Asianet Suvarna News Asianet Suvarna News

Upcoming Electric Cars ಹೊಸ ವರ್ಷದಲ್ಲಿ ಭಾರತದ ಮಾರುಕಟ್ಟೆ ಬರಲಿರುವ ಟಾಪ್ 10 ಎಲೆಕ್ಟ್ರಿಕ್ ಕಾರು!

  • 2022ರಲ್ಲಿ ಬರಲಿದೆ ಸಾಲುಸಾಲು ಇವಿ ಕಾರುಗಳು
  • ಮೂರು ಇವಿ ಕಾರುಗಳನ್ನು ಬಿಡುಗಡೆಗೊಳಿಸಲಿರುವ ಟಾಟಾ ಮೋಟಾರ್ಸ್
  • ರೆನಾಲ್ಟ್‌ನಿಂದಲೂ ಇವಿ ಪರಿಚಯ
Tata Altroz to Mahindra eKUV100 top 10 Upcoming Electric Cars india in New Year 2022
Author
Bangalore, First Published Dec 31, 2021, 3:23 PM IST

ನವದೆಹಲಿ(ಡಿ.31): 2021ನೇ ಸಾಲು ಭಾರತೀಯ ಮಾರುಕಟ್ಟೆ ಎಲೆಕ್ಟ್ರಿಕ್ ವಾಹನಗಳಿಗೆ ಹಬ್ಬವಾಗಿತ್ತು. ಬಹುತೇಕ ಎಲ್ಲಾ ಕಾರು ತಯಾರಕ ಕಂಪನಿಗಳು ಇವಿ ಕಾರುಗಳ ಬಿಡುಗಡೆಗೊಳಿಸಿವೆ. ಇದಕ್ಕೆ ದೊರೆತ ಅಭೂತಪೂರ್ವ ಪ್ರತಿಕ್ರಿಯೆಯ ಬೆನ್ನಲ್ಲೇ 2022ರಲ್ಲಿ ಕೂಡ ಅನೇಕ ಇವಿ ಕಾರುಗಳು ಮಾರುಕಟ್ಟೆಗೆ ಬರಲು ಸಿದ್ಧವಾಗಿವೆ. ಈ ಕುರಿತು ಇಲ್ಲಿದೆ ವಿವರ:

ಟಾಟಾ ಆಲ್ಟ್ರೋಜ್ ಇವಿ (Tata Altroz EV)
ತಮ್ಮ ಮೊದಲ ಎಲೆಕ್ಟ್ರಿಕ್ ಕಾರಾದ ನೆಕ್ಸಾನ್ ಇವಿ (Nexon EV) ಯಶಸ್ಸಿನ ನಂತರ, ಭಾರತದ ಪ್ರಮುಖ ಕಾರು ತಯಾಕರ ಕಂಪನಿಗಳಲ್ಲಿ ಒಂದಾದ ಟಾಟಾ  ಮೋಟಾರ್ಸ್, 2022ರಲ್ಲಿ ಟಾಟಾ ಆಲ್ಟ್ರೋಸ್ ಇವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ಆಲ್ಟ್ರೋಸ್ ಇವಿ ಅನ್ನು ಕಂಪನಿಯ ಹೊಸ ಅಗೈಲ್ ಲೈಟ್ ಅಡ್ವಾನ್ಸ್ಡ್ (ALFA) ಪ್ಲಾಟ್ಫಾರ್ಮ್ನಲ್ಲಿ ನಿರ್ಮಿಸಲಾಗುವುದು ಎನ್ನಲಾಗುತ್ತಿದೆ.  ಈ ವಾಹನವನ್ನು ಈ ಮೊದಲು 2019 ರ ಜಿನೀವಾ (Geneva) ಮೋಟಾರ್ ಶೋನಲ್ಲಿ ಪ್ರದರ್ಶಿಸಲಾಗಿತ್ತು ಮತ್ತು ಈ ಇವಿ ಕೂಡ ಹಿಂದಿನ ನೆಕ್ಸಾನ್ ಹಾಗೂ ಟಿಗೋರ್ ಇವಿಯಂತೆ ಜಿಪ್ಟ್ರಾನ್ (Ziptron) ತಂತ್ರಜ್ಞಾನದೊಂದಿಗೆ ಬರಲಿದೆ. ಇದು ಒಂದು ಚಾರ್ಜ್ಗೆ 250 ರಿಂದ 300 ಕಿಮೀ ವ್ಯಾಪ್ತಿಯನ್ನು ನೀಡುವ ನಿರೀಕ್ಷೆಯಿದೆ.

Affordable electric cars ಭಾರತದಲ್ಲಿ ಲಭ್ಯವಿರುವ ಕೈಗೆಟುಕುವ ದರದ ಎಲೆಕ್ಟ್ರಿಕ್ ಕಾರು!

ಬಿಎಂಡಬ್ಲ್ಯು ಐ4 (BMW i4)
ಐಷಾರಾಮಿ ವಾಹನ ತಯಾರಕ  ಬಿಎಂಡಬ್ಲ್ಯು BMW ಭಾರತದಲ್ಲಿ ತನ್ನ ಎರಡನೇ ಕಾರು ಐ4 (i4) ಅನ್ನು 2022 ರಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಇತ್ತೀಚೆಗಷ್ಟೇ ಬಿಎಂಡಬ್ಲ್ಯು ದೇಶದಲ್ಲಿ  ಐಎಕ್ಸ್ (iX)-ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಿದೆ. BMW ಐ4(i4) 4 ಸರಣಿಯ ಗ್ರ್ಯಾನ್ ಕೂಪ್ ಐಷಾರಾಮಿ ಕಾರಿನ ಎಲೆಕ್ಟ್ರಿಕ್ ರೂಪಾಂತರವಾಗಿದೆ. ಆದರೆ, ಕೆಲವೊಂದು ಸುಧಾರಿತ ವಿನ್ಯಾಸಗಳನ್ನು ಹೊಂದಿದೆ. ಈ ಕಾರು 83.9 ಕೆಡಬ್ಲ್ಯುಎಚ್ (kWh) ಬ್ಯಾಟರಿ ಪ್ಯಾಕ್ನೊಂದಿಗೆ ಬರುವ ನಿರೀಕ್ಷೆಯಿದೆ. ಈ ಬ್ಯಾಟರಿ ಸಾಮರ್ಥ್ಯದೊಂದಿಗೆ, ಹೊಸ ಎಲೆಕ್ಟ್ರಿಕ್ ಕಾರು 450 ಕಿಮೀ ಸಂಚಾರದ ವ್ಯಾಪ್ತಿ ಒದಗಿಸುತ್ತದೆ. 

ವೋಲ್ವೋ ಎಕ್ಸ್ಸಿ40 ರೀಚಾರ್ಜ್ (Volvo XC40 Recharge)
ವೋಲ್ವೋ ಎಕ್ಸ್ಸಿ40 ರೀಚಾರ್ಜ್ 2021 ರಲ್ಲಿ ಬಿಡುಗಡೆಯಾಗಬೇಕಿತ್ತಾದರೂ, ಸೆಮಿಕಂಡಕ್ಟರ್ ಕೊರತೆಯಿಂದಾಗಿ ಅದು ವಿಳಂಬವಾಗಿದೆ. ಇದನ್ನು ಈಗ 2022 ರ ಮೊದಲಾರ್ಧದಲ್ಲಿ ಇದರ ಬಿಡುಗಡೆಯನ್ನು ಘೋಷಿಸಲಾಗುವುದು ಎಂದು ನಿರೀಕ್ಷಿಸಲಾಗುತ್ತಿದೆ. ಈ ಕಾರು 78 ಕೆಡಬ್ಲ್ಯುಎಚ್ (kWh) ಬ್ಯಾಟರಿ ಪ್ಯಾಕ್ ಹೊಂದಿದೆ ಮತ್ತು ಒಂದೇ ಚಾರ್ಜ್ನಲ್ಲಿ 418 ಕಿಮೀ ಸಂಚಾರದ ವ್ಯಾಪ್ತಿ ನೀಡುತ್ತದೆ.

Tata electric vehicles ಅತೀ ಕಡಿಮೆ ಬೆಲೆಗೆ ಎಲೆಕ್ಟ್ರಿಕ್ ಕಾರು ಬಿಡುಗಡೆ ಟಾಟಾ ಮೋಟಾರ್ಸ್ ತಯಾರಿ, 700 ಕೋಟಿ ರೂ ಹೂಡಿಕೆ!

ಮಿನಿ ಕೂಪರ್ ಎಸ್ಇ (Mini Cooper SE)
ಮಿನಿ ಕೂಪರ್ ಕಂಪನಿಯ ವೆಬ್ಸೈಟ್ ಮಾಹಿತಿ ಪ್ರಕಾರ ಹೊಸ ವರ್ಷದ ಬಿಡುಗಡೆ ಪಟ್ಟಿಯಲ್ಲಿ ಮಿನಿ ಕೂಪರ್ ಎಸ್ಇ (Mini Cooper SE) ಕೂಡ ಇದೆ. ಇದು ವರ್ಷದ ಮೊದಲಾರ್ಧದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದು 32.6 ಕೆಡಬ್ಲ್ಯುಎಚ್ (kWh) ಬ್ಯಾಟರಿ ಪ್ಯಾಕ್ನೊಂದಿಗೆ ಗರಿಷ್ಠ 270 ಕಿಮೀ ವ್ಯಾಪ್ತಿಯೊಂದಿಗೆ ಬರಲಿದೆ. ಕಂಪನಿಯು ಸೀಮಿತ ಪ್ರಮಾಣದ ಕಾರನ್ನು ಉತ್ಪಾದಿಸುವ ನಿರೀಕ್ಷೆಯಿದೆ.

ಮಹೀಂದ್ರ eKUV100 (Mahindra eKUV100)
ಮಹೀಂದ್ರ ಇಕೆಯುವಿ100 ವಿನ್ಯಾಸದಲ್ಲಿ ಅದರ ಐಸ್ ಕಾರಿನಿಂದಲೇ ಸ್ಫೂರ್ತಿ ಪಡೆದಿದೆ. ಇದನ್ನು 2020 ಆಟೋ ಎಕ್ಸ್ಪೋದಲ್ಲಿ ಪ್ರದರ್ಶಿಸಲಾಗಿತ್ತು. ಜಾಗತಿಕ ಚಿಪ್ ಕೊರತೆಯಿಂದಾಗಿ ಕಾರಿನ ಬಿಡುಗಡೆ ವಿಳಂಬವಾಗುತ್ತಿದೆ ಮತ್ತು 2022 ರಲ್ಲಿ ಘೋಷಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ. ಇದು 15.9 ಕೆಡಬ್ಲ್ಯುಎಚ್ (kWh) ಬ್ಯಾಟರಿ ಪ್ಯಾಕ್ನೊಂದಿಗೆ ಗರಿಷ್ಠ 140 ಕಿಮೀ ಸಂಚಾರ ವ್ಯಾಪ್ತಿಯೊಂದಿಗೆ ಬರುವ ನಿರೀಕ್ಷೆಯಿದೆ.

Hyundai Ioniq 5 EV ಕೈಗೆಟುಕುವ ದರ, 480 ಕಿ.ಮೀ ಮೇಲೇಜ್, ಶೀಘ್ರದಲ್ಲೇ ಭಾರತದಲ್ಲಿ ಕಾರು ಬಿಡುಗಡೆ!

ಟಾಟಾ ಟಿಯಾಗೊ ಇವಿ (Tata Tiago EV)
ಎಲಕ್ಟ್ರಿಕ್ ವಾಹನಗಳ ವಲಯದಲ್ಲಿ ಮತ್ತೊಂದಷ್ಟು ವಾಹನಗಳ ಬಿಡುಗಡೆಗೆ ಸಿದ್ಧತೆ ನಡೆಸಿರುವ ಟಾಟಾ ಮೋಟಾರ್ಸ್, ಆಲ್ಟ್ರೋಸ್ ಇವಿ ಜೊತೆಗೆ, ಭಾರತದಲ್ಲಿ ಟಿಯಾಗೋ ಇವಿ ಅನ್ನು ಬಿಡುಗಡೆಗೊಳಿಸಲಿದೆ. ಇದು 10 ಲಕ್ಷ ರೂ. ಒಳಗಿನ ದರದ ವಿಭಾಗದಲ್ಲಿ ಬರಲಿದೆ. ಇದು 2022 ರ ದ್ವಿತೀಯಾರ್ಧದಲ್ಲಿ ಪಾದಾರ್ಪಣೆ ಮಾಡುವ ನಿರೀಕ್ಷೆಯಿದೆ. ಮತ್ತು ಅದರ ವಿನ್ಯಾಸ, ಟಿಯಾಗೋ ಇಂಧನ ಕಾರಿನಂತೆಯೇ ಇರಲಿದೆ ಎನ್ನಲಾಗುತ್ತಿದೆ.

ರೆನಾಲ್ಟ್ ಜೊಯಿ (Renault Zoe)
ರೆನಾಲ್ಟ್  ಕೂಡ ಎಲೆಕ್ಟ್ರಿಕ್ ಆಟೊಮೊಬೈಲ್ ಕ್ಷೇತ್ರಕ್ಕೆ ಕಾಲಿಡಲಿದ್ದು, ಹೊಸ ವರ್ಷದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಕಾರ್ ಅನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ.  ಇದನ್ನು 2020 ರ ಆಟೋ ಎಕ್ಸ್ಪೋದಲ್ಲಿ ಪ್ರದರ್ಶಿಸಲಾಗಿತ್ತು. ಇದು 52 kWh ಬ್ಯಾಟರಿ ಪ್ಯಾಕ್ ಅನ್ನು ಒಳಗೊಂಡಿದೆ ಮತ್ತು ಗರಿಷ್ಠ 394 ಕಿಮೀ  ಸಂಚಾರ ವ್ಯಾಪ್ತಿಯನ್ನು ನೀಡಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.

ಮರ್ಸಿಡೀಸ್ ಬೆನ್ಸ್ ಈಕ್ಯೂಎಸ್ (Mercedes Benz EQS)
2022ರ ದ್ವಿತೀಯಾರ್ಧದಲ್ಲಿ, ಜನಪ್ರಿಯ S-ಕ್ಲಾಸ್ನ ಎಲೆಕ್ಟ್ರಿಕ್ ಆವೃತ್ತಿ ಹಾಗೂ ಐಷಾರಾಮಿ ಕಾರು ಮರ್ಸಿಡೀಸ್ ಬೆನ್ಸ್ ಈಕ್ಯೂಎಸ್ (Mercedes Benz EQS) ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದು 107.8 ಕೆಡಬ್ಲ್ಯುಎಚ್ (kWh) ಬ್ಯಾಟರಿ ಪ್ಯಾಕ್ ಅನ್ನು ಒಳಗೊಂಡಿರುತ್ತದೆ ಮತ್ತು ಒಂದೇ ಚಾರ್ಜ್ನಲ್ಲಿ 770 ಕಿಮೀವರೆಗೆ ಸಂಚಾರ ವ್ಯಾಪ್ತಿ ನೀಡುತ್ತದೆ ಎಂದು ನಿರೀಕ್ಷಿಸಲಾಗುತ್ತಿದೆ.

ಟಾಟಾ ಸಿಯೆರಾ (Tata Sierra)
ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ವಲಯದಲ್ಲಿ ಮತ್ತೊಂದು ಕಾರು ಬಿಡುಗಡೆಗೊಳಿಸಲಿದೆ. ಕಂಪನಿಯ ಅತ್ಯಂತ ಐಕಾನಿಕ್ ಕಾರುಗಳಲ್ಲಿ ಒಂದಾದ ಟಾಟಾ ಸಿಯೆರಾ 2022ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಪುನರಾಗಮನ ಮಾಡಲಿದೆ. ಇದನ್ನು ಮೊದಲು 2020 ಆಟೋ ಎಕ್ಸ್ಪೋದಲ್ಲಿ ಪ್ರದರ್ಶಿಸಲಾಗಿತು.
 

Follow Us:
Download App:
  • android
  • ios