CNG ವೇರಿಯೆಂಟ್‌ನಲ್ಲಿ ಟೊಯೋಟಾ ಗ್ಲಾಂಜಾ ಹಾಗೂ ಅರ್ಬನ್ ಕ್ರೂಸರ್, 30.61 ಕಿ.ಮೀ ಮೈಲೇಜ್!

ಕೂಲ್ ನ್ಯೂ ಗ್ಲಾಂಝಾ ಮತ್ತು ಅರ್ಬನ್ ಕ್ರೂಸರ್ ಹೈರೈಡರ್ ಗೆ ಇ-ಸಿಎನ್ ಜಿ ತಂತ್ರಜ್ಞಾನ ಪರಿಚಯಿಸಿದೆ. ಕೈಗೆಟುಕುವ ದರದಲ್ಲಿ ಗ್ಲಾಂಜಾ ಹಾಗೂ ಕ್ರೂಸರ್ ಬಿಡುಗಡೆಯಾಗಿದೆ. ಇಷ್ಟೇ ಅಲ್ಲ ಪ್ರತಿ ಲೀಟರ್‌ಗೆ  30.61 ಕಿ.ಮೀ ಮೈಲೇಜ್ ನೀಡಲಿದೆ.
 

Toyota Kirloskar Motor announces Toyota Glanza  and Urban Cruiser Hyryder foray into the CNG segment ckm

ಬೆಂಗಳೂರು(ನ.09): ಭಾರತದಲ್ಲಿ ಸದ್ಯ ಸಿಎನ್‌ಜಿ ವೇರಿಯೆಂಟ್ ವಾಹನಕ್ಕೆ ಭಾರಿ ಬೇಡಿಕೆ ಇದೆ. ಕಾರಣ ಇಂಧನದ ಬೆಲೆ ಏರಿಕೆ, ದುಬಾರಿ ಎಲೆಕ್ಟ್ರಿಕ್ ವಾಹನಗಳಿಂದ ಸಿಎನ್‌ಜಿ ವಾಹನದ ಕರೆ ಹಲವು ಒಲವು ತೋರಿದ್ದಾರೆ. ಈಗಾಗಲೇ ಹಲವು ಕಂಪನಿಗಳು ಸಿಎನ್‌ಜಿ ಕಾರುಗಳನ್ನು ಬಿಡುಗಡೆ ಮಾಡಿದೆ. ಇದೀಗ ಟೊಯೋಟಾ ಸರದಿ. ಇದೀಗ ಟೊಯೋಟಾ ಕಿರ್ಲೋಸ್ಕರ್ ಸಿ ಎನ್ ಜಿ ವಿಭಾಗಕ್ಕೆ ಪ್ರವೇಶಿಸಿಸಿದೆ. ತನ್ನ ಟೋಯೋಟಾ ಗ್ಲಾಂಜಾ ಹಾಗೂ ಟೋಯೋಟಾ ಅರ್ಬನ್ ಕ್ರೂಸರ್ ವಾಹನ ಇದೀಗ ಸಿಎನ್‌ಜಿ ವೇರಿಯೆಂಟ್‌ನಲ್ಲಿ ಲಭ್ಯವಿದೆ.  ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ಟೊಯೋಟಾ ಗ್ಲಾಂಝಾ ಈಗ S & G ಗ್ರೇಡ್ ಗಳಲ್ಲಿ ಸಿ ಎನ್ ಜಿ ವೇರಿಯಂಟ್ ಜೊತೆಗೆ ಮ್ಯಾನುವಲ್ ಟ್ರಾನ್ಸ್ಮಿಷನ್ ಪವರ್ ಟ್ರೇನ್ ನ್ನೊಂದಿಗೆ ಲಭ್ಯವಾಗಲಿದೆ. ಈ ವಿಭಾಗದಲ್ಲಿ ಮೊದಲ ಬಾರಿಗೆ ಅರ್ಬನ್ ಕ್ರೂಸರ್ ಹೈರೈಡರ್ ಕೂಡ ಈಗ S & G ಗ್ರೇಡ್ ಗಳನ್ನೂ ಫ್ಯಾಕ್ಟರ್ ಫಿಟ್ಟೆಡ್  ಸಿ ಎನ್ ಜಿ ಕಿಟ್ ನೊಂದಿಗೆ ದೊರೆಯಲಿದೆ. ಎರಡೂ ಗ್ರೇಡ್ ಗಳಲ್ಲಿ ಮ್ಯಾನುವಲ್ ಟ್ರಾನ್ಸ್ಮಿಷನ್ (ಎಂಟಿ) ಪವರ್ ಟ್ರೇನ್ ಹೊಂದಿರುವ ಸಿ ಎನ್ ಜಿ ವೇರಿಯಂಟ್ ಸೆಲ್ಫ್-ಚಾರ್ಜಿಂಗ್ ಸ್ಟ್ರಾಂಗ್ ಹೈಬ್ರಿಡ್ ಎಲೆಕ್ಟ್ರಿಕ್ ಮತ್ತು ನಿಯೋ ಡ್ರೈವ್ ವೇರಿಯಂಟ್ ಗಳಿಗೆ ಹೆಚ್ಚುವರಿಯಾಗಿರಲಿದೆ. ಈಗಾಗಲೇ ಇದು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿದೆ.

ಗ್ರಾಹಕರ ಅನುಕೂಲತೆಯನ್ನು ಗಮನದಲ್ಲಿಟ್ಟುಕೊಂಡು ಟೊಯೋಟಾ ಗ್ಲಾಂಝಾದಲ್ಲಿರುವ ಸಿ ಎನ್ ಜಿ ವೇರಿಯಂಟ್ ಶಕ್ತಿಯುತವಾದ ಇಂಧನ-ದಕ್ಷತೆಯ 'ಕೆ-ಸೀರೀಸ್ ಎಂಜಿನ್' ಅನ್ನು ಹೊಂದಿದೆ ಮತ್ತು ಮ್ಯಾನುಯಲ್ ಟ್ರಾನ್ಸ್ಮಿಷನ್ ಪವಟ್ರೇನ್ ಅನ್ನು ಹೊಂದಿದೆ. ಹೊಸ ಇ-ಸಿ ಎನ್ ಜಿ ಗ್ಲಾಂಝಾದ ಎಂಜಿನ್ ಸಾಮರ್ಥ್ಯವು 1197 ಸಿಸಿ ಆಗಿದ್ದು, 57 ಕಿಲೋವ್ಯಾಟ್ (77.5 ಪಿಎಸ್) ಪವರ್ ಔಟ್ಪುಟ್ ಹೊಂದಿದ್ದು, ಉತ್ತಮ ಚಾಲನಾ ಅನುಭವ ನೀಡಲಿದೆ. ಇ-ಸಿಎನ್ ಜಿ ಗ್ಲಾಂಝಾ ಪ್ರತಿ ಕೆಜಿಗೆ ಸಿ ಎನ್ ಜಿಗೆ 30.61 ಕಿ.ಮೀ ಮೈಲೇನ್ ನೀಡುವ ಇಂಧನ ದಕ್ಷತೆಯನ್ನು ಹೊಂದಿದೆ.

Test Drive Review 22.35 ಕಿ.ಮೀ ಮೈಲೇಜ್, ಕೈಗೆಟುಕವ ದರದಲ್ಲಿ ಟೋಯೋಟಾ ಗ್ಲಾಂಜಾ!

ಗ್ಲಾಂಝಾ ಸುಧಾರಿತ ತಂತ್ರಜ್ಞಾನ ಮತ್ತು ಟೊಯೊಟಾ ಸಿಗ್ನೇಚರ್ ಫ್ರಂಟ್ ಫ್ಯಾಸಿಯಾದ ಕೂಲ್ ಇಂಟಿಗ್ರೇಟೆಡ್ ಅನ್ನು ಹೊಂದಿದ್ದು, ನಮ್ಮ ಗ್ರಾಹಕರಿಂದ ವ್ಯಾಪಕವಾಗಿ ಮೆಚ್ಚುಗೆ ಪಡೆದಿದೆ. ಕೂಲ್  ನ್ಯೂ ಗ್ಲಾಂಜಾ ಆಧುನಿಕ ಮತ್ತು ತಂತ್ರಜ್ಞಾನ-ಬುದ್ಧಿವಂತ ಗ್ರಾಹಕರನ್ನು ಆಕರ್ಷಿಸಲು ಅಭಿವೃದ್ಧಿಪಡಿಸಲಾದ ಸುಧಾರಿತ ವೈಶಿಷ್ಟ್ಯದ ಶ್ರೇಣಿಯನ್ನು ನೀಡಲಿದೆ. ಅರ್ಬನ್ ಕ್ರೂಸರ್ ಹೈರೈಡರ್ ನಲ್ಲಿ ಲಭ್ಯವಿರುವ ಹೊಸ ಸಿ ಎನ್ ಜಿ ವೇರಿಯಂಟ್ 1.5-ಲೀಟರ್ ಕೆ-ಸೀರೀಸ್ ಎಂಜಿನ್ ಮತ್ತು 5 ಸ್ಪೀಡ್ ಮ್ಯಾನುಯಲ್ ಟ್ರಾನ್ಸ್ಮಿಷನ್ ಮತ್ತು ಉನ್ನತ ಕಾರ್ಯಕ್ಷಮತೆ ಮತ್ತು 26.1 ಕಿ.ಮೀ / ಕೆಜಿ ಮೈಲೇಜ್ ಅನ್ನು ನೀಡಲಿದೆ.

ಎರಡೂ ಟೊಯೊಟಾ ಮಾದರಿಗಳಲ್ಲಿ ಸಿ ಎನ್ ಜಿ  ಗ್ರೇಡ್ ಗಳ ಪರಿಚಯವು ಟಿಕೆಎಂ ಅನ್ನು ಸುಸ್ಥಿರ ವಾಹನ ತಂತ್ರಜ್ಞಾನ ಕೊಡುಗೆಗಳ ಶ್ರೇಣಿಯನ್ನು ಮತ್ತಷ್ಟು ಹೆಚ್ಚಿಸಿ, ಸಕ್ರಿಯಗೊಳಿಸುತ್ತಿದೆ. ಹಾಗೆಯೇ ಗ್ರಾಹಕರಿಗೆ ಆಯ್ಕೆ ಮಾಡಲು ಹೆಚ್ಚು ಪರಿಸರ ಸ್ನೇಹಿ ಮತ್ತು ಮಿತವ್ಯಯದ ಆಯ್ಕೆಗಳನ್ನು ನೀಡುತ್ತದೆ. ಇದರಿಂದ ಭಾರತೀಯ ಗ್ರಾಹಕರ ವಿವಿಧ ಶ್ರೇಣಿಯ ಚಲನಶೀಲ ಪೂರಿತ ಅಗತ್ಯಗಳನ್ನು ಈಡೇರಿಸಲಿದೆ.

Toyota SUV Price ಅರ್ಬನ್ ಕ್ರೂಸರ್ ಹೈರೈಡರ್ ಬೆಲೆ ಘೋಷಿಸಿದ ಟೋಯೋಟಾ, ಸ್ಪರ್ಧಾತ್ಮಕ ಬೆಲೆಯಲ್ಲಿ SUV!

ಟಿಕೆಎಂ ಗ್ರಾಹಕ ಕೇಂದ್ರಿತ ಕಂಪನಿಯಾಗಿರುವುದರಿಂದ ಗ್ರಾಹಕರ ಹಿತಾಸಕ್ತಿಗೆ ಹೆಚ್ಚು ಮನ್ನಣೆ ನೀಡಲಾಗುತ್ತಿದೆ. ಗ್ರಾಹಕರ ಆಕಾಂಕ್ಷೆಗಳ ಮೇಲೆ ಸ್ಪಷ್ಟವಾಗಿ ಗಮನ ಹರಿಸುವ ಮೂಲಕ ಮತ್ತು ನಮ್ಮ ಗ್ರಾಹಕರಿಗೆ ಅತ್ಯಂತ ಕಾರ್ಯಸಾಧ್ಯವಾದ ಉತ್ಪನ್ನಗಳು ಮತ್ತು ಸೇವೆಗಳನ್ನು ಒದಗಿಸುವ ಮೂಲಕ ಮಾರುಕಟ್ಟೆಗಳ ಅಗತ್ಯಗಳನ್ನು ಪೂರೈಸುವುವ ಮಹತ್ವಾಕಾಂಕ್ಷೆಯ ಗುರಿಯನ್ನು ಟೊಯೊಟಾ ಹೊಂದಿದೆ. ಇದೇ ದೃಷ್ಟಿಕೋನದಿಂದ ನಾವು ಸಿ ಎನ್ ಜಿ ವಿಭಾಗಕ್ಕೆ ಪ್ರವೇಶಿಸಲಾಗುತ್ತಿದೆ. ನಮ್ಮ ಬಹುಬೇಡಿಕೆಯ ಎರಡು ಕೊಡುಗೆಗಳಾದ ಟೊಯೋಟಾ ಗ್ಲಾಂಝಾ ಮತ್ತು ಅರ್ಬನ್ ಕ್ರೂಸರ್ ಹೈರೈಡರ್ ಗಳಿಗಾಗಿ ಸಿ ಎನ್ ಜಿ ವೇರಿಯಂಟ್ ಗೆ ಚಾಲನೆ ನೀಡುತ್ತೇವೆ ಎಂದು  ಟಿಕೆಎಂನ ಸೇಲ್ಸ್ ಮತ್ತು ಸ್ಟ್ರಾಟೆಜಿಕ್ ಮಾರ್ಕೆಟಿಂಗ್  ವೈಸ್ ಪ್ರೆಸಿಡೆಂಟ್  ಅತುಲ್ ಸೂದ್ ಹೇಳಿದರು.

ಇತ್ತೀಚಿನ ಸೇರ್ಪಡೆಯೊಂದಿಗೆ ನಮ್ಮ ಗ್ರಾಹಕರು ಮಾರುಕಟ್ಟೆಯಲ್ಲಿ ಆಯ್ಕೆ ಮಾಡಲು ಹೆಚ್ಚಿನ ಆಯ್ಕೆಗಳನ್ನು ಪಡೆಯುತ್ತಾರೆ. ಆ ಮೂಲಕ "ಮೊಬಿಲಿಟಿ ಫರ್ ಆಲ್" ಎಂಬ ನಮ್ಮ ತತ್ವವನ್ನು ಪುನರುಚ್ಚರಿಸುತ್ತದೆ. ಟೊಯೊಟಾ ವಾಹನವನ್ನು ಹೊಂದುವ ಸಂತೋಷದ ಹೊರತಾಗಿ ನಮ್ಮ ಗ್ರಾಹಕರು ಕಡಿಮೆ ವೆಚ್ಚದಿಂದ ಪ್ರಯೋಜನ ಪಡೆಯಲಿದ್ದು, ಟೊಯೊಟಾ ವಾಹನಗಳು ನೀಡುವ 'ಪೀಸ್ ಆಫ್ ಮೈಂಡ್' ಅನ್ನು ಪೂರ್ಣಗೊಳಿಸುತ್ತಾರೆ, ಇದರಿಂದಾಗಿ ಸಾಮೂಹಿಕ ಸಂತೋಷ ವ್ಯಕ್ತವಾಗುತ್ತದೆ ಎಂದರು.

ಅರ್ಬನ್ ಕ್ರೂಸರ್ ಹೈರೈಡರ್ ಎಕ್ಸ್ಟೀರಿಯರ್, ಎಲ್ಇಡಿ ಪ್ರಾಜೆಕ್ಟ್ ಹೆಡ್ಲ್ಯಾಂಪ್, ಟ್ವಿನ್ ಎಲ್ಇಡಿ ಡೇಟೈಮ್ ರನ್ನಿಂಗ್ ಲ್ಯಾಂಪ್, ವೈಡ್ ಟ್ರಾಪೆಜಾಯ್ಡಲ್ ಲೋವರ್ ಗ್ರಿಲ್, ಸ್ಲೀಕ್ ಮತ್ತು ಡೈನಾಮಿಕ್  R.17 ಅಲಾಯ್ ವ್ಹೀಲ್ಸ್, ಎಲ್ಇಡಿ ಟೇಲ್ ಲ್ಯಾಂಪ್ ಅನ್ನು ಹೊಂದಿದೆ. ಅಂತೆಯೇ, ಅರ್ಬನ್ ಕ್ರೂಸರ್ ಹೈರೈಡರ್ ನ ಇಂಟೀರಿಯರ್ ಅನ್ನು ಟೊಯೊಟಾ ನೀಡುವ ಬಿಸ್ಪೋಕ್ ಅನುಭವಕ್ಕೆ ಹೊಂದಿಕೆಯಾಗುವಂತೆ ಸುಂದರವಾಗಿ ವಿನ್ಯಾಸಗೊಳಿಸಲಾಗಿದೆ. ಗ್ರಾಹರಿಗೆ ಮಾಲೀಕತ್ವದ ಅನುಭವವನ್ನು ಇನ್ನಷ್ಟು ಅದ್ಭುತವಾಗಿಸಲು, ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಗಾಗಿ ಪ್ರತ್ಯೇಕವಾಗಿ ವಿನ್ಯಾಸಗೊಳಿಸಲಾದ 66 ಅಕ್ಸೆಸೊರಿಗಳ ಕಸ್ಟಮೈಸ್ಡ್  ಶ್ರೇಣಿಯನ್ನು ನೀಡಲಿದೆ.

Latest Videos
Follow Us:
Download App:
  • android
  • ios