ಟಾಟಾ ಮೋಟಾರ್ಸ್‌ನಿಂದ ಮಹತ್ವದ ಹೆಜ್ಜೆ, 700 ಕೋಟಿ ರೂ ಹೂಡಿಕೆ ಭಾರತದ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆ ಆಕ್ರಮಸಿಕೊಳ್ಳಲು ಪ್ಲಾನ್ ಅಗ್ಗದ ದರ ಎಲೆಕ್ಟ್ರಿಕ್ ಕಾರು ಬಿಡುಗಡೆ ಟಾಟಾ ಪ್ಲಾನ್


ನವದೆಹಲಿ(ಡಿ.23):  ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ(Electric Vehicle) ಕೇಂದ್ರ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. ಇತ್ತ ಹಲವು ಆಟೋ ಕಂಪನಿಗಳು(Auto Copany) ಹೊಸ ಹೊಸ ಎಲೆಕ್ಟ್ರಿಕ್ ವಾಹನ ಬಿಡುಗಡೆ ಮಾಡಿ ಭಾರತದ ಮಾರುಕಟ್ಟೆ ಆಕ್ರಮಿಸಿಕೊಳ್ಳುವ ಯತ್ನದಲ್ಲಿದೆ. ಇದೀಗ ಭಾರತದಲ್ಲಿ ಮುಂಚೂಣಿಯಲ್ಲಿರುವ ಎಲೆಕ್ಟ್ರಿಕ್ ಮೊಬಿಲಿಟಿಯಾದ ಟಾಟಾ ಮೋಟಾರ್ಸ್ 700 ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದೆ. ಈ ಮೂಲಕ ಭಾರತದಲ್ಲಿ ಕೈಗೆಟುಕುವ ದರದ ಎಲೆಕ್ಟ್ರಿಕ್ ಕಾರು(Affordable Electric cars) ಬಿಡುಗಡೆ ಮಾಡಲು ಟಾಟಾ ಮುಂದಾಗಿದೆ.

ಟಾಟಾ ಎಲೆಕ್ಟ್ರಿಕ್ ವಾಹನ ಉತ್ಪಾದನೆ ಹಾಗೂ ಮಾರಾಟವನ್ನು ಟಾಟಾ ಪ್ಯಾಸೇಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ (TPEML) ನೋಡಿಕೊಳ್ಳುತ್ತಿದೆ. ಡಿಸೆಬರ್ 21 ರಂದು TPEML ಪ್ರತ್ಯೇಕ ಹಾಗೂ ಸ್ವಾಯತ್ತತ ಆಟೋ ಕಂಪನಿ ಎಂದು ಕಾರ್ಪೋರೇಟ್ ವ್ಯವಹಾರಗಳ ಸಚಿವಾಯದಿಂದ(Ministry of Corporate Affairs) ಪ್ರಮಾಣ ಪತ್ರ ಪಡೆದಿದೆ. ಶೇಕಡಾ 100 ರಷ್ಟು ಸ್ವಾಯತ್ತ ಬಂಡವಾಳ ಹೊಂದಿರುವ ಕಂಪನಿಯಾಗಿದೆ. ಇದೀಗ TPEML 700 ಕೋಟಿ ರೂಪಾಯಿ ಈಕ್ವಿಟಿ(equity shares) ಹೂಡಿಕೆ ಮಾಡಿದೆ.

500 ಕಿ.ಮೀ ಮೈಲೇಜ್, 10 ಲಕ್ಷ ರೂಪಾಯಿ; ಶೀಘ್ರದಲ್ಲೇ ಟಾಟಾ ಅಲ್ಟ್ರೋಜ್ EV ಬಿಡುಗಡೆ!

ಇದೀಗ TPEML ಕಂಪನಿ 10 ರೂಪಾಯಿ ಮೌಲ್ಯದ 70,00,00,000 ಈಕ್ವಿಟಿ ಷೇರು ಹೊಂದಿದೆ. ಇದರ ಮೌಲ್ಯ 700 ಕೋಟಿ ರೂಪಾಯಿ. ಈಗಾಗಲೇ ಟಾಟಾ ಎಲೆಕ್ಟ್ರಿಕ್ ಮೊಬಿಲಿಟಿ ಕಂಪನಿ ಮುಂದಿನ 5 ವರ್ಷಗಳಲ್ಲಿ 2 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತ ಹೂಡಿಕೆ ಮಾಡುತ್ತಿದೆ. ಈ ಮೂಲಕ ಹೊಸ ಹೊಸ ಕಾರು, ಗರಿಷ್ಠ ಮೈಲೇಜ್ ಹಾಗೂ ಕೈಗೆಟುಕುವ ದರದ ಕಾರುಗಳನ್ನು ಬಿಡುಗಡೆ ಮಾಡುವುದಾಗಿ ಆಕ್ಟೋಬರ್ ತಿಂಗಳಲ್ಲಿ ಘೋಷಿಸಿದೆ.

ಟಾಟಾ ಎಲೆಕ್ಟ್ರಿಕ್ ಮೊಬಿಲಿಟಿ ಕಾರು:
ಭಾರತದಲ್ಲಿ ಸದ್ಯ ಲಭ್ಯವಿರುವ ಕೈಗೆಟುಕುವ ದರದ ಹಾಗೂ ಅತ್ಯುತ್ತಮ ಎಲೆಕ್ಟ್ರಿಕ್ ಕಾರುಗಳಲ್ಲಿ ಟಾಟಾ ಮುಂಚೂಣಿಯಲ್ಲಿದೆ. ಟಾಟಾ ನೆಕ್ಸಾನ್ ಇವಿ, ಟಾಟಾ ಟಿಗೋರ್ ಇವಿ ಭಾರತದ ಮಾರುಕಟ್ಟೆಯಲ್ಲಿ ಅಗ್ರಜನಾಗಿ ಹೊರಹೊಮ್ಮಿದೆ. ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು 15 ಲಕ್ಷ ರೂಪಾಯಿ ಬೆಲೆಯಲ್ಲಿ ಲಭ್ಯವಿದೆ. ಇನ್ನು ಟಿಗೋರ್ ಎಲೆಕ್ಟ್ರಿಕ್ ಕಾರು 11 ರಿಂದ 13 ಲಕ್ಷ ರೂಪಾಯಿ ಮೌಲ್ಯದಲ್ಲಿ ಲಭ್ಯವಿದೆ. ನೆಕ್ಸಾನ್ ಇವಿ ಒಂದು ಬಾರಿ ಚಾರ್ಚ್ ಮಾಡಿದರೆ 312 ಕಿಲೋಮೀಟರ್ ಮೈಲೇಜ್ ರೇಂಜ್ ಸಾಮರ್ಥ್ಯ ಹೊಂದಿದೆ. ಇನ್ನು ಟಿಗೋರ್ ಇವಿ 300 ಕಿ.ಮೀ ಮೈಲೇಜ್ ರೇಂಜ್ ಹೊಂದಿದೆ.

ಗೋವಾ ದಾಟಂಗಿಲ್ಲ, ಹುಬ್ಳೀಲಿ ಸಿಗಂಗಿಲ್ಲ; ಗಡಿ ಚೆಕ್‌ಪೋಸ್ಟ್ ಬಳಿ ಕಾರು ಡೆಲಿವರಿ ಪಡೆದ ಉದ್ಯಮಿ!

ಶೀಘ್ರದಲ್ಲೇ ಟಾಟಾ ಎಲೆಕ್ಟ್ರಿಕ್ ಮೊಬಿಲಿಟಿ ಟಾಟಾ ಅಲ್ಟ್ರೋಜ್ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡುತ್ತಿದೆ. ವಿಶೇಷ ಅಂದರೆ 500 ಕಿ.ಮೀ ಮೈಲೇಜ್ ಸಾಮರ್ಥ್ಯ ಹೊಂದಿದೆ ಎಂದು ಟಾಟಾ ಎಲೆಕ್ಟ್ರಿಕ್ ಮೊಬಿಲಿಟಿ ಹೇಳಿದೆ. ಈ ಕಾರಿನ ಬೆಲೆ 10 ಲಕ್ಷ ರೂಪಾಯಿ ಒಳಗಿರಲಿದೆ ಎಂದಿದೆ. ಇದೀಗ ಎಂಜಿ ಮೋಟಾರ್ಸ್, ಕಿಯಾ ಸೇರಿದಂತೆ ಇತರ ಆಟೋ ಕಂಪನಿಗಳು ಕೈಗೆಟುಕುವ ದರದ ಎಲೆಕ್ಟ್ರಿಕ್ ವಾಹನ ಬಿಡುಗಡೆ ಮಾಡಲು ಮುಂದಾಗಿದೆ. ಇದರ ನಡುವೆ ಟಾಟಾ ಎಲೆಕ್ಟ್ರಿಕ್ ಮಾರುಕಟ್ಟೆಯಲ್ಲಿ ಅಗ್ರಜನಾಗಿ ಮುಂದುವರಿಯಲು ಎಲ್ಲಾ ತಯಾರಿ ಮಾಡಿದೆ.

10 ತಿಂಗಳಲ್ಲಿ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ದಾಖಲೆ; ಭಾರತದ EV ಲೋಕದಲ್ಲಿ ಹೊಸ ಸಂಚಲನ!

ಟಾಟಾ ಮೋಟಾರ್ಸ್ ಸೇಫ್ಟಿ:
ಟಾಟಾ ಮೋಟಾರ್ಸ್ ಎಲ್ಲಾ ವಾಹನಗಳು ಗರಿಷ್ಠ ಸೇಫ್ಟಿ ಕಾರು ಎಂದೇ ಗುರಿತಿಸಿಕೊಂಡಿದೆ. ಟಾಟಾ ಮೋಟಾರ್ಸ್ ಇಂಧನ ಕಾರು ಹಾಗೂ ಎಲೆಕ್ಟ್ರಿಕ್ ಕಾರುಗಳು 5 ಸ್ಟಾರ್ ಸೇಫ್ಟಿ ಪಡೆದುಕೊಂಡಿದೆ. ಟಾಟಾ ನೆಕ್ಸಾನ್ ಇವಿ, ಟಾಟಾ ಟಿಗೋರ್ ಇವಿ ಕೂಡ 5 ಸ್ಟಾರ್ ಪಡೆದುಕೊಂಡಿದೆ. ಇನ್ನು ಟಾಟಾದ ಇಂಧನ ಕಾರುಗಳಾದ ಟಾಟಾ ಟಿಯಾಗೋ, ಟಾಟಾ ಟಿಗೋರ್, ಟಾಟಾ ನೆಕ್ಸಾನ್, ಟಾಟಾ ಹ್ಯಾರಿಯರ್, ಟಾಟಾ ಸಫಾರಿ, ಟಾಟಾ ಹೆಕ್ಸಾ ಕಾರುಗಳು 5 ಸ್ಟಾರ್ ಸೇಫ್ಟಿ ಪಡೆದುಕೊಂಡಿದೆ.