RTO ಅಧಿಕಾರಿಗಳ ಬೃಹತ್ ಕಾರ್ಯಾಚರಣೆ; ಅಮಿತಾಬ್ ಬಚ್ಚನ್ ಸೇರಿ ಗಣ್ಯರ ಕಾರು ಸೀಝ್!

  • ಐಷಾರಾಮಿ ಕಾರುಗಳನ್ನು ಸೀಝ್ ಮಾಡಿದ ಆರ್ ಟಿ ಓ ಅಧಿಕಾರಿಗಳು
  • ದಾಖಲೆಗಳು ಸರಿಯಿಲ್ಲದೆ ಚಲಾಯಿಸುತ್ತಿದ್ದ ಐಷಾರಾಮಿ ಕಾರುಗಳು
  • ಅಮಿತಾಬ್ ಬಚ್ಚನ್ ಹೆಸರಲ್ಲಿರುವ ಕಾರು ಸೀಜ್
RTO seize Luxury cars including bollywood actor amitabh bachchan and mlc farooq ckm

ಬೆಂಗಳೂರು(ಆ.22): ಮೋಟಾರು ವಾಹನ ನಿಯಮ ಅತ್ಯಂತ ಕಠಿಣವಾಗಿದೆ. ನಿಯಮ ಉಲ್ಲಂಘನೆಗೆ ದುಬಾರಿ ದಂಡ ಮಾತ್ರವಲ್ಲ ಶಿಕ್ಷೆಯೂ ಅನುಭವಿಸಬೇಕಾಗುತ್ತದೆ. ಇದೀಗ ಆರ್‌ಟಿಒ ಅಧಿಕಾರಿಗಳು ಬೃಹತ್ ಕಾರ್ಯಾಚರಣೆ ನಡೆಸಿದ್ದಾರೆ. ನಗರದಲ್ಲಿ ದಾಖಲೆ ಇಲ್ಲದೆ ಓಡಾಡುತ್ತಿದ್ದ ಗಣ್ಯರ ಕಾರುಗಳನ್ನು ಸೀಝ್ ಮಾಡಲಾಗಿದೆ. ಇದರಲ್ಲಿ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಹೆಸರಿನಲ್ಲಿದ್ದ ಕಾರನ್ನು ಪೊಲೀಸರು ಸೀಝ್ ಮಾಡಲಾಗಿದೆ.

ಅಮಿತಾಬ್ ಬಚ್ಚನ್ ರೋಲ್ಸ್ ರಾಯ್ಸ್ ಮಾರಾಟ- ಬೆಂಗಳೂರಿಗೆ ಬಂತು ದುಬಾರಿ ಕಾರು!

MLC ಫಾರೂಖ್, ಉಮ್ರಾ ಡೆವಲಪರ್ ಮಾಲೀಕ ಬಾಬು ಅವರ ಕಾರು ಸೇರಿದಂತೆ ಹಲವು ಗಣ್ಯರ ಕಾರುಗಳನ್ನು ಆರ್‌ಟಿಒ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.  10 ಕ್ಕೂ ಹೆಚ್ಚು ಐಷಾರಾಮಿ ಕಾರುಗಳನ್ನು ಸೀಝ್ ಮಾಡಿದ ಅಧಿಕಾರಿಗಳು ನೆಲಮಂಗಲ  ಠಾಣೆಗೆ ಹೊತ್ತೊಯ್ದಿದ್ದಾರೆ.

ಜೆ ಡಬ್ಲ್ಯೂ ಮ್ಯಾರೇಟ್ ಬಳಿ ಐಷಾರಾಮಿ ಕಾರುಗಳು ಸೀಝ್ ಮಾಡಲಾಗಿದೆ. ಇನ್ಸ್ ರೆನ್ಸ್ ಹಾಗೂ ದಾಖಲೆಗಳು ಸರಿಯಿಲ್ಲದ ಐಷಾರಾಮಿ ಕಾರುಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಇದರಲ್ಲಿ ಅಮಿತಾಬ್ ಬಚ್ಚನ್ ಹೆಸರಲ್ಲಿರುವ ರೋಲ್ಸ್ ರಾಯ್ಸ್ ಕಾರು ಸೇರಿದೆ.

ಕನ್ನಡಿಗನಿಗೆ ರೋಲ್ಸ್ ರಾಯ್ ಕಾರು ಮಾರಿದ ಅಮಿತಾಭ್ ಬಚ್ಚನ್

ಅಮತಾಬ್ ಬಚ್ಚನ್ ಬಳಿ ಇದ್ದ ರೋಲ್ಸ್ ರಾಯ್ಸ್ ಕಾರನ್ನು ಬೆಂಗಳೂರಿನ ಉಮ್ರ ಡೆವಲಪರ್ ಮಾಲೀಕ ಬಾಬು 6 ಕೋಟಿ ರೂಪಾಯಿ ನೀಡಿ ಖರೀದಿಸಿದ್ದರು. ಕಾರು ಖರೀದಿಸಿದ ಬಳಿಕ ಅಮಿತಾಬ್ ಬಚ್ಚನ್ ಹೆಸರಿಲ್ಲಿದ್ದ ರಿಜಿಸ್ಟ್ರೇಶನ್ ತನ್ನ ಹೆಸರಿಗೆ ಬದಲಾಯಿಸಲು ಬಾಬು ನಿರಾಕರಿಸಿದ್ದರು. ಕಾರಣ ಸೆಲೆಬ್ರೆಟಿ ಸ್ಟೇಟಸ್ ಕಾರಿಗೂ ತನಗೂ ಇರಲಿ ಎಂದು ವಿಳಂಬ ಮಾಡಿದ್ದರು.

ಬಾಬು 6 ಕೋಟಿ ರೂಪಾಯಿ ನೀಡಿ ರೋಲ್ಸ್ ರಾಯ್ಸ್ ಕಾರು ಖರೀದಿಸಿದರೂ ದಾಖಲೆಗಳ ಪ್ರಕಾರ ಕಾರು ಈಗಲೂ ಅಮಿತಾಬ್ ಬಚ್ಚನ್ ಹೆಸರಿನಲ್ಲಿದೆ. ದಾಖಲೆ ಸೇರಿದಂತೆ ಹಲವು ಪತ್ರಗಳು ಸರಿ ಇಲ್ಲದ ಕಾರಣ ಬಾಬು ಬಳಿ ಇರುವ ರೋಲ್ಸ್ ರಾಯ್ಸ್ ಕಾರನ್ನು ಪೊಲೀಸರು ಸೀಝ್ ಮಾಡಿದ್ದಾರೆ.

Latest Videos
Follow Us:
Download App:
  • android
  • ios