Asianet Suvarna News Asianet Suvarna News

ಬೆಂಗಳೂರಿನಲ್ಲಿ ಹೊಚ್ಚ ಹೊಸ BMW X1 ಕಾರು ಬಿಡುಗಡೆ, ಅತ್ಯಾಕರ್ಷಕ ಬೆಲೆ!

ಅತೀ ಕಡಿಮೆ ನಿರ್ವಹಣೆ ವೆಚ್ಚ, ಗರಿಷ್ಠ ಮೈಲೇಜ್, ಅತ್ಯಾಕರ್ಷಕ ಬೆಲೆಯೊಂದಿಗೆ BMW X1 ಕಾರು ಬಿಡುಗಡೆಯಾಗಿದೆ. ಬೆಂಗಳೂರಿನಲ್ಲಿ ಈ ಕಾರನ್ನು ಬಿಡುಗಡೆ ಮಾಡಲಾಗಿದೆ. ಹೊಸ ಕಾರಿನ ವಿಶೇಷತೆ ಹಾಗೂ ಇತರ ಮಾಹಿತಿ ಇಲ್ಲಿದೆ. 

Third generation of the BMW X1 sports activity vehicle launched in India ckm
Author
First Published Jan 29, 2023, 6:01 PM IST

ಬೆಂಗಳೂರು(ಜ.29) BMW ಇಂಡಿಯಾ ಆಲ್-ನ್ಯೂ BMW X1 ಸ್ಪೋರ್ಟ್ಸ್ ಆಕ್ಟಿವಿಟಿ ವೆಹಿಕಲ್ ಬಿಡುಗಡೆಯಾಗಿದೆ.  ಪೆಟ್ರೋಲ್ ಮತ್ತು ಡೀಸೆಲ್ ವೇರಿಯಂಟ್‌ಗಳಲ್ಲಿ ನೂತನ ಕಾರು ಬಿಡುಗಡೆಯಾಗಿದೆ. ಬೆಂಗಳೂರಿನಲ್ಲಿ ಆಯೋಜಿಸಿದ್ದ ಅದ್ಧೂರಿ ಕಾರ್ಯಕ್ರಮದಲ್ಲಿ ನೂತನ ಕಾರು ಬಿಡುಗಡೆ ಮಾಡಲಾಗಿದೆ.  ವಿಶೇಷ ಅಂದರೆ ಈ ಕಾರು ಸಂಪೂರ್ಣವಾಗಿ ಮೇಡ್ ಇನ್ ಇಂಡಿಯಾ ಕಾರಾಗಿದೆ. ಚೆನ್ನ ಘಟಕದಲ್ಲಿ BMW X1 ಕಾರು ಉತ್ಪಾದನೆ ಮಾಡಲಾಗಿದೆ.  BMW ಭಾರತದ ಅಧ್ಯಕ್ಷ ವಿಕ್ರಮ್ ಪವಾಹ್ ನೂತನ ಕಾರನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದರು.  

BMW X1 sಡ್ರೈವ್ 18iX ಲೈನ್(ಪೆಟ್ರೋಲ್): 45,90,000 ರೂಪಾಯಿ(ಎಕ್ಸ್ ಶೋ ರೂಂ)
BMW X1 sಡ್ರೈವ್ 18dM ಸ್ಪೋರ್ಟ್ಸ್ (ಡೀಸೆಲ್): 47,90,000 ರೂಪಾಯಿ(ಎಕ್ಸ್ ಶೋ ರೂಂ)

ಭಾರತದಲ್ಲಿ ಅಭಿವೃದ್ಧಿಪಡಿಸಿ ಉತ್ಪಾದಿಸಿದ BMW G 310 RR ಬೈಕ್ ಬಿಡುಗಡೆ!

BMW X1 ಈ ಸೆಗ್ಮೆಂಟ್‌ನಲ್ಲಿ ಬೆಸ್ಟ್-ಸೆಲ್ಲರ್ ಆಗಿ ಉಳಿದಿದ್ದು ಅದಕ್ಕೆ ಅನುಕೂಲ ಮತ್ತು ಐಷಾರಾಮಿ ಶ್ರೇಷ್ಠ ಸಂಯೋಜನೆ ಕಾರಣ. ತಮ್ಮ ಕನಸುಗಳನ್ನು ಅನ್ವೇಷಿಸಲು ಬಯಸುವ ವ್ಯಕ್ತಿಗಳಿಗೆ ಮತ್ತು ನಿಯಮಗಳಿಗೆ ಸವಾಲೆಸೆಯುವ ಇದು ಸಹಜ ಹೊಂದಿಕೆಯಾಗಿದ್ದು ಇದು ಸಂಪ್ರದಾಯವನ್ನು ಮುರಿಯುತ್ತದೆ ಮತ್ತು ಪ್ರತಿಯೊಂದರ ಮೂಲಕವೂ ಮೀರಿಸುತ್ತದೆ. ಆಲ್-ನ್ಯೂ  ಃಒW ಘಿ೧ ತನ್ನ ವರ್ಗದಲ್ಲಿ ಶಕ್ತಿಯುತ ನಿರ್ಮಾಣ ಮತ್ತು ಅನನ್ಯ ಮಸ್ಕುಲರ್ ವಿನ್ಯಾಸದಿಂದ ಸ್ಟೇಟ್‌ಮೆಂಟ್ ರೂಪಿಸಿದೆ. ಒಳಾಂಗಣವು ಪರಿಣಾಮಕಾರಿಯಾಗಿ ಮಾಡ್ರನ್ ಮತ್ತು ಡಿಜಿಟಲ್ ಆಗಿದ್ದು ಸುಧಾರಿತ ಕನೆಕ್ಟಿವಿಟಿ ಮತ್ತು ಉನ್ನತ ಸುಲಭ ಬಳಕೆ ಹೊಂದಿದೆ. ಈ ಎಲ್ಲವೂ ಅತ್ಯಂತ ಚುರುಕಿನ ಲಕ್ಷುರಿ ಸ್ಪೋರ್ಟ್ಸ್ ಆಕ್ಟಿವಿಟಿ ವೆಹಿಕಲ್  BMW X1 ಆಗಿದೆ ಎಂದು BMW ಗ್ರೂಪ್ ಇಂಡಿಯಾ ಅಧ್ಯಕ್ಷ ವಿಕ್ರಮ್ ಪವಾಹ್ ಹೇಳಿದ್ದಾರೆ.  

ಥರ್ಡ್-ಜನರೇಷನ್ BMW X1 ಲಕ್ಷುರಿ ಕಾರು ಹಲವು ವಿಶೇಷತೆಗಳನ್ನು ಹೊಂದಿದೆ, ಅವುಗಳಲ್ಲಿ ಬಹುತೇಕ ಬೆಸ್ಟ್-ಇನ್ ಕ್ಲಾಸ್ ಅಥವಾ ಸೆಗ್ಮೆಂಟ್‌ನಲ್ಲೇ ಮೊದಲಾಗಿದೆ. ಹೊಸ ಪ್ರಮುಖಾಂಶಗಳಲ್ಲಿ ಅಡಾಪ್ಟಿವ್ LED ಹೆಡ್‌ಲೈಟ್ಸ್ ಹೈ ಬೀಮ್ ಅಸಿಸ್ಟೆಂಟ್‌ನೊಂದಿಗೆ, ಲೈವ್ ಕಾಕ್‌ಪಿಟ್ ಪ್ಲಸ್ BMW ಕರ್ವ್ಡ್ ಡಿಸ್‌ಪ್ಲೆ.  ಮೈ BMW ಆ್ಯಪ್ ರಿಮೋಟ್ ಫಂಕ್ಷನ್ ಜೊತೆಗೆ ಕಂಫರ್ಟ್ ಅಕ್ಸೆಸ್‌ ಹೊಂದಿದೆ.  ಡಿಜಿಟಲ್ ಕೀ ಪ್ಲಸ್, ಪಾರ್ಕಿಂಗ್ ಮತ್ತು ರಿವರ್ಸಿಂಗ್ ಅಸಿಸ್ಟೆಂಟ್, ಆಕ್ಟಿವ್ ಸೀಟ್ಸ್, ಇನ್ಸ್ಟ್ರುಮೆಂಟ್ ಪ್ಯಾನೆಲ್ ಲಕ್ಷುರಿ, ಹರ್ಮನ್ ಕಾರ್ಡನ್ ಆಡಿಯೊ ಸಿಸ್ಟಂ ಮತ್ತಿತರೆ ಒಳಗೊಂಡಿದೆ. ಸೇರಿದಂತೆ ಹಲವು ವಿಶೇಷತೆ ಒಳಗೊಂಡಿದೆ. 

ಸರ್ವೀಸ್ ಇನ್‌ಕ್ಲೂಸಿವ್ ಮತ್ತು ಸರ್ವೀಸ್ ಇನ್‌ಕ್ಲೂಸಿವ್ ಪ್ಲಸ್ ಎಲ್ಲ BMW ಕಾರುಗಳಲ್ಲಿ ಐಚ್ಛಿಕವಾಗಿ ಲಭ್ಯವಿದೆ.   ಈ ಸರ್ವೀಸ್ ಪ್ಯಾಕೇಜಸ್‌ನಲ್ಲಿ ಕಂಡೀಷನ್ ಬೇಸ್ಡ್ ಸರ್ವೀಸ್ ಮತ್ತು ಮೇಂಟೆನೆನ್ಸ್  ಒಳಗೊಂಡಿವೆ. ಅವುಗಳು 3 ವರ್ಷಗಳು/40,000 ಕಿಲೋಮೀಟರ್‌ನಿಂದ ಪ್ರಾರಂಭಗೊಳ್ಳುತ್ತವೆ.  BMW X1 10 ವರ್ಷಗಳು/2,00,000 ಕಿಲೋಮೀಟರ್ ವರೆಗೆ ಪ್ರಾರಂಭಿಕ ಆಕರ್ಷಕ ಬೆಲೆ ಪ್ರತಿ ಕಿಲೋಮೀಟರ್‌ಗೆ 1.31 ರೂಪಾಯಿಯಂತೆ ಬೀಳಲಿದೆ.  ಎರಡು ವರ್ಷ ವಾರೆಂಟಿ ಅವಧಿ ಪೂರ್ಣಗೊಂಡ ನಂತರ ಮೂರನೇ ವರ್ಷದ ಕಾರ್ಯಾಚರಣೆಯಿಂದ ಗರಿಷ್ಠ ಐದನೇ ವರ್ಷದವರೆಗೆ ವಿಸ್ತರಿಸಬಹುದು. 

ಭಾರತದಲ್ಲಿ ಫರ್ಸ್ಟ್ ಎವರ್ BMW i4 ಎಲೆಕ್ಟ್ರಿಕ್ ಕಾರು ಬಿಡುಗಡೆ, 590KM ಮೈಲೇಜ್!

BMW X1 ಹಿಂದಿನ ಆವೃತ್ತಿಗಿಂತಲೂ  ಹೆಚ್ಚು ಶಕ್ತಿಯುತ ಮತ್ತು ಅಭಿವ್ಯಕ್ತಿಶೀಲವಾಗಿದೆ. ಮಾನೊಲಥಿಕ್ ಡಿಸೈನ್, ಸರ್ಫೇಸ್ ಟ್ರೀಟ್‌ಮೆಂಟ್, ಲೈನ್ ಮತ್ತು ಕ್ಲಾಸಿ ಎಕ್ಸ್ಟೀರಿಯರ್ ಹೊಂದಿದೆ. 

ಮುಂಬದಿಯ ಕೊನೆಯು ತೆಳುವಾದ LED ಹೆಡ್‌ಲೈಟ್ಸ್ ಆಕರ್ಷಕ ವಿನ್ಯಾಸ ಜೊತೆ ಕಾರಿನ ಅಂದ ಹೆಚ್ಚಿಸಿದೆ.  ಬಹುತೇಕ ಚೌಕಾಕಾರದ BMW ಕಿಡ್ನಿ ಗ್ರಿಲ್ ಹೊಂದಿದೆ. ಈ ಸೆಗ್ಮೆಂಟ್‌ನ ಅತ್ಯುತ್ತಮ ಅಡಾಪ್ಟಿವ್ LED ಹೆಡ್‌ಲೈಟ್ಸ್ ಉನ್ನತ ಬೀಮ್ ಅಸಿಸ್ಟೆಂಟ್ ಮತ್ತು ರಿಯರ್ ಐಇಆ ಟೈಲ್‌ಲೈಟ್ಸ್ನೊಂದಿಗೆ ಈಗ ಸ್ಟಾಂಡರ್ಡ್ ಆಗಿ ಲಭ್ಯ. ಬಹುತೇಕ ಚೌಕದ ವ್ಹೀಲ್ ಆರ್ಚ್ ಕಂಟ್ಯರ‍್ಸ್ ಮತ್ತು ಉದ್ದದ ರೂಫ್‌ಲೈನ್ ಈ ಚಲನಶೀಲವಾಗಿ ವಿತರಿಸಿದ ಸಿಲ್ಹೌಟ್‌ನ ವಿಶಿಷ್ಟ ಫೀಚರ್‌ಗಳಲ್ಲಿವೆ. ಫ್ಲಾಟ್‌ರೂಫ್ ಆಕರ್ಷಕ ಡಿಸೈನ್ ಅಂಶವಾಗಿ ಕೆಲಸ ಮಾಡುತ್ತದೆ ಮತ್ತು ಅದನ್ನು ಮಲ್ಟಿಫಂಕ್ಷನಲ್ ಮೌಂಟ್ಸ್ ಆಗಿ ಬಳಸಬಹುದು. 

ಇಂಟೀರಿಯರ್ ದೊಡ್ಡ ಹೆಜ್ಜೆ ಮುಂದೆ ಇರಿಸಿದ್ದು ಈಗ ಮತ್ತಷ್ಟು ಉನ್ನತ ಮಟ್ಟದ ಪ್ರೀಮಿಯಂತನ ಮತ್ತು ಡಿಜಿಟಲೈಸೇಷನ್ ಒಳಗೊಂಡಿದೆ.  ಹೊಸ ಡಿಜಿಟಲ್ BMW  ಕರ್ವ್ಡ್ ಡಿಸ್‌ಪ್ಲೇ  ಕಾಕ್‌ಪಿಟ್ ಪ್ರದೇಶಕ್ಕೆ ಏಕೀಕರಣಗೊಂಡಿದೆ. ವಿಶಿಷ್ಟವಾದ  BMW ಡ್ರೈವರ್ ಒರಿಯೆಂಟೇಶನ್  ಸೇರಿದಂತೆ ಹಲವು ವಿಶೇಷತೆಗಳನ್ನು ಹೊಂದಿದೆ.   

ಎರಡೂ ವೇರಿಯೆಂಟ್‌ಗಳಲ್ಲಿ ಸ್ಟಾಂಡರ್ಡ್ ಸ್ಪೋರ್ಟ್ ಸೀಟ್ಸ್ ರಸ್ತೆಯ ಮೇಲೆ ಪ್ರಭುತ್ವ ಸಾಧಿಸಲು ಪರಿಪೂರ್ಣ ಸೀಟಿನ ಸ್ಥಾನ ನೀಡುವ ಮೂಲಕ ಹಿಂಬದಿಯಲ್ಲಿ ಮಡಚುವಂತೆ ಹೊಂದಾಣಿಕೆ ಮತ್ತು ದೂರ ಪ್ರಯಾಣದ ಅನುಕೂಲಕ್ಕೆ ಉನ್ನತ ಎರ್ಗೊನಾಮಿಕ್ಸ್ ಹೊಂದಿದೆ.  BMW ಸ್ಪೋರ್ಟ್ ವೇರಿಯೆಂಟ್ ಮತ್ತಷ್ಟು ಉನ್ನತ ಮಟ್ಟದ ವೈಯಕ್ತಿಕ ಅನುಕೂಲವನ್ನು ಹೊಂದಿದ್ದು ಈ ಸೆಗ್ಮೆಂಟ್‌ಗೆ ವಿಶಿಷ್ಟವಾದ ಆಕ್ಟಿವ್ ಸೀಟ್ಸ್ ಅನ್ನು ಚಾಲಕ ಮತ್ತು ಮುಂಬದಿ ಪ್ರಯಾಣಿಕರಿಗೆ ಹೊಂದಿದೆ. ಇವುಗಳು ಹಲವು ಬಗೆಯ ತೀವ್ರತೆ ಮತ್ತು ವೇಗಗಳ ಮಸಾಜ್ ಪ್ರೋಗ್ರಾಮ್‌ಗಳನ್ನು ಹೊಂದಿದ್ದು ದೂರ ಪ್ರಯಾಣದಲ್ಲಿ ಆಯಾಸ ಕಡಿಮೆ ಮಾಡಲು ನೆರವಾಗುತ್ತವೆ. ಒ ಸ್ಪೋರ್ಟ್ನಲ್ಲಿ ಕಾರಿನ ಹಿಂಬದಿ ಸೀಟಿನ ಪ್ರಯಾಣಿಕರಿಗೂ ಯಾಂತ್ರಿಕವಾಗಿ ಸೀಟುಗಳನ್ನು ಮುಂದಕ್ಕೆ ಅಥವಾ ಹಿಂದಕ್ಕೆ 130 mm ವರೆಗೆ  ಹೊಂದಿಸಿಕೊಳ್ಳುವುದರೊಂದಿಗೆ ಲೆಗ್‌ರೂಮ್ ಅನ್ನು ಹೆಚ್ಚಿಸುವ ಸ್ವಾತಂತ್ರ ನೀಡುತ್ತದೆ. 

Follow Us:
Download App:
  • android
  • ios