Asianet Suvarna News Asianet Suvarna News

ಎಲೆಕ್ಟ್ರಿಕ್ ವಾಹನ ಖರೀದಿಸುವವರ ಖಾತೆಗೆ ಸಬ್ಸಿಡಿ ಹಣ; ಸರ್ಕಾರ ಮಹತ್ವದ ನಿರ್ಧಾರ!

ಎಲೆಕ್ಟ್ರಿಕ್ ವಾಹನ ಖರೀದಿ ಉತ್ತೇಜಿಸಲು ಸರ್ಕಾರ ಸಬ್ಸಿಡಿ ಹಣ ನೀಡುತ್ತಿದೆ. ಕಾರು, ದ್ವಿಚಕ್ರ ವಾಹನ, ಇ ರಿಕ್ಷಾಗೆ ಅನುಗುಣವಾಗಿ ಸರ್ಕಾರ ಸಬ್ಸಿಡಿ ಹಣ ನೀಡಲಿದೆ. ಇದೀಗ  ಸಬ್ಸಿಡಿ ಹಣವನ್ನು ಖರೀದಿದಾರರ ಖಾತೆಗೆ ನೇರವಾಗಿ ಹಾಕಲು ನಿರ್ಧರಿಸಿದೆ. ಇದರಿಂದ ಹಲವು ಸಮಸ್ಯೆಗಳಿಗೂ ಮುಕ್ತಿ ಸಿಗಲಿದೆ.

Delhi Govt plan to transfer subsidies for electric vehicles directly to bank accounts of buyers ckm
Author
Bengaluru, First Published Oct 4, 2020, 3:18 PM IST

ದೆಹಲಿ(ಅ.04): ಎಲೆಕ್ಟ್ರಿಕ್ ವಾಹನ ಖರೀದಿಸುವ ಗ್ರಾಹಕರನ್ನು ಉತ್ತೇಜಿಸಲು ದೆಹಲಿ ಸರ್ಕಾರ ಭರ್ಜರಿ ಆಫರ್ ನೀಡಿದೆ. ದೆಹಲಿ ಸರ್ಕಾರ ಈಗಾಗಲೇ ಎಲೆಕ್ಟ್ರಿಕ್ ವಾಹನ ಖರೀದಿಸುವವರಿಗೆ ಸಬ್ಸಿಡಿ ಘೋಷಿಸಿದೆ. ಇದೀಗ ಎಲಕ್ಟ್ರಿಕ್ ವಾಹನ ಖರೀದಿಸುವ ಗ್ರಾಹಕರ ಖಾತೆಗೆ ನೇರವಾಗಿ ಈ ಸಬ್ಸಿಡಿ ಹಣ ವರ್ಗಾಣೆ ಮಾಡಲು ದೆಹಲಿ ಸರ್ಕಾರ ನಿರ್ಧರಿಸಿದೆ.

ಕೇಂದ್ರದಿಂದ ಬಂಪರ್ ಕೊಡುಗೆ; ಭಾರತದಲ್ಲಿ EV ಬ್ಯಾಟರಿ ನಿರ್ಮಾಣಕ್ಕೆ ಯೊಜನೆ!

ಎಲೆಕ್ಟ್ರಿಕ್ ಕಾರು ಖರೀದಿಸುವರಿಗೆ 1.5 ಲಕ್ಷ ರೂಪಾಯಿ ಹಾಗೂ ದ್ವಿಚಕ್ರವಾಹನ ಖರೀದಿಸುವವರಿಗೆ 30,000 ರೂಪಾಯಿ ಸರ್ಕಾರದಿಂದ ಸಬ್ಸಿಡಿ ಹಣ ಸಿಗಲಿದೆ. ಇದೀಗ ಈ ಹಣ ನೇರವಾಗಿ ವಾಗೃಹನ ಖರೀದಿದಾರರ ಖಾತೆಗೆ ಸರ್ಕಾರದಿಂದ ವರ್ಗಾವಣೆಯಾಗಲಿದೆ. ಈ ಮೂಲಕ ಗ್ರಾಹಕರು ಸಬ್ಸಿಡಿ ಹಣಕ್ಕಾಗಿ ಅಲೆದಾಡುವ ಪರಿಪಾಟ ತಪ್ಪಲಿದೆ.

ರೋಲ್ಸ್ ರಾಯ್ಸ್ ನಿರ್ಮಿಸಿದ ಅತೀ ವೇಗದ ಎಲೆಕ್ಟ್ರಿಕ್ ವಿಮಾನ ಪರೀಕ್ಷೆ ಯಶಸ್ವಿ!..

ವಾಹನ ಖರೀದಿಸಿದ 7 ದಿನದ ಒಳಗೆ ಖರೀದಿಸಿದ ವ್ಯಕ್ತಿದೆ ಸರ್ಕಾರದ ಸಬ್ಸಿಡಿ ಹಣ ಖಾತೆ ವರ್ಗಾವಣೆಯಾಗಲಿದೆ ಎಂದು ಸರ್ಕಾರದ ಮೂಲಗಳು ಹೇಳಿವೆ. 
ಎಲೆಕ್ಟ್ರಿಕ್ ವಾಹನದ ಮೇಲೆ ದೆಹಲಿ ಸರ್ಕಾರ ಸಬ್ಸಿಡಿ ಜೊತೆಗೆ ರಸ್ತೆ ತೆರಿಗೆ ಕಡಿತ, ರಿಜಿಸ್ಟ್ರೇಶನ್ ಫಿನಲ್ಲಿ ಕಡಿತ ಸೇರಿದಂತೆ ಹಲವು ಇತರ ಸೌಲಭ್ಯಗಳನ್ನು ನೀಡಿದೆ. 

ದೆಹಲಿಯಲ್ಲಿ ಎಲೆಕ್ಟ್ರಿಕ್ ವಾಹನ ಬಳಕೆ ಹೆಚ್ಚಿಸಲು ಅರವಿಂದ್ ಕೇಜ್ರಿವಾಲ್ ಸರ್ಕಾರ ಹಲವು ಯೋಜನೆ ಜಾರಿಗೊಳಿಸಿದೆ. ಈ ಮೂಲಕ ದೆಹಲಿಯಲ್ಲಿ ಕೈಮೀರಿರುವ ವಾಯು ಮಾಲಿನ್ಯ ತಗ್ಗಿಸಲು ಪ್ರಯತ್ನ ಮಾಡುತ್ತಿದೆ. ದೆಹಲಿಯಲ್ಲಿ ಎಲೆಕ್ಟ್ರಿಕ್ ವಾಹನ ಬಳಕೆ ಹೆಚ್ಚಿಸಲು ಚಾರ್ಜಿಂಗ್ ಸ್ಟೇಶನ್, ಮೂಲ ಸೌಕರ್ಯ ಸೇರಿದಂತೆ ಇತರ ಸೌಲಭ್ಯಗಳನ್ನು ಹೆಚ್ಚಿಸಲು ಸರ್ಕಾರ ಸಮಗ್ರ ನೀತಿ ಯೋಜನೆ ಜಾರಿಗೆ ತಂದಿದೆ.

Follow Us:
Download App:
  • android
  • ios