Asianet Suvarna News Asianet Suvarna News

ಗರಿಷ್ಠ ಸುರಕ್ಷತೆ, ಆಕರ್ಷಕ ವಿನ್ಯಾಸ; ಟಾಟಾ ಟಿಯಾಗೊ NRG ಕಾರು ಬಿಡುಗಡೆ!

  • ಟಾಟಾದ  'ನ್ಯೂ ಫಾರೆವರ್' ಬ್ರಾಂಡ್ ಕಾರು
  • ಟಾಟಾ ಮೋಟಾರ್ಸ್ ಟಿಯಾಗೊ NRG ಕಾರು ಬಿಡುಗಡೆ 
  • SUV ಸ್ಫೂರ್ತಿಯ ವಿನ್ಯಾಸ, ಕಲಾತ್ಮಕ ಡಿಸೈನ್
Tata Motors launched all new Tiago NRG Excites passenger vehicle market with its Urban Toughroader ckm
Author
Bengaluru, First Published Aug 4, 2021, 3:32 PM IST
  • Facebook
  • Twitter
  • Whatsapp

ಬೆಂಗಳೂರು(ಆ.04):  'ನ್ಯೂ ಫಾರೆವರ್' ಬ್ರಾಂಡ್ ಮೂಲಕ ಟಾಟಾ ಮೋಟಾರ್ಸ್ ತನ್ನ ಹೊಸ ಟಿಯಾಗೊ NRG ಕಾರು ಬಿಡುಗಡೆ ಮಾಡಿದೆ. ಮತ್ತೊಂದು ಅತ್ಯಾಕರ್ಷಕ ಉತ್ಪನ್ನವಾದ ಈ ಕಾರಿನಲ್ಲಿ ಹಲವು ವಿಶೇಷತೆಗಳಿವೆ.. 'ಅರ್ಬನ್ ಟಫ್‌ರೋಡರ್ ಸ್ಥಾನ ಪಡೆದಿರುವ ಟಿಯಾಗೊ NRG ಕೇವಲ SUV ಸ್ಫೂರ್ತಿಯ ವಿನ್ಯಾಸದೊಂದಿಗೆ ಕಲಾತ್ಮಕವಾಗಿ ವರ್ಧಿತವಾಗಿದೆ. 

Tata Motors launched all new Tiago NRG Excites passenger vehicle market with its Urban Toughroader ckm

500 ಕಿ.ಮೀ ಮೈಲೇಜ್, 10 ಲಕ್ಷ ರೂಪಾಯಿ; ಶೀಘ್ರದಲ್ಲೇ ಟಾಟಾ ಅಲ್ಟ್ರೋಜ್ EV ಬಿಡುಗಡೆ!

ಮಸಲರ್ ನೋಟವನ್ನು ನೀಡುವುದಲ್ಲದೇ ಕಠಿಣವಾದ ರಸ್ತೆಯಲ್ಲಿ ಒರಟಾಗಿ ಚಾಲನೆ ಮಾಡುವವರಿಗೆ ಕಾರ್ಯಕ್ಷಮತೆಯನ್ನು ನೀಡಲು ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್‌ನೊಂದಿಗೆ ಮತ್ತಷ್ಟು ಟ್ಯೂನ್ ಮಾಡಲಾಗಿದೆ. GNCAP ನಿಂದ 4 ಸ್ಟಾರ್ ಸುರಕ್ಷತೆ ರೇಟಿಂಗ್  ಪಡೆದಿರುವ ಈ ಟಿಯಾಗೋ 4 ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ. ನೂತನ ಕಾರಿನ ಬೆಲೆ 6.57 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಆರಂಭಿಕ ಬೆಲೆಯಲ್ಲಿ ಲಭ್ಯವಿದೆ.

Tata Motors launched all new Tiago NRG Excites passenger vehicle market with its Urban Toughroader ckm

ನಮ್ಮ ಅತ್ಯಂತ ಪ್ರಿಯವಾದ ಹ್ಯಾಚ್‌ಬ್ಯಾಕ್, ಟಾಟಾ ಟಿಯಾಗೊದ ಈ ಅದ್ಭುತ ಆವೃತ್ತಿಯನ್ನು ನಿಮ್ಮ ಮುಂದೆ ತರಲು ನಾವು ಉತ್ಸುಕರಾಗಿದ್ದೇವೆ. ಅದರ ಹೆಸರಿನಂತೆಯೇ ನಿಜವಾಗಿಯೂ ಶಕ್ತಿಯುತವಾಗಿದೆ, SUV ಯಂತಹ ವಾಹನಗಳು ಹೆಚ್ಚಾಗಿ ಮಾರುಕಟ್ಟೆಗೆ ಬರುತ್ತಿರುವ ಈ ಹೊತ್ತಿನಲ್ಲಿ NRG ಯು ಈ ಟ್ರೆಂಡ್ ಗೆ ಸರಿಯಾಗಿ ಹೊಂದುತ್ತಿದೆ ಎಂದು ಟಾಟಾ  ಸೇಲ್ಸ್, ಮಾರ್ಕೆಟಿಂಗ್  ಉಪಾಧ್ಯಕ್ಷ ರಾಜನ್ ಅಂಬಾ ಹೇಳಿದ್ದಾರೆ. 

ಗೋವಾ ದಾಟಂಗಿಲ್ಲ, ಹುಬ್ಳೀಲಿ ಸಿಗಂಗಿಲ್ಲ; ಗಡಿ ಚೆಕ್‌ಪೋಸ್ಟ್ ಬಳಿ ಕಾರು ಡೆಲಿವರಿ ಪಡೆದ ಉದ್ಯಮಿ!

ಇದು ಹೊರಭಾಗದಲ್ಲಿ ಮಾತ್ರ ಪ್ರಬಲವಾಗಿಲ್ಲದೇ ಒಳಾಂಗಣದಲ್ಲಿಯೂ ವೈಶಿಷ್ಟ್ಯಪೂರ್ಣ ಮತ್ತು ಸ್ಟೈಲಿಶ್ ಆಗಿದೆ, ಮತ್ತು ಒರಟಾದ ಭೂಪ್ರದೇಶಗಳನ್ನು ಕ್ರಮಿಸಲು ವರ್ಧಿತ ಸಾಮರ್ಥ್ಯಗಳೊಂದಿಗೆ ಚಾಲನೆ ಮಾಡಲು ಸಂಪೂರ್ಣ ಮುದನೀಡಲಿದೆ. ಟಿಯಾಗೊ ಶ್ರೇಣಿಯನ್ನು ಕಿರೀಟವಾಗಿ, NRG ನಮ್ಮ ಸಂಸ್ಥೆಯ ಪ್ರಸಿದ್ಧಿಯನು ಹೆಚ್ಚಿಸಲು ಸಹಾಯ ಮಾಡುವುದನ್ನು ಮುಂದುವರಿಸುತ್ತದೆ. ನಮ್ಮ ಗ್ರಾಹಕರು ಹೊಸ ಟಿಯಾಗೊ NRGಯನ್ನು ಹಿಂದಿನಂತೆಯೇ ಮೆಚ್ಚುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದರು.

Tata Motors launched all new Tiago NRG Excites passenger vehicle market with its Urban Toughroader ckm

Follow Us:
Download App:
  • android
  • ios