ಅತೀ ಕಡಿಮೆ ಬೆಲೆಯ 7 ಸೀಟರ್ ಕಾರು ಮಾರುತಿ ಇಕೋ ಸದ್ಯ ಮಾರುಕಟ್ಟೆಯಲ್ಲಿರುವ ಇಕೋ ಸ್ಥಗಿತ, ಹೊಸ ಕಾರು ಬಿಡುಗಡೆ ದೀಪಾವಳಿ ವೇಳೆಗೆ ಹೊಸ ಜನರೇಶ್ ಕಾರು ಮಾರುಕಟ್ಟೆಗೆ

ನವದೆಹಲಿ(ಜೂ.01): ಮಾರುತಿ ಒಮ್ಮಿ ಬದಲಿ ಕಾರು ಎಂದೆ ಜನಪ್ರಿಯವಾಗಿರುವ ಇಕೋ ಭಾರತದಲ್ಲಿ ಲಭ್ಯವಿರುವ ಅತೀ ಕಡಿಮೆ ಬೆಲೆಯ 7 ಸೀಟರ್ ಕಾರಾಗಿದೆ. ಒಮ್ನಿ ರೀತಿಯಲ್ಲಿ ಇದೀಗ ಮಾರುತಿ ಇಕೋ ಜನಪ್ರಿಯತೆ ಪಡೆದುಕೊಂಡಿದೆ. ಯಶಸ್ಸಿನ ಅಲೆಯಲ್ಲಿರುವ ಇಕೋ ಇದೀಗ ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ. 

ನೂತನ ಮಾರುತಿ ಇಕೋ ಕಾರಿನಲ್ಲಿ ಮಹತ್ತರ ಬದಲಾವಣೆ ಮಾಡಲಾಗಿದೆ. ಹೆಡ್‌ಲ್ಯಾಂಪ್ಸ್ ಹಾಗೂ ಟೈಲ್‌ಲ್ಯಾಂಪ್ಸ್ ವಿನ್ಯಾಸ ಬದಲಾಯಿಸಲಾಗಿದೆ. ಬಂಪರ್ ವಿನ್ಯಾಸದಲ್ಲೂ ಬದಲಾವಣೆ ಮಾಡಲಾಗಿದ್ದು, ಹೊಸ ಶೈಲಿಯಲ್ಲಿ ಕಾರು ಬಿಡುಗಡೆಯಾಗಲಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಇಕೋ ಕಾರಿನ ಬೆಲೆ 4.63 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ನೂತನ ಕಾರಿನ ಬೆಲೆ ಕೊಂಚ ಏರಿಕೆಯಾಗುವ ಸಾಧ್ಯತೆ ಇದೆ.

ಕೇವಲ ವಿನ್ಯಾಸದಲ್ಲಿ ಮಾತ್ರವಲ್ಲ ಹೆಚ್ಚುವರಿ ಫೀಚರ್ಸ್ ಸೇರಿಸಲಾಗಿದೆ. ಇಂಟೀರಿಯರ್ ಕಲರ್ ಕೂಡ ಬದಲಾಯಿಸಲಾಗಿದೆ. ಸೀಟು ಸಾಮರ್ಥ್ಯದಲ್ಲಿ ಬದಲಾವಣೆ ಇಲ್ಲ, 5 ರಿಂದ 7 ಸೀಟನ್ ಸಾಮರ್ಥ್ಯ ಹೊಂದಿರಲಿದೆ.

ಸಣ್ಣ ಕಾರುಗಳಿಗೆ ಆರು ಏರ್‌ಬ್ಯಾಗ್ ನಿಯಮದ ಸಂಕಷ್ಟ!

ಕಾರಿನ ಎಂಜಿನ್ 1.2 ಲೀಟರ್ ಕೆ ಸೀರಿಸ್ ಎಂಜಿನ್ ಬಳಸಲಾಗಿದೆ. ಇದು ವಿವಿಟಿ ಡ್ಯುಯೆಲ್ ಪೆ
ಟ್ರೋಲ್ ಎಂಜಿನ್ ಆಗಿದೆ. ಮಾರಿತಿ ಬಲೆನೋ, ವ್ಯಾಗನರ್, ಸ್ವಿಫ್ಟ್ ಕಾರಿನಲ್ಲೂ ಇದೆ ಎಂಜಿನ್ ಬಳಸಲಾಗಿದೆ. ಬಿಎಸ್6 ಎಮಿಷನ್ ಎಂಜಿನ್ ಹಾಗೂ 89BHP ಪವರ್ ಹಾಗೂ 113 NM ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 5 ಸ್ಪೀಡ್ ಮಾನ್ಯುಯೆಲ್ ಟ್ರಾನ್ಸ್‌ಮಿಶನ್ ಹೊಂದಿದೆ.

ಮಾರುತಿ ಓಮ್ನಿಗೆ ಬದಲು ಬಂದ ಇಕೋ
ಮಾರುತಿ ಇಕೋ ಕಾರು ಓಮ್ನಿ ಕಾರಿಗೆ ಬದಲಿಯಾಗಿ ಮಾರುಕಟ್ಟೆ ಪ್ರವೇಶ ಮಾಡಿತ್ತು. ಓಮ್ನಿ ಕಾರು ಗರಿಷ್ಠ ಮಾರಾಟ ದಾಖಲೆ ಇರುವಾಗಲೇ ಇಕೋ ಬಿಡುಗಡೆಯಾಗಿತ್ತು. ಬಳಿಕ ಓಮ್ನಿ ಮಾರಾಟ ದಾಖಲೆ ಹಿಂದಿಕ್ಕಿತ್ತು. ಇತ್ತ ಓಮ್ಮಿ 2020ರಲ್ಲಿ ಸ್ಥಗಿತಗೊಂಡಿತು.

2020ರಿಂದ ಮಾರುತಿ ಓಮ್ನಿ ಕಾರು ಸ್ಥಗಿತ
2020ರ ವೇಳೆಗೆ ಎಲ್ಲಾ ವಾಹನಗಳೂ ಕನಿಷ್ಠ ಸುರಕ್ಷತಾ ಮಾನದಂಡಗಳನ್ನು ಪಾಲಿಸುವುದನ್ನು ಕೇಂದ್ರ ಸರ್ಕಾರ ಕಡ್ಡಾಯ ಮಾಡಿದೆ. ಅಂದರೆ ಅಪಘಾತದ ವೇಳೆ ವಾಹನ ಒಳಗಿನ ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ಒದಗಿಸುವುದು ಈ ಮಾನದಂಡ ಉದ್ದೇಶ. ಆದರೆ ಮಾರುತಿ ಓಮ್ನಿ ಕಾರಿನ ಮುಂಭಾಗ ಅತ್ಯಂತ ನೇರವಾಗಿದ್ದು, ಅಪಘಾತದ ಸಂದರ್ಭದಲ್ಲಿ ಕಾರಿನ ಒಳಗಿದ್ದವರಿಗೆ ಯಾವುದೇ ಸುರಕ್ಷತೆ ಇರದು. ಹೊಸ ಮಾನದಂಡ ಅಳವಡಿಸಲು ಓಮ್ನಿ ಮಾಡೆಲ್‌ನಲ್ಲಿ ಸಾಧ್ಯವಿಲ್ಲ. ಹೀಗಾಗಿ ಈ ಮಾಡೆಲ್‌ ಅನ್ನೇ ಸ್ಥಗಿತಗೊಳಿಸಲು ಕಂಪನಿ ನಿರ್ಧರಿಸಿದೆ.

ಮಾರುತಿ ಸಿಎನ್‌ಜಿ ಕಾರುಗಳಿಗೆ ಭಾರಿ ಬೇಡಿಕೆ: ವಿತರಣೆಗೆ ಕಾಯುತ್ತಿದ್ದಾರೆ 1.29 ಲಕ್ಷ ಗ್ರಾಹಕರು

1983ರಲ್ಲಿ ಭಾರತ ಮತ್ತು ಜಪಾನ್‌ ಸಹಕಾರದಲ್ಲಿ ಆರಂಭವಾಗಿದ್ದ ಕಂಪನಿಯು ಮಾರುತಿ 800 ಕಾರುಗಳನ್ನು ಬಿಡುಗಡೆ ಮಾಡಿತ್ತು. 1984ರಲ್ಲಿ ಮಾರುತಿ ಸುಝುಕಿ ಕಂಪನಿಯ ಎರಡನೇ ಉತ್ಪನ್ನವಾಗಿ ಮಾರುತಿ ವ್ಯಾನ್‌ ಬಿಡುಗಡೆಯಾಗಿತ್ತು. 1998ರಲ್ಲಿ ಕಾರಿನ ಹೆಸರನ್ನು ಮಾರುತಿ ಓಮ್ನಿ ಎಂದು ಬದಲಾಯಿಸಲಾಗಿತ್ತು. ಕಳೆದ 34 ವರ್ಷಗಳಲ್ಲಿ ಓಮ್ನಿ ಕಾರುಗಳು, ನಂತರದ 34 ವರ್ಷಗಳಲ್ಲಿ ದೇಶದ ರಸ್ತೆಯನ್ನು ಬಹುವಾಗಿ ಆಳಿತ್ತು. ಕಳೆದ 34 ವರ್ಷಗಳಲ್ಲಿ ಮೂಲ ಕಾರಿನ ಮಾದರಿಯಲ್ಲಿ ಕೇವಲ 2 ಬಾರಿ ಮಾತ್ರ ಬದಲಾವಣೆ ಮಾಡಲಾಗಿತ್ತು. 1998ರಲ್ಲಿ ಹೆಡ್‌ಲ್ಯಾಂಪ್‌ ಮತ್ತು 2005ರಲ್ಲಿ ಕಾರಿನ ಮುಂಭಾಗ ಮತ್ತು ಡ್ಯಾಶ್‌ಬೋರ್ಡ್‌ನಲ್ಲಿ ಸಣ್ಣ ಬದಲಾವಣೆ ಮಾಡಲಾಗಿತ್ತು.

 ಇದೇ ವೇಳೆ, ಮಾರುತಿ ಇಕೋ ಹಾಗೂ ಆಲ್ಟೋ-800 ಕಾರುಗಳಲ್ಲಿ ಕೂಡ ಸುರಕ್ಷತೆಗೆ ಸಂಬಂಧಿಸಿದ ದೋಷಗಳಿತ್ತು. ಆದರೆ ಹೊಸ ಮಾನದಂಡ ಪ್ರಕಾರ ನೂತನ ಇಕೋ ಬಿಡುಗಡೆ ಮಾಡಲಾಗಿದೆ