Asianet Suvarna News Asianet Suvarna News

Ford Factory ಶೀಘ್ರದಲ್ಲೇ ಭಾರತದಲ್ಲಿನ ಫೋರ್ಡ್ ಕಾರಿನ ಉತ್ಪಾದನಾ ಘಟಕ ಟಾಟಾ ಮೋಟಾರ್ಸ್ ತೆಕ್ಕೆಗೆ!

  • ಭಾರತದಲ್ಲಿ ಉತ್ಪಾದನೆ ಸ್ಥಗಿತಗೊಳಿಸಿರುವ ಫೋರ್ಡ್ ಕಾರು
  • 4,500 ಕೋಟಿ ರೂ ಮೌಲ್ಯದ ಘಟಕ ಖರೀದಿಗೆ ಟಾಟಾ ತಯಾರಿ
  • ಪ್ರತಿ ವರ್ಷ 2.4 ಲಕ್ಷ ಫೋರ್ಡ್ ಕಾರು ಉತ್ಪಾದಿಸುತ್ತಿದ್ದ ಘಟಕ
Tata Motors to buy Ford sanand Car Factory soon submitted proposal Gujarat Government for transfer ownership ckm
Author
Bengaluru, First Published Mar 18, 2022, 4:11 PM IST | Last Updated Mar 18, 2022, 4:11 PM IST

ನವದೆಹಲಿ(ಮಾ.18): ಭಾರತದಲ್ಲಿನ ಫೋರ್ಡ್ ಕಾರು(Ford Cars) ಉತ್ಪಾದನೆ ಸ್ಥಗಿತಗೊಳಿಸಿದೆ. ಹೀಗಾಗಿ ಗುಜರಾತ್‌ನಲ್ಲಿರುವ ಫೋರ್ಡ್ ಕಾರು ಉತ್ಪಾದನಾ ಘಟಕವನ್ನು ಇದೀಗ ಟಾಟಾ ಮೋಟಾರ್ಸ್(Tata Motors) ಖರೀದಿಸಲು ತಯಾರಿ ನಡೆಸಿದೆ. ಟಾಟಾ ಮೋಟಾರ್ಸ್ ಹಾಗೂ ಫೋರ್ಡ್ ಈಗಾಗಲೇ ಈ ಕುರಿತು ಪ್ರಸ್ತಾವನೆಯನ್ನು ಗುಜರಾತ್ ಸರ್ಕಾರಕ್ಕೆ ಸಲ್ಲಿಸಿದೆ. ಒಂದು ವಾರದೊಳಗೆ ಫೋರ್ಡ್ ಘಟಕ ಟಾಟಾ ಮೋಟಾರ್ಸ್ ಕೈಸರಲಿದೆ.

 ಫೋರ್ಡ್ ಕಂಪನಿಯ ಗುಜರಾತ್‌ನ ಸನಂದ್ ಉತ್ಪಾದನಾ ಘಟಕ ಸದ್ಯ(Sanand Ford Car Factory) ಉತ್ಪಾದನೆಯಿಲ್ಲದೆ ಸ್ಥಗಿತಗೊಂಡಿದೆ. ಭಾರತದಲ್ಲಿ ಫೋರ್ಡ್ ಹೊಸ ಕಾರುಗಳ ವ್ಯವಾಹರ ಅಂತ್ಯಗೊಳಿಸಿದೆ. 4,500 ಕೋಟಿ ರೂಪಾಯಿ ಮೌಲ್ಯದ ಈ ಘಟಕ ಇನ್ನೊಂದು ವಾರದಲ್ಲಿ ಟಾಟಾ ಮೋಟಾರ್ಸ್ ಕೈಸೇರುವ ಸಾಧ್ಯತೆ ಇದೆ.

ಅತ್ಯುತ್ತಮ ಪರ್ಫಾಮೆನ್ಸ್, ಕೈಗೆಟುಕುವ ದರ, ಟಾಟಾ ಟಿಗೋರ್ ಇವಿ ಟೆಸ್ಟ್ ಡ್ರೈವ್ Review

ಫೋರ್ಡ್ ಸನಂದ್ ಘಟಕದಲ್ಲಿ ಪ್ರತಿ ವರ್ಷ 2.4 ಲಕ್ಷ ಫೋರ್ಡ್ ಕಾರುಗಳನ್ನು ಉತ್ಪಾದಿಸಲಾಗುತ್ತಿತ್ತು. ಇನ್ನು 2.7 ಲಕ್ಷ ಕಾರಿನ ಎಂಜಿನ್ ಉತ್ಪಾದಿಸಲಾಗುತ್ತಿತ್ತು. ಈ ಘಟಕವನ್ನು ಇದೀಗ ಟಾಟಾ ಮೋಟಾರ್ಸ್ ಖರೀದಿಸುತ್ತಿದೆ. ಟಾಟಾ ಮೋಟಾರ್ಸ್ ಕಾರುಗಳಿಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ. ಹೀಗಾಗಿ ಟಾಟಾ ತನ್ನು ಉತ್ಪಾದನೆಯನ್ನು ವಿಸ್ತರಿಸುವ ಮೂಲಕ ಗ್ರಾಹಕರಿಗೆ ಹೆಚ್ಚಿನ ವಿಳಂಬವಿಲ್ಲದೆ ಕಾರು ವಿತರಣೆ ಮಾಡಲು ಮುಂದಾಗಿದೆ.

ಟಾಟಾ ಮೋಟಾರ್ಸ್ ಕೂಡ ಗುಜರಾತನ್‌ ಸನಂದ್‌ನಲ್ಲಿ ಘಟಕ ಹೊಂದಿದೆ. ಈ ಘಟಕದಲ್ಲಿ ಸದ್ಯ ಟಾಟಾ ಮೋಟಾರ್ಸ್ ಟಾಟಾ ಟಿಗೋರ್ ಎಲೆಕ್ಟ್ರಿಕ್, ಟಿಗೋರ್ ಹಾಗೂ ಟಿಯಾಗೋ ಇಂಧನ ವಾಹನಗಳ ಉತ್ಪಾದನೆ ಮಾಡುತ್ತಿದೆ. ಪ್ರತಿ ವರ್ಷ 1.5 ಲಕ್ಷ ಕಾರುಗಳ ಉತ್ಪಾದನೆ ಮಾಡಲಾಗುತ್ತಿದೆ. ಇದೀಗ ಫೋರ್ಡ್ ಘಟಕ ಖರೀದಿಸಿ ಉತ್ಪಾದನೆ ವೇಗ ಹೆಚ್ಚಿಸಲು ಟಾಟಾ ಮೋಟಾರ್ಸ್ ನಿರ್ಧರಿಸಿದೆ.

Tata Car offers ಟಾಟಾ ಕಾರು ಖರೀದಿಸುವ ಗ್ರಾಹಕರಿಗೆ ಬಂಪರ್ ಆಫರ್, ಮಾರ್ಚ್ ತಿಂಗಳ ಡಿಸ್ಕೌಂಟ್ ಘೋಷಣೆ!

ಭಾರತದಲ್ಲಿ ಫೋರ್ಡ್‌ ಕಾರು ಉತ್ಪಾದನೆ ಸ್ಥಗಿತ
ಅಮೆರಿಕದ ಜನಪ್ರಿಯ ಕಾರು ತಯಾರಿಕಾ ಕಂಪನಿಗಳ ಪೈಕಿ ಒಂದಾದ ಫೋರ್ಡ್‌ ಮೋಟಾರ್ಸ್  ಭಾರತದಲ್ಲಿರುವ ತನ್ನ ಎರಡೂ ಘಟಕಗಳನ್ನು ಸ್ಥಗಿತಗೊಳಿಸುವ ನಿರ್ಧಾರ ಕೈಗೊಂಡಿದೆ. ಕಾರು ಉತ್ಪಾದನಾ ಘಟಕ ನಷ್ಟದಲ್ಲಿ ಇರುವ ಕಾರಣ ಅದನ್ನು ಮುಚ್ಚುವ ತೀರ್ಮಾನ ಕೈಗೊಳ್ಳಲಾಗಿದ್ದು, ಸುಮಾರು ಒಂದು ವರ್ಷದಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಫೋರ್ಡ್‌ ಕಂಪನಿ ತಿಳಿಸಿದೆ.

ಗುಜರಾತಿನ ಸನಂದ್‌ ಮತ್ತು ತಮಿಳುನಾಡಿನ ಮರೈಮಲಾಯ್‌ನಲ್ಲಿ ಕಾರು ಉತ್ಪಾದನಾ ಘಟಕವನ್ನು ಹೊಂದಿದೆ. ಉತ್ಪಾದನೆ ಸ್ಥಗಿತವಾಗಿದ್ದರೂ ಆಮದಿನ ಮೂಲಕ ಭಾರತದಲ್ಲಿ ಕಾರುಗಳ ಮಾರಾಟವನ್ನು ಫೋರ್ಡ್‌ ಮುಂದುವರಿಸಲಿದೆ. ಜೊತೆಗೆ ಹಾಲಿ ಗ್ರಾಹಕರಿಗೆ ಕಾರುಗಳ ಸವೀರ್‍ಸ್‌ ನೀಡಲು ಡೀಲರ್‌ಗಳನ್ನು ಬೆಂಬಲಿಸುವುದಾಗಿಯೂ ತಿಳಿಸಿದೆ. ಜನರಲ್‌ ಮೋಟ​ಾರ್ಸ್ ಬಳಿಕ ಭಾರತದಲ್ಲಿ ಘಟಕವನ್ನು ಸ್ಥಗಿತಗೊಳಿಸುತ್ತಿರುವ ಅಮೆರಿಕ ಮೂಲದ ಎರಡನೇ ಕಂಪನಿ ಇದಾಗಿದೆ. 

ಭಾರತದಲ್ಲಿ ಟಾಟಾ ಮೋಟಾರ್ಸ್ ಅತ್ಯಧಿಕ ವೇಗದಲ್ಲಿ ಬೆಳೆಯುತ್ತಿದೆ. ತನ್ನ ಜಾಲ ವಿಸ್ತರಿಸುತ್ತಿದೆ. ಹೊಸ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ಟಾಟಾ ನೆಕ್ಸಾನ್, ಟಾಟಾ ಅಲ್ಟ್ರೋಜ್, ಟಾಟಾ ಹ್ಯಾರಿಯರ್, ಟಾಟಾ ಸಫಾರಿ, ಟಾಟಾ ಟಿಯಾಗೋ ಹಾಗೂ ಟಿರೋಗ್ ಕಾರುಗಳು ಭಾರಿ ಬೇಡಿಕೆ ಪಡೆದುಕೊಂಡಿದೆ. ಇದರ ಜೊತೆಗೆ ಎಲೆಕ್ಟ್ರಿಕ್ ಕಾರುಗಳು ಬೇಡಿಕೆ ಹೆಚ್ಚಾಗಿದೆ ಇತ್ತೀಚೆಗೆ ಟಾಟಾದ ಕಾಜಿರಂಗ ಎಡಿಶನ್‌ ಎಸ್‌ಯುವಿ ಬಿಡುಗಡೆ ಮಾಡಿದೆ. ವನ್ಯಜೀವಿ ವೈವಿಧ್ಯತೆಗೆ ಹೆಸರಾದ ಕಾಜಿರಂಗದ ಹೆಸರಿನಲ್ಲಿ ತನ್ನ ಎಸ್‌ಯುವಿಗಳನ್ನು ಟಾಟಾ ಹೊರತರುತ್ತಿದೆ. ಭಾರತದ ವನ್ಯಜೀವಿ ಜಗತ್ತಿಂದ ಪ್ರೇರಣೆ ಪಡೆದು ಈ ಕಾರಿನ ಹೊರ ಮೈ ವಿನ್ಯಾಸ ಮಾಡಿರುವುದಾಗಿ ಕಂಪನಿ ತಿಳಿಸಿದೆ. ಹುಲ್ಲುಗಾವಲಿನ ವಿಶಿಷ್ಟಬಣ್ಣದಲ್ಲಿ ಈ ಕಾರುಗಳ ಹೊರಮೈ ವಿನ್ಯಾಸವಿದೆ. ಹೆಚ್ಚಿನ ಮಾಹಿತಿಗೆ ಕಂಪನಿ ವೆಬ್‌ಸೈಟ್‌ ನೋಡಿ.

Latest Videos
Follow Us:
Download App:
  • android
  • ios