Asianet Suvarna News Asianet Suvarna News

ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಮಾರಾಟ ಯೋಜನೆ ಕೈಬಿಟ್ಟ ಟೆಸ್ಲಾ: ವರದಿ

ಬಹುಸಮಯದಿಂದ ಭಾರತಕ್ಕೆ ಆಗಮಿಸಲು ಯೋಜಿಸುತ್ತಿದ್ದ ಅಮೆರಿಕದ ಪ್ರಮುಖ ಎಲೆಕ್ಟ್ರಿಕ್‌ ಕಾರು ಉತ್ಪಾದಕ ಕಂಪನಿ ಟೆಸ್ಲಾ ಇಂಕ್,  ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡುವ ಯೋಜನೆಯನ್ನು ಸ್ಥಗಿತಗೊಳಿಸಿದೆ.

Tesla Puts India Entry plan on hold Report
Author
Bangalore, First Published May 14, 2022, 11:44 PM IST

ಬಹು ಸಮಯದಿಂದ ಭಾರತಕ್ಕೆ ಆಗಮಿಸಲು ಯೋಜಿಸುತ್ತಿದ್ದ ಅಮೆರಿಕದ ಪ್ರಮುಖ ಎಲೆಕ್ಟ್ರಿಕ್ ಕಾರು ಉತ್ಪಾದಕ ಕಂಪನಿ ಟೆಸ್ಲಾ ಇಂಕ್ (Tesla Inc),  ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು (Electric vehicles –EV) ಮಾರಾಟ ಮಾಡುವ ಯೋಜನೆಯನ್ನು ಸ್ಥಗಿತಗೊಳಿಸಿದೆ. ದೇಶದಲ್ಲಿ ಕಡಿಮೆ ಆಮದು ತೆರಿಗೆಗಳನ್ನು ಪಡೆಯಲು ವಿಫಲವಾದ ನಂತರ ಕಂಪನಿ ಶೋರೂಮ್ ಸ್ಥಳದ ಹುಡುಕಾಟವನ್ನು ಕೈಬಿಟ್ಟಿದೆ  ಎಂದು ಕಂಪನಿಯ ಮೂಲಗಳು ರಾಯಿಟರ್ಸ್ಗೆ ತಿಳಿಸಿವೆ.

ಅಮೆರಿಕ ಮತ್ತು ಚೀನಾದಲ್ಲಿನ ಉತ್ಪಾದನಾ ಕೇಂದ್ರಗಳಿಂದ ಆಮದು ಮಾಡಿಕೊಳ್ಳಲಾದ ಎಲೆಕ್ಟ್ರಿಕ್ ವಾಹನಗಳನ್ನು (EV) ಕಡಿಮೆ ಸುಂಕದಲ್ಲಿ ಮಾರಾಟ ಮಾಡುವ ಮೂಲಕ ಟೆಸ್ಲಾ, ಭಾರತದಲ್ಲಿ ತನ್ನ ವಾಹನಗಳ ಬೇಡಿಕೆಯನ್ನು ಪರಿಶೀಲಿಸಲು ಪ್ರಯತ್ನಿಸಿತ್ತು. ಇದರಿಂದ ಸರ್ಕಾರ, ಕಂಪನಿಗೆ ಸರ್ಕಾರದ ಪ್ರತಿನಿಧಿಗಳೊಂದಿಗೆ ಒಂದು ವರ್ಷಕ್ಕೂ ಹೆಚ್ಚು ಅವಧಿಯ ಮಾತುಕತೆಗಳನ್ನು ನಿರ್ಬಂಧಿಸಿದೆ.

ಟೆಸ್ಲಾದ ಆಮದು ಸುಂಕ ಕಡಿಮೆ ಮಾಡುವ ಬೇಡಿಕೆಗೆ ಪ್ರತಿಯಾಗಿ ಭಾರತ ಸರ್ಕಾರ, ಸ್ಥಳೀಯವಾಗಿ ಉತ್ಪಾದನೆ ಮಾಡುವಂತೆ ಷರತ್ತು ವಿಧಿಸಿತ್ತು. ಆದರೆ, ತನ್ನ ಪ್ರಯತ್ನ ಮುಂದುವರಿಸಿರುವ ಟೆಸ್ಟಾ, ಅದರ ಫಲಿತಾಂಶ ಪರಿಶೀಲಿಸಲು ಭಾರತ ತನ್ನ ಬಜೆಟ್ ಅನ್ನು ಅನಾವರಣಗೊಳಿಸುವ ಮತ್ತು ತೆರಿಗೆ ಬದಲಾವಣೆಗಳನ್ನು ಘೋಷಿಸುವ ದಿನವಾದ ಫೆಬ್ರವರಿ 1 ರ ಗಡುವನ್ನು ನಿಗದಿಪಡಿಸಿತ್ತು. ಆದರೆ, ಕೇಂದ್ರ ಸರ್ಕಾರ ರಿಯಾಯಿತಿ ನೀಡಲು ಒಪ್ಪದಿದ್ದಾಗ, ಭಾರತಕ್ಕೆ ಕಾರುಗಳನ್ನು ಆಮದು ಮಾಡಿಕೊಳ್ಳುವ ಯೋಜನೆಯನ್ನು ಟೆಸ್ಲಾ ತಡೆಹಿಡಿದಿದೆ. ಆ ಕುರಿತು ಇನ್ನೂ ಹೆಚ್ಚಿನ ವಿವರಗಳು ಬಹಿರಂಗಗೊಂಡಿಲ್ಲ.

ಇದನ್ನೂ ಓದಿ: ಸಾವಿನ ಬಗ್ಗೆ ಎಲಾನ್ ಮಸ್ಕ್ ಟ್ವೀಟ್: ತಾಯಿಯ ಬುದ್ಧಿವಾದದ ಬಳಿಕ 'Sorry' ಎಂದ ಟೆಸ್ಲಾ ಸಿಇಓ

ಹಲವು ತಿಂಗಳುಗಳಿಂದ ಟೆಸ್ಲಾ, ಭಾರತದ ಪ್ರಮುಖ ನಗರಗಳಾದ ನವದೆಹಲಿ, ಮುಂಬೈ ಮತ್ತು ಬೆಂಗಳೂರಿನಲ್ಲಿ ಶೋರೂಮ್ಗಳು ಮತ್ತು ಸೇವಾ ಕೇಂದ್ರಗಳನ್ನು ತೆರೆಯಲು ರಿಯಲ್ ಎಸ್ಟೇಟ್ ಆಯ್ಕೆಗಳಿಗೆ ಶೋಧ ನಡೆಸಿತ್ತು, ಆದರೆ ಆ ಯೋಜನೆಯನ್ನು ಸಹ ಈಗ ತಡೆಹಿಡಿಯಲಾಗಿದೆ. 

ಟೆಸ್ಲಾವು ಭಾರತದಲ್ಲಿನ ತನ್ನ ಕೆಲವು ಸಣ್ಣ ತಂಡಗಳಿಗೆ ಇತರ ಮಾರುಕಟ್ಟೆಗಳಿಗೆ ಹೆಚ್ಚುವರಿ ಜವಾಬ್ದಾರಿಗಳನ್ನು ವಹಿಸಿದೆ. ಅದರ ಭಾರತದ ನೀತಿ ಕಾರ್ಯನಿರ್ವಾಹಕ ಮನುಜ್ ಖುರಾನಾ ಮಾರ್ಚ್ನಿಂದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಹೆಚ್ಚುವರಿ "ಉತ್ಪನ್ನ"ದ ಪಾತ್ರವನ್ನು ವಹಿಸಿಕೊಂಡಿದ್ದಾರೆ. 

'ಮೇಕ್ ಇನ್ ಇಂಡಿಯಾ' ಅಭಿಯಾನದ ಮೂಲಕ ತಯಾರಕರನ್ನು ಸೆಳೆಯಲು ಕೇಂದ್ರ ಸರ್ಕಾರ ಮುಂದಾಗಿದೆ. ಇತ್ತೀಚೆಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಚೀನಾದಿಂದ ಭಾರತಕ್ಕೆ ಕಾರುಗಳನ್ನು ಆಮದು ಮಾಡಿಕೊಳ್ಳಲು ಟೆಸ್ಲಾಗೆ ಅನುಮತಿ ಇಲ್ಲ ಎಂದಿದ್ದರು. 
ಇದರ ಬೆನ್ನಲ್ಲೇ, ಜನವರಿಯಲ್ಲಿ ಜರ್ಮನಿಯ ಐಷಾರಾಮಿ ಕಾರು ತಯಾರಕ ಮರ್ಸಿಡಿಸ್-ಬೆನ್ಝ್ ಭಾರತದಲ್ಲಿ ತನ್ನ ಎಲೆಕ್ಟ್ರಿಕ್ ಕಾರುಗಳಲ್ಲಿ ಒಂದನ್ನು ಜೋಡಿಸಲು ಪ್ರಾರಂಭಿಸುವುದಾಗಿ ಘೋಷಿಸಿದೆ.

ಇದನ್ನೂ ಓದಿ: ಸ್ಥಳೀಯ ಉತ್ಪಾದನೆಯಿಂದ ಟೆಸ್ಲಾಗೆ ಸಾಕಷ್ಟು ಲಾಭ; ನಿತಿನ್ ಗಡ್ಕರಿ

ಭಾರತದಲ್ಲಿ ಬೆಳೆಯುತ್ತಿರುವ ಸಣ್ಣ ವಾಹನಗಳ ಮಾರುಕಟ್ಟೆಯಲ್ಲಿ ಈಗ ದೇಶೀಯ ವಾಹನ ತಯಾರಕ ಟಾಟಾ ಮೋಟಾರ್ಸ್ ಪ್ರಾಬಲ್ಯ ಹೊಂದಿದೆ. ಆದರೆ, ಕನಿಷ್ಠ 40,000 ಡಾಲರ್ನ ಟೆಸ್ಲಾ ಬೆಲೆಯು ಭಾರತೀಯ ಮಾರುಕಟ್ಟೆಯ ಐಷಾರಾಮಿ ವಿಭಾಗಕ್ಕೆ ಸೇರುತ್ತದೆ. 

ಭಾರತ ಟೆಸ್ಲಾ ಕಂಪನಿಯ ಬಹುದೊಡ್ಡ ಮಾರುಕಟ್ಟೆಗಳಲ್ಲಿ ಒಂದಾಗಿದ್ದು, ಇಲ್ಲಿಗೆ ಪ್ರವೇಶಿಸಲು ಕಂಪನಿ ಹರಸಾಹಸಪಡುತ್ತಿದೆ. ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ತಯಾರಿಕೆ ಕಂಪನಿ ಅತ್ಯಂತ ದೊಡ್ಡ ಹೂಡಿಕೆಯಾಗಲಿದೆ. ಆದರೆ, ಇಲ್ಲಿನ ಸರ್ಕಾರದ ನಿಯಮಗಳು ಮತ್ತು ಹೆಚ್ಚಿನ ಆಮದು ಸುಂಕದ ಹಿನ್ನೆಲೆಯಲ್ಲಿ ಕಂಪನಿ ಇನ್ನೂ ದೇಶದಲ್ಲಿ ತನ್ನ ವಾಹನಗಳನ್ನು ಮಾರಾಟ ಮಾಡಲಾಗಿಲ್ಲ. ಸಂಪೂರ್ಣ ನಿರ್ಮಿಸಿದ ವಾಹನವನ್ನು ಭಾರತಕ್ಕೆ ಆಮದು ಮಾಡಿ ಮಾರಾಟ ಮಾಡಿದಲ್ಲಿ ಅದಕ್ಕೆ ಹೆಚ್ಚಿನ ಸುಂಕ ವಿಧಿಸಬೇಕಾಗುತ್ತದೆ. ಅದನ್ನು ಕಡಿತಗೊಳಿಸುವಂತೆ ಟೆಸ್ಲಾ ಸರ್ಕಾರಕ್ಕೆ ಮನವಿ ಮಾಡಿತ್ತು. ಆದರೆ, ಸರ್ಕಾರ ಭಾರತದಲ್ಲಿಯೇ ಉತ್ಪಾದನಾ ಘಟಕಗಳನ್ನು ಆರಂಭಿಸಿ, ದೇಶೀಯ ವಸ್ತುಗಳ ಬಳಕೆ ಮಾಡುವಂತೆ ಷರತ್ತು ವಿಧಿಸಿತ್ತು. 

Follow Us:
Download App:
  • android
  • ios