ಹೊಚ್ಚ ಹೊಸ ಏಥರ್ Rizta ಎಲೆಕ್ಟ್ರಿಕ್ ಸ್ಕೂಟರ್‌ಗೆ ಇಯರ್ ಎಂಡ್ ಡಿಸ್ಕೌಂಟ್ ಆಫರ್!
ಎಥರ್ ಎನರ್ಜಿಯ ಹೊಸ Rizta ಎಲೆಕ್ಟ್ರಿಕ್ ಸ್ಕೂಟರ್ ಎಲ್ಲರ ಗಮನಸೆಳೆಯುತ್ತಿದೆ. ಇದೀಗ Rizta ಸ್ಕೂಟರ್ ಮೇಲೆ ಹೊಸ ಆಫರ್ ನೀಡಲಾಗಿದೆ. ಇದು ವರ್ಷಾಂತ್ಯದ ಕ್ಯಾಶ್ ಡಿಸ್ಕೌಂಟ್ ಆಫರ್.

ಭಾರತದಲ್ಲಿ ಹಲವು ಎಲೆಕ್ಟ್ರಿಕ್ ಸ್ಕೂಟರ್ ಲಭ್ಯವಿದೆ. ಕೈಗೆಟುಕುವ ಬೆಲೆ, ಗರಿಷ್ಠ ಮೈಲೇಜ್ ರೇಂಜ್,ಕಡಿಮೆ ಅವಧಿಯಲ್ಲಿ ಚಾರ್ಜಿಂಗ್ ಸೇರಿದಂತೆ ಹಲವು ವಿಶೇಷತೆಗಳ ಸ್ಕೂಟರ್ ಮಾರುಕಟ್ಟೆಯಲ್ಲಿದೆ. ಈ ಪೈಕಿ ಕೆಲ ಎಲೆಕ್ಟ್ರಿಕ್ ಸ್ಕೂಟರ್ ಜನಪ್ರಿ ಪ್ರೀತಿಗೆ ಪಾತ್ರವಾಗಿದೆ. ಸ್ಕೂಟರ್ ಪರ್ಫಾಮೆನ್ಸ್, ಬ್ಯಾಟರಿ ಬಾಳಿಕೆ, ಫೀಚರ್ಸ್ ಸೇರಿದಂತೆ ಹಲವು ಕಾರಣಗಳಿಂದ ಏಥರ್ ಎನರ್ಜಿಯ ಎಲೆಕ್ಟ್ರಿಕ್ ಸ್ಕೂಟರ್‌ಗೆ ಭಾರಿ ಬೇಡಿಕೆ ಇದೆ. ಏಥರ್ ಇತ್ತೀಚೆಗೆ ಹೊಚ್ಚ ಹೊಸ Rizta ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ.
ಏಥರ್ Rizta ಎಲೆಕ್ಟ್ರಿಕ್ ಸ್ಕೂಟರ್‌ಗೆ ಇದೀಗ ಇಯರ್ ಎಂಡ್ ಆಫರ್ ನೀಡಲಾಗಿದೆ. ಹೌದು, ಫ್ಲಿಪ್‌ಕಾರ್ಟ್ ಮೂಲಕ Rizta ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಗ್ರಾಹಕರು ಈ ಆಫರ್ ಪಡೆಯಲಿದ್ದಾರೆ. ಫ್ಲಿಪ್‌ಕಾರ್ಟ್ ಇಯರ್ ಎಂಡ್ ಆಫರ್ ಘೋಷಿಸಿದ್ದು, Rizta ಸ್ಕೂಟರ್‌ಗೆ ಭರ್ಜರಿ ಡಿಸ್ಕೌಂಟ್ ನೀಡಿದೆ.
ಫ್ಲಿಪ್‌ಕಾರ್ಟ್ ಮೂಲಕ ಎಥರ್ Rizta 2.9 kWh ಮಾಡೆಲ್ ಸ್ಕೂಟರ್ ಕೇವಲ 101,693 ರೂಪಾಯಿ(ಎಕ್ಸ್ ಶೋ ರೂಂ) ಬೆಲೆಗೆ ಲಭ್ಯವಿದೆ. ವಿಶೇಷ ಅಂದರೆ 5,000 ರೂಪಾಯಿ ಫ್ಲಿಪ್‌ಕಾರ್ಟ್ ಡೀಲ್ ಆಫರ್ ಸಿಗಲಿದೆ. ಇಷ್ಟೇ ಅಲ್ಲ ಫ್ಲೆಕ್ಸಿಬಲ್ ಇಎಂಐ ಆಯ್ಕೆ ಮಾಡಿಕೊಂಡರೆ 6,000 ರೂಪಾಯಿ ಡಿಸ್ಕೌಂಟ್ ಸಿಗಲಿದೆ.
ಎಥರ್ ಅಧಿಕೃತ ವೆಬ್‌ಸೈಟ್‌ನಲ್ಲಿ Rizta 2.9 kWh ಮಾಡೆಲ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 1.10 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಇದೆ. ಆದರೆ ಫ್ಲಿಪ್‌ಕಾರ್ಟ್ ಆಫರ್ ಮೂಲಕ 1.01 ಲಕ್ಷ ರೂಪಾಯಿಗೆ ಸ್ಕೂಟರ್ ಖರೀದಿಸಲು ಸಾಧ್ಯವಾಗಲಿದೆ. ಇದು ಸೀಮಿತ ಅವಧಿಯ ಡಿಸ್ಕೌಂಟ್ ಆಫರ್ ಆಗಿದೆ. ಹೀಗಾಗಿ ಖರೀದಿಸುವ ಮುನ್ನ ಆಫರ್ ಕುರಿತು ಖಚಿತಪಡಿಸಿಕೊಳ್ಳಿ.
Rizta 2.9 kWh ಎಲೆಕ್ಟ್ರಿಕ್ ಸ್ಕೂಟರ್ 5.7 bhp ಪವರ್ ಹಾಗೂ 22 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. Rizta ಸ್ಕೂಟರ್ ವೇಗ 80kmph. 0-10 ಕಿ.ಮಿ ವೇಗವನ್ನು ಕೇವಲ 4.7 ಸೆಕೆಂಡ್‌ನಲ್ಲಿ ಪಡೆದುಕೊಳ್ಳಲಿದೆ. ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿದರೆ IDC ಪ್ರಕಾರ 123 ಕಿಲೋಮೀಟರ್ ಮೈಲೇಜ್ ರೇಂಜ್ ನೀಡಲಿದೆ.
ನಾರ್ಮಲ್ ಸಾಕೆಟ್ ಮೂಲಕ ಚಾರ್ಜ್ ಮಾಡಿದರೆ ಶೇಕಡಾ 100 ರಷ್ಟು ಚಾರ್ಜ್ ಆಗಲು 8 ಗಂಟೆ 30 ನಿಮಿಷ ಸಮಯ ತೆಗೆದುಕೊಳ್ಳಲಿದೆ. Rizta ಸ್ಕೂಟರ್‌ನಲ್ಲಿ ಹೆಚ್ಚಿನ ಸ್ಟೋರೇಜ್ ಅವಕಾಶವಿದೆ. ಸೀಟಿನ ಅಡಿಯಲ್ಲಿ 22 ಲೀಟರ್ ಸ್ಟೋರೇಜ್ ಸ್ಪೇಸ್ ನೀಡಲಾಗಿದೆ. ಇನ್ನು 7 ಇಂಚಿನ ಡಿಸ್‌ಪ್ಲೇ ಸೇರಿದಂತೆ ಎಲ್ಲಾ ಅತ್ಯಾಧುನಿಕ ಫೀಚರ್ಸ್ ಈ ಸ್ಕೂಟರ್‌ನಲ್ಲಿದೆ.