ಮಳೆಗಾಲದಲ್ಲಿ ಎಲೆಕ್ಟ್ರಿಕ್ ವಾಹನ ಅಪಾಯಕಾರಿಯಲ್ಲ: ಸತ್ಯ-ಮಿಥ್ಯಗಳ ಸಂಪೂರ್ಣ ಮಾಹಿತಿ!
ಎಲೆಕ್ಟ್ರಿಕ್ ವಾಹನ ವಿಶ್ವದಲ್ಲೇ ಪ್ರಾಬಲ್ಯ ಸಾಧಿಸುತ್ತಿದೆ. ಭಾರತದಲ್ಲಿ EVಗೆ ಹೆಚ್ಚಿನ ಬೇಡಿಕೆ ಬರುತ್ತಿದೆ. ಆದರೆ ಕೆಲ ಜನರಲ್ಲಿ ಮಳೆಗಾಲ ಅಥವಾ ನೀರಿನಲ್ಲಿ ಎಲೆಕ್ಟ್ರಿಕ್ ವಾಹನ ಚಾಲನೆ, ಚಾರ್ಜಿಂಗ್ ಅಪಾಯಕಾರಿ ಅನ್ನೋ ತಪ್ಪು ಕಲ್ಪನೆಗಳಿವೆ. ಯಾವುದೇ ಹವಾಮಾನಕ್ಕೂ ಎಲೆಕ್ಟ್ರಿಕ್ ವಾಹನ ಹೇಗೆ ಸಹಕಾರಿಯಾಗಿದೆ. ಈ ಕುರಿತು ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ಕಾರು ಪ್ರೊಡಕ್ಟ್ ಲೈನ್ ಡೈರೆಕ್ಟರ್ ಆನಂದ್ ಕುಲಕರ್ಣಿ ವಿವರಿಸಿದ್ದಾರೆ.
ಆನಂದ್ ಕುಲಕರ್ಣಿ
ಪ್ರೊಡಕ್ಟ್ ಲೈನ್ ಡೈರೆಕ್ಟರ್, ಟಾಟಾ ಮೋಟಾರ್ಸ್
ಕಳೆದ ಕೆಲವು ವರ್ಷಗಳಲ್ಲಿ, ಎಲೆಕ್ಟ್ರಿಕ್ ವಾಹನಗಳು ನಿಧಾನವಾಗಿ ಆಟೋಮೋಟಿವ್ ಕ್ಷೇತ್ರದಲ್ಲಿ ಪ್ರಾಮುಖ್ಯತೆಯನ್ನು ಪಡೆಯುತ್ತಿವೆ ಮತ್ತು ಪ್ರಾಬಲ್ಯ ಸಾಧಿಸಲು ಹೆಚ್ಚು ಸಮಯ ಬೇಕಾಗುವುದಿಲ್ಲ. ಅವು ತಮ್ಮ ಐಸಿಇ ಎಂಜಿನ್ ಪ್ರತಿರೂಪಗಳಿಗೆ ಹೋಲಿಸಿದರೆ ಹೆಚ್ಚಿನ ಸಾಧನೆ ತೋರದಿದ್ದರೂ ಕನಿಷ್ಠ ಸಮಾನರು ಎಂದು ಜಗತ್ತಿಗೆ ತೋರಿಸಿವೆ. ಅದೇನೇ ಇದ್ದರೂ, ಅವುಗಳ ಸಾಮಥ್ರ್ಯಗಳ ಬಗ್ಗೆ, ಅದರಲ್ಲೂ ವಿಶೇಷವಾಗಿ ಮಳೆಗಾಲದ ಹವಾಮಾನದ ವಿರುದ್ಧ ಅವುಗಳ ಪ್ರತಿರಕ್ಷೆಯ ವಿಷಯಕ್ಕೆ ಬಂದಾಗ ಇನ್ನೂ ಕೆಲವು ಮಿಥ್ಯಗಳಿವೆ ಎಂದು ತೋರುತ್ತದೆ. ಮಾನ್ಸೂನ್ ಸಮೀಪಿಸುತ್ತಿದ್ದಂತೆ, ಪ್ರತಿಯೊಬ್ಬರ ಮನಸ್ಸಿನಲ್ಲಿರುವ ಪ್ರಶ್ನೆಯೆಂದರೆ - ಎಲೆಕ್ಟ್ರಿಕ್ ವಾಹನವು ಮಳೆಗಾಲದ ದಿನಗಳನ್ನು ದಾಟಬಹುದೇ?
ಲೀಸ್ ಮೂಲಕ ಕಾರು; ಟಾಟಾ ನೆಕ್ಸಾನ್ EV ಮೇಲೆ ಭರ್ಜರಿ ಆಫರ್!.
ಮಿಥ್ಯ 1: ಜಲಾವೃತ ಪ್ರದೇಶಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಹಾನಿಗೊಳಗಾಗುತ್ತವೆ
ನಿಜಸ್ಥಿತಿ::
ಎಲೆಕ್ಟ್ರಿಕ್ ವಾಹನಗಳು (ಇಂಗ್ರೆಸ್ ಪ್ರೊಟೆಕ್ಷನ್) ವ್ಯವಸ್ಥೆಯನ್ನು ಹೊಂದಿವೆ. ಎಲೆಕ್ಟ್ರಿಕ್ ವಾಹನದಲ್ಲಿ ವಿಶಿಷ್ಟವಾದ ಐಪಿ ರೇಟಿಂಗ್ ವಾಹನವನ್ನು ಅವಲಂಬಿಸಿ ಐಪಿ65 ಅಥವಾ ಐ 67 ರೇಟಿಂಗ್ ಆಗಿರಬಹುದು. ಇಲ್ಲಿ ಅಂಕೆಗಳು ಧೂಳು ಮತ್ತು ನೀರು ಎಂಬ ಎರಡು ಅಂಶಗಳ ವಿರುದ್ಧ ಅವುಗಳ ರಕ್ಷಣೆಯನ್ನು ಪ್ರತಿನಿಧಿಸುತ್ತವೆ. ಹೀಗಾಗಿ, ಸಂಖ್ಯೆಯು ಹೆಚ್ಚಿದ್ದಷ್ಟೂ ಈ ಎರಡು ಅಂಶಗಳ ವಿರುದ್ಧದ ರಕ್ಷಣೆ ಹೆಚ್ಚಾಗಿರುತ್ತದೆ. ಇಂದಿನ ಆಧುನಿಕ ಎಲೆಕ್ಟ್ರಿಕ್ ವಾಹನ ಬ್ಯಾಟರಿಗಳು ಐಪಿ67 ರೇಟಿಂಗ್ ಹೊಂದಿವೆ. ನೆಕ್ಸನ್ ಇವಿ ಸಹ ಐಪಿ67 ರೇಟೆಡ್ ಬ್ಯಾಟರಿ ಪ್ಯಾಕ್‍ನೊಂದಿಗೆ ಬರುತ್ತದೆ. ಐಪಿ67 ಕ್ಕಿಂತ ನಂತರದ ಯಾವುದನ್ನಾದರೂ ಸಾಮಾನ್ಯವಾಗಿ ಜಲಾಂತರ್ಗಾಮಿ ನೌಕೆಗಳ ವಿಶೇಷ ಸಾಧನಗಳಿಗೆ ಬಳಸುವುದರಿಂದ ಇದೇ ಸಾಕಷ್ಟಾಗುತ್ತದೆ. ಐಪಿ67 ರೇಟಿಂಗ್ ಯಾವುದೇ ಸೋರಿಕೆಯಿಲ್ಲದೆ ವಾಹನವನ್ನು 30 ನಿಮಿಷಗಳವರೆಗೆ ಒಂದು ಮೀಟರ್ ಎತ್ತರದ ನೀರಿನಲ್ಲಿ ಮುಳುಗಿಸಲು ಅನುವು ಮಾಡಿಕೊಡುತ್ತದೆ. ಹೀಗಾಗಿ, ಕಾರಿನಲ್ಲಿ ವಾಟರ್ ಲಾಗಿಂಗ್ ಅಥವಾ ಸಾಮಾನ್ಯವಾಗಿ 300 ಎಂಎಂ ವೇಡಿಂಗ್ ಆಳವಿರುವ ಪ್ರವಾಹದಂತಹ ಪರಿಸ್ಥಿತಿಯನ್ನು ಎದುರಿಸಬೇಕಾದ ಪರಿಸ್ಥಿತಿಯಲ್ಲಿ ವಾಹನದ ಟರ್ಮಿನಲ್ಗಳು, ಕನೆಕ್ಟರ್ಸ್ ಮತ್ತು ಹೈ ವೋಲ್ಟೇಜ್ ಸಂರಚನೆಗೆ ಹಾನಿಯಾಗುವ ಬಗ್ಗೆ ಚಿಂತಿಸಬೇಕಾಗಿಲ್ಲ. ಹೆಚ್ಚುವರಿಯಾಗಿ, ಎಲೆಕ್ಟ್ರಿಕ್ ಕಾರನ್ನು ನೀರಿನ ಕೊಳಕ್ಕೆ ಓಡಿಸುವುದರಿಂದ ಯಾವುದೇ ಅಸಮರ್ಪಕ ಕಾರ್ಯಗಳು ಉಂಟಾಗುವುದಿಲ್ಲ, ಮತ್ತು ವಾಹನದ ಸುತ್ತಲಿನ ನೀರಿನಲ್ಲಿ ವಿದ್ಯುತ್ ಪ್ರವಹಿಸುವುದಿಲ್ಲ. ಎಲ್ಲಾ ವ್ಯವಸ್ಥೆಗಳು, ಬ್ಯಾಟರಿ ಪ್ಯಾಕ್‍ನ ಒಳಗೆ, ಅನೇಕ ಪದರಗಳ ರಕ್ಷಣಾತ್ಮಕ ಕಟ್‍ಆಫ್‍ಗಳನ್ನು ಹೊಂದಿದ್ದು, ಅವು ನೀರು ಪ್ರವೇಶಿಸಿದ ಮೊದಲ ಸುಳಿವಿನಲ್ಲಿಯೇ ಸಕ್ರಿಯಗೊಳ್ಳುತ್ತವೆ. ಮುಖ್ಯ ಬ್ಯಾಟರಿ ಪ್ಯಾಕ್ ಸಹ ಕಾರಿನ ಉಳಿದ ಭಾಗಗಳಿಂದ ವಿದ್ಯುತ್ ಅನ್ನು ಪ್ರತ್ಯೇಕಿಸುವ ಸಾಮಥ್ರ್ಯವನ್ನು ಹೊಂದಿದೆ.
ಕೊರೋನೊತ್ತರ ಜಗತ್ತಿನಲ್ಲಿ ಸಂಚಾರ: ವೈಯುಕ್ತಿ ಸಾರಿಗೆಯತ್ತ ಒಲವು ತೋರಿದ ಜನ
ಮಿಥ್ಯ 2: ಮಿಂಚಿನ ಸಂದರ್ಭದಲ್ಲಿ ಎಲೆಕ್ಟ್ರಿಕ್ ವಾಹನವು ಹಾನಿಗೊಳಗಾಗುವ ಸಾಧ್ಯತೆ ಹೆಚ್ಚು.
ನಿಜಸ್ಥಿತಿ:
ಮುಂಗಾರು ಕೆಲವೊಮ್ಮೆ ಗುಡುಗು ಸಹಿತ ಅಕಾಲಿಕ ಘಟನೆಗಳೊಂದಿಗೆ ಬರುತ್ತದೆ. ಮಿಂಚು ಎಲೆಕ್ಟ್ರಿಕ್ ವಾಹನದ ಮೇಲೆ ಬೀರಬಹುದಾದ ಪರಿಣಾಮದ ಬಗ್ಗೆ ಬಹಳಷ್ಟು ಜನರು ಚಿಂತೆಗೀಡಾಗುತ್ತಾರೆ. ಆದರೆ, ವಿಷಯದ ಸತ್ಯವೆಂದರೆ ಮಿಂಚು ನಿಜವಾಗಿಯೂ ವಾಹನಕ್ಕೆ ತಗಲಿದರೆ ಬಹುಶಃ ನೀವು ಕಾರಿನಲ್ಲಿಯೇ ಹೆಚ್ಚು ಸುರಕ್ಷಿತವಾಗಿರಬಹುದು. ಇದರ ಹಿಂದಿನ ತಾರ್ಕಿಕತೆಯೆಂದರೆ, ಒಂದು ಗುಡುಗಿನೊಂದಿಗಿನ ಮಿಂಚು ಕಾರಿಗೆ ತಗಲಿದಾಗ, ಅದು ಹೊರಭಾಗ ಅಂದರೆ ಲೋಹೀಯ ಮೇಲ್ಮೈಯನ್ನು ತಗಲುತ್ತದೆ. ಬಲವರ್ಧಿತ ಉಕ್ಕು ಮತ್ತು ಶಕ್ತಿಯನ್ನು ಹೀರಿಕೊಳ್ಳುವ ದೇಹದ ರಚನೆಯ ನೆಕ್ಸನ್ ಇವಿಯ ಕಟ್ಟುನಿಟ್ಟಿನ ರಚನೆಯು ಇತ್ತೀಚಿನ ಫುಲ್ ಫ್ರಂಟಲ್, ಸೈಡ್ ಇಂಪ್ಯಾಕ್ಟ್ ಮತ್ತು ಆಫ್‍ಸೆಟ್ ಇಂಪ್ಯಾಕ್ಟ್ ಕ್ರ್ಯಾಶ್ ನಿಯಮಗಳಿಗೆ ಅನುಗುಣವಾಗಿರುತ್ತದೆ. ವ್ಯಾಪಕ ಶ್ರೇಣಿಯ ತಾಪಮಾನದಲ್ಲಿ ಕಾರ್ಯನಿರ್ವಹಿಸುವಂತೆ, ಎಲ್ಲಾ ಹವಾಮಾನಗಳನ್ನು ತಡೆದುಕೊಳ್ಳುವಂತೆ ಈ ಕಾರನ್ನು ವಿನ್ಯಾಸಗೊಳಿಸಲಾಗಿದೆ.
ಮಿಂಚು ವಾಹನವನ್ನು ತಗಲುವಂತಿದ್ದರೆ, ವಾಹನದ ಹೊರಪದರದ ಮೇಲಿನ ವಿದ್ಯುತ್ಕಾಂತೀಯ ಪರಿಣಾಮಗಳಿಂದಾಗಿ ವಿದ್ಯುತ್ ಪ್ರವಾಹವು ಸುರಕ್ಷಿತವಾಗಿ ನೆಲಕ್ಕೆ ಹಾದುಹೋಗುತ್ತದೆ. ಇದನ್ನು ಫ್ಯಾರಡೆ ಎಫೆಕ್ಟ್ ಎಂದು ಕರೆಯಲಾಗುತ್ತದೆ. ಎನ್‍ಎಚ್‍ಟಿಎಸ್‍ಎ ವರದಿಯು ಅದೇ ರೀತಿಯ ಪರಿಸ್ಥಿತಿಯನ್ನು ಹೋಲಿಸಿದೆ ಮತ್ತು ಎಲೆಕ್ಟ್ರಿಕ್ ವಾಹನಗಳು ತಮ್ಮ ಐಸಿಇ ಒಡಹುಟ್ಟಿದವರಿಗಿಂತ ಯಾವುದೇ ರೀತಿ ಕಡಿಮೆಯಿಲ್ಲ ಎಂದು ಅದು ವರದಿ ಮಾಡಿದೆ. ವಾಸ್ತವದಲ್ಲಿ, ಮಿಂಚಿನ ತಗಲುವಿಕೆಯಿಂದ ಅವು ಯಾವುದೇ ಹಾನಿಗಳಿಗೆ ತುತ್ತಾಗುವುದಿಲ್ಲ.
ಮಿಥ್ಯ 3: ಮಳೆಯಲ್ಲಿ ಎಲೆಕ್ಟ್ರಿಕ್ ವಾಹನವನ್ನು ಚಾರ್ಜ್ ಮಾಡುವುದು ಅಪಾಯಕಾರಿ
ನಿಜಸ್ಥಿತಿ:
ಮಳೆಯಲ್ಲಿ ಎಲೆಕ್ಟ್ರಿಕ್ ವಾಹನವನ್ನು ಚಾರ್ಜ್ ಮಾಡುವ ಬಗ್ಗೆ ಜನರಿಗೆ ಇರುವ ಭಯವೆಂದರೆ ನೀರು ವಿದ್ಯುತ್ತಿನ ವಾಹಕ ಎಂದು ನಮಗೆ ತಿಳಿದಿದೆ. ಆದರೂ ಅದೃಷ್ಟವಶಾತ್, ಎಲೆಕ್ಟ್ರಿಕ್ ಕಾರ್ ಚಾರ್ಜರ್‌ಗಳು ಹವಾಮಾನ ನಿರೋಧಕವಾಗಿದ್ದು, ಕಾರು ಮತ್ತು ಅದರ ಸವಾರರನ್ನು ವಿದ್ಯುತ್ ಆಘಾತದಿಂದ ರಕ್ಷಿಸುವಂತೆ ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ. ಎಲೆಕ್ಟ್ರಿಕ್ ವಾಹನದ ಚಾರ್ಜರ್‌ಗಳನ್ನು ಸಹ ಕಟ್ಟುನಿಟ್ಟಾಗಿ ಪರೀಕ್ಷಿಸಲಾಗುತ್ತದೆ ಮತ್ತು ಅವು ಕೆಲವು ಗುಣಮಟ್ಟದ ಸುರಕ್ಷತಾ ಮಾನದಂಡಗಳನ್ನು ಪೂರೈಸಬೇಕು. ಇದಲ್ಲದೆ, ಜಲನಿರೋಧಕ ವಿದ್ಯುತ್ ಕನೆಕ್ಟರ್‌ಗಳು ಮತ್ತು ಇತರ ಯಾವುದೇ ವಿದ್ಯುತ್ ಉಪಕರಣಗಳು ಸಾಮಾನ್ಯ ವಾಡಿಕೆಯಾಗಿದೆ. ನೆಕ್ಸಾನ್ ಇವಿ ಬ್ಯಾಟರಿ ಪ್ಯಾಕ್ ಎಐಎಸ್ 048 (ನೇಲ್ ಪೆನೆಟ್ರೇಷನ್), ಕ್ರಷ್ ಟೆಸ್ಟ್, ಓವರ್‍ಚಾರ್ಜ್ ಪ್ರೊಟೆಕ್ಷನ್, ಶಾಕ್ ಪ್ರೊಟೆಕ್ಷನ್ ಮತ್ತು ಶಾರ್ಟ್ ಪ್ರೊಟೆಕ್ಷನ್ ಸೇರಿದಂತೆ ಅನೇಕ ಸುರಕ್ಷತಾ ಪರೀಕ್ಷೆಗಳನ್ನು ಅನುಸರಿಸುತ್ತದೆ.
ಮಿಥ್ಯ 4: ಪೂರಕ ಘಟಕಗಳನ್ನು ಬಳಸುವುದು ಎಲೆಕ್ಟ್ರಿಕ್ ಕಾರಿನ ವ್ಯಾಪ್ತಿಯ ಮೇಲೆ ಪರಿಣಾಮ ಬೀರುತ್ತದೆ
ನಿಜಸ್ಥಿತಿ:
ಹವಾನಿಯಂತ್ರಣ, ದೀಪಗಳು ಮುಂತಾದ ಪೂರಕ ಘಟಕಗಳನ್ನು ಬಳಸುವಾಗ ಎಲೆಕ್ಟ್ರಿಕ್ ವಾಹನವು ಹೆಚ್ಚಿನ ಚಾರ್ಜ್ ಅನ್ನು ಬಳಸುವುದಿಲ್ಲ. ಹೀಗಾಗಿ, ಮಳೆಗಾಲದಲ್ಲಿ ವಿಂಡ್‍ಸ್ಕ್ರೀನ್ ವೈಪರ್‍ಗಳು, ಡಿಫೋಗರ್‍ಗಳು ಅಥವಾ ಹೆಡ್ / ಟೈಲ್ ಲ್ಯಾಂಪ್‍ಗಳ ಬಳಕೆಯು ಶ್ರೇಣಿಯ ಮೇಲೆ ಗಮನಾರ್ಹ ಪರಿಣಾಮ ಬೀರುವುದಿಲ್ಲ. ಬ್ಯಾಟರಿ ಪ್ಯಾಕ್ ಅನ್ನು ವಿನ್ಯಾಸಗೊಳಿಸುವಾಗ ಈ ಪೂರಕಗಳಿಂದ ವಿದ್ಯುತ್ ಬಳಕೆಗಳು ಈಗಾಗಲೇ ಅಪವರ್ತನೀಯವಾಗಿವೆ. ಅತ್ಯಾಧುನಿಕ 30.2 ಕಿಲೋವ್ಯಾಟ್ ಬ್ಯಾಟರಿಯೊಂದಿಗೆ, ಟಾಟಾ ನೆಕ್ಸನ್ ಇವಿ ನಿಮಗೆ ಒಂದೇ ಚಾರ್ಜ್‍ನಲ್ಲಿ 312 ಕಿಮೀ* ಸ್ಥಿರ ಡ್ರೈವ್ ನೀಡುತ್ತದೆ, ಆದ್ದರಿಂದ ನೀವು ಸಾಕಷ್ಟು ದೂರ ಕ್ರಮಿಸಬಹುದು.
ಎಲೆಕ್ಟ್ರಿಕ್ ಕಾರುಗಳನ್ನು ಅತ್ಯಂತ ಪ್ರತಿಕೂಲ ಪರಿಸ್ಥಿತಿಗಳನ್ನು ತಡೆದುಕೊಳ್ಳುವಂತೆ ತಯಾರಿಸಲಾಗಿದೆ ಮತ್ತು ಪರೀಕ್ಷಿಸಲಾಗಿದೆ ಮತ್ತು ಅದರ ಐಸಿಇ ಎಂಜಿನ್‍ನ ಜೊತೆಯವರಂತೆ ಸಮರ್ಥವಾಗಿವೆ ಎಂಬುದಕ್ಕೆ ಮೇಲಿನವು ಒಂದು ಪುರಾವೆಯಾಗಿದೆ. ಹೆಚ್ಚು ಹೆಚ್ಚು ಬಳಕೆದಾರರು ಎಲೆಕ್ಟ್ರಿಕ್ ವಾಹನವನ್ನು ಉಪಯೋಗಿಸುತ್ತಿದ್ದಂತೆ ತಪ್ಪು ಗ್ರಹಿಕೆಗಳು ಮತ್ತು ಅವುಗಳ ಸುತ್ತಲಿನ ಮಿಥ್ಯಗಳ ಸಂಭವನೀಯತೆ ಕಡಿಮೆಯಾಗುತ್ತದೆ.