Asianet Suvarna News Asianet Suvarna News

ಬೆಂಗಳೂರಲ್ಲಿ BYD ಎಲೆಕ್ಟ್ರಿಕ್ ಕಾರು ಶೋ ರೂಂ ಉದ್ಘಾಟನೆ, 415 ಕಿ.ಮೀ ಮೈಲೇಜ್!

ಭಾರತದಲ್ಲಿ ಭಾರಿ ಸಂಚಲನ ಸೃಷ್ಟಿಸಿದ BYD ಎಲೆಕ್ಟ್ರಕ್ ಕಾರು ಇದೀಗ ಬೆಂಗಳೂರಿನಲ್ಲೇ ಲಭ್ಯವಿದೆ. ಬೆಂಗಳೂರಿನಲ್ಲಿ ಪಿಪಿಎಸ್ ಮೋಟಾರ್ ಬಿವೈಡಿ ಹೊಸ ಶೋ ರೂಂ ಆರಂಭಿಸಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 415 ಕಿ.ಮೀ ಪ್ರಯಾಣಿಸಬಲ್ಲ ಈ ಕಾರಿಗೆ ಭಾರತದಲ್ಲಿ ಭಾರಿ ಬೇಡಿಕೆ ವ್ಯಕ್ತವಾಗಿದೆ.

PPS Motors India Inaugurates  BYD electric Passenger Vehicle Showroom in Bengaluru ckm
Author
First Published Sep 15, 2022, 6:53 PM IST

ಬೆಂಗಳೂರು(ಸೆ.15): ವಾರೆನ್ ಬಫೆಟ್ ಬೆಂಬಲಿತ ವಾಹನ ತಯಾರಿಕಾ ಕಂಪನಿ ಬಿವೈಡಿ, ಬೆಂಗಳೂರಿನಲ್ಲಿ ತನ್ನ ಪ್ರಯಾಣಿಕ ವಾಹನಗಳ ಮೊದಲ  ಷೋರೂಂ ಮತ್ತು ಭಾರತದಲ್ಲಿ ಆರನೇ ಷೋರೂಂ ಆರಂಭಿಸಿದೆ. ಬೆಂಗಳೂರಿನಲ್ಲಿ ಹೊಸದಾಗಿ ಆರಂಭಿಸಿರುವ ಈ ಷೋರೂಂ ಪಿಪಿಎಸ್ ಮೋಟರ್ಸ್‌ನ ಎರಡನೇ ಡೀಲರ್‌ಶಿಪ್‌ ಆಗಿದೆ. ಪಿಪಿಎ ಮೋಟರ್ಸ್‌ನ ಮೊದಲ ಡೀಲರ್‌ಶಿಪ್‌ ಅನ್ನು ಕಳೆದ ತಿಂಗಳು ವಿಜಯವಾಡಾದಲ್ಲಿ ಪ್ರಾರಂಭಿಸಲಾಗಿದೆ. ಬೆಂಗಳೂರಿನಲ್ಲಿ ಆರಂಭಿಸಿರುವ ಮೊದಲ ಷೋರೂಂ  ಅನ್ನು ಪಿಪಿಎಸ್ ಮೋಟರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಎಂ ಸಾಂಘ್ವಿ, ಬಿವೈಡಿ ಇಂಡಿಯಾದ ವಿದ್ಯುತ್‌ಚಾಲಿತ ಪ್ರಯಾಣಿಕ ವಾಹನ ವಹಿವಾಟಿನ ಹಿರಿಯ ಉಪಾಧ್ಯಕ್ಷ ಸಂಜಯ್ ಗೋಪಾಲಕೃಷ್ಣನ್, ಬಿಡಿಎ ಅಧ್ಯಕ್ಷ  ಹಾಗೂ ಯಲಹಂಕದ ಶಾಸಕರೂ ಆಗಿರುವ  ಎಸ್. ಆರ್. ವಿಶ್ವನಾಥ್, ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತ ಟಿ.ಎಚ್. ಎಂ ಕುಮಾರ್ ಅವರು ಉದ್ಘಾಟಿಸಿದರು. ಬಿವೈಡಿ ಇಂಡಿಯಾ ಮತ್ತು ಪಿಪಿಎಸ್ ಮೋಟರ್ಸ್‌ನ ಹಿರಿಯ ಅಧಿಕಾರಿಗಳು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಬೆಂಗಳೂರಿನ ಗ್ರಾಹಕರಿಗೆ(Bengaluru Customer) ಬಿವೈಡಿಯ ಶುದ್ಧ ಸ್ವರೂಪದ ವಿದ್ಯುತ್‌ಚಾಲಿತ ವಾಹನಗಳ(Electric Vehicle) ಸೇವೆಯನ್ನು ಈಗ ಪಿಪಿಎಸ್‌ ಬಿವೈಡಿ(BYD EV) ವಿಸ್ತರಿಸಿದೆ. ವಾಹನ ಉದ್ಯಮದಲ್ಲಿ ಗಣನೀಯ ಅನುಭವ ಹೊಂದಿರುವ ಪಿಪಿಎಸ್‌ ಬಿವೈಡಿ – ಸುತ್ತಮುತ್ತಲಿನ  ಪ್ರದೇಶಗಳಿಗೆ ತನ್ನ ವಹಿವಾಟನ್ನು ವಿಸ್ತರಿಸುವ ಮೂಲಕ ವಿಶಾಲ ವ್ಯಾಪ್ತಿ ಹೊಂದಿದೆ. ಬೆಂಗಳೂರಿನ ನಿವಾಸಿಗಳು  ನಗರದಲ್ಲಿಯೇ ವಿಶ್ವ ದರ್ಜೆಯ ಮತ್ತು ಪ್ರಯಾಣಿಕರ ವಾಹನಗಳಿಗೆ ಸಂಬಂಧಿಸಿದಂತೆ ಸುಸ್ಥಿರ  ಸ್ವರೂಪದ ಸೇವೆಗಳನ್ನು ಪಡೆಯಲು ಇನ್ನು ಮುಂದೆ ಸಾಧ್ಯವಾಗಲಿದೆ. 1600 ಚದರ ಅಡಿಗಳಿಗೆ ಹರಡಿರುವ ಈ ಷೋರೂಂನಲ್ಲಿ ತರಬೇತಿ ಪಡೆದಿರುವ ತಂತ್ರಜ್ಞರು, ಸರ್ವೀಸ್ ಉಪಕರಣಗಳು, ಸರ್ವೀಸ್‌ ಬೇಗಳು, ವಿದ್ಯುತ್‌ಚಾಲಿತ ವಾಹನಗಳ (ಇವಿ) ಚಾರ್ಜಿಂಗ್ ಕೇಂದ್ರಗಳು, ಗ್ರಾಹಕರ ವಿಶ್ರಾಂತ ಕೋಣೆ ಮತ್ತು ಷೋರೂಂ ಡಿಸ್‌ಪ್ಲೇ  ಫ್ಲೋರ್ ಒಳಗೊಂಡಿದ್ದು, ಗ್ರಾಹಕರಿಗೆ ಅತ್ಯುತ್ತಮವಾದ ಷೋರೂಂ ಅನುಭವ ನೀಡಲಿದೆ.

Tata Avinya EV 30 ನಿಮಿಷ ಚಾರ್ಜ್, 500KM ಮೈಲೇಜ್, ಟಾಟಾ ಅವಿನ್ಯ ಕಾನ್ಸೆಪ್ಟ್ ಎಲೆಕ್ಟ್ರಿಕ್ ಕಾರು ಅನಾವರಣ!

ಬೆಂಗಳೂರು ವಲಯವು ಬಿವೈಡಿ ಇಂಡಿಯಾದ ಪ್ರಮುಖ ಮಾರುಕಟ್ಟೆಗಳಲ್ಲಿ ಒಂದಾಗಿದೆ. ವಿದ್ಯುತ್‌ ಚಾಲಿತ ವಾಹನಗಳಿಗೆ ಪೂರಕ ಪರಿಸರ ಕಲ್ಪಿಸಿದ ಮತ್ತು ವಿದ್ಯುತ್‌ಚಾಲಿತ ವಾಹನಗಳ ಬಳಕೆಯಲ್ಲಿ ಮುಂಚೂಣಿಯಲ್ಲಿ ಇರುವ  ದೇಶದ ಮೊದಲ ರಾಜ್ಯ ಕರ್ನಾಟಕವಾಗಿದೆ(Karnataka).  ನಮ್ಮ ಮೊದಲ ಪ್ರಯಾಣಿಕ ವಾಹನ ಷೋರೂಂ ಆರಂಭಿಸುವ ಮೂಲಕ ರಾಜ್ಯವನ್ನು ಪ್ರವೇಶಿಸಲು ನಾವು ಪುಳಕಗೊಂಡಿದ್ದೇವೆ. ವಿದ್ಯುತ್‌ಚಾಲಿತ ಪ್ರಯಾಣಿಕ ವಾಹನಗಳ (ಇಪಿವಿ)  ನಮ್ಮ ಜಾಗತಿಕ ಪರಿಣತಿಯೊಂದಿಗೆ, ಮುಂಬರುವ ವರ್ಷಗಳಲ್ಲಿ ಶುದ್ಧ ವಿದ್ಯುತ್‌ಚಾಲಿತ ವಾಹನಗಳ ಶ್ರೇಣಿಯನ್ನು ನೀಡಲು ನಾವು ಸಜ್ಜಾಗಿದ್ದೇವೆ ಎಂದು ಬಿವೈಡಿ ಇಂಡಿಯಾದ(BYD India) ವಿದ್ಯುತ್‌ಚಾಲಿತ ಪ್ರಯಾಣಿಕ ವಾಹನಗಳ ವಹಿವಾಟಿನ ಹಿರಿಯ ಉಪಾಧ್ಯಕ್ಷ ಸಂಜಯ್ ಗೋಪಾಲಕೃಷ್ಣನ್ ಹೇಳಿದ್ದಾರೆ.

ಜಾಗತಿಕವಾಗಿ ಮತ್ತು ಭಾರತದಲ್ಲಿ ಬಿವೈಡಿ ಯಶಸ್ಸಿನ ಪಯಣಕ್ಕೆ ನಾವು ಸಾಕ್ಷಿಯಾಗುತ್ತಿದ್ದೇವೆ. ಬಿವೈಡಿ ಇಂಡಿಯಾದ ಜೊತೆ ಸಹಯೋಗ ಹೊಂದಲು, ಕರ್ನಾಟಕದಲ್ಲಿ ನಮ್ಮ ಒಡನಾಟ ವಿಸ್ತರಿಸಲು ಮತ್ತು ಭಾರತದಲ್ಲಿ ವಿದ್ಯುತ್‌ಚಾಲಿತ ವಾಹನಗಳ (ಇವಿ) ಕ್ರಾಂತಿಯ ಭಾಗವಾಗಲು ನಮಗೆ ಖುಷಿಯಾಗುತ್ತಿದೆ. ಕರ್ನಾಟಕದಲ್ಲಿ ನಮ್ಮ ಬ್ರ್ಯಾಂಡ್‌ಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಈಗಾಗಲೇ 27 ಬುಕಿಂಗ್‌ಗಳನ್ನು ಸ್ವೀಕರಿಸಿದ್ದೇವೆ. ಮುಂಬರುವ ವರ್ಷಗಳಲ್ಲಿ ವಿದ್ಯುತ್‌ಚಾಲಿತ ಪ್ರಯಾಣಿಕ ವಾಹನಗಳಿಗೆ (ಇಪಿವಿ)  ಬೇಡಿಕೆಯು ಹೆಚ್ಚಾಗಲಿದೆ. ಪರಿಸರ ಕಾಳಜಿಯ ಖರೀದಿದಾರರು ಈ ಷೋರೂಂ ಮೂಲಕ ತಮ್ಮ ನಗರದಲ್ಲಿಯೇ  ವಿದ್ಯುತ್‌ಚಾಲಿತ ಪ್ರಯಾಣಿಕ ವಾಹನಗಳಲ್ಲಿಯೇ (ಇಪಿವಿ) ಅತ್ಯುತ್ತಮವಾದುದನ್ನು ಪಡೆಯುವ ಪ್ರಯೋಜನ ಪಡೆಯಲಿದ್ದಾರೆ. ಬಿವೈಡಿಯ ಸ್ಪರ್ಧಾತ್ಮಕ ವಾಹನಗಳು ಮತ್ತು ಗ್ರಾಹಕರ ಅಗತ್ಯಗಳ ಬಗೆಗಿನ ಆಳವಾದ ತಿಳಿವಳಿಕೆಯ ನೆರವಿನಿಂದ ನಮ್ಮ ಗ್ರಾಹಕರಿಗೆ ಉತ್ತಮ ಮಾಲೀಕತ್ವದ ಅನುಭವ ಒದಗಿಸಲು ನಾವು ಪ್ರಯತ್ನಿಸುತ್ತೇವೆ’ ಎಂದು ಹೇಳಿದ್ದಾರೆ. ಭಾರತ ಸರ್ಕಾರವು 2030ರ ವೇಳೆಗೆ ಪ್ರಯಾಣಿಕರ ವಾಹನ (ಪಿವಿ)  ವಿಭಾಗಕ್ಕೆ ಶೇ 30ರಷ್ಟು ವಿದ್ಯುತ್‌ಚಾಲಿತ ವಾಹನಗಳ (ಇವಿ) ಸೇರ್ಪಡೆ ಮಾಡುವ ಗುರಿ ನಿಗದಿಪಡಿಸಿದೆ. 2070 ರ ವೇಳೆಗೆ ವಾಹನಗಳು ಹೊರಸೂಸುವ ಹೊಗೆಯ ಪ್ರಮಾಣವನ್ನು ಶೂನ್ಯಕ್ಕೆ ಇಳಿಸುವ ಗುರಿ ಹಾಕಿಕೊಂಡಿದೆ. ಈ ಗುರಿಗಳಿಂದ ಪ್ರೇರಿತವಾಗಿರುವ ಬಿವೈಡಿ, ಸ್ಥಳೀಯ ಮಾರುಕಟ್ಟೆಗೆ ಸ್ಥಳೀಯ ಮತ್ತು ಪರಿಸರ ಸ್ನೇಹಿ ಉತ್ಪನ್ನಗಳನ್ನು ಒದಗಿಸಲು   ತನ್ನ ಪಾಲುದಾರರ ಜೊತೆ ನಿರಂತರವಾಗಿ ನಿಕಟವಾಗಿ ಕೆಲಸ ಮಾಡಲಿದೆ ಎಂದು ಪಿಪಿಎಸ್ ಮೋಟರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಎಂ ಸಾಂಘ್ವಿ ಹೇಳಿದ್ದಾರೆ.

Electic Vehicle ಭಾರತೀಯ ಸೇನೆಗೆ ಎಲೆಕ್ಟ್ರಿಕ್ ವಾಹನ ಸೇರ್ಪಡೆಗೆ ಮಾರ್ಗಸೂಚಿ!
 

Follow Us:
Download App:
  • android
  • ios