21 ಸಾವಿರ ರೂ.ಗೆ ಬುಕ್ ಮಾಡಿ ಹೊಚ್ಚ ಹೊಸ ಟಾಟಾ ಪಂಚ್, ಇದು ಅತ್ಯಾಕರ್ಷ SUV ಕಾರು!

  • ಬಹುನಿರೀಕ್ಷಿತ ಟಾಟಾ ಮೋಟಾರ್ಸ್ ಪಂಚ್ SUV ಕಾರು ಅನಾವರಣ
  • ಮೈಕ್ರೋ SUV ಅನಾವರಣದಿಂದ ಭಾರತದಲ್ಲಿ ಸಂಚಲನ
  • 21 ಸಾವಿರ ರೂಪಾಯಿ ನೀಡಿ ಕಾರು ಬುಕಿಂಗ್‌ಗೆ ಅವಕಾಶ ನೀಡಲಾಗಿದೆ
Tata Motors unveils the power packed Punch India first sub compact micro SUV ckm

ಮುಂಬೈ(ಅ.04):  ಭಾರತದಲ್ಲಿ(India) ಕಾರು ಉತ್ಪಾದನೆಯಲ್ಲಿ ಟಾಟಾ ಮೋಟಾರ್ಸ್(Tata Motors) ಹೊಸ ಇತಿಹಾಸ ರಚಿಸಿದೆ. ಕಳೆದ ಕೆಲ ವರ್ಷಗಳಲ್ಲಿ ಟಾಟಾ ಮೋಟಾರ್ಸ್ ಗ್ರಾಹಕರ ನೆಚ್ಚಿನ ಕಾರಾಗಿ ಬದಲಾಗಿದೆ. ಅತ್ಯಾಕರ್ಷಕ ಲುಕ್, ಅದ್ಭುತ ಪರ್ಫಾಮೆನ್ಸ್, ಗರಿಷ್ಠ ಸುರಕ್ಷತೆ ಹಾಗೂ ಕೈಗೆಟುಕುವ ಬೆಲೆಯಿಂದ ಟಾಟಾ ಬಹುಬೇಡಿಕೆಯ ಕಾರಾಗಿದೆ. ಇದೀಗ ಟಾಟಾ ಹೊಚ್ಚ ಹೊಸ ಮೈಕ್ರೋ SUV ಟಾಟಾ ಪಂಚ್(Tata Punch) ಅನಾವರಣ ಮಾಡಿದೆ.

ಹುಂಡೈ ಕ್ಯಾಸ್ಪರ್ ಮೈಕ್ರೋ ಎಸ್‌ಯುವಿ ಅನಾವರಣ; ಟಾಟಾಗೆ ‘ಪಂಚ್’ ಕೊಡುತ್ತಾ?

ವರ್ಚುವಲ್ ಕಾರ್ಯಕ್ರಮದ ಮೂಲಕ ಭಾರತದಲ್ಲಿ ಹೊಚ್ಚ ಹೊಸ ಪಂಚ್ ಕಾರು ಅನಾವರಣಗೊಂಡಿದೆ. ಇದು ಟಾಟಾದ ಎಂಟ್ರಿ ಲೆವೆಲ್ SUV ಕಾರಾಗಿದೆ.  ಆತ್ಯಾಕರ್ಷಕ ಲುಕ್, ಬಲಿಷ್ಠ ಎಂಜಿನ್ ಹಾಗೂ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಪಂಚ್ ಭಾರತದಲ್ಲಿ ಹೊಸ ದಾಖಲೆ ಬರೆಯಲು ಸಜ್ಜಾಗಿದೆ. ಅಕ್ಟೋರ್ 20ರಂದು ಕಾರು ಭಾರತದಲ್ಲಿ ಬಿಡುಗಡೆಯಾಗಲಿದೆ ಅನ್ನೋ ಮಾಹಿತಿಗಳು ಹೊರಬಿದ್ದಿದೆ. ಕಾರಿನ ಬೆಲೆ ಲಾಂಚ್ ದಿನ ಹೊರಬೀಳಲಿದೆ. 

ಟಾಟಾ ನೆಕ್ಸಾನ್ SUV ಕಾರಿಗಿಂತ ಕಡಿಮೆ ಇರಲಿದೆ. ಕಾರಣ ಇಂದು ಗಾತ್ರದಲ್ಲಿ ನೆಕ್ಸಾನ್ ಕಾರಿಗಿಂತ ಕೊಂಚ ಸಣ್ಣದು. ಆದರೆ ನೋಟದಲ್ಲಿ ನೆಕ್ಸಾನ್‌ಗಿಂತ ದೊಡ್ಡಕಾರಾಗಿ ಕಾಣುತ್ತಿದೆ. ಟಾಟಾ ನೆಕ್ಸಾನ್ ಕಾರಿನ ಆರಂಭಿಕ ಬೆಲೆ 7.28 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಟಾಟಾ ಪಂಚ್ ಕಾರು 5 ರಿಂದ 5.40 ಲಕ್ಷ ರೂಪಾಯಿ ಆರಂಭಿಕ ಬೆಲೆಯಲ್ಲಿರಲಿದೆ ಎಂದು ಅಂದಾಜಿಸಲಾಗಿದೆ.

306 ಕಿ.ಮೀ ಮೈಲೇಜ್, ಕೈಗೆಟುಕವ ಬೆಲೆ, ಗರಿಷ್ಠ ಸುರಕ್ಷತೆಯ ಟಾಟಾ ಟಿಗೋರ್ ಎಲೆಕ್ಟ್ರಿಕ್ ಕಾರು ಲಾಂಚ್!

ಟಾಟಾ ಪಂಚ್ ಕಾರು ರೆನಾಲ್ಟ್ ಕಿಗರ್ ಹಾಗೂ ನಿಸಾನ್ ಮ್ಯಾಗ್ನೈಟ್ ಕಾರಿಗೆ ಪ್ರತಿಸ್ಪರ್ಧಿಯಾಗಿದೆ. ಈ ಕಾರುಗಳ ಬೆಲೆ 5.6 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ದೇಸಿ ಕಾರಾಗಿರುವ ಟಾಟಾ ಕಾರು ಕೈಗೆಟುವ ಬೆಲೆಯಲ್ಲಿ ಲಭ್ಯವಾಗಲಿದೆ ಅನ್ನೋದು ಸ್ಪಷ್ಟ.  ಸದ್ಯ ಪಂಚ್ ಕಾರು ಪೆಟ್ರೋಲ್ ಎಂಜಿನ್ ಮಾತ್ರ ಲಭ್ಯವಿದೆ. 

1.2 ಲೀಟರ್ ರಿವೊಟ್ರಾನ್ BS6 ಎಂಜಿನ್ ಹೊಂದಿದೆ. ಡೈನಾಪ್ರೋ ಟೆಕ್ನಾಲಜಿ ಟಾಟಾ ಪಂಚ್ ಕಾರಿನ ಮತ್ತೊಂದು ವಿಶೇಷ. 5 ಮಾನ್ಯುಯೆಲ್ ಟ್ರಾನ್ಸ್‌ಮಿಶನ್ ಹಾಗೂ ಎಎಂಟಿ ಟ್ರಾನ್ಸ್‌ಮಿಶನ್ ಆಯ್ಕೆ ಲಭ್ಯವಿದೆ. ಸಿಟಿ ಹಾಗೂ ಇಕೋ ಮೊಡ್ ಆಯ್ಕೆಗಳಿವೆ. ಟಾಟಾ ಪಂಚ್ 7 ಬಣ್ಣಗಳಲ್ಲಿ ಲಭ್ಯವಿದೆ. 

ಕಾರು ಖರೀದಿಗೆ ಟಾಟಾದಿಂದ ಭರ್ಜರಿ ಕೊಡುಗೆ; ರೈತರಿಗೆ 6 ತಿಂಗಳಿಗೊಮ್ಮೆ ಕಂತು ಪಾವತಿ ಸೌಲಭ್ಯ!

ಆಲ್ಫಾ ಆರ್ಕಿಟೆಕ್ಚರ್‌ನಲ್ಲಿ ಈ ಕಾರು ನಿರ್ಮಾಣವಾಗಿದೆ. ಅಲ್ಟ್ರೋಜ್ ಬಳಿಕ ಆಲ್ಫಾ ಆರ್ಟಿಟೆಕ್ಚರ್‌ನಲ್ಲಿ ನಿರ್ಮಾಣವಾದ 2ನೇ ಕಾರು ಇದಾಗಿದೆ. 187mm ಗ್ರೌಂಡ್ ಕ್ಲಿಯರೆನ್ಸ್ ಹೊಂದಿರುವ ಕಾರಣ ಯಾವುದೇ ರಸ್ತೆಯಲ್ಲಿ ಸರಾಗವಾಗಿ ಸಾಗಲಿದೆ. 2 ಲೀಟರ್ ಎಂಜಿನ್ SUV ರೀತಿಯ ಸಾಮರ್ಥ್ಯ ಹೊಂದಿದೆ. ಹೀಗಾಗಿ  ಬೆಟ್ಟ, ಗುಡ್ಡ, ಕಲ್ಲಿನ ರಸ್ತೆಯನ್ನು ಯಾವುದೇ ಆತಂಕವಿಲ್ಲದೆ ಸಲೀಸಲಾಗಿ ಹತ್ತಲಿದೆ.

ಅಲ್ಟ್ರೋಜ್ ಕಾರಿನಲ್ಲಿರುವಂತೆ ಪಂಚ್ ಕಾರಿನ ಡೂರ್ ಕೂಡ 90 ಡಿಗ್ರಿ ಓಪನ್ ಆಗಲಿದೆ. ಟಾಪ್ ಎಂಡ್ ಮಾಡೆಲ್ ಡೈಮಂಡ್ ಕಟ್ ಅಲೋಯ್ ವೀಲ್ ಹೊಂದಿದೆ. ಇನ್ನು ಪ್ರೊಜೆಕ್ಟರ್ ಹೆಂಡ್‌ಲ್ಯಾಂಪ್ಸ್, LED ಡೇ ಟೈಮ್ ರನ್ನಿಂಗ್ ಲೈಟ್ಸ್(DRLs), LED ಟೈಲ್ ಲ್ಯಾಂಪ್ಸ್ ಹೊಂದಿದೆ. ಪಂಚ್ ಆಟೋ ಹೆಡ್‌ಲ್ಯಾಂಪ್ಸ್, ರೈನ್ ಸೆನ್ಸಿಂಗ್ ವೈಪರ್, ಹೊಂದಿಸುವ ಡ್ರೈವರ್ ಸೀಟ್, ಆಟೋ ಫೋಲ್ಡೇಬಲ್ OVRM, 7 ಇಂಚಿನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಸೇರಿದಂತೆ ಹತ್ತು ಹಲವು ಫೀಚರ್ಸ್ ಈ ಕಾರಿನಲ್ಲಿದೆ.

ಭಾರತದಲ್ಲಿ ಪಂಚ್ ಕಾರು ಹೊಸ ಸಂಚಲನ ಮೂಡಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಕಾರಣ ಅತ್ಯಂತ ಆಕರ್ಷಕ, ಗರಿಷ್ಠ ಸುರಕ್ಷತೆ, ಎಂಜಿನ್, ಆರಾಮದಾಯಕ ಪ್ರಯಾಣ ನೀಡಬಲ್ಲ ಹಾಗೂ ಕೈಗೆಟುಕುವ ಬೆಲೆಯ ಕಾರು ಇದಾಗಿರಲಿದೆ. 

Latest Videos
Follow Us:
Download App:
  • android
  • ios