Car safety 30 ಅಡಿ ಕಂದಕಕ್ಕೆ ಉರುಳಿದ ಸ್ಕೋಡಾ ಕೊಡಿಯಾಕ್, ಪ್ರಯಾಣಿಕರು ಸೇಫ್!

  • ಸ್ಕೋಡಾ ಕೋಡಿಯಾಕ್ ಕಾರು ಅಪಘಾತ, 30 ಅಡಿ ಕಂದಕಕ್ಕೆ ಪಲ್ಟಿ
  • ಗರಿಷ್ಠ ಸುರಕ್ಷತೆಯಿಂದ ಅಪಾಯವಿಲ್ಲದೆ ಪ್ರಯಾಣಿಕರು ಪಾರು
  • ಸ್ಕೋಡಾ ಕಾರಿನ ಸುರಕ್ಷತೆಗೆ ಮಾಲೀಕರ ಧನ್ಯವಾದ

 

Skoda kodiaq passengers safe after car falls 30 feet and multiple rollovers accident

ಭಾರತೀಯ ರಸ್ತೆಗಳಲ್ಲಿ ಅಪಘಾತಗಳು ಸರ್ವೆ ಸಾಮಾನ್ಯ ಎಂಬಂತಾಗಿದೆ. ಆದರೆ, ಇತ್ತೀಚಿನ ಕೆಲ ವಾಹನ ತಯಾರಕ ಕಂಪನಿಗಳು ಅಪಘಾತಗಳನ್ನು ತಡೆಯುವಂತಹ ಹಾಗೂ ಪ್ರಯಾಣಿಕರಿಗೆ ರಕ್ಷಣೆ ನೀಡುವಂತೆ ಸುರಕ್ಷತಾ ಅಂಶಗಳನ್ನು ಒಳಗೊಂಡಂತಹ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದಾರೆ. ಈಗ ಸ್ಕೋಡಾ ಕೊಡಿಯಾಕ್  (Skoda Kodiaq) ಕಾರು ಕೂಡ ದೊಡ್ಡದೊಂದು ಅಪಘಾತಕ್ಕೀಡಾಗಿದ್ದರೂ,ಪ್ರಯಾಣಿಕರು ಸುರಕ್ಷಿತವಾಗಿರುವ ಘಟನೆ ವರದಿಯಾಗಿದೆ.

ಪ್ರತೀಕ್ ಸಿಂಗ್ ಎಂಬುವವರು ಬಿಡುಗಡೆಗೊಳಿಸಿರುವ ವಿಡಿಯೋದಲ್ಲಿ ಒಂದು ದೊಡ್ಡ ಕಂದಕಕ್ಕೆ ಬಿದ್ದಿರುವ ಸ್ಕೋಡಾ ಕೊಡಿಯಾಕ್ ಚಿತ್ರಗಳನ್ನು ಕಾಣಬಹುದು. ವಿಡಿಯೋದಲ್ಲಿರುವ ಮಾಹಿತಿ ಪ್ರಕಾರ ಅಪಘಾತದ ವೇಳೆ ಕಾರಿನಲ್ಲಿ ಇಬ್ಬರು ಪ್ರಯಾಣಿಸುತ್ತಿದ್ದರು. ಮಾಲೀಕರು ಚಾಲನೆ ಮಾಡುತ್ತಿದ್ದು, ಅವರ ಪತ್ನಿ ಸಹಚಾಲಕ ಸೀಟಿನಲ್ಲಿದ್ದರು. ಘಾಟ್ ಸೆಕ್ಷನ್ಗಳಲ್ಲಿ ಕಾರು ಅಪಘಾತಕ್ಕೀಡಾಗಿದೆ. ವೀಡಿಯೊ ಪ್ರಕಾರ, ಕಾರಿನ ಮಾಲೀಕರು ಬಸ್ ಅನ್ನು ಹಿಂದಿಕ್ಕಲು ಪ್ರಯತ್ನಿಸುತ್ತಿದ್ದರು. ಆದರೆ, ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ಸ್ಟೀರಿಂಗ್ (Steering) ನಿಯಂತ್ರಣ ತಪ್ಪಿತು. ಪರಿಣಾಮವಾಗಿ ಕೊಡಿಯಾಕ್ ಅನೇಕ ಪಲ್ಟಿ ಹೊಡೆದು ಕಂದಕಕ್ಕೆ ಜಾರಿ, ಸುಮಾರು 30 ಅಡಿಗಳಷ್ಟು ಕೆಳಗಿನ ನದಿಗೆ ಬಿದ್ದಿತು.

200 ಅಡಿ ಆಳಕ್ಕೆ ಉರುಳಿ ಬಿದ್ದ ಟಾಟಾ ನೆಕ್ಸಾನ್ ಕಾರು, ಯಾವುದೇ ಗಾಯಗಳಿಲ್ಲದೇ ಪ್ರಯಾಣಿಕರು ಸೇಫ್!

ವಾಹನದಲ್ಲಿದ್ದ ಇಬ್ಬರು ಪ್ರಯಾಣಿಕರು ಕೂಡ ಸಣ್ಣಪುಟ್ಟ ಗಾಯಗಳೊಂದಿಗೆ ಹೊರ ಬಂದಿದ್ದು, ಇಬ್ಬರೂ ಸುರಕ್ಷಿತವಾಗಿದ್ದಾರೆ. ಮಾಲೀಕರು ಕಳುಹಿಸಿದ ಚಿತ್ರಗಳು ಕೊಡಿಯಾಕ್ ನೀರಿನಲ್ಲಿ ತಲೆಕೆಳಗಾಗಿ ಬಿದ್ದಿರುವುದನ್ನು ತೋರಿಸುತ್ತವೆ. ಇದು ಹಾನಿಗಳನ್ನು ತೋರಿಸದಿದ್ದರೂ, ಕಾರು ಸಂಪೂರ್ಣವಾಗಿ ಹಾನಿಗೊಳಗಾಗಿಲ್ಲ ಎಂದು ನಾವು ಸ್ಪಷ್ಟವಾಗಿ ನೋಡಬಹುದು. ಅದರ ಎ-ಪಿಲ್ಲರ್ ಇನ್ನೂ ಗಟ್ಟಿಯಾಗಿದ್ದು, ಕಾರಿನ ಮೇಲ್ಭಾಗ ತೆರೆದುಕೊಂಡಿಲ್ಲ.

ಸ್ಕೋಡಾ ಕೊಡಿಯಾಕ್ ಎಸ್ಯುವಿ ಹಲವಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ವೆಂಟಿಲೇಟೆಟ್ ಮುಂಭಾಗದ ಆಸನಗಳು, ನವೀಕರಿಸಿದ 12-ಸ್ಪೀಕರ್ ಸೌಂಡ್ ಸಿಸ್ಟಮ್, 10.2-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಮತ್ತು 10-ಬಣ್ಣದ ಆಂಬಿಯೆಂಟ್ ಲೈಟಿಂಗ್, 8-ಇಂಚಿನ ಟಚ್ಸ್ಕ್ರೀನ್ ಸಿಸ್ಟಮ್, ಮೂರು-ವಲಯ ಹವಾಮಾನ ನಿಯಂತ್ರಣ, ಪನೋರಮಿಕ್ ಸನ್ರೂಫ್ ಮತ್ತು ಕ್ರೂಸ್ ಕಂಟ್ರೋಲ್ನಂತಹ ವೈಶಿಷ್ಟ್ಯಗಳನ್ನು ಉಳಿಸಿಕೊಳ್ಳಲಾಗಿದೆ.
ಸ್ಕೋಡಾ ಕೊಡಿಯಾಕ್ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಢೀಧೆ. ಇದರಲ್ಲಿ ಒಂಬತ್ತು ಏರ್ಬ್ಯಾಗ್ಗಳು (ಸ್ಟ್ಯಾಂಡರ್ಡ್), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಹೋಲ್ಡ್ ಮತ್ತು ಹಿಲ್ ಡಿಸೆಂಟ್ ಕಂಟ್ರೋಲ್, ಮತ್ತು ಫ್ರಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್ಗಳನ್ನು ಒಳಗೊಂಡಿದೆ:

120ರ ವೇಗದಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದು 4 ಪಲ್ಟಿಯಾದ ಟಾಟಾ ಪಂಚ್, ಐವರು ಪ್ರಯಾಣಿಕರು ಸೇಫ್!

ಪರ್ವತ ವಿಭಾಗಗಳಲ್ಲಿ ಓವರ್ಟೇಕಿಂಗ್ ಹೇಗೆ?
ಪರ್ವತಾ ಪ್ರದೇಶಗಳಲ್ಲಿ ವಾಹನ ಚಲಾಯಿಸುವಾಗ ಹೆಚ್ಚಿನ ಜಾಗ್ರತೆ ವಹಿಸಬೇಕಾಗುತ್ತದೆ. ಅದರಲ್ಲೂ ಎದುರಿನಲ್ಲಿರುವ ವಾಹನಗಳನ್ನು ಓವರ್ಟೇಕ್ ಮಾಡುವಾಗ, ಯಾವಾಗಲೂ ಮುಂದಿನ ದಾರಿಯನ್ನು ಪರೀಕ್ಷಿಸಬೇಕು ಮತ್ತು ಅದು ಸ್ಪಷ್ಟವಾಗಿದ್ದರೆ ಮತ್ತು ಸಾಕಷ್ಟು ಸ್ಥಳಾವಕಾಶವಿದ್ದರೆ ಮಾತ್ರ ಓವರ್ಟೇಕ್ ಮಾಡಬೇಕು. ರಸ್ತೆಯಲ್ಲಿ ವಾಹನವನ್ನು ಕುರುಡಾಗಿ ಹಿಂಬಾಲಿಸುವ ಬದಲು ಮುಂದೆ ಸ್ಪಷ್ಟವಾದ ರಸ್ತೆಗಾಗಿ ಕಾಯುವುದು ಯಾವಾಗಲೂ ಒಳ್ಳೆಯದು.

ಅಲ್ಲದೆ, ನಿಧಾನವಾಗಿ ಚಲಿಸುವ ಭಾರೀ ವಾಹನಗಳಿಂದ ಸರಿಯಾದ ಮಾರ್ಗವನ್ನು ಪಡೆಯುವುದು ತುಂಬಾ ಕಷ್ಟಕರವಾದ ಕಾರಣ, ಹಲವರು ರಸ್ತೆಯ ನಿಯಮ ಮೀರಿ ಎಡದಿಂದ ಓವರ್ಟೇಕ್  ಮಾಡುತ್ತಾರೆ. ಇದು ಸರಿಯಾದ ಕ್ರಮವಲ್ಲ. ಪರ್ವತಗಳಲ್ಲಿ ಓವರ್ಟೇಕ್ ಮಾಡುವಾಗ ಅತ್ಯಂತ ಜಾಗರೂಕರಾಗಿರಬೇಕು. ಹೆಚ್ಚಿನ ಜನರು ಬ್ಲೈಂಡ್  ಸ್ಪಾಟ್ ಹಿಂದಿಕ್ಕಲು ಪ್ರಯತ್ನಿಸುತ್ತಾರೆ, ಇದು ವಿರುದ್ಧ ದಿಕ್ಕಿನಿಂದ ಬರುವ ವಾಹನಗಳಿಗೆ ಮುಖಾಮುಖಿ ಡಿಕ್ಕಿಗಳಿಗೆ ಕಾರಣವಾಗಬಹುದು.

ಇಎಸ್ಪಿ ಹೊಂದಿರುವ ಆಧುನಿಕ ವಾಹನಗಳು ಅಂತಹ ಸಂದರ್ಭಗಳಿಂದ ವಾಹನವನ್ನು ಅಪಘಾತಗಳಿಂದ ರಕ್ಷಿಸಬಲ್ಲವು. ಇಎಸ್ಪಿ ಸ್ವಯಂಚಾಲಿತವಾಗಿ ಬ್ರೇಕ್ ಅಳವಡಿಸುವುದರಿಂದ ಕಾರು ಚಾಲಕರ ನಿಯಂತ್ರಣದಲ್ಲಿಯೇ ಇರುತ್ತದೆ. ಆದರೆ, ಭಾರತೀಯ ರಸ್ತೆಗಳಲ್ಲಿ ಸಂಚರಿಸುವ ಹೆಚ್ಚಿನ ವಾಹನಗಳು ಈ ನಿರ್ಣಾಯಕ ಸುರಕ್ಷತಾ ವೈಶಿಷ್ಟ್ಯವನ್ನು ಹೊಂದಿಲ್ಲ.
 

Latest Videos
Follow Us:
Download App:
  • android
  • ios