0.8 ಲೀಟರ್ ಹಾಗೂ 1.0 ಲೀಟರ್ ಎಂಜಿನ್ ವೇರಿಯೆಂಟ್ ನೂತನ ಕಾರು 4.49 ಲಕ್ಷ ರೂಪಾಯಿಯಿಂದ ಆರಂಭ ಮೇಕ್ ಇನ್ ಇಂಡಿಯಾ ರೆನಾಲ್ಟ್ ಕ್ವಿಡ್ MY22 ಕಾರು  

ನವದೆಹಲಿ(ಮಾ.14): ರೆನಾಲ್ಟ್ ಇಂಡಿಯಾ ಭಾರತದ ಕಾರು ಮಾರುಕಟ್ಟೆ ಆಕ್ರಮಿಸಿಕೊಳ್ಳಲು ತಯಾರಿ ಮಾಡುತ್ತಿದೆ. ಈಗಾಗಲೇ ಮಾರಾಟದಲ್ಲಿ ಕುಸಿತ ಕಂಡಿದ್ದ ರೆನಾಲ್ಟ್ ಡಸ್ಟರ್ ಕಾರಿನ ಉತ್ಪಾದನೆ ಸ್ಥಗಿತಗೊಳಿಸಿದೆ. ಇದೀಗ ಅತ್ಯಧಿಕ ಬೇಡಿಕೆ ಇರುವ ಕಾರುಗಳತ್ತ ರೆನಾಲ್ಟ್ ಗಮನಹರಿಸಿದೆ. ಇದರ ಭಾಗವಾಗಿ ಭಾರತದಲ್ಲಿ ಅತ್ಯಧಿಕ ಮಾರಾಟವಾಗುತ್ತಿರುವ ರೆನಾಲ್ಟ್ ಕ್ವಿಡ್ ಕಾರು ಹೊಸ ರೂಪದಲ್ಲಿ ಬಿಡುಗಡೆಯಾಗಿದೆ. ರೆನಾಲ್ಟ್ ಕ್ವಿಡ್ MY22 ಕಾರು ಇದೀಗ ಮಾರುಕಟ್ಟೆ ಪ್ರವೇಶಿಸಿದೆ.

ಹೊಸ ರೂಪ, ಅತ್ಯುತ್ತಮ ಪರ್ಫಾಮೆನ್ಸ್, ಇಂಧನ ದಕ್ಷತೆ ಒಳಗೊಂಡ ನೂತನ ರೆನಾಲ್ಟ್ ಕ್ವಿಡ್ MY22 ಕಾರಿನ ಬೆಲೆ 4.49 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತಿದೆ. ಮತ್ತೊಂದು ವಿಶೇಷ ಅಂದರೆ ಈ ಕಾರು ಶೇಕಡಾ 98ರಷ್ಟು ಸ್ಥಳೀಯ ಮಟ್ಟದಲ್ಲೇ ಉತ್ಪಾದನೆಯಾಗಿದೆ. ಮೇಕ್ ಇನ್ ಇಂಡಿಯಾ ಕಾರಾಗಿರುವ ನೂತನ ರೆನಾಲ್ಟ್ ಕ್ವಿಡ್ MY22 ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಲು ಸಜ್ಜಾಗಿದೆ.

Renault India Milestone: 8 ಲಕ್ಷ ವಾಹನಗಳ ಮಾರಾಟದ ಮೈಲಿಗಲ್ಲು ತಲುಪಿದ ರೆನಾಲ್ಟ್ ಇಂಡಿಯಾ!

ನೂತನ ರೆನಾಲ್ಟ್ ಕ್ವಿಡ್ MY22 ಕಾರು ಎರಡು ಎಂಜಿನ್ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಮಾನ್ಯುಯೆಲ್ ಹಾಗೂ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಆಯ್ಕೆಗಳೂ ಲಭ್ಯವಿದೆ. ಇನ್ನು ಸ್ಪೋರ್ಟ್ಸ್ ಲುಕ್ ಕಾರಿನ ಬಣ್ಣ, ಇಂಟಿರಿಯರ್ ಲುಕ್ ನೀಡಲಾಗಿದೆ. ನೂತನ ಕ್ವಿಡ್ MY22 ಕಾರಿನ ಮೈಲೇಜ್ ಪ್ರತಿ ಲೀಟರ್ ಪೆಟ್ರೋಲ್‌ಗೆ 22.25 ಕಿಲೋಮೀಟರ್. 

ಇನ್ನು ಡ್ಯುಯೆಲ್ ಫ್ರಂಟ್ ಏರ್‌ಬ್ಯಾಗ್, ಎಬಿಎಸ್ ಬ್ರೇಕ್ ಹಾಗೂ ಇಬಿಡಿ, ಸೀಟ್ ಬೆಲ್ಟ್ ರಿಮೈಂಡರ್, ಓವರ್ ಸ್ವೀಡ್ ಅಲರ್ಟ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್ ಸೇರಿದಂತೆ ಹಲವು ಫೀಚರ್ಸ್ ನೂತನ ಕಾರಿನಲ್ಲಿದೆ. 

2015ರಲ್ಲಿ ರೆನಾಲ್ಟ್ ಕ್ವಿಡ್ ಮೊದಲ ಭಾರಿಗೆ ಭಾರತದಲ್ಲಿ ಬಿಡುಗಡೆಯಾಗಿತ್ತು. ಬಳಿಕ ಹಲವು ಅಪ್‌ಗ್ರೇಡ್ ಮೂಲಕ ಕ್ವಿಡ್ ಭಾರತದಲ್ಲಿ ಸಂಚಲನ ಮೂಡಿಸಿದೆ. ಈಗಾಗಲೇ 4 ಲಕ್ಷ ಗ್ರಾಹಕರನ್ನು ಕ್ವಿಡ್ ಹೊಂದಿದೆ.

Year End 2021 ಕೈಗೆಟುಕುವ ದರದಲ್ಲಿ ಬಿಡುಗಡೆಯಾದ ಟಾಪ್ 5 ಕಾರು!

ರೆನಾಲ್ಟ್‌ ಕ್ವಿಡ್‌ ದಾಖಲೆಯ 4,00,000 ಸೇಲ್‌
ತನ್ನ ಕ್ವಿಡ್‌ ಕಾರುಗಳನ್ನು ಬಿಎಸ್‌6 ದರ್ಜೆಗೇರಿಸಿರುವ ರೆನಾಲ್ಟ್‌ ಇಂಡಿಯಾ ಇದೀಗ4 ಲಕ್ಷ ಸೇಲ್‌ ದಾಖಲಿಸಿದ ಖುಷಿಯಲ್ಲಿದೆ. ದೇಶದ ಮಿನಿ ಕಾರು ಸೆಗ್ಮೆಂಟ್‌ನಲ್ಲಿ ಇದೊಂದು ದೊಡ್ಡ ಸಾಧನೆ ಎಂದು ಕಂಪೆನಿ ಹೇಳಿದೆ. ಈ ಸಂದರ್ಭ ಮಾತನಾಡಿದ ರೆನಾಲ್ಟ್‌ ಇಂಡಿಯಾ ಆಪರೇಶನ್ಸ್‌ನ ಎಂಡಿ ವೆಂಕಟರಾಮು ಮಾಮಿಲ್ಲಪಲ್ಲೆ ಅವರು, ‘ಗ್ರಾಹಕರು ನಮ್ಮ ಮೇಲೆ ಇಟ್ಟಿರುವ ವಿಶ್ವಾಸ ಉಳಿಸಿಕೊಂಡಿದ್ದಕ್ಕೆ ಹೆಮ್ಮೆ ಎನಿಸುತ್ತದೆ’ ಎಂದರು. ಬಿಎಸ್‌6 ದರ್ಜೆಗೇರಿಸಿದ ಬಳಿಕ 4.16 ಲಕ್ಷಗಳಷ್ಟಿದ್ದ ಕ್ವಿಡ್‌ ಬೆಲೆ 4.48 ಲಕ್ಷಗಳಿಗೆ ಏರಿಕೆಯಾಗಿತ್ತು. ಇದೀಗ ಹೊಸ ಕಾರಿನ ಬೆಲೆ 4.49ಲಕ್ಷ ರೂಪಾಯಿಗೆ ಏರಿಕೆಯಾಗಿದೆ.

ರೆನಾಲ್ಟ್‌ನಿಂದ 7 ಸೀಟರ್‌ ಫ್ಯಾಮಿಲಿ ಕಾರ್‌
ಡಸ್ಟರ್‌, ಕ್ವಿಡ್‌ನಂತಹ ಕಾರುಗಳಿಂದ ಜನಪ್ರಿಯತೆ ಗಳಿಸಿರುವ ಫ್ರಾನ್ಸ್‌ ಮೂಲದ ರೆನಾಲ್ಟ್‌ ಕಂಪನಿ ಇದೀಗ ಭಾರತೀಯರಿಗೆಂದೇ ತಯಾರಿಸಿದ 7 ಸೀಟುಗಳ ಫ್ಯಾಮಿಲಿ ಕಾರನ್ನು ಮೊದಲ ಬಾರಿಗೆ ಪ್ರದರ್ಶಿಸಿದೆ. ಸಣ್ಣ ಕಾರಿನಲ್ಲೇ 7 ಸೀಟು ಅಳವಡಿಸಿಕೊಳ್ಳುವ ಆಯ್ಕೆ ನೀಡಿರುವುದು ಮತ್ತು ಸೀಟನ್ನು 100 ರೀತಿಯಲ್ಲಿ ಅಡ್ಜೆಸ್ಟ್‌ ಮಾಡಿಕೊಳ್ಳಲು ಸಾಧ್ಯವಿರುವುದು ಇದರ ವಿಶೇಷ! ರಾಜಧಾನಿಯಲ್ಲಿ ಇತ್ತೀಚೆಗೆ ನಡೆದ ವರ್ಣರಂಜಿತ ಸಮಾರಂಭದಲ್ಲಿ ರೆನಾಲ್ಟ್‌ ಟ್ರೈಬರ್‌ ಕಾರನ್ನು ರೆನಾಲ್ಟ್‌ ಗ್ರೂಪ್‌ನ ಸಿಇಒ ಥೀರಿ ಬೊಲೊರೆ ಬಿಡುಗಡೆ ಮಾಡಿದರು. ‘ಈ ಕಾರನ್ನು ಭಾರತೀಯರ ಅಗತ್ಯಗಳನ್ನು ಗಮನದಲ್ಲಿರಿಸಿಕೊಂಡೇ ವಿನ್ಯಾಸಗೊಳಿಸಲಾಗಿದ್ದು, ಚೆನ್ನೈನಲ್ಲಿ ಉತ್ಪಾದಿಸಲಾಗುತ್ತಿದೆ. ಈ ಕಾರಿನ ಮೂಲಕ 2022ರ ವೇಳೆಗೆ ಭಾರತದ ಮಾರುಕಟ್ಟೆಯಲ್ಲಿ ನಮ್ಮ ಕಾರುಗಳ ಮಾರಾಟದ ಸಂಖ್ಯೆಯನ್ನು ದ್ವಿಗುಣಗೊಳಿಸಿ 50 ಲಕ್ಷಕ್ಕೇರಿಸುವ ಗುರಿ ಹಾಕಿಕೊಂಡಿದ್ದೇವೆ’ ಎಂದು ಬೊಲೊರೆ ಹೇಳಿದರು.