*ಸ್ಕೋಡಾ ಕೊಡಿಯಾಕ್‌ ಆರಂಭಿಕ ಶೋರೂಂ ದರ 34.99 ಲಕ್ಷ ರೂ.*ಸ್ಟೈಲ್‌, ಸ್ಪೋರ್ಟ್‌ಲೈಣ್‌ ಮತ್ತು ಲಾರಿನ್‌ ಆ್ಯಂಡ್ ಕ್ಲೆಮೆಂಟ್‌ ವೇರಿಯMಟ್‌ಗಳಲ್ಲಿ ಲಭ್ಯ*ವೇರಿಯಂಟ್‌ಗಳ ಆಧಾರದ ಮೇಲೆ ದರ ನಿಗದಿ

Auto Desk: ಸ್ಕೋಡಾ ಕೊಡಿಯಾಕ್ (Skoda kodiaq) ಇಂದು ಭಾರತದಲ್ಲಿ ಬಿಡುಗಡೆಗೊಂಡಿದ್ದು, ಇದು ಆರಂಭಿಕ ಶೋರೂಂ ದರ 34.99 ಲಕ್ಷ ರೂ.ಗಳಷ್ಟಿದೆ. ಇದು ಸ್ಟೈಲ್‌, ಸ್ಪೋರ್ಟ್‌ಲೈನ್ ಮತ್ತು ಲಾರಿನ್‌ ಹಾಗೂ ಕ್ಲೆಮೆಂಟ್‌ ವೇರಿಯಂಟ್‌ಗಳಲ್ಲಿ ಲಭ್ಯವಿದೆ. ವೇರಿಯಂಟ್‌ಗಳ ಆಧಾರದ ಮೇಲೆ ಫೇಸ್‌ಲಿಫ್ಟ್‌ ಎಸ್‌ಯುವಿ ದರ 37.49 ಲಕ್ಷ ರೂ.ಗಳವರೆಗೆ ಇರಲಿದೆ.
ಕೊಡಿಯಾಕ್ ಎಸ್ಯುವಿ (SUV) ಕಳೆದ ವರ್ಷ ಜಾಗತಿಕ ಮಾರುಕಟ್ಟೆಗಳಲ್ಲಿ ಪರಿಚಯಿಸಲ್ಪಟ್ಟಿದ್ದು. ಈ ಹಿಂದೆ ಮಾರುಕಟ್ಟೆಗೆ ಬಂದಿದ್ದರೂ ಎಮಿಷನ್‌ ಕಾರಣದಿಂದ ಹಿಂಪಡೆಯಲ್ಪಟ್ಟಿದ್ದ ಕೊಡಿಯಾಕ್‌ ಎರಡೂವರೆ ವರ್ಷಗಳ ನಂತರ ಹೊಸ ರೂಪದಲ್ಲಿ ಮರಳಿದೆ.ಇದರ ಹೊರಭಾಗದ ವಿನ್ಯಾಸ, ಕ್ಯಾಬಿನ್ ಒಳಗೆ ಮತ್ತು ಹುಡ್ನಲ್ಲಿ ಕೂಡ ಬದಲಾವಣೆಗಳಾಗಿವೆ.ಈಗ ಇದು ಬಿಎಸ್‌6 ಹಾಗೂ 2.0 ಲೀಟರ್‌ ಟಿಎಸ್ಐ (TSI) ಪೆಟ್ರೋಲ್‌ ಇಂಜಿನ್‌ನೊಂದಿಗೆ ಬಂದಿದೆ.

ಸ್ಕೋಡಾ ಆಟೊ ಇಂಡಿಯಾದ ಬ್ರ್ಯಾಂಡ್‌ ಡೈರೆಕ್ಟರ್‌ ಝ್ಯಾಕ್‌ ಮಾತನಾಡಿ, “ಹೊಸ ಸ್ಕೋಡಾ ಕೊಡಿಯಾಕ್‌ನೊಂದಿಗೆ, ನಾವು ಒಂದು ಹೊಸ ವಿನ್ಯಾಸ, ಆರಾಮದಾಯಕ, ಇಂಜಿನ್‌ ಹಾಗೂ ಡೈನಮಿಕ್‌ ಸಾಮರ್ಥ್ಯಗಳನ್ನು ಒಳಗೊಂಡ ಹಾಗೂ ಅಧಿಕ ಕ್ಯಾಬಿನ್‌ ಉಳ್ಳ ಕಾರನ್ನು ಪರಿಚಯಿಸುತ್ತಿದ್ದೇವೆ. ಸ್ಕೋಡಾ ಕೊಡಿಯಾಕ್‌ ಕುಟುಂಬಗಳಿಗೆ ಸಂಪೂರ್ಣ ಲಕ್ಸುರಿ ಪ್ಯಾಕೇಜ್‌ ಆಗಿದೆ. ಅದು ದಿನನಿತ್ಯದ ಪ್ರಯಾಣ ಅಥವಾ ಕಚ್ಚಾ ರಸ್ತೆಗಳ ಸಾಹಸಗಳಿಗೆ ಕೂಡ ಹೊಂದಿಕೊಳ್ಳುತ್ತದೆ” ಎಂದಿದ್ದಾರೆ.

ಇದನ್ನೂ ಓದಿ:Auto Sales: 2021ರಲ್ಲಿ ಶೇ.130ರಷ್ಟು ಪ್ರಗತಿ ದಾಖಲಿಸಿದ ಸ್ಕೋಡಾ ಆಟೋ ಇಂಡಿಯಾ

ಇದರ ಸ್ಟೈಲ್‌ ಟ್ರಿಮ್‌ ರೂ.34.99 ಲಕ್ಷ, ಸ್ಪೋರ್ಟ್‌ ಲೈನ್‌ ರೂ.35.99 ಲಕ್ಷ ಹಾಗೂ ಲಾರಿನ್‌ ಆ್ಯಂಡ್‌ ಕ್ಲೆಮೆಂಟ್‌ ರೂ.37.49 ಲಕ್ಷ ರೂ.ಗಳಲ್ಲಿ ಲಭ್ಯವಿರಲಿವೆ.
 ಕಾರಿನ ಹೊರಭಾಗದಲ್ಲಿ ಪರಿಷ್ಕೃತ ಗ್ರಿಲ್, ಹೊಸ ಎಲ್ಇಡಿ ಡೇಟೈಮ್ ರನ್ನಿಂಗ್ ಲ್ಯಾಂಪ್ ಸಿಗ್ನೇಚರ್ಗಳು ಮತ್ತು ಹೊಸ ಬಂಪರ್ಗಳು ಇರಲಿವೆ. ಹಿಂಭಾಗದ ಬಂಪರ್ ಜೊತೆಗೆ ಟೈಲ್ ಲ್ಯಾಂಪ್ಗಳನ್ನು ಸಹ ಟ್ವೀಕ್ ಮಾಡಲಾಗಿದೆ. 

ಇಂಟರ್ನಲ್ ನ್ಯಾವಿಗೇಷನ್ ಮತ್ತು ವೈರ್ಲೆಸ್ ಸಂಪರ್ಕ!

ಇಂಟೀರಿಯರ್ನಲ್ಲಿ ಹೊಸ ಕೊಡಿಯಾಕ್ ದೊಡ್ಡ ಡ್ಯುಯಲ್-ಟೋನ್ ಕ್ಯಾಬಿನ್ ಹೊಂದಿದೆ. ಡ್ಯಾಶ್ಬೋರ್ಡ್ ಈಗ 8-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಹೊಂದಿದೆ ಮತ್ತು ಇಂಟರ್ನಲ್ ನ್ಯಾವಿಗೇಷನ್ ಮತ್ತು ವೈರ್ಲೆಸ್ ಸಂಪರ್ಕದೊಂದಿಗೆ ಬರುತ್ತದೆ. ಸ್ಟೀರಿಂಗ್ ವ್ಹೀಲ್ ಮುಂದೆ ದೊಡ್ಡ 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಇರಲಿದೆ. ಹೊಸ ಕೊಡಿಯಾಕ್ ವಿಶಾಲ ಸೀಟುಗಳು, ಕೂಲಿಂಗ್ ಮತ್ತು ಹೀಟಿಂಗ್ ಫಂಕ್ಷನ್ಗಳನ್ನು ಹೊಂದಿರಲಿದೆ. ಮೂರು ವಲಯಗಳ ಸ್ವಯಂಚಾಲಿತ ಎಸಿ, SUV ಪನೋರಮಿಕ್ ಸನ್ರೂಫ್, 12-ಸ್ಪೀಕರ್ ಕ್ಯಾಂಟನ್ ಸೌಂಡ್ ಸಿಸ್ಟಮ್, ಆಂಬಿಯೆಂಟ್ ಲೈಟಿಂಗ್ ಇತರ ವೈಶಿಷ್ಟ್ಯಗಳನ್ನು ಸಹ ಹೊಂದಿದೆ.
ಸ್ಕೋಡಾ ಕೊಡಿಯಾಕ್‌ ಫೇಸ್‌ಲಿಫ್ಟ್‌ ಎಸ್‌ಯುವಿ ಇಲ್ಯುಮಿನೇಟೆಡ್‌ ಗ್ಲೌವ್‌ಬಾಕ್ಸ್‌, 270 ಲೀಟರ್‌ ಬೂಟ್‌ ಸ್ಪೇಸ್, ಏಲು ಸೀಟುಗಳಿವೆ. ಈ ಬೂಟ್‌ ಸ್ಪೇಸ್‌ ಅನ್ನು 630 ಲೀಟರ್‌ವರೆಗೆ ವಿಸ್ತರಿಸಬಹುದು. ಮೂರನೇ ಸಾಲಿನ ಸೀಟನ್ನು ಮುಂದಕ್ಕೆ ತಳ್ಳಿದರೆ ಇದರ ಬೂಟ್‌ ಸ್ಪೇಸ್‌ ಬರೋಬ್ಬರಿ 2005 ಲೀಟರ್‌ಗೆ ಏರಿಕೆಯಾಗಲಿದೆ.

ಇದನ್ನೂ ಓದಿ:Car Price Hike 2022 ಮಾರುತಿ ಸುಜುಕಿ to ಟೊಯೋಟಾ, ಇಲ್ಲಿದೆ ಹೊಸ ವರ್ಷದಿಂದ ಬೆಲೆ ಹೆಚ್ಚಿಸಿದ ಕಾರು ಕಂಪನಿ ಲಿಸ್ಟ್!

ಹುಡ್ ಅಡಿಯಲ್ಲಿ, 2022 ಕೊಡಿಯಾಕ್ SUV 2.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ನಿಂದ ಹೊಂದಿದ್ದು, ಗರಿಷ್ಠ 190 ಎಚ್ಪಿ ಮತ್ತು 320 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದು 7-ಸ್ಪೀಡ್ ಡಿಸಿಟಿ ಗೇರ್ಬಾಕ್ಸ್ ಹೊಂದಿದೆ. ಡೈನಾಮಿಕ್ ಚಾಸಿಸ್ ಕಂಟ್ರೋಲ್ (ಡಿಸಿಸಿ) ವ್ಯವಸ್ಥೆ ಹೊಂದಿರುವ ಎಸ್ಯುವಿ ಶಾಕ್ ಅಬ್ಸಾರ್ಬರ್ಗಳನ್ನು ಸರಿಹೊಂದಿಸುವ ಮೂಲಕ ಡ್ಯಾಂಪಿಂಗ್ ಗುಣಲಕ್ಷಣಗಳನ್ನು ಅಳವಡಿಸಿಕೊಳ್ಳುತ್ತದೆ. ಇದು ಕಾರಿನ ಚಾಲಕ ಆಯ್ಕೆ ಮಾಡಿದ ಡ್ರೈವಿಂಗ್ ಮೋಡ್ಗೆ ತಕ್ಕಂತೆ ಇದು ಹೊಂದಿಕೊಳ್ಳುತ್ತದೆ. ಈ ಎಸ್ಯುವಿ ಇಕೋ, ನಾರ್ಮಲ್, ಸ್ಪೋರ್ಟ್ಸ್, ಸ್ನೋ ಮತ್ತು ಇಂಡಿವಿಜುವಲ್ ಎಂಬ ಐದು ಮೋಡ್ಗಳಲ್ಲಿ ಬರುತ್ತದೆ.

ಸುರಕ್ಷತಾ ವಿಚಾರದಲ್ಲಿ, 2022ರ ಸ್ಕೋಡಾ ಕೊಡಿಯಾಕ್ ಎಸ್ಯುವಿ 9 ಏರ್ಬ್ಯಾಗ್ಗಳನ್ನು ಒಳಗೊಂಡಿದೆ. ಇದಲ್ಲದೇ ಇಎಸ್ಸಿ, ಎಂಸಿಬಿ, ಎಎಫ್ಸಿ, ಎಬಿಎಸ್, ಎಎಸ್ಆರ್ನಂತಹ ಸುರಕ್ಷತಾ ಫೀಚರ್ಗಳನ್ನು ಒಳಗೊಂಡಿದೆ. ಸ್ಕೋಡಾ ಕೊಡಿಯಾಕ್ ಎಸ್ಯುವಿ ಫೇಸ್ಲಿಫ್ಟ್ ವೋಕ್ಸ್ವ್ಯಾಘನ್ ಟೈಗೂನ್ (Volkswagen Taigun), ಹ್ಯುಂಡೈ ಟಕ್ಸನ್ (Hyundai tacson) ಮತ್ತು ಸಿಟೆರಾನ್ (Citeron) ಸಿ5 (C5) ಏರ್ಕ್ರಾಸ್ಗೆ ಸ್ಪರ್ಧೆ ನೀಡಲಿದೆ.