ಹುಂಡೈ ಕ್ಯಾಸ್ಪರ್ ಮೈಕ್ರೋ ಎಸ್‌ಯುವಿ ಅನಾವರಣ; ಟಾಟಾಗೆ ‘ಪಂಚ್’ ಕೊಡುತ್ತಾ?
ಮೈಕ್ರೋ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ಭಾರೀ ಪೈಪೋಟಿ ಶುರುವಾಗಿದೆ. ಟಾಟಾ ಕಂಪನಿ ಪಂಚ್ ಅನಾವರಣ ಮಾಡುವ ಮೂಲಕ ಶ್ರೀಕಾರ ಹಾಕಿದ್ದರೆ, ಹುಂಡೈ ಕೂಡ ತನ್ನ ಕ್ಯಾಸ್ಪರ್ ಮೈಕ್ರೋ ಎಸ್‌ಯುವಿಯನ್ನು ದಕ್ಷಿಣ ಕೊರಿಯಾದಲ್ಲಿ ಅನಾವರಣ ಮಾಡಿದೆ. ಶೀಘ್ರವೇ ಈ ಕಾರ್ ಅನ್ನು ನೀವು ಭಾರತೀಯ ಮಾರುಕಟ್ಟೆಯಲ್ಲಿ ನಿರೀಕ್ಷಿಸಬಹುದಾಗಿದೆ.
ಎಂಟ್ರಿ ಲೆವಲ್‌ಗಿಂತ ತುಸು ಮೇಲು, ಎಸ್‌ಯುವಿ ಲೆವಲ್‌ಗಿಂತ ತುಸು ಕಡಿಮೆ ಸೆಗ್ಮೆಂಟ್‌ನಲ್ಲಿ ಬಹುತೇಕ ಎಲ್ಲ ಆಟೋಮೊಬೈಲ್ ಕಂಪನಿಗಳು ಹೊಸ ಕಾರನ್ನು ಲಾಂಚ್ ಮಾಡುತ್ತಿವೆ. ಇದಕ್ಕೆ ಇತ್ತೀಚಿನ ಬೆಸ್ಟ್ ಉದಾಹರಣೆ ಎಂದರೆ, ಟಾಟಾ ಕಂಪನಿಯ ಪಂಚ್. ಈಗ ಇದೇ ಸಾಲಿಗೆ ಹುಂಡೈ ಕೂಡ ಸೇರ್ಪಡೆಯಾಗುತ್ತಿದೆ. ಹುಂಡೈಯ ಹಲವು ಹೊಸ ಹೊಸ ಕಾರ್‌ಗಳನ್ನು ಮಾರುಕಟ್ಟೆಗ ಬಿಡುಗಡೆ ಮಾಡುತ್ತಿದೆ. ಈಗ ಕಂಪನಿಯು ಮೈಕ್ರೋ ಎಸ್‌ಯುವಿಯನ್ನು ಪರಿಚಯಿಸಲು ಮುಂದಾಗಿದೆ.
ಹುಂಡೈ ತನ್ನ ಹೊಸ ಮೈಕ್ರೋ ಎಸ್‌ಯುವಿ ಕ್ಯಾಸ್ಪರ್ ಅನ್ನು ದಕ್ಷಿಣ ಕೊರಿಯಾದಲ್ಲಿ ಅನಾವರಣ ಮಾಡಿದೆ. ಈ ವರ್ಷಾಂತ್ಯಕ್ಕೆ ಕಂಪನಿಯು ತನ್ನ ದೇಶದಲ್ಲಿ ಬಿಡುಗಡೆ ಮಾಡಿದ ಬಳಿಕ ಜಾಗತಿಕವಾಗಿ ಲಾಂಚ್ ಮಾಡುವ ಸಾಧ್ಯತೆ ಇದೆ. ಆ ನಂತರವಷ್ಟೇ ಭಾರತದ ಮಾರುಕಟ್ಟೆಗೂ ಕಾಲಿಡಬಹುದು. ಅಂದರೆ, ಬಹುಶಃ ಮುಂದಿನ ವರ್ಷಕ್ಕೆ ಭಾರತದಲ್ಲಿ ಲಾಂಚ್ ಆಗಬಹುದು. ವಿಶೇಷ ಏನೆಂದರೆ, ಬೆಲೆ ಎಷ್ಟು ಎಂದು ಹೇಳದೆಯೇ ಕಂಪನಿಯು ಈಗಾಗಲೇ ಪ್ರಿ ಬುಕ್ಕಿಂಗ ಅನ್ನು ಆರಂಭಿಸಿದೆಯಂತೆ.
ಮಾರುತಿ ಬಲೆನೋ ಫೇಸ್‌ಲಿಫ್ಟ್ ಶೀಘ್ರ ಬಿಡುಗಡೆ? ಏನೆಲ್ಲಾ ಬದಲಾವಣೆಗಳಿರಬಹುದು?
2022 ಕ್ಯಾಸ್ಪರ್ ಮೈಕ್ರೋ ಎಸ್‌ಯುವಿ ಇಮೇಜ್‌ಗಳನ್ನು ಹಂಚಿಕೊಳ್ಳುವ ಮೂಲಕ ಮಾಹಿತಿಯನ್ನು ಖಚಿತಪಡಿಸಲಾಗಿದೆ. ರೆಡಿಯೇಟರ್ ಗ್ರಿಲ್, ರೌಂಡ್ ಹೆಡ್ ಲೈಟ್ಸ್ ಯೂನಿಟ್ಸ್, ಸೈಜೇಬಲ್ ವೀಲ್ ಆರ್ಚಸ್ ಮತ್ತು ಕರ್ವಿಂಗ್ ಬಾಡಿ ಲೈನ್ಸ್‌ಗಳ ಮೂಲಕ ಈ ಮೈಕ್ರೋ ಎಸ್‌ಯುವಿ ಹೆಚ್ಚು ಆಕರ್ಷಕವಾಗಿದೆ.
ನಗರ ಕೇಂದ್ರೀತ ಗ್ರಾಹಕರನ್ನು ಕೇಂದ್ರದಲ್ಲಿಟ್ಟುಕೊಂಡು ಹುಂಡೈ ಕಂಪನಿಯು ಈ ಕ್ಯಾಸ್ಪರ್ ಮೈಕ್ರೋ ಎಸ್‌ಯುವಿಯನ್ನು ವಿನ್ಯಾಸಗೊಳಿಸಿದೆ. ಕ್ಯಾಸ್ಪರ್ ಕಂಪನಿಯ ಪ್ರೊಜೆಕ್ಟ್ ಎಎಕ್ಸ್ಐ ಪ್ರಾಡಕ್ಷನ್ ವರ್ಷನ್ ಆಗಿದೆ ಎಂದು ಹೇಳಬಹುದು. ಈ ಹೊಸ ಮೈಕ್ರೋ ಎಸ್‌ಯುವಿಯು ಕೆ1 ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಾಣವಾಗುತ್ತಿದೆ. ಇದೇ ಪ್ಲಾಟ್‌ಫಾರ್ಮ್‌ನಲ್ಲಿ ಐ10 ಕೂಡ ಉತ್ಪಾದನೆಯಾಗುತ್ತದೆ.
ಹುಂಡೈಯ ಜನಪ್ರಿಯ ಬ್ರ್ಯಾಂಡ್‌ಗಳಾದ ಕೋನಾ ಮತ್ತು ವೆನ್ಯು ಎಸ್‌ಯುವಿಗಳಿಗಿಂತಲೂ ಚಿಕ್ಕದಾಗಿದೆ. ಇನ್ನು ಸಿಂಪಲ್ ಆಗಿ ಹೇಳಬೇಕೆಂದರೆ ಮಾರುತಿ ಸಜುಕಿಯ ಇಗ್ನಿಸ್ ಮತ್ತು ರೆನೋ ಕಂಪನಿಯ ಕ್ವಿಡ್ ಗಾತ್ರಕ್ಕೆ ಈ ಕ್ಯಾಸ್ಪರ್ ಸಮನಾಗಿದೆ.
ಥಾರ್ ಪ್ರಬಲ ಸ್ಪರ್ಧಿ ಹೊಸ ಫೋರ್ಸ್ ಗೂರ್ಖಾ ಆಫ್‍ರೋಡ್ SUV ಲಾಂಚ್‌ಗೆ ರೆಡಿ
ದಕ್ಷಿಣ ಕೊರಿಯಾ ಮಾರುಕಟ್ಟೆಯಲ್ಲಿ ಮೊದಲಿಗೆ ಲಾಂಚ್ ಆಗಲಿರುವ ಈ ಕ್ಯಾಸ್ಪರ್ ಮೈಕ್ರೋ ಎಸ್‌ಯುವಿಯನ್ನು ಹುಂಡೈ ಕಂಪನಿಯು ಶೀಘ್ರವೇ ಭಾರತೀಯ ಮಾರುಕಟ್ಟೆಗೆ ಪರಿಚಯಿಸಲಿದೆ. ಭಾರತದಲ್ಲಿ ಈ ಮೈಕ್ರೋ ಎಸ್‌ಯುವಿ ಟಾಟಾ ಪಂಚ್, ರೆನೋ ಕ್ವಿಡ್, ಮಾರುತಿ ಸುಜುಕಿಯ ಇಗ್ನಿಸ್‌ಗಳಿಗೆ ಪೈಪೋಟಿಯೊಡ್ಡುವ ಸಾಧ್ಯತೆ ಇದೆ.
ಕ್ಯಾಸ್ಪರ್ ಮೈಕ್ರೋ ಎಸ್‌ಯುವಿಯಲ್ಲಿ ಕಂಪನಿಯು 1.0 ಲೀಟರ್ ಮೀ ಪಾಯಿಂಟ್ ಟರ್ಬೋಚಾರ್ಜ್ಡ್ ವರ್ಷನ್ ಎಂಜಿನ್ ನೀಡಲಿದೆ. ಹಾಗೆಯೇ, 1.0 ಲೀ. ಡೈರೆಕ್ಟ್ ಇಂಜೆಕ್ಷನ್ ಎಂಜಿನ್ ಆವೃತ್ತಿಯೂ ಇರಲಿದೆ. ಈ ಎರಡೂ ಎಂಜಿನ್‌ಗಳು 75 ಬಿಎಚ್‌ಪಿ ಮತ್ತು 99 ಬಿಎಚ್‌ಪಿ ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿವೆ.
ಭಾರತೀಯ ಮಾರುಕಟ್ಟೆಗೆ ಪರಿಚಯಿಸುವಾಗ ಕಂಪನಿಯು ಮತ್ತೊಂದು ಎಂಜಿನ್ ಆವೃತ್ತಿಯಲ್ಲೂ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಬಹುಶಃ ಅದು 1.2 ಲೀ ಎಂಜಿನ್ ಆಗಿರಬಹುದು. ಅಂದರೆ, ಗ್ರ್ಯಾಂಡ್ ಐ10 ನಿಯೋಸ್ ಎಂಜಿನ್ ಉತ್ಪಾದಿಸುವಷ್ಟೇ ಶಕ್ತಿಯನ್ನು ಉತ್ಪಾದಿಸಲಿದೆ. ಈ ಎಂಜಿನ್ 83 ಬಿಎಚ್‌ಪಿ ಮತ್ತು 114 ಎನ್‌ಎಂ ಟಾರ್ಕ್ ಉತ್ಪಾದಿಸಲಿದೆ.
ಹಬ್ಬಕ್ಕೆ ‘ಪಂಚ್’ ನೀಡಲು ಟಾಟಾ ರೆಡಿ, ಹೊಸ ಮೈಕ್ರೋ ಎಸ್‌ಯುವಿ ಅನಾವರಣ
ಹುಂಡೈ ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಗ್ರಾಹಕ ವಲಯವನ್ನು ಸೃಷ್ಟಿಸಿಕೊಂಡಿದೆ. ಬಿಲ್ಟ್ ಕ್ವಾಲಿಟಿ ಮತ್ತು ದಕ್ಷ ಎಂಜಿನ್‌ಗಳಿಂದಾಗಿ ಹೆಸರುವಾಸಿಯಾಗಿದೆ. ಈಗಗಲೇ ಹಲವು ಬ್ರ್ಯಾಂಡ್‌ಗಳನ್ನು ಯಶಸ್ವಿಯಾಗಿಸಿರುವ ಕಂಪನಿಯು ಈ ಕ್ಯಾಸ್ಪರ್ ಅನ್ನು ಕೂಡ ಉನ್ನತ ಮಟ್ಟದಲ್ಲಿ ಲಾಂಚ್ ಮಾಡಲು ಮುಂದಾಗಿದೆ. ಶೀಘ್ರವೇ ಈ ಕಾರ್ ಅನ್ನು ನೀವು ಭಾರತೀಯ ಮಾರುಕಟ್ಟೆಗೆ ಲಾಂಚ್ ಆಗುವುದನ್ನು ನಿರೀಕ್ಷಿಸಬಹುದಾಗಿದೆ.