90ರ ದಶಕದ ಟಾಟಾ ಸಿಯೆರಾ ಹೊಸ ಅವತಾರದಲ್ಲಿ ನವೆಂಬರ್‌ನಲ್ಲಿ ಲಾಂಚ್, ಬೆಲೆ ಎಷ್ಟು?
90ರ ದಶಕದ ಟಾಟಾ ಸಿಯೆರಾ ಹೊಸ ಅವತಾರದಲ್ಲಿ ನವೆಂಬರ್‌ನಲ್ಲಿ ಲಾಂಚ್, ಬೆಲೆ ಎಷ್ಟು? ಈ ಕಾರಿನ ವಿಶೇಷತೆ ಏನು? ಈಗಾಗಲೇ ರೋಡ್ ಟೆಸ್ಟ್ ಪೂರ್ಣಗೊಳಿಸಿರುವ ಸಿಯೆರಾ ಅತ್ಯಾಕರ್ಷಕ ವಿನ್ಯಾಸ, ರೆಟ್ರೋ ಶೈಲಿಯಲ್ಲಿ ಬಿಡುಗಡೆಯಾಗುತ್ತಿದೆ.

ಹಳೇ ಟಾಟಾ ಸಿಯೆರಾ ಕಾರು, ಹೊಸ ಅವತಾರ
ಹಳೇ ವಾಹನಗಳನ್ನು ಹೊಸ ರೂಪದಲ್ಲಿ ಬಿಡುಗಡೆ ಮಾಡುವ ಟ್ರೆಂಡ್ ಹೊಸದೇನಲ್ಲ. ಈಗಾಗಲೇ ಹಲವು ಹಳೇ ವಾಹನಗಳು ಹೊಸ ಅವತಾರದಲ್ಲಿ ಬಿಡುಗಡೆಯಾಗಿದೆ. ಈ ಪೈಕಿ ಟಾಟಾ ಮೋಟಾರ್ಸ್ ಈಗಾಗಲೇ ಸಫಾರಿ ಕಾರನ್ನು ಬಿಡುಗಡೆ ಮಾಡಿ ಯಶಸ್ವಿಯಾಗಿದೆ. ಇದೀಗ ಟಾಟಾ 90ರ ದಶಕದಲ್ಲಿ ಭಾರಿ ಮೋಡಿ ಮಾಡಿದ್ದ ಟಾಟಾ ಸಿಯೆರಾ ಕಾರನ್ನು ಹೊಸ ಅವತಾರದಲ್ಲಿ ಬಿಡುಗಡೆ ಮಾಡುತ್ತಿದೆ.
ಫ್ಯುಯೆಲ್ ಎಂಜಿನ್ ಕಾರು ಬಿಡುಗಡೆ ಬಳಿಕ ಎಲೆಕ್ಟ್ರಿಕ್
ಅತ್ಯಾಕರ್ಷಕ ಟಾಟಾ ಸಿಯೆರಾ ಕಾರು ನವೆಂಬರ್ ಅಂದರೆ ಮುಂದಿನ ತಿಂಗಳು ಬಿಡುಗಡೆಯಾಗಲಿದೆ. ಆರಂಭದಲ್ಲಿ ಟಾಟಾ ಸಿಯೆರಾ ಐಸಿಇ ಎಂಜಿನ್ (ಫ್ಯುಯೆಲ್ ) ಕಾರು ಬಿಡುಗಡೆಯಾಗಲಿದೆ. ಬಳಿಕ ಟಾಟಾ ಸಿಯೆರಾ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗಲಿದೆ. ಹೀಗಾಗಿ ಕಾರು ಪ್ರಿಯರು ಕುತೂಹಲ ಹೆಚ್ಚಾಗಿದೆ.
ಟಾಟಾ ಸಿಯೆರಾ ಕಾರಿನ ಬೆಲೆ ಎಷ್ಟು?
ಟಾಟಾ ಸಿಯೆರಾ ಕಾರಿನ ಅಧಿಕೃತ ಬೆಲೆ ಇನ್ನೂ ಬಹಿರಂಗವಾಗಿಲ್ಲ,ಹೊಸ ಸಿಯೆರಾ ಕಾರಿನ ಬೆಲೆ 12 ರಿಂದ 20 ಲಕ್ಷ ರೂಪಾಯಿ ಇರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಇನ್ನು ಟಾಟಾ ಸಿಯೆರಾ ಎಲೆಕ್ಟ್ರಿಕ್ ಕಾರಿನ ಬೆಲೆ 18 ರಿಂದ 24 ಲಕ್ಷ ರೂಪಾಯಿ ವರೆಗೆ ಇರಲಿದೆ ಎಂದು ಅಂದಾಜಿಸಲಾಗಿದೆ. ಎರಡೂ ಎಕ್ಸ್ ಶೋ ರೂಂ ಬೆಲೆ.
ಟಾಟಾ ಸಿಯೆರಾ ಕಾರಿನ ಬೆಲೆ:
12 ರಿಂದ 18 ಲಕ್ಷ ರೂಪಾಯಿ
ಟಾಟಾ ಸಿಯೆರಾ ಯಾವ ಕಾರಿಗೆ ಪ್ರತಿಸ್ಪರ್ಧಿ?
ಟಾಟಾ ಸಿಯೆರಾ ಯಾವ ಕಾರಿಗೆ ಪ್ರತಿಸ್ಪರ್ಧಿ?
ಟಾಟಾ ಸಿಯೆರಾ ಕಾರಿನ ಸೈಜ್, ಸದ್ಯ ಮಾರುಕಟ್ಟೆಯಲ್ಲಿರುವ ಟಾಟಾ ಹ್ಯಾರಿಯರ್‌ಗೆ ಸಮ. ಹೊಸ ಸಿಯೆರಾ ಕಾರು ಹ್ಯುಂಡೈ ಕ್ರೆಟಾ, ಮಾರುತಿ ಸುಜುಕಿ ಗ್ರ್ಯಾಂಡ್ ವಿಟೆರಾ, ಮಾರುತಿ ಸುಜಿಕಿ ವಿಕ್ಟೋರಿಸ್ ಸೇರಿದಂತೆ ಮಿಡ್ ಸೈಝ್ ಎಸ್‌ಯುವಿ ಕಾರಿಗೆ ಪ್ರತಿಸ್ಪರ್ಧಿಯಾಗಿದೆ.
ಟಾಟಾ ಸಿಯೆರಾ ಎಂಜಿನ್
ಟಾಟಾ ಸಿಯೆರಾ ಎಂಜಿನ್
ಟಾಟಾ ಸಿಯೆರಾ ಐಸಿಇ ಎಂಜಿನ್ ಎರಡು ವೇರಿಯೆಂಟ್‌ನಲ್ಲಿ ಲಭ್ಯವಿದೆ. 1.5 ಲೀಟರ್ ನ್ಯಾಚುರಲ್ ಆಸ್ಪೈರ್ಡ್ ಹಾಗೂ 1.5 ಲೀಟರ್ 4 ಸಿಲಿಂಡರ್ ಟರ್ಬೋಚಾರ್ಜ್ ಎಂಜಿನ್ ಲಭ್ಯವಾಗಲಿದೆ.ಟರ್ಬೋ ಪೆಟ್ರೋಲ್ ಎಂಜಿನ್ 170 ಹೆಚ್‌ಪಿ ಪವರ್ ಹಾಗೂ 280 ಎನ್ಎಂ ಟಾರ್ಕ್ ಉತ್ಪಾದಿಸಲಿದೆ. ಎರಡೂ ಎಂಜಿನ್‌ಗಳು ಇ20 ಇಂಧನ ಬೆಂಬಲಿಸುತ್ತದೆ. ಇನ್ನು ಡೀಸೆಲ್ ವೇರಿಯೆಂಟ್ 2.0 ಲೀಟರ್ ಎಂಜಿನ್ ಹೊಂದಿರುವ ಸಾಧ್ಯತೆ ಇದೆ.
ಅಡಾಸ್ ಸೇರಿ ಅತ್ಯಾಧುನಿಕ ತಂತ್ರಜ್ಞಾನ
ಅಡಾಸ್ ಸೇರಿ ಅತ್ಯಾಧುನಿಕ ತಂತ್ರಜ್ಞಾನ
ಹೊಸ ಟಾಟಾ ಸಿಯೆರಾ ಅಡಾಸ್ ಲೆವೆಲ್ 2 ಸೇರಿದಂತೆ ಹಲವು ಅತ್ಯಾಧುನಿಕ ಫೀಚರ್ಸ್ ಲಭ್ಯವಿದೆ. 360 ಡಿಗ್ರಿ ಕ್ಯಾಮೆರಾ, ಫ್ರಂಟ್ ಪಾರ್ಕಿಂಗ್ ಸೆನ್ಸರ್, ಟ್ರಿಪಲ್ ಸ್ಕ್ರೀನ್ ಡ್ಯಾಶ್‌ಬೋರ್ಡ್, ವೆಂಟಿಲೇಟರ್ ಹಾಗೂ ಪವರ್ ಫ್ರಂಟ್ ಸೀಟ್, 6 ಏರ್‌ಬ್ಯಾಕ್, ಇಎಸ್‌ಪಿ, ಟ್ರಾಕ್ಷನ್ ಕಂಟ್ರೋಲ್, ಹಿಲ್ ಡಿಸೆಂಟ್ ಸೇರಿದಂತೆ ಹಲವು ಪ್ರೀಮಿಯಂ ಫೀಚರ್ಸ್ ಲಭ್ಯವಿದೆ.