Ola S1 Scooter ಪಾವತಿ ಅಂತಿಮ ದಿನಾಂಕ ಘೋಷಿಸಿದ ಓಲಾ ಎಲೆಕ್ಟ್ರಿಕ್!

*ಓಲಾ ಎಲೆಕ್ಟ್ರಿಕ್‌ನಿಂದ ಕೊನೆಗೂ ಅಂತಿಮ ಪಾವತಿಯ ದಿನಾಂಕ ಘೋಷಣೆ

*ಜ.21ರಿಂದ ಪಾವತಿಗೆ ಅವಕಾಶ

*20 ಸಾವಿರ ರೂ. ಮುಂಗಡ ಪಾವತಿಸಿದವರಿಗೆ ಈ ಅವಕಾಶ

Ola electric announces second final payment window open on January 21 from 6 pm

ಬೆಂಗಳೂರು(ಜ.15): ಸಾಕಷ್ಟು ವಿಳಂಬದ ನಂತರ ಕೊನೆಗೂ  ಓಲಾ ಎಲೆಕ್ಟ್ರಿಕ್(Ola Electric Scooter),  ದ್ವಿಚಕ್ರ ವಾಹನಗಳಾದ ಎಸ್1 ಹಾಗೂ ಎಸ್1 ಬುಕಿಂಗ್ ಮಾಡಿದ ಗ್ರಾಹಕರಿಗೆ ಅಂತಿಮ ಪಾವತಿ(Final Payment) ಮಾಡುವ ದಿನಾಂಕ ಪ್ರಕಟಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ಓಲಾ ಎಲೆಕ್ಟ್ರಿಕ್ ಸಿಇಒ ಭವೀಶ್ ಅಗರ್ವಾಲ್, ಈಗಾಗಲೇ 20 ಸಾವಿರ ರೂ. ಮುಂಗಡ ಪಾವತಿಸಿರುವ ಗ್ರಾಹಕರು ಜನವರಿ 21ರ ಸಂಜೆ 6 ಗಂಟೆಯಿಂದ ಅಂತಿಮ ಪಾವತಿ ಮಾಡಬಹುದು ಎಂದು ಮಾಹಿತಿ ನೀಡಿದ್ದಾರೆ.

ಓಲಾ ಎಲೆಕ್ಟ್ರಿಕ್ ತನ್ನ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಬಿಡುಗಡೆ ಘೋಷಿಸುತ್ತಿದ್ದಂತೆ ಜನರು ಭಾರಿ ಸಂಖ್ಯೆಯಲ್ಲಿ ಇದರ ಬುಕಿಂಗ್(Booking) ಮಾಡಿದ್ದರು. ಓಲಾ ಎಸ್1 ಹಾಗೂ ಎಸ್1 ಪ್ರೋ ಸ್ಕೂಟರ್ಗಳು ಬಿಡುಗಡೆ ನಂತರ ಹಲವೆಡೆ ಇದರ ಟೆಸ್ಟ್ ರೈಡ್(Test Ride) ವ್ಯವಸ್ಥೆ ಕೂಡ ಮಾಡಲಾಗಿತ್ತು. ಆದರೆ, ಇದರ ಅಂತಿಮ ಪಾವತಿಗೆ ಅವಕಾಶ ಕಲ್ಪಿಸಿರಲಿಲ್ಲ. ಇದರಿಂದ ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಓಲಾ ಎಲೆಕ್ಟ್ರಿಕ್ ಸಿಇಒ ಭವಿಶ್ ಅಗರ್ವಾಲ್ ಶುಕ್ರವಾರ ಟ್ವೀಟ್ನಲ್ಲಿ “ ಈಗಾಗಲೇ 20,000 ರೂ. ಪಾವತಿಸಿದ ಗ್ರಾಹಕರಿಗಾಗಿ ಓಲಾ ಆ್ಯಪ್ನಲ್ಲಿ(Ola App) ಅಂತಿಮ ಪಾವತಿ ವಿಂಡೋ ಜನವರಿ 21 ರಂದು ಸಂಜೆ 6 ರಿಂದ ತೆರೆಯಲಾಗುತ್ತದೆ.” ಎಂದಿದ್ದಾರೆ. ಜೊತೆಗೆ, ಗ್ರಾಹಕರಿಗೆ ಲೋಹ್ರಿ, ಸಂಕ್ರಾಂತಿ(Makara Sankranti) ಮತ್ತು ಪೊಂಗಲ್ ಶುಭಾಶಯಗಳನ್ನು ಸಹ ತಿಳಿಸಿದ್ದಾರೆ. “ನಾವು ನಮ್ಮ ಸ್ವಂತ ಸುಗ್ಗಿಯನ್ನು ಆಚರಿಸುತ್ತಿದ್ದೇವೆ. ಸ್ಕೂಟರ್ಗಳ ಸಮುದ್ರ ಕಾಯುತ್ತಿದೆ! 20 ಸಾವಿರ ಪಾವತಿಸಿದ ಎಲ್ಲಾ ಗ್ರಾಹಕರಿಗೆ ಓಲಾ ಅಪ್ಲಿಕೇಶನ್ನಲ್ಲಿ ಜನವರಿ 21, ಸಂಜೆ 6 ಗಂಟೆಗೆ ಅಂತಿಮ ಪಾವತಿ ವಿಂಡೋ ತೆರೆಯುತ್ತದೆ. ಜನವರಿ ಹಾಗೂ ಪೆಬ್ರವರಿ ತಿಂಗಳುಗಳಲ್ಲಿ ವಾಹನಗಳು ಡೆಲಿವರಿಗೆ ರವಾನೆಯಾಗಲಿದೆ” ಎಂದಿದ್ದಾರೆ.

Ola S1 Pro Range Test ಒಲಾ S1 ಪ್ರೋ ಸ್ಕೂಟರ್ ನಿಜವಾದ ಮೈಲೇಜ್ ರೇಂಜ್ ಎಷ್ಟು?

ಜೊತೆಗೆ, ಅಗರ್ವಾಲ್ ತಮ್ಮ ಟ್ವೀಟ್ನಲ್ಲಿ ನೂರಾರು ಓಲಾ ಎಸ್1 ಸ್ಕೂಟರ್ಗಳನ್ನು ಇವಿ ತಯಾರಕರ 'ಫ್ಯೂಚರ್ಫ್ಯಾಕ್ಟರಿ' ಆಗಿ ಪರಿವರ್ತಿಸಿದ ರೈಡ್-ಹೇಲಿಂಗ್ ಅಗ್ರಿಗೇಟರ್ನಲ್ಲಿ ಸಾಲಾಗಿ ನಿಂತಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಓಲಾ ಎಲೆಕ್ಟ್ರಿಕ್  2021ರ ಜುಲೈ ತಿಂಗಳಿನಿಂದಲೇ ಗ್ರಾಹಕರಿಗೆ 499 ರೂ. ಪಾವತಿಸಿ, ಎಲೆಕ್ಟ್ರಿಕ್ ಸ್ಕೂಟರ್ಗಳ ಪ್ರೀ-ಲಾಂಚ್ ಬುಕಿಂಗ್ಗೆ ಅವಕಾಶ ಕಲ್ಪಿಸಿತ್ತು. ಮತ್ತು ಕೇವಲ 24 ಗಂಟೆಗಳಲ್ಲಿ 1 ಲಕ್ಷ ಆರ್ಡರ್ಗಳನ್ನು ಸ್ವೀಕರಿಸಿತ್ತು. ಈ ಎಲೆಕ್ಟ್ರಿಕ್ ಸ್ಕೂಟರ್ ವಿತರಣೆಗೆ ವೇಳಾಪಟ್ಟಿ ನಿಗದಿಯಾಗಿದ್ದರೂ ವಿತರಣೆ ವಿಳಂಬವಾಗಿದೆ. ವಿತರಣೆಯಲ್ಲಿ ವಿಳಂಬಕ್ಕಾಗಿ ಗ್ರಾಹಕರಿಂದ ತೀವ್ರ ಟೀಕೆಗೆ ಒಳಗಾದ ನಂತರ, ಕಂಪನಿಯು ಕಳೆದ ವರ್ಷ ಡಿಸೆಂಬರ್ 16 ರಂದು ಮೊದಲ 100 ಸ್ಕೂಟರ್ಗಳನ್ನು ಚೆನ್ನೈ ಮತ್ತು ಬೆಂಗಳೂರಿನ ಗ್ರಾಹಕರಿಗೆ ವಿತರಿಸಿದೆ.

Ola E cycle ಹೊಸ ವರ್ಷದಲ್ಲಿ ಒಲಾ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆ? ಕುತೂಹಲ ಮೂಡಿಸಿದ CEO ಟ್ವೀಟ್!

ಓಲಾ ಎಲೆಕ್ಟ್ರಿಕ್ ಸ್ಕೂಟರ್ಗಳು ಈಗಾಗಲೇ ಗ್ರಾಹಕರಿಗೆ ಕಳುಹಿಸಲು ಪ್ರಾರಂಭಿಸಿವೆ ಮತ್ತು ಅವರಿಂದ ಮಿಶ್ರ ಪ್ರತಿಕ್ರಿಯೆ ಪಡೆದಿದೆ. ಓಲಾ ಸ್ಕೂಟರ್ಗಳ ವೈಶಿಷ್ಟ್ಯಗಳು ಮತ್ತು ವಿನ್ಯಾಸವು ಗ್ರಾಹಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ಪಡೆದಿದೆ, ಸ್ಕೂಟರ್ಗಳ ಕೆಲ ಫೀಚರ್ಗಳು ಕಂಪನಿಯು ಘೋಷಿಸಿದ ಶ್ರೇಣಿಗಿಂತ ಕಡಿಮೆಯಾಗಿದೆ ಎಂಬ ಆರೋಪ ಕೇಳಿಬಂದಿದೆ.ಓಲಾ ಎಲೆಕ್ಟ್ರಿಕ್ನ ಎಸ್1 ಮತ್ತು ಎಸ್1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ 500 ಎಕರೆ ಪ್ರದೇಶದಲ್ಲಿ ಸ್ಥಾಪಿಸಲಾಗಿರುವ ಕಂಪನಿಯ ಸ್ಥಾವರದಲ್ಲಿ ತಯಾರಿಸಲಾಗುತ್ತಿದೆ. ಕಾರ್ಖಾನೆಯು ತನ್ನ ಆರಂಭಿಕ ಹಂತದಲ್ಲಿ 2 ಮಿಲಿಯನ್ ಇ-ಸ್ಕೂಟರ್ಗಳನ್ನು ಮತ್ತು ಭವಿಷ್ಯದಲ್ಲಿ 10 ಮಿಲಿಯನ್ ಯುನಿಟ್ಗಳನ್ನು ತಯಾರಿಸುವ ಸಾಮರ್ಥ್ಯವನ್ನು ಹೊಂದಿದೆ. ಕಾರ್ಖಾನೆಯು ಪ್ರತಿದಿನ ಸುಮಾರು 1000 ಸ್ಕೂಟರ್ಗಳನ್ನು ಉತ್ಪಾದಿಸುತ್ತಿದೆ ಎಂದು ಓಲಾ ಸಿಇಒ ಕಳೆದ ವಾರ ತಿಳಿಸಿದ್ದರು.

Latest Videos
Follow Us:
Download App:
  • android
  • ios