ಬ್ರಿಜ್ಜಾ, ವೆನ್ಯೂ ಪ್ರತಿಸ್ಪರ್ಧಿ, ಬಿಡುಗಡೆಯಾಗುತ್ತಿದೆ ಜೀಪ್ ಕಂಪಾಸ್!
ಮಾರುತಿ ಬ್ರಿಜ್ಜಾ, ಹ್ಯುಂಡೈ ವೆನ್ಯೂ ಸೇರಿದಂತೆ ಸಬ್ ಕಾಂಪಾಕ್ಟ್ suv ಕಾರುಗಳಿಗೆ ಮತ್ತೊಂದು ಪ್ರತಿಸ್ಪರ್ಧಿ ರಸ್ತೆಗಿಳಿಯಲು ಸಜ್ಜಾಗಿದೆ. ಜೀಪ್ ಕಂಪಾಸ್ 4 ಮೀಟರ್ SUV ಕಾರು ಬಿಡುಗಡೆ ಮಾಡುತ್ತಿದೆ. ನೂತನ ಕಾರಿನ ಕುರಿತ ವಿವರ ಇಲ್ಲಿದೆ.
ನವದೆಹಲಿ(ಅ.25): ಸಬ್ ಕಾಂಪಾಕ್ಟ್ SUV ಕಾರುಗಳಲ್ಲಿ ಮಾರುತಿ ಬ್ರೆಜ್ಜಾ ಹಾಗೂ ಹ್ಯುಂಡೈ ವೆನ್ಯೂ ಅಗ್ರಸ್ಥಾನದಲ್ಲಿದೆ. ಇದಕ್ಕೆ ಪ್ರತಿಸ್ಪರ್ಧಿಯಾಗಿ ಫೋರ್ಡ್ ಇಕೋಸ್ಪೋರ್ಟ್, ಮಹೀಂದ್ರ XUV300, ಟಾಟಾ ನೆಕ್ಸಾನ್ ಸೇರಿದಂತೆ ಹಲವು ಕಾಂಪಾಕ್ಟ್ ಕಾರುಗಳು ಮಾರುಕಟ್ಟೆಯಲ್ಲಿದೆ. ಇದೀಗ ಭಾರತದ ಮೋಸ್ಟ್ ಸ್ಟೈಲೀಶ್ SUV ಎಂದೇ ಗುರುತಿಸಿಕೊಂಡಿರುವ ಜೀಪ್ ಕಂಪಾಸ್, ಕಂಪಾಕ್ಟ್ SUV ಕಾರು ಬಿಡುಗಡೆ ಮಾಡುತ್ತಿದೆ.
ಇದನ್ನೂ ಓದಿ: ಮಾರುತಿ ಬ್ರೆಜ್ಜಾಗೆ ತಲೆನೋವಾದ ಹ್ಯುಂಡೈ ವೆನ್ಯು; 75,000 ಬುಕಿಂಗ್ ದಾಖಲೆ!
SUV ಹೈಯರ್ ಸೆಗ್ಮೆಂಟ್‌ಗಳಲ್ಲಿ ಜೀಪ್ ಕಂಪಾಸ್ ಮುಂಚೂಣಿಯಲ್ಲಿದೆ. ಇದೀಗ ಸಬ್ 4 ಮೀಟರ್ SUV ಸೆಗ್ಮೆಂಟ್‌ನಲ್ಲಿ ಮಿಂಚಲು ರೆಡಿಯಾಗುತ್ತಿದೆ. ಈ ವರ್ಷದ ಅಂತ್ಯದಲ್ಲಿ ಜೀಪ್ ಕಂಪಾಸ್ SUV ಕಾರು ಅನಾವರಣಗೊಳ್ಳಲಿದೆ.
ಇದನ್ನೂ ಓದಿ: ಮಾರುತಿ ಬ್ರೆಜಾ to ಹ್ಯುಂಡೈ ವೆನ್ಯೂ: ಇಲ್ಲಿದೆ ಭಾರತದ SUV ಕಾರು ಬೆಲೆ ಪಟ್ಟಿ!
ನೂತನ ಜೀಪ್ ಕಂಪಾಸ್ ಕಾರು 1.4 ಲೀಟರ್ ಪೆಟ್ರೋಲ್ ಎಂಜಿನ್ ಹಾಗೂ 1.3 ಲೀಟರ್ ಮಲ್ಟಿಜೆಟ್ ಡೀಸೆಲ್ ಎಂಜಿನ್ ಆಯ್ಕೆ ಲಭ್ಯವಿದೆ. ಎಂಟ್ರಿ ಲೆವೆಲ್ 1.0 ಲೀಟರ್ ಎಂಜಿನ್ ಕೂಡ ಬಿಡುಗಡೆ ಮಾಡುವ ಸಾಧ್ಯತೆ ಇದೆ. 118 bhp ಪವರ್ ಹಾಗೂ 190nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.
ಹ್ಯುಂಡೈ ವೆನ್ಯೂ ಬಿಡುಗಡೆಯಾದ ಬಳಿಕ, ಮಾರುತಿ ಬ್ರಿಜ್ಜಾ ಕಾರಿಗೆ ಹೊಡೆತ ಬಿದ್ದಿದೆ. ಇದೀಗ ಜೀಪ್ ಕಂಪಾಸ್ ಕಾರು ಬಿಡುಗಡೆಯಾದರೆ ಪೈಪೋಟಿ ಹೆಚ್ಚಾಗಲಿದೆ. ಕಾರಿನ ಬೆಲೆ ಹಾಗೂ ಹೆಚ್ಚಿನ ಮಾಹಿತಿ ಬಹಿರಂಗವಾಗಿಲ್ಲ.