ದುಬೈನಲ್ಲಿ ಪೊರ್ಶೆ ಡ್ರೈವಿಂಗ್, UAE ಡ್ರೈವಿಂಗ್ ಪರೀಕ್ಷೆ ಪಾಸ್ ಮಾಡಿದ ಮಾಧವನ್ ಪುತ್ರ!

ಬಾಲಿವುಡ್ ನಟ ಮಾಧವನ್ ಪುತ್ರ ವೇದಾಂತ್ ಮಾಧವನ್ ಅಂತಾರಾಷ್ಟ್ರೀಯ ಈಜುಪಟು. ಈಗಾಗಲೇ ಹಲವು ಚಿನ್ನದ ಪದಕದ ಸಾಧನೆ ಮಾಡಿದ್ದರೆ. ಇದೀಗ ವೇದಾಂತ್ ಮತ್ತೊಂದು ಸಾಧನೆ ಮಾಡಿದ್ದಾರೆ. ದುಬೈನಲ್ಲಿ ಡ್ರೈವಿಂಗ್ ಲೈಸೆನ್ಸ್ ಪರೀಕ್ಷೆ ಪಾಸ್ ಮಾಡಿದ್ದಾರೆ. ಜೊತೆಗೆ ಪೊರ್ಶೆ ಡ್ರೈವಿಂಗ್ ತರಬೇತಿ ಆರಂಭಿಸಿದ್ದಾರೆ. ಈ ಕುರಿತು ವಿಡಿಯೋ ವೈರಲ್ ಆಗಿದೆ.
 

Vedaant madhavan pass driving licence theory exam in Dubai begins Porsche car Drive ckm

ದುಬೈ(ಆ.01) ದಕ್ಷಿಣ ಭಾರತದ ಖ್ಯಾತ ನಟ ಆರ್ ಮಾಧವನ್ ಪುತ್ರ ವೇದಾಂತ್ ಮಾಧವನ್ ತಮ್ಮ ನೆಚ್ಚಿನ ಸ್ವಿಮ್ಮಿಂಗ್ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ. ಡ್ಯಾನಿಶ್ ಓಪನ್ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಇದೀಗ ವೇದಾಂತ್ ಮಾಧವನ್ ದುಬೈನಲ್ಲಿ ಡ್ರೈವಿಂಗ್ ಲೆಸೆನ್ಸ್ ಪರೀಕ್ಷೆ ಪಾಸ್ ಮಾಡಿದ್ದಾರೆ. ಜೊತೆಗೆ ಲಕ್ಸುರಿ ಪೊರ್ಶೆ ಕಾರಿನಲ್ಲಿ ಡ್ರೈವಿಂಗ್ ತರಬೇತಿ ಆರಂಭಿಸಿದ್ದಾರೆ. ಈ ಕುರಿತು ವೇದಾಂತ್ ಮಾಧವನ್ ವಿಡಿಯೋ ಮೂಲಕ ಅನುಭವ ಹಂಚಿಕೊಂಡಿದ್ದಾರೆ.

ದುಬೈನ ಗಲದಾರಿ ಮೋಟಾರ್ ಡ್ರವಿಂಗ್ ಸೆಂಟರ್‌ನಲ್ಲಿ ವೇದಾಂತ್ ಮಾಧವನ್ ಡ್ರೈವಿಂಗ್ ತರಬೇತಿ ಪಡೆಯುತ್ತಿದ್ದಾರೆ. ಪೊರ್ಶೆ ಕಾರಿನಲ್ಲಿ ವೇದಾಂತ್ ತಮ್ಮ ತರಬೇತಿದಾರನ ಜೊತೆ ಕಲಿಕೆ ಆರಂಭಿಸಿದ್ದಾರೆ. ಈ ಕುರಿತು ವಿಡಿಯೋ ಪೋಸ್ಟ್ ಮಾಡಿರುವ ಗಲದಾರಿ ಡ್ರೈವಿಂಗ್ ಸೆಂಟರ್, ತಾನು ದುಬೈನಲ್ಲಿ ಡ್ರೈವಿಂಗ್ ಲೆಸೆನ್ಸ್ ಪರೀಕ್ಷೆ ಪಾಸ್ ಮಾಡಿದ್ದೇನೆ. ಇದೀಗ ನನಗೆ ಅತ್ಯುತ್ತಮ ತರಬೇತುದಾರ ಸಿಕ್ಕಿದ್ದಾರೆ. ಅವರ ಮಾರ್ಗದರ್ಶನದಂತೆ ಪೊರ್ಶೆ ಕಾರಿನಲ್ಲಿ ಡ್ರೈವಿಂಗ್ ಆರಂಭಿಸುತ್ತಿದ್ದೇನೆ ಎಂದು ವೇದಾಂತ್ ವಿಡಿಯೋದಲ್ಲಿ ಹೇಳಿದ್ದಾರೆ.

ಭಾರತಕ್ಕೆ 5 ಚಿನ್ನದ ಪದಕ ತಂದುಕೊಟ್ಟ ಮಾಧವನ್ ಪುತ್ರ; ಸೂರ್ಯ, ಅನುಷ್ಕಾ ಸೇರಿದಂತೆ ಅನೇಕರಿಂದ ಅಭಿನಂದನೆಯ ಮಹಾಪೂರ

ಭಾರತದಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯುವ ವ್ಯವಸ್ಥೆ ಈಗ ಕೊಂಡ ಬಿಗಿಗೊಂಡಿದೆ. ಆದರೂ ಹೆಚ್ಚಿನ ಪರಿಶ್ರಮವಿಲ್ಲದೆ ಲೈಸೆನ್ಸ್ ಪಡೆಯಲು ಸಾಧ್ಯವಿದೆ. ಆದರೆ ದುಬೈ ಸೇರಿದಂತೆ ಅರಬ್ ರಾಷ್ಟ್ರದಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯುವುದು ಸುಲಭದ ಮಾತವಲ್ಲ. ಪರೀಕ್ಷೆ ಪಾಸ್ ಮಾಡುವುದೇ ಹರಸಾಹಸ. ಬಳಿಕ ಡ್ರೈವಿಂಗ್ ತರಬೇತಿ ಪಡೆದು ನಿಯಮಾನುಸಾರ ಚಾಲನೆ ಮಾಡಬೇಕು. ಈ ಎಲ್ಲಾ ಹಂತ ಯಶಸ್ವಿಯಾಗಿ ಮುಗಿಸಿದರೆ ಮಾತ್ರ ಲೈಸೆನ್ಸ್ ಸಿಗಲಿದೆ. ಇದೀಗ ವೇದಾಂತ್ ಮಾಧವನ್ ಪರೀಕ್ಷೆ ಪಾಸ್ ಮಾಡಿ ತರಬೇತಿ ಆರಂಭಿಸಿದ್ದಾರೆ.

 

 

ವೇದಾಂತ್ ಮಾಧವನ್ ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಹಲವರು ಕಮೆಂಟ್ ಮಾಡಿದ್ದಾರೆ. ಶುಭವಾಗಲಿ ಎಂದು ಹಾರೈಸಿದ್ದಾರೆ. ಮತ್ತೆ ಹಲವರು ತಾವು ಕಾರು ಕಲಿತ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ತಾನು ಕಾರು ಡ್ರೈವಿಂಗ್ ಕಲಿಕೆ ಆರಂಭಿಸಿದ್ದು ಮಾರುತಿ 800 ಕಾರಿನಲ್ಲಿ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ 

17 ವರ್ಷದ ವೇದಾಂತ್ ಮಾಧವನ್ ಸ್ವಿಮ್ಮಿಂಗ್‌ನಲ್ಲಿ ಭಾರತದ ಭರವಸೆಯ ಈಜುಪಟುವಾಗಿ ಬೆಳೆದಿದ್ದಾರೆ. ಈಜು ಹೊರತುಪಡಿಸಿದರೆ ಕಾರು ರೇಸ್ ಸೇರಿದಂತೆ ಕೆಲ ಕ್ರೀಡೆಯಲ್ಲಿ ವೇದಾಂತ್ ಮಾಧವನ್ ಆಸಕ್ತಿ ಹೊಂದಿದ್ದಾರೆ. ಇದೀಗು ದುಬೈನಲ್ಲಿ ಸ್ಪೋರ್ಟ್ಸ್ ಕಾರು ಪೊರ್ಶೆಯಲ್ಲಿ ಡ್ರೈವಿಂಗ್ ಕಲಿಯುತ್ತಿರುವುದರ ಹಿಂದೆ ಕಾರು ರೇಸಿಂಗ್‌ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಾರ ಅನ್ನೋ ಚರ್ಚೆಗಳು ಆರಂಭಗೊಂಡಿದೆ. ಆದರೆ ಈ ಚರ್ಚೆಗಳಿಗೆ ಯಾವುದೇ ಆಧಾರವಿಲ್ಲ.

ಬಾಲಿವುಡ್‌ 'ಹೀರೋ'ಗಿಂತ ಭಿನ್ನ ಆರ್‌.ಮಾಧವನ್‌ ಪುತ್ರ, ಖೇಲೋ ಇಂಡಿಯಾದಲ್ಲಿ 5 ಸ್ವರ್ಣ ಗೆದ್ದ ವೇದಾಂತ್!

ಈ ವರ್ಷದ ಆರಂಭದಲ್ಲಿ ಮಲೇಷಿಯಾದಲ್ಲಿ ನಡೆದ ಗ್ರೂಪ್ ಸ್ವಿಮ್ಮಿಂಗ್ ಸ್ಪರ್ಧೆಯಲ್ಲಿ ವೇದಾಂತ್ ಪದಕ ಗೆದ್ದ ಸಾಧನೆ ಮಾಡಿದ್ದಾರೆ. 2022ರಲ್ಲಿ  ಡೆನ್ಮಾರ್ಕ್ನ ಕೊಪನ್‌ಹೆಗೇನ್‌ನಲ್ಲಿ ನಡೆದ ಡ್ಯಾನಿಶ್‌ ಓಪನ್‌ ಈಜು ಸ್ಪರ್ಧೆಯಲ್ಲಿ ಭಾರತದ ವೇದಾಂತ್‌ ಮಾಧವನ್‌ ಚಿನ್ನದ ಪದಕ ಗೆದ್ದಿದ್ದಾರೆ. ತಮಿಳಿನ ಖ್ಯಾತ ನಟ ಆರ್‌.ಮಾಧವನ್‌ ಅವರ ಪುತ್ರನಾಗಿರುವ,  ವೇದಾಂತ್‌ ಪುರುಷರ 800 ಮೀ. ಫ್ರೀಸ್ಟೈಲ್‌ ವಿಭಾಗದಲ್ಲಿ 8 ನಿಮಿಷ 17.28 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಸ್ವರ್ಣ ತಮ್ಮದಾಗಿಸಿಕೊಂಡರು. ಇದಕ್ಕೂ ಮೊದಲು ಶುಕ್ರವಾರ 1500 ಮೀ. ಫ್ರೀಸ್ಟೈಲ್‌ ವಿಭಾಗದಲ್ಲಿ 15.57.86 ನಿಮಿಷದಲ್ಲಿ ಗುರಿ ಮುಟ್ಟಿದ್ದ ವೇದಾಂತ್‌ ಬೆಳ್ಳಿ ಗೆದ್ದಿದ್ದರು. ಇನ್ನು, ಸಾಜನ್‌ ಪ್ರಕಾಶ್‌ ಪುರುಷರ 100 ಮೀ. ಬಟರ್‌ಪ್ಲೈ ಸ್ಪರ್ಧೆಯಲ್ಲಿ 5ನೇ ಸ್ಥಾನ ಪಡೆದರು. ಭಾರತ ಕೂಟದಲ್ಲಿ 2 ಚಿನ್ನ, 1 ಬೆಳ್ಳಿ ಗೆದ್ದಿದೆ. ಶುಕ್ರವಾರ ಸಾಜನ್‌ 200 ಮೀ. ಬಟರ್‌ಫ್ಲೈ ವಿಭಾಗದಲ್ಲಿ ಚಿನ್ನ ಪಡೆದಿದ್ದರು.

Latest Videos
Follow Us:
Download App:
  • android
  • ios