Asianet Suvarna News Asianet Suvarna News

50 ಸಾವಿರ ರೂಗೆ ಬುಕ್ ಮಾಡಿ ಹೊಚ್ಚ ಹೊಸ ಸೆಲ್ಫ್ ಚಾರ್ಜಿಂಗ್ ಹೈಬ್ರಿಡ್ ಇನೋವಾ ಹೈಕ್ರಾಸ್!

21.1 ಕಿ.ಮೀ ಮೈಲೇಜ್, ಸೆಲ್ಫ್ ಚಾರ್ಜಿಂಗ್ ವ್ಯವವಸ್ಥೆಯ ಅತ್ಯಾಕರ್ಷಕ ಹಾಗೂ ಅತ್ಯಾಧುನಿಕ ಇನ್ನೋವಾ ಹೈಕ್ರಾಸ್ ಕಾರು ಬಿಡುಗಡೆಯಾಗಿದೆ. ಇದರಿಂದ ಭಾರತದಲ್ಲಿ ಟೊಯೋಟಾ ಇನ್ನೋವಾ ಕಾರಿಗೆ ಇರುವ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ.

Toyota Kirloskar Motor Launches the All New Innova HyCross Self Charging Strong Hybrid Electric Vehicle ckm
Author
First Published Nov 25, 2022, 5:33 PM IST

ಬೆಂಗಳೂರು(ನ.25): ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಇಂದು ಸೆಲ್ಫ್-ಚಾರ್ಜಿಂಗ್ ಸ್ಟ್ರಾಂಗ್ ಹೈಬ್ರಿಡ್ ಎಲೆಕ್ಟ್ರಿಕ್ ವೆಹಿಕಲ್ (SHEV) ಇನ್ನೋವಾ ಹೈಕ್ರಾಸ್ ಬಿಡುಗಡೆಯಾಗಿದೆ.  ಟೊಯೊಟಾ ನ್ಯೂ ಗ್ಲೋಬಲ್ ಆರ್ಕಿಟೆಕ್ಚರ್ (TNGA) ಆಧಾರಿತ, ಇತ್ತೀಚಿನ ಇನ್ನೋವಾ , ಟೊಯೊಟಾದ ಜಾಗತಿಕವಾಗಿ ಗುರುತಿಸಲ್ಪಟ್ಟ ಗುಣಮಟ್ಟ, ಬಾಳಿಕೆ ಮತ್ತು ಸುಧಾರಿತ ತಂತ್ರಜ್ಞಾನದ ಬೆಂಬಲದೊಂದಿಗೆ ಭಾರತೀಯ ಗ್ರಾಹಕರ ವಿಶ್ವಾಸಾರ್ಹತೆ ಮತ್ತು ಆಕರ್ಷಣೆ ಪಡೆಯುವ ಮೂಲಕ ಸಂಭ್ರಮಿಸುತ್ತಿದೆ.

ಹೊಸ ಇನ್ನೋವಾ ಹೈಕ್ರಾಸ್ TNGA 2.0 ಲೀಟರ್ 4-ಸಿಲಿಂಡರ್ ಗ್ಯಾಸೋಲಿನ್ ಎಂಜಿನ್ನೊಂದಿಗೆ 5 ನೇ ಜನರೇಷನ್ ನ ಸೆಲ್ಫ್-ಚಾರ್ಜಿಂಗ್ ಸ್ಟ್ರಾಂಗ್ ಹೈಬ್ರಿಡ್ ಎಲೆಕ್ಟ್ರಿಕ್ ಸಿಸ್ಟಂ ಮತ್ತು ಇ-ಡ್ರೈವ್ ಸೀಕ್ವೆಂಟಿಯಲ್  ಶಿಫ್ಟ್ನೊಂದಿಗೆ ಮೊನೊಕಾಕ್ ಫ್ರೇಮ್ ನಿಂದ ಚಾಲಿತವಾಗಿದೆ. ಇದು 137 ಕಿಲೋವ್ಯಾಟ್ (186 ಪಿಎಸ್) ಗರಿಷ್ಠ ವಿದ್ಯುತ್ ಉತ್ಪಾದನೆಯನ್ನು ನೀಡಲಿದೆ. ಈ ವಾಹನ ತ್ವರಿತ ವೇಗವರ್ಧನೆ ಮತ್ತು ಸೆಗ್ಮೆಂಟ್ ಫ್ಯುಯಲ್ ಎಕಾನಮಿಯಲ್ಲಿ ಅತ್ಯುತ್ತಮವಾಗಿದೆ. ಈ ವಾಹನವು TNGA 2.0 ಲೀಟರ್ 4-ಸಿಲಿಂಡರ್ ಗ್ಯಾಸೋಲಿನ್ ಎಂಜಿನ್ ಅನ್ನು ಹೊಂದಿದ್ದು, 128 ಕಿಲೋವ್ಯಾಟ್ (174 ಪಿಎಸ್) ಔಟ್ ಪುಟ್ ನೀಡುವ ಆಯ್ದ ಗ್ರೇಡ್ ಹಾಗೂ  ನೇರ ಶಿಫ್ಟ್ CVTಗೆ ಜೋಡಿಸಬಹುದಾದ ಆಯ್ಕೆಯೊಂದಿಗೆ ಇದು ಲಭ್ಯವಿದೆ.

CNG ವೇರಿಯೆಂಟ್‌ನಲ್ಲಿ ಟೊಯೋಟಾ ಗ್ಲಾಂಜಾ ಹಾಗೂ ಅರ್ಬನ್ ಕ್ರೂಸರ್, 30.61 ಕಿ.ಮೀ ಮೈಲೇಜ್!

ಕುಟುಂಬದ ಅಗತ್ಯಗಳಿಗಾಗಿ ವಿನ್ಯಾಸಗೊಳಿಸಲಾದ, ಹೊಸ ಇನ್ನೋವಾ ಹೈಕ್ರಾಸ್ ವೈಶಿಷ್ಟ್ಯವು ಗ್ಲಾಮರ್, ಟಫ್ ನೆಸ್ , ಆರಾಮ, ಸುರಕ್ಷತೆ ಮತ್ತು ಸುಧಾರಿತ ತಂತ್ರಜ್ಞಾನವನ್ನು ನೀಡುವ ಪ್ರತಿ ಸಂದರ್ಭಕ್ಕೂ ಇದೊಂದು ಅತ್ಯುತ್ತಮ ವಾಹನವಾಗಿದೆ. ಟೊಯೊಟಾದ  ಜಾಗತಿಕ ಎಸ್ಯುವಿ ಹೆರಿಟೇಜ್ ನಿಂದ ಸ್ಫೂರ್ತಿ ಪಡೆದ ಹೊಸ ಇನ್ನೋವಾ ಹೈಕ್ರಾಸ್ ಗಟ್ಟಿಮುಟ್ಟಾದ ವಿನ್ಯಾಸವನ್ನು ಹೊಂದಿದೆ. ಎಲ್ಲರಿಗೂ ಹೊಂದಿಕೊಳ್ಳುವ ಮತ್ತು ಆರಾಮದಾಯಕ ಆಸನಗಳನ್ನು ಒದಗಿಸುವ ಸಾಕಷ್ಟು ಸ್ಥಳಾವಕಾಶವನ್ನು ಹೊಂದಿದೆ. ಈ ಬಹುಮುಖ ವಾಹನವು ಒರಟಾದ ರಸ್ತೆಗಳನ್ನು ನಿರ್ವಹಿಸುವ ಮತ್ತು ತಡೆರಹಿತ, ಆಯಾಸ-ಮುಕ್ತ ಚಾಲನೆಯನ್ನು ಒದಗಿಸುವ ವಾಹನವನ್ನು ಬಯಸುವ ಕುಟುಂಬಗಳನ್ನು ಗುರಿಯಾಗಿಸಿಕೊಂಡಿದೆ.

ಭಾರತದ ಚಲನಶೀಲತೆಯ ಪ್ರಯಾಣದಲ್ಲಿ ಇನ್ನೋವಾ ಒಂದು ಅಪ್ರತಿಮ ವಾಹನವಾಗಿ ಮಾರ್ಪಟ್ಟು, ಮನೆಮಾತಾಗಿದೆ. ಇಂದು ನಾವು ನಮ್ಮ ಭಾರತೀಯ ಗ್ರಾಹಕರಿಗಾಗಿ ಹೊಚ್ಚ ಹೊಸ ಇನ್ನೋವಾ ಹೈಕ್ರಾಸ್ ಅನ್ನು ಬಿಡುಗಡೆ ಮಾಡುವುದು ಅತ್ಯಂತ ಸಂತಸದ ವಿಷಯ. ಸೆಲ್ಫ್-ಚಾರ್ಜಿಂಗ್ ಸ್ಟ್ರಾಂಗ್ ಹೈಬ್ರಿಡ್ ಎಲೆಕ್ಟ್ರಿಕ್ ವೆಹಿಕಲ್, ಎಂಪಿವಿಯ ವಿಶಾಲತೆ ಮತ್ತು ಎಸ್ ಯುವಿಯ ಅನುಪಾತ ಮತ್ತು ಸಮತೋಲನದೊಂದಿಗೆ  ಭಾರತೀಯ ಗ್ರಾಹಕರ ಆಕಾಂಕ್ಷೆಗಳನ್ನು ಪೂರೈಸವ ಅನೇಕ ವೈಶಿಷ್ಟ್ಯಗಳನ್ನು ಈ ವಾಹನ ಹೊಂದಿದೆ. ಈ ವೈಶಿಷ್ಟ್ಯಭರಿತ ಪ್ಯಾಕ್ಡ್ ವಾಹನವು ಪ್ರಯಾಣಿಸುವಾಗ ಸುರಕ್ಷತೆ ಮತ್ತು ಆರಾಮವನ್ನು ಬಯಸುವವರಿಗೆ ಮತ್ತು ಹೊಸ ಇನ್ನೋವಾ ಹೈಕ್ರಾಸ್ ಕುಟುಂಬದ ಭಾಗವಾಗಲು ಇಷ್ಟಪಡುವವರಿಗೆ ಉದ್ದೇಶಿಸಿ ರೂಪಿಸಲಾಗಿದೆ.  ಟೊಯೋಟಾ ನ್ಯೂ ಗ್ಲೋಬಲ್ ಆರ್ಕಿಟೆಕ್ಚರ್ (TNGA) 2.0 ಲೀಟರ್ ಗ್ಯಾಸೋಲಿನ್ ಎಂಜಿನ್ ನೊಂದಿಗೆ ನಿರ್ಮಿಸಲಾದ ಇತ್ತೀಚಿನ 5ನೇ ಜನರೇಷನ್ ನ  ಸ್ವಯಂ ಚಾರ್ಜಿಂಗ್ ಸ್ಟ್ರಾಂಗ್ ಹೈಬ್ರಿಡ್ ಎಲೆಕ್ಟ್ರಿಕ್ ಸಿಸ್ಟಂ, ಅಸಾಧಾರಣ ಇಂಧನ ದಕ್ಷತೆ, ಕಾರ್ಯಕ್ಷಮತೆ ಮತ್ತು ತ್ವರಿತ ವೇಗೋತ್ಕರ್ಷವನ್ನು ಒದಗಿಸುತ್ತದೆ, ಇದು ಈ ವಿಭಾಗದಲ್ಲಿ ಗೇಮ್-ಚೇಂಜರ್ ಆಗುವುದು ಶತಸಿದ್ಧ ಎಂದು  ಟೊಯೊಟಾದ ಇನ್ನೋವಾ ಮುಖ್ಯ ಎಂಜಿನಿಯರ್ ಹಿಡೆಕಿ ಮಿಜುಮಾ ಹೇಳಿದ್ದಾರೆ.

 

ರೋಡ್ ಫಂಡಿಂಗ್ ಮೇಲೆ ಶೇ.90 ರಷ್ಟು ಕೊಡುಗೆ, ಟೋಯೋಟಾ ಕಾರುಗಳಿಗೆ ಭರ್ಜರಿ ಆಫರ್!

ಭಾರತದಲ್ಲಿ ಟೊಯೊಟಾದ 25 ವೈಭವ ಪೂರಿತ ವರ್ಷವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ಇದೊಂದು ಅದ್ಭುತ ವರ್ಷವಾಗಿದೆ. ಜಾಗತಿಕವಾಗಿ ಇಂಗಾಲದ ಹೊರಸೂಸುವಿಕೆಯನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುವ ಗುರಿಯೊಂದಿಗೆ , ಹಸಿರು ಭವಿಷ್ಯಕ್ಕಾಗಿ  ಮುನ್ನುಗ್ಗುವ ವೇಗವನ್ನು ಹೆಚ್ಚಿಸುವ ಸಮಯ ಇದಾಗಿದೆ.  ಈ ದಿಕ್ಕಿನಲ್ಲಿ ನಾವು ನಮ್ಮ ಎಲ್ಲಾ ಕಾರ್ಯಾಚರಣೆಗಳು ಮತ್ತು ಮೌಲ್ಯ ಸರಪಳಿಯಾದ್ಯಂತ ಸ್ವಚ್ಛ ಮತ್ತು ಹಸಿರು ಪರಿಹಾರಗಳನ್ನು ಅಳವಡಿಸಿಕೊಂಡಿದ್ದೇವೆ, ಇದರಿಂದ ನಮ್ಮ ಗ್ರಾಹಕರಿಗೆ ನಾವು ನೀಡುವ ಹಸಿರು ಉತ್ಪನ್ನಗಳನ್ನು ಹಸಿರು ಕಾರ್ಖಾನೆಗಳಲ್ಲೇ ತಯಾರಿಸಲಾಗುತ್ತದೆ ಎಂದು ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ನ ಉಪಾಧ್ಯಕ್ಷ  ವಿಕ್ರಮ್ ಕಿರ್ಲೋಸ್ಕರ್ ಹೇಳಿದ್ದಾರೆ.

ಇದಲ್ಲದೆ, ಹಸಿರು ತಂತ್ರಜ್ಞಾನಗಳಿಗಾಗಿ ಸ್ಥಳೀಯ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ರಚಿಸುವ ನಿಟ್ಟಿನಲ್ಲಿ ನಾವು ಅವಿರತವಾಗಿ ಶ್ರಮಿಸುತ್ತಿದ್ದೇವೆ, ಇದು ಕೇವಲ ಭಾರತಕ್ಕಷ್ಟೇ ಅಲ್ಲ, ವಿಶ್ವಕ್ಕೂ ಅನ್ವಯಿಸುತ್ತದೆ. ಹೊಸ ಇನ್ನೋವಾ ಹೈಕ್ರಾಸ್ ಅನ್ನು ಬಿಡುಗಡೆ ಮಾಡುವ ಮೂಲಕ, ನಾವು ಮಾದರಿ ಮತ್ತು ತಾಂತ್ರಿಕ ಮತ್ತು ಉತ್ಪನ್ನ ಉತ್ಕೃಷ್ಟತೆಯನ್ನು  ಮರುವ್ಯಾಖ್ಯಾನಿಸುತ್ತಿದ್ದೇವೆ. ಅದೇ ಸಮಯದಲ್ಲಿ ಗ್ರಾಹಕರ ಅನುಭವವನ್ನು ಹಿಂದೆಂದಿಗಿಂತಲೂ ಹೆಚ್ಚಿಸಲು ನೂತನ ಇನ್ನೋವಾ ಹೈಕ್ರಾಸ್ ಗೆ ಕೊಂಡೊಯ್ಯುತ್ತಿದ್ದೇವೆ ಎಂದರು.

ಸೆಲ್ಫ್-ಚಾರ್ಜಿಂಗ್ ಸ್ಟ್ರಾಂಗ್ ಹೈಬ್ರಿಡ್ ಎಲೆಕ್ಟ್ರಿಕ್ ವೆಹಿಕಲ್ (SHEV) ಆಗಿರುವುದರಿಂದ ಇನ್ನೋವಾ ಹೈಕ್ರಾಸ್ ಎಲೆಕ್ಟ್ರಿಕ್ (EV )ಅಥವಾ ಶೂನ್ಯ ಎಮಿಷನ್ ಮೋಡ್ ನಲ್ಲಿ ಶೇ.40 ರಷ್ಟು ದೂರ ಮತ್ತು ಶೇ.60 ರಷ್ಟು ಸಮಯವನ್ನು ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ.
ಹೊಸ ಇನ್ನೋವಾ ಹೈಕ್ರಾಸ್ ಗಟ್ಟಿಮುಟ್ಟಾದ ಬಾಹ್ಯ ವಿನ್ಯಾಸವನ್ನು ಹೊಂದಿದ್ದು, ಕಣ್ಮನ ಸೆಳೆಯುವುದು ಖಚಿತ. ಎತ್ತರ ಹೆಚ್ಚಿಸಲಾದ ಬಾನೆಟ್ ಲೈನ್, ದೊಡ್ಡದಾದ ಹೆಕ್ಸಾಗನಲ್ ಗನ್ ಮೆಟಲ್ ಫಿನಿಶ್ ಗ್ರಿಲ್, ಆಟೋಮ್ಯಾಟಿಕ್ ಎಲ್ಇಡಿ ಹೆಡ್ ಲ್ಯಾಂಪ್ಸ್, ಸೂಪರ್ ಕ್ರೋಮ್ ಅಲಾಯ್ ವ್ಹೀಲ್ಸ್, ಮತ್ತು ಅಗಲವಾದ ಬಂಪರ್ ಗಳು ವಾಹನದ ಅತ್ಯಾಧುನಿಕ ಮತ್ತು ಆಕರ್ಷಕ ಲುಕ್ ಅನ್ನು ಮತ್ತಷ್ಟು ಹೆಚ್ಚಿಸುತ್ತದೆ.  ಹೊಸ ಇನ್ನೋವಾ ಹೈಕ್ರಾಸ್ ನ ಎಸ್ ಯುವಿ ನಿಲುವನ್ನು ಹೆಚ್ಚಿಸಲು ಹೆಚ್ಚು ಬಾಗಿದ ಹಿಂಭಾಗದೊಂದಿಗೆ ಸಣ್ಣ ಓವರ್ ಹ್ಯಾಂಗ್ ಗಳನ್ನು ಹೊಂದಿರುವ ದೊಡ್ಡ ಟೈರ್ ಗಳು ವಾಹನ ಗಟ್ಟಿಮುಟ್ಟಾದ ನೋಟವನ್ನು ಮತ್ತಷ್ಟು ಹೆಚ್ಚಿಸಲಿದೆ.

ಇಂಟೀರಿಯರ್ ವಿನ್ಯಾಸವು ತಡೆರಹಿತ ಐಷಾರಾಮಿ ಮತ್ತು ಆರಾಮವನ್ನು ವ್ಯಕ್ತಪಡಿಸುತ್ತದೆ. ಭಾರತೀಯ ಗ್ರಾಹಕರ ಅನನ್ಯ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು, ಹೊಸ ಇನ್ನೋವಾ ಹೈಕ್ರಾಸ್ ಒಳಾಂಗಣ ಆರಾಮದಾಯಕ ವೈಶಿಷ್ಟ್ಯಗಳಿಗೆ ಆದ್ಯತೆ ನೀಡುತ್ತದೆ. ಸ್ಟೈಲಿಂಗ್ ಥ್ರೆರ್ಸ್ ಕ್ಯಾಬಿನ್ ಸೌಂದರ್ಯವನ್ನು ಸುಧಾರಿಸಿದೆ, ಗಾಢವಾದ ಚೆಸ್ಟ್ ನಟ್ ಕ್ವಿಲ್ಟೆಡ್ ಲೆದರ್ ಸೀಟುಗಳ ಜೊತೆಗೆ ಮೃದುವಾದ-ಸ್ಪರ್ಶ ಸ್ಕಿನ್ ಮತ್ತು ಕ್ಯಾಬಿನ್ ಅನ್ನು ಲೈನಿಂಗ್ ಮಾಡುವ ಲೋಹದ ಅಲಂಕಾರಗಳೊಂದಿಗೆ ಇದು ಆಕರ್ಷಕವಾಗಿದೆ.  ಕಾಕ್ ಪಿಟ್ ಅನ್ನು ಸಮತಲ ಟೋನ್ ಸ್ಪೇಸ್ ಸೆನ್ಸ್ ನೀಡಲು ವಿನ್ಯಾಸಗೊಳಿಸಲಾಗಿದೆ.

ಹೊಸ ಇನ್ನೋವಾ ಹೈಕ್ರಾಸ್ ರೈಸ್ಡ್ ಐ ಪಾಯಿಂಟ್ ಮತ್ತು ಹೊಸದಾಗಿ ಪರಿಚಯಿಸಲಾದ ವೆಂಟಿಲೇಟೆಡ್ ಫ್ರಂಟ್ ಸೀಟ್ ಗಳ ಮೂಲಕ ಸರಿ ಸಾಟಿಯಿಲ್ಲದ ಆರಾಮ ಮತ್ತು ಅನುಕೂಲವನ್ನು ಒದಗಿಸಲಿದೆ. ಇದು ಭಾರತೀಯ ಬೇಸಿಗೆಯನ್ನು ಅತ್ಯುತ್ತಮವಾಗಿ ನಿರ್ವಹಿಸಲಿದೆ.  ಎರಡನೇ ಸಾಲಿನಲ್ಲಿ, 25.65 ಸೆಂ.ಮೀ (10.1") ಜೆಬಿಎಲ್ ಪ್ರೀಮಿಯಂ 9 ಸ್ಪೀಕರ್ ಸಿಸ್ಟಮ್ (ಸಬ್ ವೂಫರ್ ಸೇರಿದಂತೆ), ಸೆಗ್ಮೆಂಟ್-ಫಸ್ಟ್ ಚಾಲಿತ ಒಟ್ಟೋಮನ್ 2 ನೇ ರೋ ಸೀಟ್ಸ್ ಮತ್ತು ಮಲ್ಟಿ-ಝೋನ್ ಎ / ಸಿ ಯೊಂದಿಗೆ ಕನೆಕ್ಟೆಡ್ ಡಿಸ್ಪ್ಲೇ ಆಡಿಯೊ, ಸರಿ ಸಾಟಿಯಿಲ್ಲದ ಐಷಾರಾಮಿ ಅನುಭವವನ್ನು ನೀಡುತ್ತದೆ. ವಿಶಿಷ್ಟ ಫ್ಲ್ಯಾಟ್ ಫ್ಲೋರ್ ಡಿಸೈನ್, 285 ಸೆಂ.ಮೀ(ಸೆಗ್ಮೆಂಟ್ ನಲ್ಲಿ ಅತಿ ಉದ್ದದ) ವ್ಹೀಲ್ ಬೇಸ್ ಮತ್ತು ಪ್ಲಾಟ್ ಫಾರ್ಮ್ ಅಗಲವನ್ನು ಹೆಚ್ಚಿಸುವ ಮೂಲಕ  ಕುಟುಂಬ ಮತ್ತು ಸ್ನೇಹಿತರು ಒಟ್ಟಿಗೆ ಪ್ರಯಾಣಿಸಲು ವಿಶಾಲತೆಯನ್ನು ಮತ್ತಷ್ಟು ಹೆಚ್ಚಿಸಲಿದೆ. ಭಾರತೀಯ ಗ್ರಾಹಕರು ಯಾವುದೇ ರಾಜಿಗಳನ್ನು ನಂಬುವುದಿಲ್ಲ; ಆದ್ದರಿಂದ, ಪವರ್ ಬ್ಯಾಕ್ ಡೋರ್ ಮತ್ತು ಟಿಲ್ಟ್-ಡೌನ್ ಆಸನಗಳು ಗರಿಷ್ಠ ಸ್ಥಳಾವಕಾಶ ಬಳಕೆ ಮತ್ತು ಸುಧಾರಿತ ಲಗೇಜ್ ಸ್ಥಳವನ್ನು ನೀಡಲಿದೆ.

ಟೊಯೊಟಾ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಿದ್ದು, ಈ ವಾಹನವು ಹಲವಾರು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಹೊಸ ಇನ್ನೋವಾ ಹೈಕ್ರಾಸ್ ಟೊಯೋಟಾ ಸುರಕ್ಷತಾ ಸೆನ್ಸ್ ಸೂಚ್ಯಂಕ (TSS)ಅನ್ನು ಭಾರತದಲ್ಲಿ ಮೊದಲ ಬಾರಿಗೆ ಪರಿಚಯಿಸಲಾಗಿದೆ. ಇದು ಸುರಕ್ಷತೆಯನ್ನು ಮತ್ತಷ್ಟು ಹೆಚ್ಚಿಸಲು ಮತ್ತು ಎಲ್ಲಾ ಗ್ರಾಹಕರಿಗೆ ಪೀಸ್ ಆಫ್ ಮೈಂಡ್ ಅನ್ನು ಒದಗಿಸಲಿದೆ. ಸುರಕ್ಷತಾ ಪ್ಯಾಕೇಜ್ ನಲ್ಲಿ ಡೈನಾಮಿಕ್ ರಾಡಾರ್ ಕ್ರೂಸ್ ಕಂಟ್ರೋಲ್ (DRCC), ಲೇನ್ ಟ್ರೇಸ್ ಅಸಿಸ್ಟ್ (LTA), ಆಟೋ ಹೈ ಬೀಮ್ (AHB), ಬ್ಲೈಂಡ್ ಸ್ಪಾಟ್ ಮಾನಿಟರ್ ((BSM) ಸಿಸ್ಟಮ್ಸ್,  ^ಪ್ರಿ-ಕೊಲಿಷನ್ ಸಿಸ್ಟಮ್ ಮತ್ತು ರಿಯರ್ ಕ್ರಾಸ್ ಟ್ರಾಫಿಕ್ ಅಲರ್ಟ್ ಸಿಸ್ಟಮ್ಸ್ ಅನ್ನು ಒಳಗೊಂಡಿದೆ. ಆರು SRS ಏರ್ ಬ್ಯಾಗ್ಸ್ , ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ಸ್ , ರಿಯರ್ ಡಿಸ್ಕ್ ಬ್ರೇಕ್ಸ್, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್-ಸ್ಟಾರ್ಟ್ ಅಸಿಸ್ಟ್, ಡೈನಾಮಿಕ್ ಬ್ಯಾಕ್ ಗೈಡ್ ನೊಂದಿಗೆ ಪನೊರಮಿಕ್ ವ್ಯೂ ಮಾನಿಟರ್ ಮತ್ತು ಫ್ರಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್ ಸೇರಿದಂತೆ ಇತರ ವೈಶಿಷ್ಟ್ಯಗಳನ್ನು ಒದಗಿಸಲಾಗಿದೆ.

ಹೊಸ ಇನ್ನೋವಾ ಹೈಕ್ರಾಸ್ ಸೂಪರ್ ವೈಟ್, ಪ್ಲಾಟಿನಂ ವೈಟ್ ಪರ್ಲ್, ಸಿಲ್ವರ್ ಮೆಟಾಲಿಕ್, ಆಟಿಟ್ಯೂಡ್ ಬ್ಲ್ಯಾಕ್ ಮೈಕಾ, ಸ್ಪಾರ್ಕಿಂಗ್ ಬ್ಲ್ಯಾಕ್ ಪರ್ಲ್ ಕ್ರಿಸ್ಟಲ್ ಶೈನ್, ಅವಂತ್ ಗ್ರೇಡ್ ಬ್ರೋನ್ಸ್ ಮೆಟಾಲಿಕ್ ಮತ್ತು ಅತ್ಯಾಕರ್ಷಕ ಹೊಸ ಬಣ್ಣವಾದ ಬ್ಲಾಕಿಷ್ ಅಗೇಹಾ ಗ್ಲಾಸ್ ಫ್ಲೇಕ್ ನಲ್ಲಿ ಲಭ್ಯವಿದೆ.  ಬ್ಲಾಕ್ ಮತ್ತು ಚೆಸ್ಟ್ ನಟ್ ಮತ್ತು ಬ್ಲ್ಯಾಕ್ ಮತ್ತು ಡಾರ್ಕ್ ಚೆಸ್ಟ್ ನಟ್ ಎಂಬ ಎರಡು ಹೊಸ ಬಣ್ಣಗಳೊಂದಿಗೆ ಒಳಾಂಗಣಗಳು ಸುಧಾರಿತ ಮತ್ತು ಪ್ರೀಮಿಯಂ ಇಂಪ್ರೆಷನ್ ಅನ್ನು ನೀಡುತ್ತವೆ.

ಹೊಸ ಇನ್ನೋವಾ ಹೈಕ್ರಾಸ್ ಪ್ರಸಿದ್ಧ ಟೊಯೋಟಾ ಅನುಭವ 3 ವರ್ಷ/100000 ಕಿಲೋಮೀಟರ್ ವಾರಂಟಿ ಮತ್ತು 5 ವರ್ಷ/ 220000 ಕಿಲೋಮೀಟರ್ ವರೆಗಿನ ವಿಸ್ತೃತ ವಾರಂಟಿಯ ಆಯ್ಕೆಯೊಂದಿಗೆ ಲಭ್ಯವಿದೆ. 3 ವರ್ಷಗಳ ಉಚಿತ ರೋಡ್ ಸೈಡ್ ಅಸಿಸ್ಟೆನ್ಸ್ , ಆಕರ್ಷಕ ಹಣಕಾಸು ಯೋಜನೆಗಳು ಮತ್ತು ಹೈಬ್ರಿಡ್ ಬ್ಯಾಟರಿಯಲ್ಲಿ 8 ವರ್ಷ/160000 ಕಿಲೋಮೀಟರ್ ವಾರಂಟಿಯ ಮೂಲಕ ನೀಡುತ್ತದೆ. ಇಂದಿನಿಂದ 50000 ರೂ.ಗೆ ಬುಕ್ಕಿಂಗ್ ಆರಂಭವಾಗಲಿದೆ.
 

Follow Us:
Download App:
  • android
  • ios