆ ಮತ್ತು ನಮ್ಮ ಗ್ರಾಹಕರಿಗೆ ಸ್ಪರ್ಧಾತ್ಮಕ ಪರಿಹಾರಗಳನ್ನು ಒದಗಿಸಲು ಅತ್ಯಂತ ಮುಖ್ಯವಾಗಿದೆ ಎಂದು ವೋಕ್ಸ್‌ವ್ಯಾಗನ್‌ ಸಮೂಹದ ಕಾಂಪೊನೆಂಟ್ಸ್‌ ವಿಭಾಗದ ಸಿಇಒ ಥಾಮಸ್ ಶ್ಮಾಲ್ ಹೇಳಿದ್ದಾರೆ.

ನಮ್ಮ ಮಹತ್ವಾಕಾಂಕ್ಷೆಯ ʻಬಾರ್ನ್ ಎಲೆಕ್ಟ್ರಿಕ್ ದೃಷ್ಟಿಕೋನʼವನ್ನು ಸಾಧಿಸುವ ನಿಟ್ಟಿನಲ್ಲಿ, ವಿದ್ಯುತ್ ಚಾಲಿತ ವಾಹನ ಕ್ಷೇತ್ರದಲ್ಲಿ ಗಮನಾರ್ಹ ಜಾಗತಿಕ ಹೂಡಿಕೆದಾರ ಸಂಸ್ಥೆ ಎನಿಸಿದ ʻಫೋಕ್ಸ್ ವ್ಯಾಗನ್ʼ ಅನ್ನು ವ್ಯೂಹಾತ್ಮಕ ಪಾಲುದಾರನಾಗಿ ಹೊಂದಿರುವುದು ನಮಗೆ ತುಂಬಾ ಸಂತೋಷವಾಗಿದೆ. ಈ ಎರಡೂ ಸಂಸ್ಥೆಗಳ ವಿಸ್ತೃತ ತಂತ್ರಜ್ಞಾನ, ನಾವೀನ್ಯತೆ ಮತ್ತು ಪೂರೈಕೆ ಸರಪಳಿಗಳಲ್ಲಿ ಶೃಂಗೀಯ ಏಕೀಕರಣವು ಪರಸ್ಪರ ಪೂರಕವಾಗಿದ್ದು, ನಮ್ಮ ಮುಂದಿನ ಪೀಳಿಗೆಯ "ಬಾರ್ನ್ ಎಲೆಕ್ಟ್ರಿಕ್ ವೇದಿಕೆ”ಯನ್ನು ಅನ್ನು ಅಭಿವೃದ್ಧಿಪಡಿಸಲು ಸೂಕ್ತ ವ್ಯವಸ್ಥೆಯನ್ನು ಒದಗಿಸುತ್ತದೆ. ಇದನ್ನು ಶೀಘ್ರದಲ್ಲೇ ಬ್ರಿಟನ್‌ನ ʻಆಕ್ಸ್‌ಫರ್ಡ್‌ಷೈರ್ʼನಲ್ಲಿ ಅನಾವರಣಗೊಳಿಸಲಾಗುವುದು. ಭಾರತ, ಬ್ರಿಟನ್‌ ಮತ್ತು ಡೆಟ್ರಾಯಿಟ್‌ನಾದಯಂತ ನಮ್ಮ ತಂಡಗಳು ಮಾಲಿನ್ಯ ರಹಿತ ಭವಿಷ್ಯಕ್ಕಾಗಿ ಉತ್ಸಾಹಭರಿತವಾಗಿ ಕೆಲಸ ಮಾಡುತ್ತಿವೆ ಎಂದು ಮಹೀಂದ್ರಾ  ನಿರ್ದೇಶಕ ರಾಜೇಶ್ ಜೆಜುರಿಕರ್ ಹೇಳಿದ್ದಾರೆ.

Electric Car ಕೈಗೆಟುಕುವ ದರದ ಮಹೀಂದ್ರ KUV100 ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಮುಹೂರ್ತ ಫಿಕ್ಸ್!

ವರ್ಷಕ್ಕೆ ಸುಮಾರು ಮೂರು ದಶಲಕ್ಷ ವಾಹನಗಳನ್ನು ಉತ್ಪಾದಿಸುತ್ತಿರುವ ಭಾರತವು ಜಾಗತಿಕ ಅಗ್ರಗಣ್ಯ-5 ಆಟೋಮೋಟಿವ್ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಪ್ರಸ್ತುತ ಮುನ್ಸೂಚನೆಗಳ ಪ್ರಕಾರ, 2030ರ ವೇಳೆಗೆ ಭಾರತದ ವಾಹನ ಮಾರುಕಟ್ಟೆಯು ಐದು ದಶಲಕ್ಷ ವಾಹನಗಳಿಗೆ ಬೆಳೆಯಬಹುದು. ಇಲ್ಲಿಯವರೆಗೆ, ಮಾರುಕಟ್ಟೆಯಲ್ಲಿ ಡೀಸೆಲ್ ಅಥವಾ ಪೆಟ್ರೋಲ್ ಎಂಜಿನ್‌ಗಳನ್ನು ಹೊಂದಿರುವ ವಾಹನಗಳ ಪ್ರಾಬಲ್ಯ ಹೆಚ್ಚಾಗಿತ್ತು. ಆದರೆ, ಗ್ಲ್ಯಾಸ್ಗೋದಲ್ಲಿ 2021ರ ಹವಾಮಾನ ಶೃಂಗಸಭೆಯಲ್ಲಿ, ಭಾರತವು 2035 ರಿಂದ ಶೂನ್ಯ-ಮಾಲಿನ್ಯ ಹೊರಸೂಸುವಿಕೆಯ ಪ್ರಯಾಣಿಕ ಕಾರುಗಳು ಮತ್ತು ವ್ಯಾನ್‌ಗಳನ್ನು ಮಾತ್ರ ನೋಂದಾಯಿಸುವ ನಿರ್ಣಯ ಕೈಗೊಂಡಿತು. ಇದರ ಪರಿಣಾಮವಾಗಿ, ಪ್ರಯಾಣಿಕರ ಕಾರು ವಿಭಾಗದಲ್ಲಿ ವಿದ್ಯುತ್‌ ಚಾಲಿತ ವಾಹನಗಳ ವ್ಯಪ್ತಿಯು ಮುಂಬರುವ ವರ್ಷಗಳಲ್ಲಿ ಗಮನಾರ್ಹ ವೇಗವನ್ನು ಪಡೆಯುವ ನಿರೀಕ್ಷೆಯಿದೆ. 2030ರಲ್ಲಿ ತಯಾರಾಗುವ ಎಲ್ಲಾ ಹೊಸ ವಾಹನಗಳಲ್ಲಿ ಅರ್ಧಕ್ಕಿಂತ ಹೆಚ್ಚು ಸಂಪೂರ್ಣವಾಗಿ ವಿದ್ಯುತ್‌ ಚಾಲಿತ ವಾಹನಗಳೇ ಆಗಿರಲಿವೆ ಎಂದು ಉದ್ಯಮದ ತಜ್ಞರು ಅಂದಾಜಿಸಿದ್ದಾರೆ.

ಈಗಾಗಲೇ, ʻವೋಕ್ಸಾವ್ಯಾಗನ್‌ʼ ಸಂಸ್ಥೆಯ ʻಎಂಇಬಿʼ ಎಲೆಕ್ಟ್ರಿಕ್ ವೇದಿಕೆಯನ್ನು ಅದೇ ಸಮೂಹದ ಬ್ರಾಂಡ್‌ಗಳಾದ ʻವೋಕ್ಸ್‌ವ್ಯಾಗನ್ʼ, ʻಆಡಿʼ, ʻಸ್ಕೋಡಾʼ ಮತ್ತು ʻಸೀಟ್ ʼ/ ʻಕ್ಯುಪ್ರಾʼ ಮತ್ತು ಬಾಹ್ಯ ಪಾಲುದಾರ ಸಂಸ್ಥೆಗಳು ಬಳಸುತ್ತಿವೆ. ಈ ಪಾಲುದಾರಿಕೆಗಳ ಜವಾಬ್ದಾರಿಯನ್ನು ಇದೇ ಉದ್ದೇಶಕ್ಕಾಗಿ ನಿರ್ದಿಷ್ಟವಾಗಿ ರಚಿಸಲಾದ "ಪ್ಲಾಟ್ ಫಾರ್ಮ್ ಬಿಸಿನೆಸ್" ಘಟಕಕ್ಕೆ ವಹಿಸಲಾಗಿದೆ.

Follow Us:
Download App:
  • android
  • ios