500 ಕಿ.ಮೀ ಮೈಲೇಜ್, 10 ಲಕ್ಷ ರೂಪಾಯಿ; ಶೀಘ್ರದಲ್ಲೇ ಟಾಟಾ ಅಲ್ಟ್ರೋಜ್ EV ಬಿಡುಗಡೆ!

  • ಮತ್ತೊಂದು ಸಿಹಿ ಸುದ್ದಿ ನೀಡಿದ ಟಾಟಾ ಮೋಟಾರ್ಸ್ 
  • ಅಲ್ಟ್ರೋಜ್ ಎಲೆಕ್ಟ್ರಿಕ್ ಕಾರಿನ ಮೈಲೇಜ್ ಬಹಿರಂಗ
  • 500 ಕಿ.ಮೀ ಮೈಲೇಜ್, 10 ಲಕ್ಷ ರೂಪಾಯಿ ಬೆಲೆಯಲ್ಲಿ ಅಲ್ಟ್ರೋಜ್ EV
Tata Altroz electric car able to deliver 40 percent more range than Nexon EV ckm

ಮುಂಬೈ(ಜು.24): ದೇಶದಲ್ಲಿ ಅತ್ಯಂತ ಸುರಕ್ಷಿತ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರುವ ಟಾಟಾ ಮೋಟಾರ್ಸ್, ಅತ್ಯಾಕರ್ಷಕ ವಿನ್ಯಾಸ ಹಾಗೂ ತಂತ್ರಜ್ಞಾನ ಹೊಂದಿದೆ. ಟಾಟಾ ಮೋಟಾರ್ಸ್ ಈಗಾಗಲೇ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿ ಭಾರಿ ಸಂಚಲನ ಸೃಷ್ಟಿಸಿದೆ. ಇದೀಗ ಟಾಟಾ ಅಲ್ಟ್ರೋಜ್ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಸಜ್ಜಾಗಿದೆ. ನೂತನ ಕಾರಿನ ಮೈಲೇಜ್ ಸಂಪೂರ್ಣ ಚಾರ್ಜ್‌ಗೆ 500 ಕಿ.ಮೀ ಅನ್ನೋದು ಬಯಲಾಗಿದೆ.

Tata Altroz electric car able to deliver 40 percent more range than Nexon EV ckm

ಗೋವಾ ದಾಟಂಗಿಲ್ಲ, ಹುಬ್ಳೀಲಿ ಸಿಗಂಗಿಲ್ಲ; ಗಡಿ ಚೆಕ್‌ಪೋಸ್ಟ್ ಬಳಿ ಕಾರು ಡೆಲಿವರಿ ಪಡೆದ ಉದ್ಯಮಿ!

ಅಲ್ಟ್ರೋಜ್ ಎಲೆಕ್ಟ್ರಿಕ್ ಕಾರು ಘೋಷಣೆ ಮಾಡಿ  ವರ್ಷಗಳು ಉರುಳಿವೆ. ಆದರೆ ಕೊರೋನಾ ಸೇರಿದಂತೆ ಹಲವು ಸಮಸ್ಯೆಗಳಿಂದ ಟಾಟಾ ಅಲ್ಟ್ರೋಜ್ ಎಲೆಕ್ಟ್ರಿಕ್ ಕಾರಿಗೆ ಬಿಡುಗಡೆ ಭಾಗ್ಯ ಸಿಗಲಿಲ್ಲ. ಇದೀಗ ಅಲ್ಟ್ರೋಜ್ ಬಿಡುಗಡೆಗ ಸಜ್ಜಾಗಿದೆ. ನೂತನ ಕಾರಿನ ಮೈಲೇಜ್ 500 ಕಿ.ಮೀ ಎಂದು ಹೇಳಲಾಗುತ್ತಿದೆ.

Tata Altroz electric car able to deliver 40 percent more range than Nexon EV ckm

ಸದ್ಯ ಮಾರುಕಟ್ಟೆಯಲ್ಲಿರುವ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಮೈಲೇಜ್ 312 ಕಿ.ಮೀ. ಅಲ್ಟ್ರೋಜ್ ಬಿಡುಗಡೆಯಾಗುವ ವೇಳೆ ನೆಕ್ಸಾನ್ ಕಾರಿನ ಮೈಲೇಜ್ ಕೂಡ ಅಪ್‌ಗ್ರೇಡ್ ಮಾಡಲು ಟಾಟಾ ಮುಂದಾಗಿದೆ.  ಈ ಮೂಲಕ ಟಾಟಾ ಕಾರು ಕೂಡ ದುಬಾರಿ ಎಲೆಕ್ಟ್ರಿಕ್ ಕಾರುಗಳಂತೆ 500 ಕಿ.ಮೀ ಮೈಲೇಜ್ ನೀಡಲಿದೆ.

ಸರ್ಕಾರದಿಂದ ಭರ್ಜರಿ ಆಫರ್; ಟಾಟಾ ನೆಕ್ಸಾನ್, ಟಿಗೋರ್ ಎಲೆಕ್ಟ್ರಿಕ್ ಕಾರಿನ ಮೇಲೆ 3 ಲಕ್ಷ ರೂ ಡಿಸ್ಕೌಂಟ್!

ಅಲ್ಟ್ರೋಜ್ ಎಲೆಕ್ಟ್ರಿಕ್ ಕಾರಿನ ಬೆಲೆ 12 ಲಕ್ಷ ರೂಪಾಯಿಯಿಂದ ಆರಂಭಗೊಳ್ಳಲಿದೆ. ಕೇಂದ್ರ ಸರ್ಕಾರದ FEMA ಯೋಜನೆಯಡಿ ಅಲ್ಟ್ರೋಜ್ ಎಲೆಕ್ಟ್ರಿಕ್ ಕಾರಿನ ಆರಂಭಿಕ ಬೆಲೆ 10 ಲಕ್ಷ ರೂಪಾಯಿ ಆಗಲಿದೆ. ಭಾರತದಲ್ಲಿ ಕಡಿಮೆ ಬೆಲೆ, ಗರಿಷ್ಠ ಮೈಲೇಜ್, ಗರಿಷ್ಠ ಸುರಕ್ಷತೆಯ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿ ಸಂಚಲನ ಸೃಷ್ಟಿಸಿದ್ದ ಟಾಟಾ ಇದೀಗ, ಅಲ್ಟ್ರೋಜ್ ಮೂಲಕ ದೇಶದ ಎಲೆಕ್ಟ್ರಿಕ್ ಮಾರುಕಟ್ಟೆ ಸಂಪೂರ್ಣ ಆಕ್ರಮಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

Tata Altroz electric car able to deliver 40 percent more range than Nexon EV ckm
 

Latest Videos
Follow Us:
Download App:
  • android
  • ios