Jeep Comapss Trailhawk ಭಾರತದಲ್ಲಿ ಬಹುನಿರೀಕ್ಷಿತ ಜೀಪ್ ಕಂಪಾಸ್ ಟ್ರೈಲ್‌ಹಾಕ್ ಕಾರು ಬಿಡುಗಡೆ!

  • ನೂತನ ಜೀಪ್ ಕಂಪಾಸ್ ಟ್ರೈಲ್‌ಹಾಕ್ ಕಾರಿನ ಬೆಲೆ 30.72 ಲಕ್ಷ ರೂ
  • ಅತ್ಯುತ್ತಮ ಪರ್ಫಾಮೆನ್ಸ್, ಅತ್ಯಾಕರ್ಷಕ ವಿನ್ಯಾಸದ ಕಾರು
  • ಹೆಚ್ಚುವರಿ ಫೀಚರ್ಸ್, ಗರಿಷ್ಠ  ಸುರಕ್ಷತೆ ಸೇರಿದಂತೆ ಕಾರಿನ ಸಂಪೂರ್ಣ ಮಾಹಿತಿ
Off Road and On road Jeep Comapss Trailhawk launched in India with rs 30 72 lakhs ckm

ನವದೆಹಲಿ(ಫೆ.28): ಬಹುದಿನಗಳಿಂದ ಕಾಯುತ್ತಿದ್ದ ಜೀಪ್ ಕಂಪಾಸ್ ಟ್ರೈಲ್‌ಹಾಕ್ ಕಾರು ಭಾರತದಲ್ಲಿ ಬಿಡುಗಡೆಯಾಗಿದೆ. ಹಲವು ಅಪ್‌ಗ್ರೇಡ್, ಹೆಚ್ಚುವರಿ ಫೀಚರ್ಸ್, ಸುರಕ್ಷತೆ, ಎಂಜಿನ್ ಪರ್ಫಾಮೆನ್ಸ್ ಸೇರಿದಂತೆ ಹಲವು ವಿಚಾರಗಳಲ್ಲಿ ಜೀಪ್ ಹೆಚ್ಚಿನ ಮುತುವರ್ಜಿ ವಹಿಸಿ ನೂತನ ಕಾರು ಬಿಡುಗಡೆ ಮಾಡಿದೆ. ಭಾರತದಲ್ಲಿ ನೂತನ ಕಾರಿನ ಬೆಲೆ 30.72 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).

ಮುಂಭಾಗದ ಗ್ರಿಲ್‌ನಲ್ಲಿ ಸಣ್ಣ ಬದಲಾವಣೆ ಮಾಡಲಾಗಿದೆ. ಇನ್ನು LED ಪ್ರೋಜೆಕ್ಟರ್ ಹೆಡ್‌ಲ್ಯಾಂಪ್ಸ್,  LED DRLs ಸೇರಿದಂತೆ ಮುಂಭಾಗದಲ್ಲಿ ಕೆಲ ಬದಲಾವಣೆಗಳಿವೆ. ಇನ್ನು 17 ಇಂಚಿನ್ ವ್ಹೀಲ್ ಬಳಸಲಾಗಿದೆ. ಫ್ರಂಟ್ ಹಾಗೂ ರೇರ್ ಬಂಪರ್ ಮರು ವಿನ್ಯಾಸಗೊಳಿಸಲಾಗಿದೆ. 

ದೀಪಾವಳಿ ಹಬ್ಬಕ್ಕೆ ಸುಲಭ EMI ಪ್ಲಾನ್ ಘೋಷಿಸಿದ ಜೀಪ್ ಕಂಪಾಸ್!

ಕಾರಿನ ಒಳಾಂಗಣ ಸಂಪೂರ್ಣ ಬ್ಲಾಕ್ ಹಾಗೂ ರೆಡ್ ಸ್ಟಿಚ್ಚಿಂಗ್ ಬಳಸಲಾಗಿದೆ. ಇದರಿಂದ ಕಾರಿನ ಅಂದ ಮತ್ತಷ್ಟು ಹೆಚ್ಚಾಗಿದೆ. ಪನರೋಮಿಕ್ ಸನ್‌ರೂಫ್, ಡ್ಯುಯೆಲ್ ಝೋನ್ ಕ್ಲೈಮೇಟ್ ಕಂಟ್ರೋಲ್, ಮಲ್ಟಿ ಫಂಕ್ಷನ್ ಸ್ಟೀರಿಂಗ್ ವ್ಹೀಲ್, ಎಲೆಕ್ಟ್ರಿಕ್ ಟೈಲ್‌ಗೇಟ್, ಪುಶ್ ಬಟನ್ ಸ್ಟಾರ್ಟ್, 360 ಡಿಗ್ರಿ ಪಾರ್ಕಿಂಗ್ ಕ್ಯಾಮಾರ, ರೈನ್ ಸೆನ್ಸಿಂಗ್ ವೈಪರ್ಸ್ ಸೇರಿದಂತೆ ಹಲವು ಫೀಚರ್ಸ್ ಈ ಕಾರಿನಲ್ಲಿದೆ. ಆಫ್ ರೋಡ್ ಹಾಗೂ ಆನ್‌ರೋಡ್‌ಗಳಿಗೆ ಹೇಳಿ ಮಾಡಿಸಿದ ಕಾರಿದು. 4 ವ್ಹೀಲ್ ಡ್ರೈವ್ ಲಾಕ್, ಹಿಲ್ ಡಿಸೆಂಟ್ ಕಂಟ್ರೋಲ್, ಹಿಲ್ ಹೋಲ್ಡ್ ಅಸಿಸ್ಟ್ ಫೀಚರ್ಸ್ ಕಾರಿನಲ್ಲಿದೆ.

ನೂತನ ಜೀಪ್ ಕಂಪಾಸ್ ಟ್ರೈಲ್‌ಹಾಕ್ ಕಾರು 2.0 ಲೀಟರ್ ಮಲ್ಟಿಜೆಟ್ 2 ಡೀಸೆಲ್ ಎಂಜಿನ್ ಹೊಂದಿದ್ದು  170 PS ಪವರ್ ಹಾಗೂ  350 Nm ಪೀಕ್ ಟಾರ್ಕ್ ಉತ್ಪಾದಿಸಲ್ಲ ಸಾಮರ್ಥ್ಯ ಹೊಂದಿದೆ. 9 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಹೊಂದಿದೆ. ಇದರಲ್ಲಿ ಮಾನ್ಯುಯೆಲ್ ಟ್ರಾನ್ಸ್‌ಮಿಶನ್ ಲಭ್ಯವಿಲ್ಲ. .

ಬ್ರಿಜ್ಜಾ, ವೆನ್ಯೂ ಪ್ರತಿಸ್ಪರ್ಧಿ, ಬಿಡುಗಡೆಯಾಗುತ್ತಿದೆ ಜೀಪ್ ಕಂಪಾಸ್!

ಜೀಪ್ ಕಂಪಾಸ್ ಕಾರು ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿದೆ. ಈಗಾಗಲೇ ಹಲವು ಅಪ್‌ಗ್ರೇಡ್ ಹಾಗೂ ಹೊಸ ವೇರಿಯೆಂಟ್ ಕಾರುಗಳನ್ನು ಜೀಪ್ ಬಿಡುಗಡೆ ಮಾಡಿದೆ. 

ಜೀಪ್‌ ಕಂಪಾಸ್‌ನ 2 ಡೀಸೆಲ್‌ ಅಟೊಮ್ಯಾಟಿಕ್‌ ಕಾರು
ಡೀಸೆಲ್‌ ಎಂಜಿನ್‌ ಹೊಂದಿರುವ ಅಟೊಮ್ಯಾಟಿಕ್‌ ವೇರಿಯೆಂಟ್‌ನ ಎರಡು 4*4 ವಾಹನಗಳನ್ನು ಜೀಪ್‌ ಕಂಪಾಸ್‌ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಲಾಂಗಿಟ್ಯೂಡ್‌ (ಬೇಸ್‌) ಮತ್ತು ಲಿಮಿಟೆಡ್‌ ಪ್ಲಸ್‌ (ಟಾಪ್‌ ಎಂಡ್‌)ಈ ಹೊಸ ಎಸ್‌ಯುವಿಗಳು. ಬಿಎಸ್‌6, 173 ಎಚ್‌ಪಿ 350 ಎನ್‌ಎಂ, 2.0 ಲೀಟರ್‌ ಟರ್ಬೋ ಡಿಸೆಲ್‌ ಎಂಜಿನ್‌ ಹೊಂದಿವೆ. 9 ಅಟೊಮ್ಯಾಟಿಕ್‌ ಸ್ಪೀಡ್‌ ಟ್ರಾನ್ಸ್‌ಮಿಶನ್‌ಗಳು ಇದರಲ್ಲಿವೆ. ಈಗ ಬಿಡುಗಡೆಯಾಗಿರುವ ಎರಡೂ ವಾಹನಗಳಲ್ಲೂ ಕ್ರೂಸ್‌ ಕಂಟ್ರೋಲ್‌ ಇದೆ. ಸ್ಪೀಡ್‌ ಕಂಟ್ರೋಲ್‌ಗೆ ಇದು ಸಹಕಾರಿ. 7 ಇಂಚಿನ ಯು ಕನೆಕ್ಟ್ ಸ್ಕ್ರೀನ್‌ ಇದೆ. ರಿವರ್ಸ್‌ ಕ್ಯಾಮರಾ ಸೆಟ್‌ಅಪ್‌ ಇದೆ.

ಬೆಲೆ : ಜೀಪ್‌ ಕಂಪಾಸ್‌ ಲಾಂಗಿಟ್ಯೂಡ್‌ - 21.96 ಲಕ್ಷ ರು. (ಎಕ್ಸ್‌ ಶೋ ರೂಮ್‌), ಜೀಪ್‌ ಕಂಪಾಸ್‌ ಲಿಮಿಟೆಡ್‌ ಪ್ಲಸ್‌ - 24.99 ಲಕ್ಷ ರು. (ಎಕ್ಸ್‌ಶೋ ರೂಮ್‌)

ಜೀಪ್‌ ಕಂಪಾಸ್‌ನ ಸ್ಪೋಟ್ಸ್‌ರ್‍ ಪ್ಲಸ್‌ ಟ್ರಿಮ್‌
ಹೆಚ್ಚುತ್ತಿರುವ ಸ್ಪರ್ಧೆಯ ಮಧ್ಯೆ ಫಿಯೆಟ್‌ ಕ್ರೈಸ್ಲರ್‌ ಇಂಡಿಯಾ ಕಂಪೆನಿ ಜೀಪ್‌ ಕಂಪಾಸ್‌ ಸೀರಿಸ್‌ನ ಹೊಸ ಮಾಡೆಲ್‌ ಸ್ಪೋಟ್ಸ್‌ರ್‍ ಪ್ಲಸ್‌ ಟ್ರಿಮ್‌ ಅನ್ನು ಮಾರುಕಟ್ಟೆಗೆ ಬಿಟ್ಟಿದೆ. 16 ಇಂಚಿನ ಸ್ಟೋರ್ಟಿ ಆಕರ್ಷಕ ಅಲಾಯ್‌, ತಾಪಮಾನವನ್ನು ನಿಯಂತ್ರಿಸುವ ಡ್ಯುಯೆಲ್‌ ಝೋನ್‌ ಸ್ವಯಂ ಚಾಲಿತ ಏರ್‌ ಕಂಡೀಶನಿಂಗ್‌, ರಿಯರ್‌ ಪಾರ್ಕಿಂಗ್‌ ಸೆನ್ಸಾರ್‌ಗಳು, ಕಾರಿನ ಮೇಲ್ಭಾಗ ಕರಿಬಣ್ಣದ ರೂಫ್‌ ರೈಲ್ಸ್‌ ಮೊದಲಾದ 21 ಹೊಸ ಫೀಚರ್‌ಗಳಿರುವ ಕಾರ್‌ ಇದು. ಇದಲ್ಲದೇ ಎಲೆಕ್ಟ್ರಿಕ್‌ ಪಾರ್ಕಿಂಗ್‌ ಬ್ರೇಕ್‌ ಮತ್ತೊಂದು ವಿಶೇಷತೆ. ಕಂಫರ್ಟ್‌ ಹಾಗೂ ಲಗ್ಸುರಿಗಳೆರಡನ್ನೂ ಹದವಾಗಿ ಬೆರೆಸಿ ತಯಾರಿಸಿರೋ ಈ ಎಸ್‌ಯುವಿ 14.1 ರಷ್ಟುಮೈಲೇಜ್‌ ಕೊಡುತ್ತೆ ಅಂತ ಕಂಪೆನಿ ಹೇಳುತ್ತೆ. ಪೆಟ್ರೋಲ್‌ ಹಾಗೂ ಡೀಸೆಲ್‌ಗಳೆರಡರಲ್ಲೂ ಲಭ್ಯ.
 

Latest Videos
Follow Us:
Download App:
  • android
  • ios