ಬಹುಶಃ ಭಾರತೀಯರಿಗೆ ಮಾರುತಿ ಸುಜುಕಿ ಕಂಪನಿಯ ವಾಹನಗಳು ಮೆಚ್ಚುಗೆಯಾದಷ್ಟು ಬೇರೆ ಯಾವುದೇ ಕಂಪನಿಯ ವಾಹನಗಳು ಹಿಡಿಸಿಲ್ಲ. ಹಲವು ದಶಕಗಳಿಂದ ಮನೆಮಾತಾಗಿರುವ ಮಾರುತಿ ಸುಜುಕಿ, ಭಾರತೀಯ ರಸ್ತೆಗಳು ಮತ್ತು ಗ್ರಾಹಕರಿಗೆ ಒಪ್ಪಿಗೆಯಾಗುವಂಥ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಾ ಬಂದಿದೆ. ಇದೇ ಮಾದರಿಯಲ್ಲಿ ಕಂಪನಿಯ ವಿಟಾರಾ ಬ್ರೆಜಾ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಐದು ವರ್ಷದ ಹಿಂದೆ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಈ ಕಾರಿನ ಹೊಸ ಮಾದರಿಯು ಇದೀಗ ಮೈಲುಗಲ್ಲು ಸ್ಥಾಪಿಸಿದೆ. 

ಅಂದರೆ ಕಳೆದ ನಾಲ್ಕೂವರೆ ವರ್ಷದಲ್ಲಿ 5.5 ಲಕ್ಷ ವಿಟರಾ ಬ್ರೆಜಾ ಕಾಂಪಾಕ್ಟ್ ಎಸ್‌ಯುವಿಗಳು ಮಾರಾಟವಾಗಿವೆ. ಕಳೆದ ವರ್ಷದ ಆಟೊ ಎಕ್ಸ್‌ಪೋದಲ್ಲಿ ಕಂಪನಿ ಹೊಸ ವಿನ್ಯಾಸದ ವಿಟರಾ ಬ್ರೆಜಾ ಎಸ್‌ಯುವಿಯನ್ನು ಪ್ರಸೆಂಟ್ ಮಾಡಿತ್ತು. ಅದೀಗ, ಪವರ್‌ಫುಲ್ 4 ಸಿಲಿಂಡರ್ 1.5 ಲೀ. ಎಂಜಿನ್ ಅಳವಡಿಸಿಕೊಂಡಿದ್ದು, ಬಿಎಸ್‌6 ನಿಯಮಗಳನ್ನು ಚಾಚೂ ತಪ್ಪಿದೇ ಪಾಲಿಸಿದೆ. 

ಈ ಹೊಸ ವಿನ್ಯಾಸದ ಕಾರು ಅನೇಕ ವಿಶಿಷ್ಟ ಫೀಚರ್‌ಗಳನ್ನು ಒಳಗೊಂಡಿದೆ. ಡುಯಲ್ ಟೋನ್ ರೂಫ್, ಹೊಸ ಮಾದರಿಯ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು ಕಾರಿನ ಅಂದವನ್ನು ಹೆಚ್ಚಿಸಿವೆ. ಕಾರಿನ ಒಳಾಂಗಣದ ಸ್ಫೋರ್ಟಿ ಲುಕ್ ನಿಮ್ಮ ಕಣ್ಮನ ಸೆಳೆಯುತ್ತದೆ. ಜೊತೆಗೆ ಅತ್ಯಾಧುನಿಕ ಆಟೋಮ್ಯಾಟಿಕ್ ಟ್ರಾನ್ಷಿಮಿಷನ್ ಫೀಚರ್ ಆಗಿರುವ ಹಿಲ್ ಆ್ಯಂಡ್ ಹೋಲ್ಡ್ ಅಸಿಸ್ಟ್ ಸೌಲಭ್ಯ ಕೊಡ ಇದ್ದು, ನೆಕ್ಸ್ಟ್ ಜನರೇಷನ್ ಸ್ಮಾರ್ಟ್ ಹೈಬ್ರಿಡ್ ತಂತ್ರಜ್ಞಾನ ಇದಕ್ಕೆ ನೆರವು ನೀಡುತ್ತದೆ. 

ಎಲೆಕ್ಟ್ರಿಕ್ ವಾಹನ ಖರೀದಿಸುವವರ ಖಾತೆಗೆ ಸಬ್ಸಿಡಿ ಹಣ

ಈ ವಿಟಾರ ಬ್ರೆಜಾ ಮೈಲೇಜ್‌ನಲ್ಲೂ ಹಿಂದೆ ಬಿದ್ದಿಲ್ಲ. ಆಟೋಮ್ಯಾಟಿಕ್ ಟ್ರಾನ್ಷಿಮಿಷನ್ ಮಾದರಿಯ ಗಾಡಿ ನಿಮಗೆ ಪ್ರತಿ ಕಿಲೋಮೀಟರ್‌ಗೆ 18.76 ಮೈಲೇಜ್ ನೀಡಿದರೆ, ಮ್ಯಾನುವಲ್ ಟ್ರಾನ್ಮಿಷನ್ ನಿಮಗೆ ಪ್ರತಿ ಕಿಲೋಮೀಟರ್‌ಗೆ 17.03ನಷ್ಟು ನೀಡುತ್ತದೆ. ಈ ಕಾರಿನಲ್ಲಿ ಅಳವಡಿಸಲಾಗಿರುವ ಡ್ಯುಯಲ್ ಬ್ಯಾಟರಿ ಸಿಸ್ಟಮ್ ವ್ಯವಸ್ಥೆಯು ಕಾರಿನ ಒಟ್ಟಾರೆ ಮೈಲೇಜ್ ಸುಧಾರಣೆಗೆ ಸಾಧ್ಯವಾಗಿದೆ ಎಂಬುದು ಕಂಪನಿಯ ಅಭಿಪ್ರಾಯವಾಗಿದೆ.

ಈ ಕಾರಿನಲ್ಲಿ ಪುನರುತ್ಪಾದಕ ಬ್ರೇಕ್ ಶಕ್ತಿಯೊಂದಿಗೆ ಇಡ್ಲ್ ಸ್ಟಾಪ್-ಸ್ಟಾರ್ಟ್ ಮತ್ತು ಟಾರ್ಕ್ ಅಸಿಸ್ಟ್ ಫೀಚರ್ ಕೂಡ ಇದೆ. ಜೊತೆಗೆ ಅತ್ಯಾಧುನಿಕ ತಂತ್ರಜ್ಞಾನವು ಈ ಕಾರಿನ ಮರು ವಿನ್ಯಾಸದ ವೈಶಿಷ್ಟ್ಯವನ್ನು ಮತ್ತಷ್ಟು ಹೆಚ್ಚಿಸಿವೆ ಮತ್ತು ಗ್ರಾಹಕರನ್ನು ಸೆಳೆಯಲು ಪ್ರಮುಖ ಸಾಧನವಾಗಿವೆ ಎಂದರೆ ತಪ್ಪಲ್ಲ. ಕಳೆದ ಆರು ತಿಂಗಳಲ್ಲಿ ಕಾಂಪಾಕ್ಟ್ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ಈ ಕಾರು ಅತಿಹೆಚ್ಚು ಕಾರು ಮಾರಾಟ ಕಂಡಿದೆ.

ಒಟ್ಟಾರೆ ಮಾರುತಿ ಕಂಪನಿ ಕಾರುಗಳ ಮಾರಾಟ ಹೆಚ್ಚಳ

ಮೊದಲೇ ಹೇಳಿದಂತೆ ಭಾರತೀಯ ಗ್ರಾಹಕರಿಗೆ ಮಾರುತಿ ಸುಜುಕಿ ಕಂಪನಿಯ ಕಾರುಗಳು ಅಚ್ಚುಮೆಚ್ಚು. ಹಾಗಿದ್ದೂ, ಕಳೆದ ಮೂರ್ನಾಲ್ಕುತಿಂಗಳು ಅಂದರೆ ಲಾಕ್‌ಡೌನ್ ಹಾಗೂ ಅದರ ಪೂರ್ವ ಆರ್ಥಿಕ ಹಿಂಜರಿತದಿಂದಾಗಿ ಕಾರುಗಳ ಮಾರಾಟದಲ್ಲಿ ಕುಸಿತವಾಗಿತ್ತು. ಇದಕ್ಕೆ ಮಾರುತಿ ಸುಜುಕಿ ಕೂಡ ಹೊರತಾಗಿರಲಿಲ್ಲ. ಆದರೆ, ಇತ್ತೀಚಿನ ಎರಡ್ಮೂರು ತಿಂಗಳ ಮಾರಾಟದ ಲೆಕ್ಕ ಮಾತ್ರ ಆಶಾದಾಯಕವಾಗಿದೆ. ಮಾರುತಿ ಕೂಡ ತನ್ನ ಮಾರಾಟವನ್ನು ಹೆಚ್ಚಿಸಿದೆ ಎಂದು ಹೇಳಬಹುದು. 

ಕಾರಿನ 2.5 ಲಕ್ಷ ಡಿಸ್ಕೌಂಟ್ ಘೋಷಿಸಿದ ಹೊಂಡಾ

ಆಗಸ್ಟ್ ತಿಂಗಳಲ್ಲಿ ಮಾರುತಿ ಒಟ್ಟಾರೆ 1,16,704 ವಾಹನಗಳನ್ನು ಮಾರಾಟ ಮಾಡಿದೆ. 2019ರ ಆಗಸ್ಟ್ ತಿಂಗಳಿಗೆ ಹೋಲಿಸಿದರೆ ಇದು ಹೆಚ್ಚು. ಆಗ ಕಂಪನಿ ಕೇವಲ 94 ಸಾವಿರದಷ್ಟು ಮಾರಾಟ ಮಾಡಿತ್ತು. ಅಂದರೆ, ಆಗಸ್ಟ್ ತಿಂಗಳಲ್ಲಿ ಶೇ.26.8ರಷ್ಟು ಏರಿಕೆಯಾಗಿದೆ ಎಂದು ಹೇಳಬಹುದು.

ಹೊಸ ವಿನ್ಯಾಸದ ವಿಟಾರಾ ಬ್ರಿಜಾ, ಎಚ್ ಕ್ರಾಸ್, ಎರ್ಟಿಗಾ ಹಾಗೂ ಎಕ್ಸ್ ಎಲ್ 6 ಕಾರುಗಳು ಕಂಪನಿಯ ಒಟ್ಟಾರೆ ಮಾರಾಟ ಪ್ರಮಾಣವನ್ನು ಹೆಚ್ಚಿಸುವಲ್ಲಿ ನೆರವು ಒದಗಿಸಿವೆ. ಸಬ್ ಸೆಗ್ಮೆಂಟ್ ವಾಹನ ಮಾರಾಟ ಕೂಡ ಶೇ.13.5ರಷ್ಟು ಏರಿಕೆ ಕಂಡಿದೆ. ಇದೇ ಮಾತನ್ನು ಸೆಡಾನ್ ಸೆಗ್ಮೆಂಟ್‌ಗೆ ಅನ್ವಯಿಸುವಂತಿಲ್ಲ. ಯಾಕೆಂದರೆ, ಸುಜುಕಿ ಸಿಯಾಜ್ ನಿರೀಕ್ಷಿತ ಮಟ್ಟದಲ್ಲಿ ಮಾರಟವನ್ನು ಕಂಡಿಲ್ಲ. ಇದೇ ವೇಳೆ, ಮಾರುತಿ ಕಾರುಗಳ ರಫ್ತಿನಲ್ಲಿ ಗಣನೀಯ ಕುಸಿತ ಕಂಡಿದೆ. ಇದಕ್ಕೆ ಕೊರೋನಾ ಸಾಂಕ್ರಾಮಿಕ ಪರಿಸ್ಥಿತಿಯೂ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 
 

ಆಕರ್ಷಕ ಬೆಲೆಯೊಂದಿಗೆ ಮಹಿಂದ್ರಾ ಥಾರ್ ಬಿಡುಗಡೆ