Asianet Suvarna News Asianet Suvarna News

Electric Car ರೆನಾಲ್ಟ್ ಕ್ವಿಡ್ ಎಲೆಕ್ಟ್ರಿಕ್ ಕಾರಿನ ರೋಡ್ ಟೆಸ್ಟ್ ಯಶಸ್ವಿ, ಬಿಡುಗಡೆಗೆ ತಯಾರಿ!

  • ಬಿಡುಗಡೆಯಾಗಲಿರುವ ಟಾಟಾ ಪಂಚ್ ಇವಿಗೆ ಪೈಪೋಟಿ
  • ಕ್ರಾಸ್ ಓವರ್ ಕ್ವಿಡ್ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಸಿದ್ಧತೆ
  • ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಹೆಚ್ಚಿದ ಬೇಡಿಕೆ
Reanult plan to launch kwid electric car by 2023 with afforable price and maximum features ckm
Author
Bengaluru, First Published Mar 26, 2022, 3:20 PM IST | Last Updated Mar 26, 2022, 3:20 PM IST

ನವದೆಹಲಿ(ಮಾ.26): ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ(Electric Vehicle) ಮಾರುಕಟ್ಟೆ ನಿಧಾನವಾಗಿ ವಿಸ್ತರಿಸಿಕೊಳ್ಳುತ್ತಿದೆ. ಮೂಲಭೂತ ಸೌಕರ್ಯ ಕೊರತೆ, ವಾಹನದ ಬೆಲೆ ಸೇರಿದಂತೆ ಕೆಲ ಕಾರಣಗಳಿಂದ ಎಲೆಕ್ಟ್ರಿಕ್ ವಾಹನ ಖರೀದಿಗೆ ಕೊಂಚ ನಿಧಾನವಾಗಿದೆ. ಆದರ ಪ್ರಗತಿ ಪ್ರಮಾಣ ಗಣನೀಯವಾಗಿದೆ. ಇದೀಗ ಭಾರತದಲ್ಲಿ ರೆನಾಲ್ಟ್ ಕ್ವಿಡ್ ಎಲೆಕ್ಟ್ರಿಕ್(Renault Kwid EV) ವಾಹನ ಬಿಡುಗಡೆಗೆ ತಯಾರಿ ಆರಂಭಿಸಿದೆ.

ರೆನಾಲ್ಟ್ ಕ್ವಿಡ್ ಎಲೆಕ್ಟ್ರಿಕ್ ಕಾರಿನ ರೋಡ್ ಟೆಸ್ಟ್ ಆರಂಭಗೊಂಡಿದೆ. ಮೂಲಗಳ ಪ್ರಕಾರ ರೆನಾಲ್ಟ್ ಕ್ಲಿಡ್ ಎಲೆಕ್ಟ್ರಿಕ್ ಕಾರು ಭಾರತದಲ್ಲಿ 2023ರ ವೇಳೆಗೆ ಬಿಡುಗಡೆಯಾಗಲಿದೆ. ಬ್ರಿಜಿಲ್ ದೇಶದಲ್ಲಿ ಈಗಾಗಲೇ ರೆನಾಲ್ಟ್ ಕ್ವಿಡ್ ಎಲೆಕ್ಟ್ರಿಕ್ ಕಾರಿನ ಬಿಡುಗಡೆಗೆ ತಯಾರಿ ನಡೆಯುತ್ತಿದೆ. ಭಾರತದಲ್ಲಿ 2020ರ ಆಟೋ ಎಕ್ಸ್ಪೋದಲ್ಲಿ ಕ್ವಿಡ್ ಎಲೆಕ್ಟ್ರಿಕ್ ಕಾರನ್ನು ಪರಿಚಯಿಸಲಾಗಿತ್ತು. ಬಳಿಕ ಕೊರೋನಾ ಸೇರಿದಂತೆ ಹಲವು ಕಾರಣಗಳಿಂದ ಕ್ವಿಡ್ ಇವಿ ಬಿಡುಗಡೆ ವಿಳಂಬವಾಯಿತು. ಇದೀಗ 2023ರ ಒಳಗೆಡೆ ಭಾರತದಲ್ಲಿ (India) ಕ್ವಿಡ್ ಇವಿ ಬಿಡುಗಡೆಯಾಗಲಿದೆ ಅನ್ನೋ ಮಾಹಿತಿ ಹೊರಬಿದ್ದಿದೆ.

ಹೊಸ ರೂಪ, ಅತ್ಯುತ್ತಮ ಪರ್ಫಾಮೆನ್ಸ್ ರೆನಾಲ್ಡ್ ಕ್ವಿಡ್ MY22 ಕಾರು ಬಿಡುಗಡೆ!

26.8khw ಬ್ಯಾಟರಿ ಪ್ಯಾಕ್ ಬಳಸಲಾಗಿದೆ.44 ಬಿಹೆಚ್‌ಪಿ ಪವರ್ ಹಾಗೂ 125 ಎನ್ಎಂ ಪೀಕ್ ಟಾರ್ಕ್ ಸಾಮರ್ಥ್ಯ ನೀಡಲಾಗಿದೆ. ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿದರೆ 295 ಕಿಮೀ ಮೈಲೇಜ್ ನೀಡಲಿದೆ ಎಂದು ರೆನಾಲ್ಟ್ ಹೇಳಿದೆ. 2022ರಲ್ಲಿ ಭಾರತದಲ್ಲಿ ಬಿಡುಗಡೆಯಾಗಬೇಕಿದ್ದ ರೆನಾಲ್ಟ್ ಕ್ವಿಡ್ ಎಲೆಕ್ಟ್ರಿಕ್ ಕಾರು ಇದೀಗ 2023ರ ಮಧ್ಯಭಾಗದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.  

ಇದರ ಬೆಲೆ ಕುರಿತು ರೆನಾಲ್ಟ್ ಯಾವುದೇ ಮಾಹಿತಿ ಬಹಿರಂಗ ಪಡಿಸಿಲ್ಲ. ನೂತನ ಕ್ವಿಡ್ ಎಲೆಕ್ಟ್ರಿಕ್ ಕಾರಿನ ಬೆಲೆ 10 ರೂಪಾಯಿ ಒಳಗಿರಲಿದೆ ಎಂದು ರೆನಾಲ್ಟ್ ಹೇಳಿದೆ. ಭಾರತದಲ್ಲಿ ಈಗಾಗಲೇ ಕಡಿಮೆ ಬೆಲೆಯ ಟಾಟಾ ಟಿಗೋರ್ ಎಲೆಕ್ಟ್ರಿಕ್ ಕಾರು ಲಭ್ಯವಿದೆ. ಇದರ ಬೆಲೆ 11.99 ಲಕ್ಷ ರೂಪಾಯಿ. ಇನ್ನು ಮೈಲೇಜ್ 306 ಕಿ.ಮೀ. ಹೀಗಾಗಿ ರೆನಾಲ್ಟ್ ಕ್ವಿಡ್ ಭಾರಿ ಪೈಪೋಟಿ ನೀಡಲಿದೆ. 

8 ಲಕ್ಷ ವಾಹನಗಳ ಮಾರಾಟದ ಮೈಲಿಗಲ್ಲು ತಲುಪಿದ ರೆನಾಲ್ಟ್ ಇಂಡಿಯಾ!

ಭಾರತದಲ್ಲಿ ರೆನಾಲ್ಟ್ ಇದೀಗ ಎಲೆಕ್ಟ್ರಿಕ್ ಕಾರಿನತ್ತ ಗಮನಹರಿಸಿದೆ. ಇತ್ತೀಚೆಗೆ ರೆನಾಲ್ಟ್ ಡಸ್ಟರ್ ಕಾರು ಉತ್ಪಾದನೆ ಸ್ಥಗಿತಗೊಳಿಸಿದೆ. ಇನ್ನು ಕ್ವಿಡ್ ಭಾರತದಲ್ಲಿ ಅತ್ಯಂತ ಜನಪ್ರಿಯ ಕಾರಾಗಿ ಹೊರಹೊಮ್ಮಿದೆ.

ರೆನಾಲ್ಟ್‌ ಕ್ವಿಡ್‌ ದಾಖಲೆಯ 3,50,000 ಸೇಲ್‌
ತನ್ನ ಕ್ವಿಡ್‌ ಕಾರುಗಳನ್ನು ಬಿಎಸ್‌6 ದರ್ಜೆಗೇರಿಸಿರುವ ರೆನಾಲ್ಟ್‌ ಇಂಡಿಯಾ ಇದೀಗ 3.5 ಲಕ್ಷ ಸೇಲ್‌ ದಾಖಲಿಸಿದ ಖುಷಿಯಲ್ಲಿದೆ. ದೇಶದ ಮಿನಿ ಕಾರು ಸೆಗ್ಮೆಂಟ್‌ನಲ್ಲಿ ಇದೊಂದು ದೊಡ್ಡ ಸಾಧನೆ ಎಂದು ಕಂಪೆನಿ ಹೇಳಿದೆ. ಈ ಸಂದರ್ಭ ಮಾತನಾಡಿದ ರೆನಾಲ್ಟ್‌ ಇಂಡಿಯಾ ಆಪರೇಶನ್ಸ್‌ನ ಎಂಡಿ ವೆಂಕಟರಾಮು ಮಾಮಿಲ್ಲಪಲ್ಲೆ ಅವರು, ‘ಗ್ರಾಹಕರು ನಮ್ಮ ಮೇಲೆ ಇಟ್ಟಿರುವ ವಿಶ್ವಾಸ ಉಳಿಸಿಕೊಂಡಿದ್ದಕ್ಕೆ ಹೆಮ್ಮೆ ಎನಿಸುತ್ತದೆ’ ಎಂದರು. ಬಿಎಸ್‌6 ದರ್ಜೆಗೇರಿಸಿದ ಬಳಿಕ 4.16 ಲಕ್ಷಗಳಷ್ಟಿದ್ದ ಕ್ವಿಡ್‌ ಬೆಲೆ 4.48 ಲಕ್ಷಗಳಿಗೆ ಏರಿಕೆಯಾಗಿದೆ.

‘ರೆನಾಲ್ಟ್‌’ ಕಂಪನಿಯು ‘ಕೈಗರ್‌’ ಹೆಸರಿನ ಆಕರ್ಷಕ ವಿನ್ಯಾಸವುಳ್ಳ ಹೊಸ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಫೆ.16ರಿಂದಲೇ ಇಷ್ಟದ ಕಾರು ಬುಕ್‌ ಮಾಡಲು ಗ್ರಾಹಕರಿಗೆ ಅವಕಾಶ ಕಲ್ಪಿಸಿದೆ. ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಪರಿಚಯಿಸಲಾದ ವಿಶೇಷ ಬಿ-ಎಸ್‌ಯುವಿ ನಾಲ್ಕು ಮಾದರಿಯ ‘ಕೈಗರ್‌’ ಕಾರುಗಳನ್ನು ಗ್ರಾಹಕರು ಭಾರತಾದ್ಯಂತ ಲಭ್ಯವಿರುವ 500ಕ್ಕೂ ಅಧಿಕ ಶೋರೂಮ್‌ ಮೂಲಕ ಬುಕ್‌ ಮಾಡಬಹುದು. ಭಾರತೀಯ ಗ್ರಾಹಕರ ಅಗತ್ಯತೆ, ಬಣ್ಣ ಮತ್ತು ವಿನ್ಯಾಸ ಗಮನದಲ್ಲಿಟ್ಟುಕೊಂಡು ಕಡಿಮೆ (ಆರಂಭಿಕ 5.45 ಲಕ್ಷ ರು.) ಬೆಲೆಯಲ್ಲಿ ಕಾರುಗಳನ್ನು ಉತ್ಪಾದಿಸಲಾಗಿದೆ.

Latest Videos
Follow Us:
Download App:
  • android
  • ios