Asianet Suvarna News Asianet Suvarna News

Skoda Slavia ಬಹುನಿರೀಕ್ಷಿತ ಸ್ಕೋಡಾ ಸ್ಲಾವಿಯಾ ಸೆಡಾನ್ ಕಾರು ಬಿಡುಗಡೆ, ಇಲ್ಲಿದೆ ಬೆಲೆ ಹಾಗೂ ವಿಶೇಷತೆ!

  • ಹೊಚ್ಚ ಹೊಸ ಸ್ಕೋಡಾ ಸ್ಲಾವಿಯಾ ಕಾರು ಭಾರತದ ಮಾರುಕಟ್ಟೆ ಪ್ರವೇಶ
  • 10.7 ಲಕ್ಷ ರೂಪಾಯಿಂದ 15.4 ಲಕ್ಷ ರೂ(ಎಕ್ಸ್ ಶೋ ರೂಂ) ಬೆಲೆಯಲ್ಲಿ ಲಭ್ಯ
  • ನೂತನ ಕಾರಿನಲ್ಲಿ ಫೀಚರ್ಸ್, ಸುರಕ್ಷತೆ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ
Skoda auto India launches all new SLAVIA 1 0 TSI sedan with starting price RS 10 69 lacs ckm
Author
Bengaluru, First Published Feb 28, 2022, 3:43 PM IST

ಮುಂಬೈ(ಫೆ.28): ಭಾರತದಲ್ಲಿ ಬಹುಬೇಡಿಕೆ ಪಡೆದುಕೊಂಡಿರುವ ಸ್ಕೋಡಾ(Skoda cars) ಇದೀಗ ಮತ್ತೊಂದು ಅತ್ಯಾಕರ್ಷಕ ಹಾಗೂ ಅತ್ಯುತ್ತಮ ಕಾರು ಬಿಡುಗಡೆ ಮಾಡಿದೆ. ಭಾರತದ ಮಾರುಕಟ್ಟೆಗೆ(Indian Car market) ಹೊಚ್ಚ ಹೊಸ ಸ್ಕೋಡಾ ಸ್ಲಾವಿಯಾ 1.0 TSI ಕಾರು ಬಿಡುಗಡೆಯಾಗಿದೆ.  ಕಳೆದ ಕೆಲ ದಿನಗಳಲ್ಲಿಂದ ಟೀಸರ್ ಮೂಲಕ ಭಾರಿ ಸದ್ದು ಮಾಡುತ್ತಿದ್ದ ಸ್ಲಾವಿಯಾ ಇದೀಗ ಬಿಡುಗಡೆಯಾಗಿದೆ. 

3 ವೈವಿಧ್ಯಗಳಲ್ಲಿ  ಲಭ್ಯವಿರಲಿರುವ ಸ್ಲಾವಿಯಾ 1.0 TSI ಎರಡು ಪ್ರಸರಣಗಳ ಆಯ್ಕೆಯೊಂದಿಗೆ  ಲಭ್ಯವಿದ್ದು,  ಆರು-ವೇಗದ ಟಾರ್ಕ್ ಕನ್ವರ್ಟರ್ ಸ್ವಯಂಚಾಲಿತ ಹಾಗೂ ಸನ್‌ರೂಫ್ ಆಯ್ಕೆಯೊಂದಿಗೆ ಸಂಪೂರ್ಣವಾಗಿ ಲೋಡ್ ಆಗಿರುವ ಸ್ಟೈಲ್ ವೈವಿಧ್ಯವು, 15.39 ಲಕ್ಷ ರೂಪಾಯಿ ದರದಲ್ಲಿ ಲಭ್ಯವಿದೆ. ಸ್ಲಾವಿಯಾ 1.0 TSI, ಎಲ್ಲಾ ವೈವಿಧ್ಯಗಳಾದ್ಯಂತವೂ ಆರು-ವೇಗದ ಮ್ಯಾನ್ಯುವಲ್ ಗೇರ್‌ಬಾಕ್ಸ್ ಲಭ್ಯವಿದ್ದು, ಅದ್ಭುತ ಮೌಲ್ಯ  ನೀಡುವುದರ ಜೊತೆಗೆ ಭಾರತದಲ್ಲಿ 20 ವರ್ಷಗಳಿಗಿಂತ ಹೆಚ್ಚಿನ  ಕಾಲದಿಂದ ವಿಶ್ವದರ್ಜೆ ಸೆಡಾನ್‌ಗಳನ್ನು ಒದಗಿಸುತ್ತಾ ಬಂದಿರುವ ಸ್ಕೋಡಾದ ಪರಂಪರೆಯನ್ನು ಉಳಿಸಿಕೊಂಡು ಬಂದಿದೆ.

January 2022 Auto Sales: ಸ್ಕೋಡಾ ಕುಶಾಕ್‌ಗೆ ಹೆಚ್ಚಿದ ಬೇಡಿಕೆ: ಕಾರುಗಳ ಮಾರಾಟ 3 ಪಟ್ಟು ಏರಿಕೆ!

ಹೊಚ್ಚ ಹೊಸ ಸ್ಲಾವಿಯಾ 1.0 TSI  ನಾವು ನಮ್ಮ ಗ್ರಾಹಕರಿಗೆ ಅದ್ವಿತೀಯ ಮೌಲ್ಯ ಒದಗಿಸುತ್ತಿದ್ದೇವೆ. ಈ ಪ್ರೀಮಿಯಮ್ ಮಧ್ಯಮ-ಗಾತ್ರದ ಸೆಡಾನ್ ವಿನ್ಯಾಸಕ್ಕಾಗಿ ಅದ್ಭುತ ಮೆಚ್ಚುಗೆ ಪಡೆದುಕೊಂಡಿದೆ.  ಅತ್ಯಾಧುನಿಕವಾದ, ಸಮರ್ಥ ಇಂಜಿನ್‌ನ ಶಕ್ತಿಯನ್ನೂ ಹೊಂದಿದ್ದು, ಶಕ್ತಿ ಮತ್ತು ಟಾರ್ಕ್ನಲ್ಲಿ ಮುಂಚೂಣಿಯಲ್ಲಿದೆ. ಸ್ಲಾವಿಯಾ1.0 TSI, ಕೇವಲ ದರಪಟ್ಟಿಯಲ್ಲಿ ಮಾತ್ರ ಮಹತ್ತರ ಮೌಲ್ಯ ಒದಗಿಸುತ್ತಿಲ್ಲ. ಮಾಲೀಕತ್ವದ ಮತ್ತು ನಿರ್ವಹಣೆಯ ವೆಚ್ಚದ ಮೇಲೆ ತೀವ್ರವಾದ ಗಮನಕೇಂದ್ರೀಕರಣದೊಂದಿಗೂ ಕೂಡ ನಾವು ಈ ಸೆಡಾನ್‌ಅನ್ನು ಇಂಜಿನಿಯರ್‌ಗೊಳಿಸಿದ್ದೇವೆ ಎಂದು ಸ್ಕೋಡಾ ಆಟೋ ಇಂಡಿಯಾದ ನಿರ್ದೇಶಕರಾದ ಝ್ಯಾಕ್ ಹೋಲಿಸ್ ಹೇಳಿದ್ದಾರೆ. 

2021 ರಲ್ಲಿ ಬಿಡುಗಡೆ ಮಾಡಲಾದ ಕುಶಖ್ SUV ರೀತಿ, ಭಾರತಕ್ಕಾಗಿಯೇ ತಯಾರಿಸಲಾದ MQB-A0-IN ಪ್ಲಾಟ್‌ಫಾರ್ಮ್ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ.  ಸ್ಲಾವಿಯಾ1.0 TSI, 1 ಲೀಟರ್, 3-ಸಿಲಿಂಡರ್ ಟರ್ಬೊ ಪೆಟ್ರೋಲ್ ಇಂಜಿನ್‌ನ ಶಕ್ತಿ ಹೊಂದಿದೆ. 6 ಸ್ಪೀಡ್ ಮ್ಯಾನ್ಯುವಲ್ ಅಥವಾ 6 ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಹೊಂದಿದೆ.  85 kW (115 PS) ಪವರ್ ಹಾಗೂ 178 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. TSI ಇಂಜಿನ್ 19.47 km/l ಮೈಲೇಜ್ ನೀಡಲಿದೆ.  ಕೇವಲ 10.7 ಸೆಕೆಂಡುಗಳಲ್ಲಿ100 km/h ವೇಗ ಪಡೆಯಬಲ್ಲ ಸಾಮರ್ಥ್ಯ ಹೊಂದಿದೆ. 

ಸ್ಲಾವಿಯಾ ಪ್ರೀಮಿಯಮ್ ಮಧ್ಯಮ-ಗಾತ್ರದ ವರ್ಗದಲ್ಲೇ ಅತಿ ಅಗಲವಾದ ಕಾರ್ ಆಗಿದೆ.  2651mm  ವ್ಹೀಲ್‌ಬೇಸ್‌ ಹೊಂದಿದೆ.  ಸ್ಕೋಡಾ ಕಾರುಗಳ ಪೈಕಿ ಅತಿ ಉದ್ದನೆಯ ಕಾರು ಅನ್ನೋ ಹೆ್ಗ್ಗಳಿಕೆಗೂ ಪಾತ್ರವಾಗಿದೆ.  521 ಲೀಟರ್ ಸಾಮರ್ಥ್ಯದ ಬೂಟ್‌ಸ್ಪೇಸ್,  ಹಿಂಬದಿಯ ಸೀಟುಗಳನ್ನು ಮಡಚಿದಾಗ ಇದು 1050 ಲೀಟರ್‌ಗೆ ವಿಸ್ತಾರಗೊಳ್ಳುತ್ತದೆ. ಇದಲ್ಲದೆ, 179mm ಗ್ರೌಂಡ್-ಕ್ಲಿಯರೆನ್ಸ್ ಹೊಂದಿದೆ. 

Skoda Kodiaq Facelift ಎಸ್‌ಯುವಿ ಬಿಡುಗಡೆ: ದರ ರೂ.34.99 ಲಕ್ಷದಿಂದ ಆರಂಭ!

ಸ್ಲಾವಿಯಾ 1.0 TSI, 6 ಏರ್‌ಬ್ಯಾಗ್‌ಗಳು, ಎಲೆಕ್ಟಾçನಿಕ್ ಸ್ಟೆಬಿಲಿಟಿ ಕಂಟ್ರೋಲ್, ತಿರುವುಗಳಲ್ಲಿ ವರ್ಧಿತ ಟ್ರಾ÷್ಯಕ್ಷನ್‌ಗಾಗಿಎಲೆಕ್ಟಾçನಿಕ್ ಡಿಫರೆನ್ಶಿಯಲ್ ಸಿಸ್ಟಮ್, ಅಪಘಾತ ಏರ್ಪಟ್ಟ ಸಂದರ್ಭದಲ್ಲಿ ಸಂಭಾವ್ಯ ಸರಣಿ ಘರ್ಷಣೆಗಳನ್ನು ತಡೆಗಟ್ಟುವುದಕ್ಕೆ  ಮತ್ತು ಕಾರನ್ನು ಸಹಜವಾಗಿ ಮತ್ತು ಸುರಕ್ಷಿತವಾಗಿ ನಿಲುಗಡೆಯ ಸ್ಥಿತಿಗೆ ತರುವುದಕ್ಕೆ  ಮಲ್ಟಿ ಕೊಲಿಶನ್  ಬ್ರೇಕ್ ಮುಂತಾದ ಅಸಂಖ್ಯ ಸುರಕ್ಷತಾ ಅಂಶಗಳೊಡನೆ ಬರುತ್ತದೆ. ಪಾರ್ಕಿಂಗ್ ಸೆನ್ಸಾರ್ಸ್, ಸ್ವಯಂಚಾಲಿತ ಬ್ರೇಕ್ ಡಿಸ್ಕ್ ಶುಚಿಗೊಳಿಸುವ ಕಾರ್ಯಾಚರಣೆ, ಹಿಂಬದಿ ನೋಟದ ಕ್ಯಾಮರಾ, ಟೈರ್ ಒತ್ತಡದ ಮೇಲುಸ್ತುವಾರಿ, ಹಿಲ್-ಹೋಲ್ಡ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಆಟೋ ಹೆಡ್‌ಲ್ಯಾಂಪ್ಸ್ ಮತ್ತು ವೈಪರ್ಸ್ ನಂತಹ ಇನ್ನೂ ಇತರ ಅಂಶಗಳೂ ಕೂಡ ಲಭ್ಯವಿವೆ. ಯುವ ಪ್ರಯಾಣಿಕರ ಸುರಕ್ಷತೆಯ ವರ್ಧನೆಗಾಗಿ ಆಂಕರ್‌ಗಳಿದ್ದರೆ, ಮಕ್ಕಳ ಆಸನಗಳಿಗಾಗಿ ರೂಫ್ ಮೇಲೆ ಟೆದರ್ ಪಾಯಿಂಟ್ ಆಂಕರ್‌ಗಳಿವೆ. 

ಇನ್ಫೋಟೇನ್ಮೆಂಟ್ ಹಾಗೂ ನ್ಯಾವಿಗೇಶನ್ ಅಗತ್ಯಗಳನ್ನು ಪೂರೈಸುವುದಕ್ಕಾಗಿ ಇರುವ ಸ್ಕೋಡಾ ಪ್ಲೇ ಆ್ಯಪ್ಸ್, ವೈರ್‌ಲೆಸ್ ಸ್ಮಾರ್ಟ್ ಲಿಂಕ್ ಮತ್ತು ಸ್ಕೋಡಾ  ಕನೆಕ್ಟ್ಅನ್ನು ಡೌನ್‌ಲೋಡ್ ಮಾಡಿಕೊಳ್ಳುವ ಸಾಮರ್ಥ್ಯವಿರುವ 25.4 ಸೆಂ.ಮಿ ಅತ್ಯಾಧುನಿಕ ಟಚ್‌ಸ್ಕ್ರೀನ್ ಹೊಂದಿದೆ.  ಚಾಲಕರಿಗೆ ಹೆಚ್ಚಿನ ಪ್ರಯೋಜನ ಒದಗಿಸುವ ಸಲುವಾಗಿ ಸ್ಲಾವಿಯಾದಲ್ಲಿ 20.32 ಸೆಂ.ಮೀ ವರ್ಣಮಯ ಪ್ರೊಗ್ರಾಮ್ ಮಾಡಬಹುದಾದ ಡಿಜಿಟಲ್ ಕಾಕ್‌ಪಿಟ್ ಅಳವಡಿಸಲಾಗಿದೆ. 

ಸ್ಲಾವಿಯಾ 1.0 TSI, ಸಾಮಾನ್ಯ ಮಾನದಂಡವಾಗಿ 4ವರ್ಷ/1,00,000 ಕಿ.ಮೀ ವಾರಂಟಿಯೊAದಿಗೆ ಬರುತ್ತದೆ. ಇದರ ಜೊತೆಗೆ ಗ್ರಾಹಕರು ಸ್ಕೋಡಾ ಆಟೋ ಇಂಡಿಯಾದ “ಪೀಸ್ ಆಫ್ ಮೈಂಡ್””ಯೋಜನೆಯಿಂದ ಅನೇಕ ನಿರ್ವಹಣಾ ಪ್ಯಾಕೇಜುಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಮಾಲೀಕತ್ವ ವೆಚ್ಚಗಳನ್ನು ಇನ್ನಷ್ಟು ನಿಯಂತ್ರಣದಲ್ಲಿಟ್ಟು, 95% ಪ್ರಾದೇಶೀಕರಣದೊಂದಿಗೆ, ಬಹುತೇಕ ಬಿಡಿಭಾಗಗಳು  ಮತ್ತು ಸಾಧನಗಳು ಸ್ಥಳೀಯವಾಗಿ ಲಭ್ಯವಾಗಿ ಕೈಗೆಟುಕುವ ದರಗಳಲ್ಲಿ ಮತ್ತು ಸುಲಭವಾಗಿ ಬದಲಾಯಿಸುವುದನ್ನು ಖಾತರಿಪಡಿಸಲಾಗಿದೆ. 

Follow Us:
Download App:
  • android
  • ios