ಎಂಜಿ ಹೆಕ್ಟರ್ ಎಸ್‌ಯುವಿ ಭಾರತೀಯ ರಸ್ತೆಗಳಲ್ಲಿ ರಾರಾಜಿಸುತ್ತಿವೆ. ಎಂಜಿ ಮೋಟಾರ್ ಹೆಕ್ಟರ್ ಜುಲೈ ತಿಂಗಳ್ಲಲಿ ಎಂಜಿ ಹೆಕ್ಟರ್ ಪ್ಲಸ್ ಭಾರತದಲ್ಲಿ ಬಿಡುಗಡೆ ಮಾಡಿತ್ತು ಭಾರತೀಯ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆಯೂ ಸಿಗುತ್ತಿದೆ. ಇದರಿಂದ ಪ್ರೇರಿತಗೊಂಡಿರುವ ಎಂಜಿ ಮೋಟಾರ್ ಇಂಡಿಯಾ, 7 ಸೀಟರ್ ಹೆಕ್ಟರ್ ಪ್ಲಸ್ ಕಾರನ್ನು ಹೊಸ ವರ್ಷದ ಮೊದಲ ತಿಂಗಳಲ್ಲಿ ಬಿಡುಗಡೆ ಮಾಡಲಿದೆ.

ವರ್ಷಾಂತ್ಯದ ಆಫರ್‌: ಕ್ವಿಡ್, ಟ್ರೈಬರ್, ಡಸ್ಟರ್ ಖರೀದಿಸಿದ್ರೆ 70,000 ರೂ.ವರೆಗೂ ಲಾಭ!

2020 ಜುಲೈನಲ್ಲಿ ಎಂಜಿ ಮೋಟಾರ್ ಇಂಡಿಯಾ ಎಂಜಿ ಹೆಕ್ಟರ್ ಪ್ಲಸ್ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು ಮತ್ತು ಈ ಕಾರಿನ ಬೆಲೆ 13.49 ಲಕ್ಷ ರೂಪಾಯಿನಿಂದ ಆರಂಭವಾಗಿ 18.54 ಲಕ್ಷ ರೂಪಾಯಿವರೆಗೆ ಇತ್ತು. ಏತನ್ಮಧ್ಯೆ, ಬೆಲೆ ಹೆಚ್ಚಳ ಕೂಡವಾಗಿತ್ತು.

7 ಸೀಟರ್ ಎಂಜಿ ಹೆಕ್ಟರ್ ಪ್ಲಸ್ 1.5 ಲೀ. ಎಂಜಿನ್ ಟರ್ಬೋ ಪೆಟ್ರೋಲ್ ಎಂಜಿನ್ ಹೊಂದಿದ್ದು, 6 ಸ್ಪೀಡ್ ಮ್ಯಾನುಯಲ್ ಗೇರ್ ಮತ್ತು 6 ಸ್ಪೀಡ್ ಡಿಸಿಟಿ ವ್ಯವಸ್ಥೆಯನ್ನು ಹೊಂದಿದೆ.  1.5 ಲೀ. ಎಂಜಿನ್ ಟರ್ಬೋ ಪೆಟ್ರೋಲ್ ಹೈಬ್ರಿಡ್ ಕೂಡ 6 ಸ್ಪೀಡ್ ಮ್ಯಾನುಯೆಲ್ ಗೇರ್‌ ಹೊಂದಿದೆ. ಜೊತೆಗೆ, 2.0 ಲೀ. ಟರ್ಬೋ ಡಿಸೇಲ್ ಎಂಜಿನ್‌ನಲ್ಲೂ 6 ಸ್ಪೀಡ್ ಮ್ಯಾನುಯಲ್ ಗೇರ್‌ ವ್ಯವಸ್ಥೆ ಇದೆ.

2021 ಕೆಟಿಎಂ 125 ಡ್ಯೂಕ್ ಬೈಕ್ ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

ಸ್ಟೈಲ್, ಸೂಪರ್, ಸ್ಮಾರ್ಟ ಮತ್ತು ಶಾರ್ಪ್ ಎಂಬ ನಾಲ್ಕು ವೆರಿಯೆಂಟ್‌ಗಳಲ್ಲಿ ಎಂಜಿ ಹೆಕ್ಟರ್ ಪ್ಲಸ್ ಮಾರಾಟಕ್ಕೆಲಭ್ಯವಿದೆ. 13.74 ಲಕ್ಷ ರೂ.ನಿಂದ ಆರಂಭವಾಗಿ ಹೈ ಎಂಡ್  18.69 ಲಕ್ಷ ರೂ.ವರೆಗೂ(ದೆಹಲಿ ಎಕ್ಸ್ ಶೋರೂಮ್) ಇದೆ.

ಕ್ರೋಮ್ ಫ್ರಂಟ್ ಗ್ರಿಲ್, ಎಲ್ಇಡಿ ಡಿಆರ್‌ಎಲ್‌ ಒಳಗೊಂಡ ಎಲ್ಇಡಿ ಹೆಡ್‌ಲ್ಯಾಂಪ್ಸ್ ಮತ್ತು ಎಲ್‌ಇಡಿ ಫಾಗ್ ಲ್ಯಾಂಪ್ಸ್, ಎಲ್‌ಇಡಿ ಟೇಲ್ ಲ್ಯಾಂಪ್, ಹೀಟೆಡ್ ಒಆರ್‌ವಿಎಂ, ರೂಫ್ ರೇಲ್ಸ್, ಶಾರ್ಕ್ ಫಿನ್ ಅಂಟೆನಾ ಮತ್ತು ಡ್ಯೂಯಲ್ ಟೋನ್ ಮಷೀನ್ಡ್ ಅಲಾಯ್ ವ್ಹೀಲ್ ಸೇರಿದಂತೆ ಅನೇಕ ವಿಶಿಷ್ಟ ಫೀಚರ್‌ಗಳನ್ನು ಈ ಎಂಜಿ ಹೆಕ್ಟರ್ ಪ್ಲಸ್ ಒಳಗೊಂಡಿದೆ.

ಹೋಂಡಾ ಆಕ್ಟಿವಾ 6ಜಿ ಖರೀದಿಸಿದರೆ 5000 ರೂ.ವರೆಗೆ ಕ್ಯಾಶ್‌ಬ್ಯಾಕ್!