ರತನ್ ಟಾಟಾ ಡ್ರೀಮ್ ಕಾರ್ ಕೊಂಡಾಡಿದ ಶಾಂತನು ನಾಯ್ಡು, ಭಾವನಾತ್ಮಕ ಪೋಸ್ಟ್ ವೈರಲ್!
ರತನ್ ಟಾಟಾ ಆಲೋಚನೆಗಳು, ವಿಚಾರಧಾರೆ, ಭಾರತಕ್ಕಾಗಿ ತುಡಿಯುವ ಮನಸ್ಸು ಬಹುಷ ಇನ್ಯಾವ ಉದ್ಯಮಿಗೂ ಇಲ್ಲ. ಮಧ್ಯಮ ವರ್ಗದವರ ಕಾರು ಕನಸು ನನಸಾಗಿಸಲು ರತನ್ ಟಾಟಾ, ತಮ್ಮ ಡ್ರೀಮ್ ಕಾರು ಟಾಟಾ ನ್ಯಾನೋ ಪರಿಚಯಿಸಿದ್ದರು. ಈ ಕಾರು ಸದ್ಯ ಸ್ಥಗಿತಗೊಂಡಿದೆ. ಆದರೆ ರಸ್ತೆಯಲ್ಲಿ ಈಗಲೂ ಮಿರ ಮಿರ ಮಿಂಚುತ್ತಿದೆ. ಇದೀಗ ರತನ್ ಟಾಟಾ ಕಚೇರಿ ಮ್ಯಾನೇಜರ್ ಶಾಂತನು ನಾಯ್ಡು ಭಾವನಾತ್ಮ ಪೋಸ್ಟ್ ಮೂಲಕ ನ್ಯಾನೋ ಕಾರಿನ ನೆನಪು ಬಿಚ್ಚಿಟ್ಟಿದ್ದಾರೆ.
ಮುಂಬೈ(ಜು.03) ರತನ್ ಟಾಟಾ ಡ್ರೀಮ್ ಕಾರ್ ಟಾಟಾ ನ್ಯಾನೋ ಭಾರತದ ಮಾರುಕಟ್ಟೆಯಲ್ಲಿ ಮೋಡಿ ಮಾಡಲಿಲ್ಲ. ಆದರೆ ರತನ್ ಟಾಟಾ ಐಡಿಯಾ, ಮಧ್ಯಮ ಕುಟುಂಬಕ್ಕೆ ಕಾರು ತಲುಪಿಸಬೇಕೆಂಬ ಹಠಕ್ಕೆ ವಿಶ್ವವೇ ಸಲಾಮ್ ಹೊಡೆದಿದೆ. ಭಾರತದಲ್ಲಿ ಲಭ್ಯವಿರುವ ಅತ್ಯಂತ ಕಡಿಮೆ ಬೆಲೆಯ ಹಾಗೂ ಸಣ್ಣ ಕಾರು ಅನ್ನೋ ಹೆಗ್ಗಳಿಕೆಗೂ ನ್ಯಾನೋ ಪಾತ್ರವಾಗಿದೆ. ಖುದ್ದು ರತನ್ ಟಾಟಾ ಮುತುವರ್ಜಿ ವಹಿಸಿ ಉತ್ಪಾದನೆ ಮಾಡಲಾದ ಈ ಕಾರಿನ ಕುರಿತು ಇದೀಗ ರತನ್ ಟಾಟಾ ಅಸಿಸ್ಟೆಂಟ್, ಕಚೇರಿ ಮ್ಯಾನೇಜರ್ ಶಾಂತನು ನಾಯ್ಡು ಭಾವನಾತ್ಮ ಪೋಸ್ಟ್ ಹಂಚಿಕೊಂಡಿದ್ದಾರೆ. ಕಳೆದ 4 ವರ್ಷದಿಂದ ಟಾಟಾ ನ್ಯಾನೋ ಕಾರಿನಲ್ಲೇ ಓಡಾಡುತ್ತಿರುವ ಶಾಂತನು ನಾಯ್ಡು ತನ್ನ ಲಿಲ್ಲಿ ನ್ಯಾನೋ ಕಾರಿನ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ.
ಟಾಟಾ ನ್ಯಾನೋ ಕುಟುಂಬದ ಆಸ್ತಿ ಎಂದಿರುವ ಶಾಂತನು ನಾಯ್ಡು, ತನ್ನ ಮುದ್ದಿನ ನ್ಯಾನೋ ಕಾರಿಗೆ ಲಿಲ್ಲಿ ಎಂದು ಹೆಸರಿಟ್ಟಿದ್ದಾರೆ. ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ ಶಾಂತನು ನಾಯ್ಡು ತಮ್ಮ ನಾಲ್ಕು ವರ್ಷದ ನ್ಯಾನೋ ಪಯಣವನ್ನು ಹೇಳಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಲಿಲ್ಲಿ, ನನಗೆ ಕೋಟಿ ಕೋಟಿ ನೆನಪುಗಳನ್ನು ಕಟ್ಟಿಕೊಟ್ಟಿದೆ. ರಸ್ತೆಗಳಿಯುವ ಮೊದಲು ಅಳು, ಚಳಿಗಾಲದ ಸವಾರಿ, ಪ್ರೀತಿಪಾತ್ರರ ಜೊತೆ ಪ್ರಯಾಣ, ಎಸ್‌ಯವಿ ವಾಹನ ನೋಡಿದಾಗ ಕೀಟಲೆ ಮಾಡುವುದು ಸೇರಿ ಟಾಟಾ ನ್ಯಾನೋ ಟಾಟಾ ಮೋಟಾರ್ಸ್ ಕುಟುಂಬದ ಚರಾಸ್ತಿಯಾಗಿದೆ ಎಂದು ಶಾಂತನು ನಾಯ್ಡು ಹೇಳಿದ್ದಾರೆ.
Ratan Tata ಬಾಡಿಗಾರ್ಡ್ ಇಲ್ಲದೆ, ನ್ಯಾನೋ ಕಾರಿನಲ್ಲಿ ತಾಜ್ ಹೊಟೆಲ್‌ಗೆ ಬಂದ ರತನ್ ಟಾಟಾ,ಸರಳತೆಗೆ ಹಿಡಿದ ಕನ್ನಡಿ!
ಶಾಂತನು ನಾಯ್ಡು ಪೋಸ್ಟ್ ವೈರಲ್ ಆಗಿದೆ. ಹಲವು ಟಾಟಾ ನ್ಯಾನೋ ಮಾಲೀಕರು ತಮ್ಮ ಪಯಣದ ಕತೆಗಳನ್ನು, ನ್ಯಾನೋ ಜೊತೆಗಿನ ಸುಂದರ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ. ನ್ಯಾನೋ ನಮಗೆ ಕೇವಲ ಕಾರಲ್ಲ, ಅದಕ್ಕಿಂತಲೂ ಮಿಗಿಲು, ನನಗೆ ಪಪಾಯ ಆರೇಂಜ್ ಬಣ್ಣದ ನ್ಯಾನೋ ಅಚ್ಚು ಮೆಚ್ಚು. ನಿಮ್ ನ್ಯಾನೋ ಪಯಣದ ಕತೆ ಕೇಳಿ ನಮ್ಮ ನ್ಯಾನೋ ಪ್ರಯಾಣ ನೆನಪಾಗುತ್ತಿದೆ ಎಂದು ಹಲವರು ಪ್ರತಿಕ್ರಿಯೆ ನೀಡಿದ್ದಾರೆ.
ನ್ಯಾನೋ ಕಾರಿಗೆ ನನ್ನ ಹೃದಯದಲ್ಲಿ ವಿಶೇಷ ಜಾಗವಿದೆ. ಬೆಂಗಳೂರು ಟ್ರಾಫಿಕ್ ರಸ್ತೆಯಲ್ಲಿ ಎಲ್ಲಾ ಐಷಾರಾಮಿ ಹಾಗೂ ದೊಡ್ಡ ಕಾರುಗಳ ಮಾಲೀಕರ ನಮ್ಮದೂ ನ್ಯಾನೋ ಕಾರು ಆಗಿರಬಾರದೇ ಎಂದುಕೊಂಡವರೇ ಹೆಚ್ಚು ಎಂದು ಕಮೆಂಟ್ ಮಾಡಿದ್ದಾರೆ.
ಟಾಟಾ ನ್ಯಾನೋ ಕಾರು ಬೇಡಿಕೆ ಇಲ್ಲದ ಕಾರಣ ಸ್ಥಗಿತಗೊಂಡಿದೆ. 2022ರಲ್ಲಿ ಟಾಟಾ ಮೋಟಾರ್ಸ್ ವಿಶೇಷವಾಗಿ ರತನ್ ಟಾಟಾಗೆ ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರು ನೀಡಿತ್ತು. ಈ ವೇಳೆ ಉತ್ಪಾದನೆ ಸ್ಥಗಿತಗೊಂಡಿರುವ ನ್ಯಾನೋ ಕಾರು ಎಲೆಕ್ಟ್ರಿಕ್ ಮಾದರಿಯಲ್ಲಿ ಮತ್ತೆ ಮಾರುಕಟ್ಟೆಗೆ ಬಿಡುಗಡೆಯಾಗಬಹುದಾ ಎಂಬ ಕುತೂಹಲಕ್ಕೆ ಕಾರಣವಾಗಿತ್ತು. ಈ ಕಾರು ನಾಲ್ಕು ಸೀಟುಗಳನ್ನು ಒಳಗೊಂಡಿದ್ದು, 160 ಕಿ.ಮೀ ವೇಗದವರೆಗೆ ಚಲಿಸುವ ಸಾಮರ್ಥ್ಯ ಹೊಂದಿದೆ. ಇದು ಸೂಪರ್ ಪಾಲಿಮರ್ ಲಿಥಿಯಂ-ಅಯಾನ್ ಬ್ಯಾಟರಿಯ ಕಾರಾಗಿದೆ.
ನ್ಯಾನೋಗಿಂತ ಮೊದಲು ಭಾರತದಲ್ಲಿತ್ತು 12ಸಾವಿರ ರೂಪಾಯಿ ಸಣ್ಣ ಕಾರು!
2019ರಲ್ಲಿ ಟಾಟಾ ನ್ಯಾನೋ ಕಾರು ಕೇವಲ 1 ಯುನಿಟ್ ಮಾತ್ರ ಮಾರಾಟವಾಗಿತ್ತು. 2018ರ ಡಿಸೆಂಬರ್‌ನಲ್ಲಲಿ ಕಂಪನಿ 82 ಕಾರು ಉತ್ಪಾದಿಸಿತ್ತು ಮತ್ತು 88 ಕಾರು ಮಾರಾಟ ಮಾಡಿತ್ತು. ಆದರೆ 2019ರ ಡಿಸೆಂಬರ್‌ನಲ್ಲಿ ಉತ್ಪಾದನೆ ಮತ್ತು ಮಾರಾಟ ಎರಡೂ ಶೂನ್ಯ ಪ್ರಮಾಣದಲ್ಲಿತ್ತು. 2009ರಲ್ಲಿ ಕೇವಲ ಒಂದು ಲಕ್ಷ ರು.ಗೆ ಈ ಕಾರು ಪರಿಚಯಿಸುವ ಮೂಲಕ ಜನಸಾಮಾನ್ಯರೂ ಸ್ವಂತ ಕಾರಿನಲ್ಲಿ ಓಡಾಡುವಂತೆ ಮಾಡಲು ಟಾಟಾ ಯಶಸ್ವಿಯಾಗಿತ್ತು.