ಭಾರತೀಯ ಮಾರುಕಟ್ಟೆಯಲ್ಲಿ ಇವಿ ಬೇಡಿಕೆ ಹೆಚ್ಚಾಗಿದೆ. ಜನರು ಇವಿ ವಾಹನಗಳನ್ನು ಖರೀದಿ ಮಾಡಲು ಆಸಕ್ತಿ ತೋರುತ್ತಿದ್ದಾರೆ. ಜನರ ಆಸಕ್ತಿಗೆ ತಕ್ಕಂತೆ ವಾಹನ ಸೇಲ್ ಮಾಡ್ತಿರುವ ಕಂಪನಿಯೊಂದು ಮಾರ್ಕೆಟ್ ನಲ್ಲಿ ಅಬ್ಬರಿಸಲು ಶುರು ಮಾಡಿದೆ.

ಭಾರತೀಯ ಮಾರ್ಕೆಟ್ ನಲ್ಲಿ ಎಲೆಕ್ಟ್ರಿಕ್ ವಾಹನ (Electric vehicle)ಗಳ ಬೇಡಿಕೆ ದಿನ ದಿನಕ್ಕೂ ಹೆಚ್ಚಾಗ್ತಿದೆ. ಗ್ರಾಮೀಣ ಪ್ರದೇಶಗಳಿಗೆ ಹೋಲಿಕೆ ಮಾಡಿದ್ರೆ ಮಹಾನಗರಗಳ ಜನರು ಹೆಚ್ಚಿನ ಪ್ರಮಾಣದಲ್ಲಿ ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡ್ತಿದ್ದಾರೆ. ಟಾಟಾ ಮೋಟಾರ್ಸ್ (Tata Motors ) ನಂತರ ಎಂಜಿ ಮೋಟಾರ್ಸ್ (MG Motors) ಇವಿ ವಿಭಾಗದಲ್ಲಿ ಎರಡನೇ ಅತಿದೊಡ್ಡ ಹೆಸರಾಗಿದೆ. ಕಳೆದ ಕೆಲವು ತಿಂಗಳುಗಳಲ್ಲಿ, ಎಂಜಿ ಮೋಟಾರ್ಸ್ ಮಾರಾಟದ ವಿಷಯದಲ್ಲಿ ಟಾಟಾಗೆ ಕಠಿಣ ಸ್ಪರ್ಧೆ ನೀಡ್ತಿದೆ.

ಒಂದು ಲಕ್ಷ ಕಾರ್ ಸೇಲ್ ಮಾಡಿದ ಎಂಜಿ : 

ಎಂಜಿ ಮೋಟಾರ್ಸ್ ಇವಿ ಕ್ಷೇತ್ರದಲ್ಲಿ ಹೊಸ ದಾಖಲೆ ಬರೆದಿದೆ. ಕಂಪನಿ ಪ್ರಕಾರ, ಭಾರತೀಯ ಮಾರ್ಕೆಟ್ ನಲ್ಲಿ ಕಂಪನಿ ಒಂದು ಲಕ್ಷಕ್ಕೂ ಹೆಚ್ಚು ಇವಿ ಕಾರನ್ನು ಮಾರಾಟ ಮಾಡಿದೆ. 100,000 ಎಲೆಕ್ಟ್ರಿಕ್ ವಾಹನಗಳ ಮಾರಾಟದ ಗಡಿಯನ್ನು ದಾಟಿದ್ದೇವೆ. ಈಗ ಜನರು ಸುಸ್ಥಿರ ಆಯ್ಕೆಗಳನ್ನು ನಂಬುತ್ತಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿಯಾಗಿದೆ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಅನುರಾಗ್ ಮೆಹ್ರೋತ್ರಾ ಹೇಳಿದ್ದಾರೆ.

ತಂತ್ರಜ್ಞಾನದಲ್ಲಿ ಹೊಸ ಮೈಲಿಗಲ್ಲು: ವಿಪ್ರೋ ಮತ್ತು ಐಐಎಸ್‌ಸಿ ಸಹಯೋಗದ ಚಾಲಕರಹಿತ ಕಾರು ಅನಾವರಣ

ವೇಗವಾಗಿ ಬೆಳೆಯುತ್ತಿದೆ ಮಾರ್ಕೆಟ್ ಪಾಲು : 

ಎಲೆಕ್ಟ್ರಾನಿಕ್ ವಾಹನಗಳ ವಿಭಾಗದಲ್ಲಿ ಕಂಪನಿಯ ಮಾರುಕಟ್ಟೆ ಪಾಲು ಕೂಡ ವೇಗವಾಗಿ ಬೆಳೆದಿದೆ. 2024 ರ ಕ್ಯಾಲೆಂಡರ್ ವರ್ಷದಲ್ಲಿ ಶೇಕಡಾ 26 ರಷ್ಟಿದ್ದ ಮಾರ್ಕೆಟ್ ಪಾಲು ಈಗ ಶೇಕಡಾ 35 ಕ್ಕೆ ತಲುಪಿದೆ. ಕಂಪನಿ ವಾಹನಗಳ ಬೇಡಿಕೆ ಹೆಚ್ಚಾಗ್ತಿದ್ದಂತೆ ಕಂಪನಿ ತನ್ನ ಸೇವೆಯನ್ನು ವಿಸ್ತರಿಸ್ತಿದೆ. ಚಾರ್ಜರ್ ಪಾಯಿಂಟ್ ಮೇಲೆ ಗಮನ ನೀಡ್ತಿದೆ. ಎಂಜಿ ಚಾರ್ಜ್ ಅಭಿಯಾನದ ಅಡಿಯಲ್ಲಿ ಮುಂದಿನ 1,000 ದಿನಗಳಲ್ಲಿ 1,000 ಚಾರ್ಜರ್ಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ. ಕಂಪನಿ ಪ್ರಾಜೆಕ್ಟ್ ರಿವೈವ್ ಮೂಲಕ ಬಳಸಿದ ಇವಿ ಬ್ಯಾಟರಿಗಳನ್ನು ಮರುಬಳಕೆ ಮಾಡುತ್ತಿದೆ.

ಐದು ಎಲೆಕ್ಟ್ರಿಕ್ ಕಾರು ಮಾರಾಟ ಮಾಡ್ತಿದೆ ಕಂಪನಿ : 

ಭಾರತೀಯ ಮಾರುಕಟ್ಟೆಯಲ್ಲಿ ಉನ್ನತ ಸ್ಥಾನಕ್ಕೇರುತ್ತಿರುವ ಕಂಪನಿ, ಮಾರ್ಕೆಟ್ ನಲ್ಲಿ ಐದು ಕಾರುಗಳನ್ನು ಮಾರಾಟ ಮಾಡ್ತಿದೆ. ಕಂಪನಿ ಕಾರು 7.50 ಲಕ್ಷದಿಂದ ಪ್ರಾರಂಭವಾಗುತ್ತದೆ. 

90ರ ದಶಕದ ಟಾಟಾ ಸಿಯೆರಾ ಹೊಸ ಅವತಾರದಲ್ಲಿ ನವೆಂಬರ್‌ನಲ್ಲಿ ಲಾಂಚ್, ಬೆಲೆ ಎಷ್ಟು?

1.ಎಂಜಿ ಸೈಬ್ಸ್ಟರ್ : ಎಂಜಿ ಸೈಬ್ಸ್ಟರ್ ಭಾರತದ ಮೊದಲ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರು. ಇದು 77 kWh ಬ್ಯಾಟರಿಯನ್ನು ಹೊಂದಿದೆ. ಒಂದೇ ಚಾರ್ಜ್ನಲ್ಲಿಇದು 580 ಕಿ.ಮೀ. ದೂರ ಓಡುತ್ತದೆ. ಇದ್ರ ಬೆಲೆ 75 ಲಕ್ಷ. 

2.ಕಿಯಾ ಕಾರ್ನಿವಲ್ : ಕಿಯಾ ಕಾರ್ನಿವಲ್ನಂತಹ ಐಷಾರಾಮಿ MPVಗಳು 90 kWh ಬ್ಯಾಟರಿಯಿಂದ ನಿಯಂತ್ರಿಸಲ್ಪಡುತ್ತವೆ. ಈ ಎಲೆಕ್ಟ್ರಿಕ್ ಕಾರು ಒಂದೇ ಚಾರ್ಜ್ನಲ್ಲಿ 548 ಕಿ.ಮೀ.ವರೆಗೆ ಓಡುತ್ತದೆ. ಇದ್ರ ಬೆಲೆ 69.90 ಲಕ್ಷ. 

3.ಎಂಜಿ ಝಡ್ಎಸ್ ಇವಿ : ಇದು ಭಾರತೀಯ ಮಾರುಕಟ್ಟೆಗೆ ಬಂದ ಕಂಪನಿಯ ಮೊದಲ ಎಲೆಕ್ಟ್ರಿಕ್ ಕಾರು. ಇದು 50.3 kWh ಬ್ಯಾಟರಿ ಪ್ಯಾಕ್ ಹೊಂದಿದ್ದು, ಕಾರನ್ನು ಒಂದೇ ಚಾರ್ಜ್ನಲ್ಲಿ 461 ಕಿ.ಮೀ. ದೂರ ಕ್ರಮಿಸುತ್ತದೆ. ಇದರ ಬೆಲೆ 17.99 ಲಕ್ಷ ರೂಪಾಯಿ.

 4.ಎಂಜಿ ವಿಂಡ್ಸರ್ ಇವಿ : ಎಂಜಿ ವಿಂಡ್ಸರ್ ಇವಿ ಬೆಲೆ 12.65 ಲಕ್ಷ. ಇದು ಕಂಪನಿಯ ಅತಿ ಹೆಚ್ಚು ಮಾರಾಟವಾದ ಕಾರು. 5 ಆಸನಗಳ ಕಾರು 52.9 kWh ಬ್ಯಾಟರಿ ಪ್ಯಾಕ್ ಹೊಂದಿದೆ. ಇದು ಒಂದೇ ಚಾರ್ಜ್ನಲ್ಲಿ 449 ಕಿ.ಮೀ ವರೆಗೆ ಓಡುತ್ತದೆ. 

5.ಎಂಜಿ ಕಾಮೆಟ್ ಇವಿ : ಎಂಜಿ ಕಾಮೆಟ್ ಇವಿ ಬೆಲೆ 7.50 ಲಕ್ಷಕ್ಕೆ ಮಾರಾಟವಾಗ್ತಿದೆ. ಎಂಜಿಯ ಅತ್ಯಂತ ಅಗ್ಗದ ಎಲೆಕ್ಟ್ರಿಕ್ ಕಾರು ಇದಾಗಿದ್ದು, ಇದು 17.4 kWh ಬ್ಯಾಟರಿಯಿಂದ ನಿಯಂತ್ರಿಸಲ್ಪಡುತ್ತದೆ. ಈ ನಾಲ್ಕು ಆಸನಗಳ ಕಾರು ಒಂದೇ ಚಾರ್ಜ್ನಲ್ಲಿ 230 ಕಿ.ಮೀ ವರೆಗೆ ಓಡುತ್ತದೆ.