ಕೇವಲ 3600 ರೂ.ಗೆ ವಿಂಟೇಜ್ ಕಾರ್, ಎಲ್ಲಿ ಸಿಕ್ತಿತ್ತು ಅಗ್ಗದ ಗಾಡಿ?

ರಸ್ತೆ ಮೇಲೆ ವಿಂಟೇಜ್ ಕಾರ್ ಹೋಗ್ತಿದ್ರೆ ಎಲ್ಲರೂ ಕಣ್ಣರಳಿಸಿ ನೋಡ್ತಾರೆ. ಹಳೆ ಜಾಹೀರಾತೊಂದು ಈಗ ವೈರಲ್ ಆಗಿದೆ. ಅದ್ರಲ್ಲಿ 1936ರಲ್ಲಿ ವಿಂಟೇಜ್ ಕಾರ್ ಬೆಲೆ ಎಷ್ಟಿತ್ತು ಎಂಬುದನ್ನು ನೀವು ಕಾಣ್ಬಹುದು. 
 

Vintage Car for only 3600 Rupees! Know when such a cheap car was available

ವಿಂಟೇಜ್ ಕಾರು (Vintage car) ಅಂದಾಗ ಕಣ್ಣರಳುತ್ತದೆ. ನಮ್ಮ ಬಳಿ ಎಷ್ಟೇ ಕಾರಿರಲಿ ಇರದೆ ಇರಲಿ, ವಿಂಟೇಜ್ ಕಾರ್ ಓಡಿಸುವ, ಅದನ್ನು ಖರೀದಿಸುವ ಆಸೆಯೊಂದು ಬಹುತೇಕ ಎಲ್ಲರಿಗೂ ಇದ್ದೇ ಇರುತ್ತೆ. ವಿಂಟೇಜ್ ಕಾರು ಕಂಡಾಗ ಮೊದಲು ನಾವು ಅದ್ರ ಬೆಲೆಯನ್ನು ಕೇಳ್ತೇವೆ. ಹಿಂದಿನ ಕಾಲದಲ್ಲಿ ಈ ಕಾರುಗಳ ಬೆಲೆ ಎಷ್ಟಿರಬಹುದು? ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಹಳೆಯ ಪೇಪರ್ (old paper) ಒಂದರ ಜಾಹೀರಾತು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದ್ರಲ್ಲಿ ಕಾರುಗಳ ಮಾರಾಟದ ಮಾಹಿತಿ ಹಾಗೂ ಬೆಲೆಯನ್ನು ಹಾಕಲಾಗಿದೆ. ಆಗಿದ್ದ ಕಾರಿನ ಬೆಲೆ ನೋಡಿದ್ರೆ ಈಗ ಖುಷಿಯಾಗುತ್ತೆ.  

ಸೋಶಿಯಲ್ ಮೀಡಿಯಾದಲ್ಲಿ ಎರಡು ಕಾರಿನ ಜಾಹೀರಾತುಗಳ ಪೋಸ್ಟ್ ನೀವು ನೋಡ್ಬಹುದು. ಷೆವರ್ಲೆಯ ಎರಡು ಕಾರುಗಳ ಜಾಹೀರಾತು ಇಲ್ಲಿದೆ. 5 ಆಸನಗಳ ಷೆವರ್ಲೆ ಕಾರಿನ ಬೆಲೆ 3,600 ರೂಪಾಯಿ ಎಂದು ಬರೆಯಲಾಗಿದೆ.  ಮತ್ತೊಂದು ಕಾರಿನ ಬೆಲೆ 2,700 ರೂಪಾಯಿ ಎಂದು ಬರೆಯಲಾಗಿದೆ.  ಜಾಹೀರಾತಿನ ಮೇಲೆ 1936 ಎಂದು ಬರೆಯಲಾಗಿದೆ. ಚೆವ್ರೊಲೆಟ್‌  (Chevrolet) ಐದು ಆಸನಗಳ ಕಾರು, ಬೆಲೆ 3, 675 ರೂಪಾಯಿ, ಕಾರು ಕೋಲ್ಕತ್ತಾ, ದೆಹಲಿ ಮತ್ತು ದಿಬ್ರುಗಢ್‌ನಂತಹ ನಗರಗಳಲ್ಲಿ ವಿತರಣೆಗೆ ಲಭ್ಯವಿದೆ ಎಂದು ಬರೆಯಲಾಗಿದೆ. ಮೊದಲ ಕಾರಿನ ಜಾಹೀರಾತಿನಲ್ಲಿ ಷೆವರ್ಲೆ ಮೋಟರ್ ಕಾರ್, ಅತ್ಯಂತ ಕಡಿಮೆ ಬೆಲೆಗೆ ಎಂದು ಜಾಹೀರಾತು ಹಾಕಲಾಗಿದೆ. ಅದ್ರ ಮೇಲೆ ಕಾರಿನ ಚಿತ್ರವಿದ್ದು, ಕೆಳಗೆ ಬೆಲೆ ಇದೆ. ಹಾಗೆಯೇ ಕಾರು ಲಕ್ನೋದಲ್ಲಿ ಲಭ್ಯವಿದೆ ಎಂಬ ಮಾಹಿತಿ ನೀಡಲಾಗಿದೆ. 

ಫಾಸ್ಟಾಗ್‌ ಬೇಡ, ಟೂಲ್ ಬೂತ್ ಇಲ್ಲ, ಭಾರತದಲ್ಲಿ ಟೋಲ್ ಸಂಗ್ರಹಕ್ಕೆ GNSS ಕ್ರಾಂತಿ!

Carblogindia ಹೆಸರಿನ ಇನ್ಸ್ಟಾ ಖಾತೆಯಲ್ಲಿ ಈ ಎರಡೂ ಕಾರಿನ ಜಾಹೀರಾತನ್ನು ಹಂಚಿಕೊಳ್ಳಲಾಗಿದೆ. ಇಂದು ಭಾರತದಲ್ಲಿ ಅತ್ಯಂತ ಕೈಗೆಟುಕುವ 5 ಆಸನಗಳ ಕಾರುಗಳ ಬೆಲೆ ಲಕ್ಷಗಳಲ್ಲಿದೆ. ಆದ್ರೆ ಹಿಂದೆ ಬರೀ ಸಾವಿರಕ್ಕೆ ಕಾರುಗಳು ಸಿಗ್ತಿದ್ದವು. ಸೋಶಿಯಲ್ ಮೀಡಿಯಾದಲ್ಲಿ ಈ ಎರಡೂ ಜಾಹೀರಾತು ವೈರಲ್ ಆಗಿದೆ. ಸಾಕಷ್ಟು ಕಮೆಂಟ್ ಬಂದಿದೆ. ಇದನ್ನು ನೋಡಿದ ಬಳಕೆದಾರರು, ಈಗ 2700 ರೂಪಾಯಿಗೆ ಕ್ಯಾಬ್ ಕೂಡ ಸರಿಯಾಗಿ ಸಿಗೋದಿಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಈ ಬೆಲೆಗೆ ಮಕ್ಕಳ ಸೈಕಲ್ ಸಿಗೋದೇ ಕಷ್ಟ. ಆಗ ಕಾರೇ ಸಿಗ್ತಿತ್ತು ಎಂದು ಬರೆದಿದ್ದಾರೆ. 1936ರಲ್ಲಿ 3600 ಕಾರಿನ ಬೆಲೆಯಾದ್ರೆ ಅದು ಈಗ 3 ಕೋಟಿಗೆ ಸಮ ಎಂದು ಬಳಕೆದಾರರೊಬ್ಬರು ತಮ್ಮ ಲೆಕ್ಕವನ್ನು ಮುಂದಿಟ್ಟಿದ್ದಾರೆ. ಇನ್ನೊಬ್ಬರು ಬಂಗಾರದ ಬೆಲೆಯನ್ನು ನೆನಪಿಸಿಕೊಂಡಿದ್ದಾರೆ. 1936ರಲ್ಲಿ ಬಂಗಾರದ ಬೆಲೆ 10 ಗ್ರಾಂಗೆ 20 ರೂಪಾಯಿ ಆಗಿತ್ತು ಎಂದು ಬರೆದಿದ್ದಾರೆ. ಆಗಿನ ಕಾಲದಲ್ಲಿ ಸಂಬಳ ಎಷ್ಟಿತ್ತು, ವಸ್ತುಗಳ ಬೆಲೆ ಎಷ್ಟಿತ್ತು, ರೂಪಾಯಿ ಹಾಗೂ ಡಾಲರ್ ಮೌಲ್ಯಗಳು ಎಷ್ಟಿದ್ದವು ಎಂಬುದನ್ನೆಲ್ಲ ಬಳಕೆದಾರರು ಕಮೆಂಟ್ ಮಾಡಿದ್ದಾರೆ. ಆಗಿನ ಸಮಯದಲ್ಲಿ 3600 ರೂಪಾಯಿ ದುಬಾರಿಯಾಗಿತ್ತು, ಜನಸಾಮಾನ್ಯರ ಬಳಿ ಅಷ್ಟೊಂದು ಹಣವಿರಲಿಲ್ಲ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. 1936ರ ಸಮಯದಲ್ಲಿ ಷೆವರ್ಲೆ ಕಾರಿನ ಬೆಲೆ ಎಷ್ಟಿತ್ತು ಎಂಬ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಎಂದು ಇನ್ನೊಬ್ಬರು ಬರೆದಿದ್ದಾರೆ.

ಹೊಚ್ಚ ಹೊಸ ಏಥರ್ Rizta ಎಲೆಕ್ಟ್ರಿಕ್ ಸ್ಕೂಟರ್‌ಗೆ ಇಯರ್ ಎಂಡ್ ಡಿಸ್ಕೌಂಟ್ ಆಫರ್!

ವಿಂಟೇಜ್ ಕಾರುಗಳೆಂದ್ರೆ ಏನು? : ವಿಂಟೇಜ್ ಕಾರು ಎಂದರೆ ಅತ್ಯಂತ ಹಳೆಯ ಕಾರು.  ನಾಲ್ಕು ಚಕ್ರಗಳ ವಾಹನಗಳ ಆರಂಭಿಕ ವರ್ಷಗಳಷ್ಟು ಹಳೆಯರು. 1919 ಮತ್ತು 1930 ರ ನಡುವೆ ತಯಾರಿಸಿದ ಯಾವುದೇ ಕಾರನ್ನು ವಿಂಟೇಜ್ ಕಾರು ಎಂದು ಉಲ್ಲೇಖಿಸಬಹುದು. ಭಾರತದಲ್ಲಿ ವಿಂಟೇಜ್ ವಾಹನವನ್ನು ಖರೀದಿಸಲು ಅಥವಾ ವಿಂಟೇಜ್ ವಾಹನವನ್ನು ಮಾರಾಟ ಮಾಡಲು ಅನುಮತಿ ಇದೆ. ಆದ್ರೆ ಖರೀದಿ ಮತ್ತು ಮಾರಾಟ ಮಾಡುವ 90 ದಿನಗಳ ಮೊದಲು ಮಾಲೀಕತ್ವದ ವರ್ಗಾವಣೆಯ ಬಗ್ಗೆ ಆಯಾ ರಾಜ್ಯ ಸಾರಿಗೆ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. 
 

Latest Videos
Follow Us:
Download App:
  • android
  • ios