ಮೊದಲ ಬಾರಿಗೆ ಕಾರು ಖರೀದಿಸುತ್ತಿದ್ದೀರಾ? ಎಚ್ಚರಿಕೆ ಅತೀ ಅಗತ್ಯ!
- ವಾಹನ ಬೆಲೆ ಏರಿಕೆ, ದುಬಾರಿಯಾಗಲಿಗೆ ಕಾರು
- ಇಂಧನ ದರ ದುಪ್ಪಟ್ಟು, ಓಡಾಟ ನಿರ್ವಹಣೆ ಕಷ್ಟ
- ಬಡ್ಡಿದರ, ವಿಮೆ ಸೇರಿದಂತೆ ನೂರೆಂಟು ದರ ಏರಿಕೆ
ನವದೆಹಲಿ(ಜೂ.03): ಹೊಸ ಕಾರು ಖರೀದಿಸಬೇಕು ಅನ್ನೋದು ಹಲವರ ಕನಸು. ಇದಕ್ಕಾಗಿ ಅವಿರತ ಪ್ರಯತ್ನ,ಹಗಲು ರಾತ್ರಿ ದುಡಿಮೆ ಮಾಡಿ ಹೊಸ ವಾಹನ ಖರೀದಿಸುತ್ತಾರೆ. ಆದರೆ ಸದ್ಯ ಹೊಸ ವಾಹನ ಖರೀದಿ ಸುಲಭದ ಮಾತಲ್ಲ. ಕಾರಣ ವಾಹನ ಬೆಲೆ ಏರಿಕೆಯಾಗಿದೆ. ಬಡ್ಡಿ ದರ ಏರಿಕೆಯಾಗಿದೆ. ವಿಮೆ, ಇಂಧನ ದರ ಎಲ್ಲವೂ ಏರಿಕೆಯಾಗಿದೆ.
ಕಚ್ಚಾವಸ್ತುಗಳ ಬೆಲೆ ಏರಿಕೆ, ಆಮದು ಸುಂಕ ಸೇರಿದಂತೆ ಹಲವು ಕಾರಣಗಳಿಂದ ಭಾರತದಲ್ಲಿ ಬಹುತೇಕ ಎಲ್ಲಾ ಕಾರು ಕಂಪನಿಗಳು 2022ರಲ್ಲಿ ಎರಡೆರಡು ಬಾರಿ ಬೆಲೆ ಏರಿಕೆ ಮಾಡಿದೆ. ಇದೀಗ ಮತ್ತೊಂದು ಸುತಿನ ಬೆಲೆ ಏರಿಕೆಯಾಗುತ್ತಿದೆ. ಕಾರಿನ ಎಕ್ಸ್ ಶೋ ರೂಂ ಬೆಲೆ ಇದೀಗ ದುಬಾರಿಯಾಗಿದೆ. ಕಡಿಮೆ ಬೆಲೆಗೆ ಸಿಗುತ್ತಿದ್ದ ಕಾರುಗಳು ಇದೀಗ ಕೈಗೆಟುಕುತ್ತಿಲ್ಲ.
Maruti Eeco , ಅತೀ ಕಡಿಮೆ ಬೆಲೆಯ MPV ಕಾರು ಶೀಘ್ರದಲ್ಲೇ ಬಿಡುಗಡೆ!
ಥರ್ಡ್ ಪಾರ್ಟಿ ವಿಮೆ ದುಬಾರಿ
ಹೊಸ ಬೈಕು ಅಥವಾ ಕಾರು ಖರೀದಿ ಜೂನ್ 1 ದುಬಾರಿಯಾಗಿದೆ. ಥರ್ಡ್ ಪಾರ್ಟಿ ಮೋಟಾರ್ ವಿಮೆಯನ್ನು ಹೆಚ್ಚಿಸಲಾಗಿದೆ. ರಸ್ತೆ ಮತ್ತು ಸಾರಿಗೆ ಸಚಿವಾಲಯ ಈಗಾಗಲೇ ಘೋಷಣೆ ಮಾಡಿದೆ. ಇದರಿಂದಾಗಿ ಗ್ರಾಹಕರು ಕಾರು ಅಥವಾ ಬೈಕು ಕೊಳ್ಳಲು ಶೇ.17ರಿಂದ 23ರಷ್ಟುಹೆಚ್ಚುವರಿ ಹಣ ನೀಡಬೇಕಾಗುತ್ತದೆ.
ಇಂಧನ ದರ ಏರಿಕೆ
ಕೇಂದ್ರ ಸರ್ಕಾರ ಇಂಧನ ಮೇಲಿನ ಅಬಕಾರಿ ಸುಂಕ ಎರಡು ಬಾರಿ ಇಳಿಕೆ ಮಾಡಲಾಗಿದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯದಳು ಬೆಲೆ ಇಳಿಕೆ ಮಾಡಿದೆ. ಆದರೂ ಪೆಟ್ರೋಲ್ ಬೆಲೆ 100ಗಿಂತ ಕಡಿಮೆಯಾಗಿಲ್ಲ. ಕಾರು ನಿರ್ವಹಣೆ ದುಪ್ಪಟ್ಟಾಗಿದೆ. ಪ್ರಯಾಣದ ವೆಚ್ಚ ಅತೀಯಾಗಿದೆ.
ಕಾರಿನ ಅಗತ್ಯತೆ, ಪ್ರಯಾಣದ ದೂರ, ಬಜೆಟ್, ಆದಾಯ, ಸಾಲ ಎಲ್ಲವನ್ನೂ ಅಳೆದು ತೂಗಿ ಕಾರು ಖರೀದಿಸಬೇಕು. ಇದರಲ್ಲಿ ಯಾವುದಾದರೂ ಒಂದು ನಿರ್ಲಕ್ಷ್ಯಿಸಿದರೂ ಅಪಾಯ ಖಚಿತ. ಕಾರು ಖರೀದಿಗೆ ಸುಲಭವಾಗಿ ಸಾಲ ಸಿಗಲಿದೆ. ಆದರೆ ಬಡ್ಡಿದರ, ಅವಧಿ ಎಲ್ಲವನ್ನೂ ಲೆಕ್ಕ ಹಾಗಿ ಬರುವ ಆದಾಯದಲ್ಲಿ ಹೊಂದಿಸಲು ಸಾಧ್ಯವಾದರೆ ಒಳಿತು.
Kia ಮಾರಾಟ ಶೇ.69ರಷ್ಟು ಏರಿಕೆ: ಜೂ.2ಕ್ಕೆ ಕಿಯಾ ಇವಿ6 ಬಿಡುಗಡೆ
ಮಾರುತಿ, ಮಹೀಂದ್ರಾ ವಿವಿಧ ಮಾದರಿ ಕಾರು ಬೆಲೆ ಭರ್ಜರಿ ಹೆಚ್ಚಳ
ಭಾರತದ ಅತಿದೊಡ್ಡ ಕಾರು ತಯಾರಕ ಕಂಪನಿ ಸುಝುಕಿ ಇಂಡಿಯಾ ತನ್ನ ಕಾರುಗಳ ಬೆಲೆಯನ್ನು ಶೇ.4.3ರವರೆಗೂ ಹೆಚ್ಚಿಸಿದೆ. ಮತ್ತೊಂದೆಡೆ ಮಹೀಂದ್ರಾ ಕಂಪನಿ ಕೂಡಾ ವಿವಿಧ ಮಾದರಿಯ ಕಾರುಗಳ ಬೆಲೆಯಲ್ಲಿ ಗಣನೀಯ ಏರಿಕೆ ಮಾಡಿದೆ. ಕಚ್ಚಾ ವಸ್ತುಗಳ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಬೆಲೆ ಏರಿಕೆ ಅನಿವಾರ್ಯ ಎಂದು ಎರಡೂ ಕಂಪನಿಗಳು ಹೇಳಿವೆ. ಮಾರುತಿ ಸುಝುಕಿ ಇಂಡಿಯಾ, ಆಲ್ಟೋದಿಂದ ಎಸ್-ಕ್ರಾಸ್‌ನಂತಹ ವಿವಿಧ ಶ್ರೇಣಿಯ ಕಾರನ್ನು 3.15 ಲಕ್ಷದಿಂದ 12.56 ಲಕ್ಷ ರು ವ್ಯಾಪ್ತಿಯಲ್ಲಿ ಮಾರಾಟ ಮಾಡುತ್ತದೆ. ಕಂಪನಿ ಜನವರಿಯಲ್ಲಿ ಶೇ. 1.4, ಏಪ್ರಿಲ್‌ನಲ್ಲಿ ಶೇ. 1.6 ಹಾಗೂ ಸೆಪ್ಟೆಂಬರ್‌ನಲ್ಲಿ ಶೇ. 1.9 ಒಟ್ಟು ಶೇ. 4.9 ರಷ್ಟುಬೆಲೆಯಲ್ಲಿ ಏರಿಕೆ ಮಾಡಿತ್ತು. ಇದೀಗ ನಾಲ್ಕನೇ ಬಾರಿ ಹೆಚ್ಚಳ ಮಾಡಿದೆ.
ಮತ್ತೊಂದೆಡೆ ಮಹೀಂದ್ರಾ ಕಂಪನಿ, 2021ರಲ್ಲಿ ಅತೀ ಹೆಚ್ಚು ಬೇಡಿಕೆ ಗಿಟ್ಟಿಸಿದ್ದ ಎಕ್ಸ್‌ಯುವಿ 700 ಡೀಸೆಲ್ ಕಾರುಗಳ ಬೆಲೆಯನ್ನು 41 ಸಾವಿರದಿಂದ 81,000 ದವರೆಗೆ ಹೆಚ್ಚಿಸಿದ್ದು, 12.99 ಲಕ್ಷ ಇದ್ದ ಬೆಲೆ ಈಗ 13.47 ಲಕ್ಷಗಳಿಗೆ ಹೆಚ್ಚಾಗಿದೆ. ಇನ್ನು ಥಾರ್ ಡೀಸೆಲ್ ಕಾರುಗಳ ಬೆಲೆ 44,000 ದವರೆಗೆ ಹೆಚ್ಚಳವಾಗಿದ್ದು, 12.99 ಲಕ್ಷ ಇದ್ದ ಬೆಲೆ ಈಗ 13.38 ಲಕ್ಷಕ್ಕೆ ಏರಿಕೆಯಾಗಿದೆ. ಉಳಿದಂತೆ ಸ್ಕಾರ್ಪಿಯೋ ಕಾರುಗಳ ಬೆಲೆ 41000-53000 ದವರೆಗೆ ಹೆಚ್ಚಳವಾಗಿದೆ.