Asianet Suvarna News Asianet Suvarna News

Tata Avinya EV 30 ನಿಮಿಷ ಚಾರ್ಜ್, 500KM ಮೈಲೇಜ್, ಟಾಟಾ ಅವಿನ್ಯ ಕಾನ್ಸೆಪ್ಟ್ ಎಲೆಕ್ಟ್ರಿಕ್ ಕಾರು ಅನಾವರಣ!

  • ವಿಶ್ವವನ್ನೇ ಬೆರಗುಗೊಳಿಸಿದ ಟಾಟಾ ಮೋಟಾರ್ಸ್
  • ಅತ್ಯಾಕರ್ಷಕ, ಅತ್ಯಾಧುನಿಕ ಎಲೆಕ್ಟ್ರಿಕ್ ಕಾರು ಅನಾವರಣ
  • ಟಾಟಾ ಅವಿನ್ಯ ಕಾನ್ಸೆಪ್ಟ್ ಎಲೆಕ್ಟ್ರಿಕ್ ಕಾರು, 500 ಕಿ.ಮೀ ಮೈಲೇಜ್
500 kms range in under 30 minutes Tata Passenger Electric Mobility showcases concept Pure EV Architecture ckm
Author
Bengaluru, First Published Apr 29, 2022, 3:28 PM IST

ಮುಂಬೈ(ಏ.29): ಟಾಟಾ ಮೋಟಾರ್ಸ್ ಹೊಚ್ಚ ಹೊಸ ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರು ಅನಾವರಣ ಮಾಡಿದೆ.ಟೆಸ್ಲಾ ಸೇರಿದಂತೆ ವಿಶ್ವದ ಐಷಾರಾಮಿ ಕಾರುಗಳನ್ನೇ ಮೀರಿಸಬಲ್ಲ  ಅತ್ಯಾಕರ್ಷಕ ಡಿಸೈನ್, ಅತ್ಯಾಧುನಿಕ ತಂತ್ರಜ್ಞಾನದ ಕಾನ್ಸೆಪ್ಟ್ ಎಲೆಕ್ಟ್ರಿಕ್ ಕಾರನ್ನು ಟಾಟಾ ಮೋಟಾರ್ಸ್ ಬಿಡುಗಡೆ ಮಾಡಿದೆ. ಟಾಟಾ ಅವಿನ್ಯ ಕಾನ್ಸೆಪ್ಟ್ ಎಲೆಕ್ಟ್ರಿಕ್ ಕಾರು ಭಾರಿ ಸಂಚಲನ ಮೂಡಿಸಿದೆ.

ಮುಂದಿನ ಪೀಳಿಗೆಯ ಡಿಸೈನ್ ಮೂಲಕ ಹೊಸ ಅವಿನ್ಯ ಕಾನ್ಸೆಪ್ಟ್ ಕಾರು ಅನಾವರಣಗೊಂಡಿದೆ. ಈ ಕಾರಿನ ವಿಶೇಷ ಎಂದರೆ ಕೇವಲ 30 ನಿಮಿಷದಲ್ಲಿ ಚಾರ್ಜ್ ಮಾಡಲು ಸಾಧ್ಯವಿದೆ. ಇಷ್ಟೇ ಅಲ್ಲ ಒಂದು ಸಂಪೂರ್ಣ ಚಾರ್ಜ್‌ಗ 500ಕ್ಕೂ ಹೆಚ್ಚು ಕಿಲೋಮೀಟರ್ ಮೈಲೇಜ್ ನೀಡಲಿದೆ. 

CURVV Electric SUV ಹೊಚ್ಚ ಹೊಸ ಎಲೆಕ್ಟ್ರಿಕ್ SUV ಕಾನ್ಸೆಪ್ಟ್ ಕಾರು ಪ್ರದರ್ಶಿಸಿದ ಟಾಟಾ ಮೋಟಾರ್ಸ್!

ಅವಿನ್ಯ ಹೆಸರಿನಲ್ಲಿದೆ ಭಾರತೀಯತೆ:
ಟಾಟಾ ಮೋಟಾರ್ಸ್ ಭಾರತೀಯರ ಹೆಮ್ಮೆ. ಟಾಟಾದ ಪ್ರತಿ ಉತ್ಪನ್ನಗಳ ಹಿಂದೆ ದೇಶಭಕ್ತಿ ಅಡಗಿದೆ. ಎಲ್ಲಾ ಉತ್ಪನ್ನಗಳು ಅಷ್ಟೇ ಅತ್ಯುತ್ತಮ ಗುಣಮಟ್ಟ ಹೊಂದಿದೆ. ಇದೀಗ ಟಾಟಾ ಮೋಟಾರ್ಸ್ ಅನಾವರ ಮಾಡಿರುವ ಹೊಚ್ಚ ಹೊಸ ಅವಿನ್ಯ ಎಲೆಕ್ಟ್ರಿಕ್ ಕಾರಿನ ಹೆಸರಿನಲ್ಲೂ ವಿಶೇಷತೆ ಇದೆ.  ಅವಿನ್ಯ ಹೆಸರಿನ ಮೂಲ ಸಂಸ್ಕೃತ ಭಾಷೆ. ಅವಿನ್ಯ ಪದದ ಅರ್ಥ ಆವಿಷ್ಕಾರ. 

 ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ (TPEM) ಅನಾವರಣ ಮಾಡಿರುವ ಅವಿನ್ಯ ಕಾರು  ಹೊಸ ಯುಗದ ತಂತ್ರಜ್ಞಾನ, ಸಾಫ್ಟ್‌ವೇರ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ನಿಂದ ಒಳಗೊಂಡಿದೆ. ಅತ್ಯಂತ ಅರಾಮದಾಯಕ ಹಾಗೂ ಸುರಕ್ಷಿತ ಪ್ರಯಾಣ ನೀಡುವ ಅವಿನ್ಯ 2025ರಲ್ಲಿ ಬಡುಗಡೆಯಾಗಲಿದೆ.

ಪರಿಸರಕ್ಕೆ ಪೂರಕವಾದ ಕಾರು ನಿರ್ಮಾಣದಲ್ಲಿ ಮುಂಚೂಣಿಯಲ್ಲಿರುವ ಟಾಟಾ ಅವಿನ್ಯ ಎಲೆಕ್ಟ್ರಿಕ್ ಕಾರು ಹೊಸ ಭಾಷ್ಯ ಬರೆಯಲಿದೆ ಅನ್ನೋ ವಿಶ್ವಾಸವಿದೆ.  ಅತ್ಯಾಧುನಿಕ ಸಾಫ್ಟ್‌ವೇರ್. ಗ್ರೀನ್ ಮೊಬಿಲಿಟಿ ಭಾಗವಾಗಿ ಅವಿನ್ಯ ಕಾನ್ಸೆಪ್ಟ್ ಕಾರು ಅನಾವರಗೊಂಡಿದೆ. ಟಾಟಾ ಸಮೂಹದಲ್ಲಿ, ಚಲನಶೀಲತೆ ಪರಿಹಾರಗಳನ್ನು ನಿರ್ಮಿಸಲು ಅಗತ್ಯವಿರುವ ಎಲ್ಲಾ ಪರಿಣತಿಯನ್ನು ತರುವಲ್ಲಿ ಮುಂಚೂಣಿಯಲ್ಲಿದೆ. ಮುಂದಿನ ದಿನಗಳಲ್ಲಿ ಕೇವಲ ಭಾರತ ಮಾತ್ರವಲ್ಲ ವಿಶ್ವದಲ್ಲಿ ಅಗ್ರಸ್ಥಾನ ಪಡೆಯುವಲ್ಲಿ ಯಾವುದೇ ಅನುಮಾವಿಲ್ಲ ಎಂದು ಟಾಟಾ ಮೋಟಾರ್ಸ್ ಮುಖ್ಯಸ್ಥ ಎನ್ ಚಂದ್ರಶೇಖರನ್ ಹೇಳಿದ್ದಾರೆ.

EV sales ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಶೇ.352 ರಷ್ಟು ಏರಿಕೆ, ಹೊಸ ದಾಖಲೆ ಬರೆದ ಟಾಟಾ!

ಅವಿನ್ಯ ಕಾನ್ಸೆಪ್ಟ್ ಎಲೆಕ್ಟ್ರಿಕ್ ಕಾರು ವಿನ್ಯಾಸ ಇದೀಗ ಭಾರಿ ಚರ್ಚೆಯಾಗುತ್ತಿದೆ. ಐಷಾರಾಮಿ ಕಾರಿನ ವಿನ್ಯಾಸವನ್ನೇ ಮೀರಿಸಬಲ್ಲ ಡಿಸೈನ್ ಮಾಡಲಾಗಿದೆ. ಕ್ಯಾಟಮರನ್‌ನಿಂದ ಪ್ರೇರಿತವಾದ ಅವಿನ್ಯಾ ಪರಿಕಲ್ಪನೆ ಕಾರು SUV ಹಾಗೂ MPV ಕಾರುಗಳ ಮಿಶ್ರಣವಾಗಿದೆ. ಯಾಕೆಂದರೆ ಎಸ್‌ಯುವಿ ಕಾರಿನ ವಿನ್ಯಾಸ ಹಾಗೂ ಐಷಾರಾಮಿತನ ಹಾಗೂ ಎಂವಿಪಿ ಕಾರಿನ ಸ್ಥಳಾವಕಾಶ ಈ ಕಾನ್ಸೆಪ್ಟ್ ಕಾರಿನಲ್ಲಿದೆ. ಮುಂಭಾಗ ಹಾಗೂ ಹಿಂಭಾಗದಲ್ಲಿನ DRL, ಬಂಪರ್  ಅತ್ಯಾಕರ್ಷಕ ವಿನ್ಯಾಸವನ್ನು ಹೊಂದಿದೆ. 'ಬಟರ್‌ಫ್ಲೈ ಡೋರ್ ಸೇರಿದಂತೆ ಪ್ರತಿಯೊಂದು ವಿಚಾರದಲ್ಲೂ ಹೊಸ ತನ ಹಾಗೂ ಟಾಟಾ ಹೆಗ್ಗುರುತು ಕಾಣಬಹುದು.

ಸ್ಕೈಡೋಮ್‌ನಿಂದ ಕ್ರಿಯಾತ್ಮಕ ಕನ್ಸೋಲ್ ಪ್ರೇರಿತ ಸ್ಟೀರಿಂಗ್ ವೀಲ್‌, ಪ್ರಯಾಣಿಕರಿಗೆ ಆಳವಾದ ಇಂಟರ್‌ಪೇಸ್ ಸಿಸ್ಟಮ್, ಅತ್ಯುತ್ತಮ ಇಂಟಿರಿಯರ್ ಡಿಸೈನ್ ಮೊದಲ ನೋಟಕ್ಕೆ ಆಕರ್ಷಿಸುತ್ತದೆ. ಕಾರಿನೊಳಗೆ ಗೊಂದಲವಿಲ್ಲದ ಡ್ರೈವಿಂಗ್, ಒತ್ತಡ ಮುಕ್ತ ವಾತಾವರಣ ನಿರ್ಮಿಸಲಾಗಿದೆ.

ಟಾಟಾ ಕಂಪನಿ ಕಾರುಗಳ ಬೆಲೆಯೇರಿಕೆ
ಪ್ರಮುಖ ವಾಹನ ತಯಾರಿಕಾ ಕಂಪನಿಗಳಾದ ಮಹೀಂದ್ರಾ, ಮಾರುತಿ ಸುಜುಕಿ ಹಾಗೂ ವೊಲ್ವೋ ಕಾರುಗಳ ಬೆಲೆಯನ್ನೇರಿಸಿದ ಬೆನ್ನಲ್ಲೇ ಟಾಟಾ ಮೋಟರ್ಸ್‌ ಕೂಡಾ ಪ್ರಯಾಣಿಕ ವಾಹನಗಳ ಬೆಲೆಯಲ್ಲಿ ಶೇ. 1.1ರಷ್ಟುಏರಿಕೆ ಮಾಡುವುದಾಗಿ ಶನಿವಾರ ಘೋಷಣೆ ಮಾಡಿದೆ. ‘ಉತ್ಪಾದನಾ ವೆಚ್ಚದಲ್ಲಿನ ಏರಿಕೆಯನ್ನು ಸರಿದೂಗಿಸಲು ಕಂಪನಿಯ ಎಲ್ಲ ಪ್ರಯಾಣಿಕ ವಾಹನಗಳ ಬೆಲೆ ಏರಿಕೆ ಮಾಡುವುದು ಅನಿವಾರ್ಯವಾಗಿದೆ. ಪ್ರಯಾಣಿಕ ವಾಹನಗಳ ಮಾದರಿಯ ಆಧಾರದ ಮೇಲೆ ಬೆಲೆಯಲ್ಲಿ ಸರಾಸರಿ ಶೇ. 1.1 ಏರಿಕೆ ಮಾಡಲಾಗಿದ್ದು, ಏಪ್ರಿಲ್‌ 23ರಿಂದ ಪರಿಷ್ಕೃತ ಬೆಲೆಗಳು ಜಾರಿಗೆ ಬರಲಿದೆ’ ಎಂದು ಟಾಟಾ ಮೋಟರ್ಸ್‌ ಹೇಳಿಕೆಯಲ್ಲಿ ತಿಳಿಸಿದೆ.

Follow Us:
Download App:
  • android
  • ios