ದೆಹಲಿ(ಡಿ.05) ನಿಸಾನ್‌ ಇಂಡಿಯಾದ ಹೊರ ಕಾರು ನಿಸಾನ್‌ ಮ್ಯಾಗ್ನೈಟ್‌ ನ ಬೆಲೆ ಘೋಷಣೆಯಾಗಿದೆ. ಈಗ ದೇಶಾದ್ಯಂತ ಬುಕ್ಕಿಂಗ್‌ ಶುರುವಾಗ್ತಿದೆ. ಈ ತಿಂಗಳ ಕೊನೆಯ ಒಳಗೆ ಬುಕ್ಕಿಂಗ್‌ ಮಾಡಿದರೆ ವಿಶೇಷ ಉದ್ಘಾಟನಾ ಬೆಲೆ 4,99,000 ರು.ಗಳಿಗೆ ಕಾರು ನಿಮ್ಮದಾಗಿಸಬಹುದು. 

ವಿಶೇಷ ಉದ್ಘಾಟನಾ ಆಫರ್ ಜೊತೆಗೆ ನಿಸಾನ್ ಮ್ಯಾಗ್ನೈಟ್ SUV ಕಾರು ಬಿಡುಗಡೆ!.

ನಿಸಾನ್ ಮ್ಯಾಗ್ನೈಟ್ ದೇಶದ ಅತ್ಯಂತ ಕಡಿಮೆ ಬೆಲೆ ಹಾಗೂ ಕೈಗೆಟುಕುವ ದರದ ಕಾರಾಗಿದೆ.  ಕೇವಲ 11,000 ರೂಪಾಯಿಗೆ ಕಾರು ಬುಕ್ ಮಾಡಿಕೊಳ್ಳಬಹುದು.

ಎಕ್ಸ್‌-ಟ್ರಾನಿಕ್‌ ಸಿವಿಟಿ, ಕ್ರೂಸ್‌ ಕಂಟ್ರೋಲ್‌, 360 ಡಿಗ್ರಿ ಅರೌಂಡ್‌ ವ್ಯೂವ್‌ ಮಾನಿಟರ್‌ ಮತ್ತು ನಿಸಾನ್‌ ಕನೆಕ್ಟ್ ನಂತಹ ಫೀಚರ್‌ಗಳಿವೆ. ವೆಬ್‌ಸೈಟ್‌ ಮೂಲಕ ವರ್ಚುವಲ್‌ ಟೆಸ್ಟ್‌ ಡ್ರೈವ್‌ ಮಾಡುವ ಅವಕಾಶವೂ ಇದೆ. ಬೋಲ್ಡ್‌, ಬ್ಯೂಟಿಫುಲ್‌ ಹಾಗೂ ಚೆರಿಸ್ಮಾ್ಯಟಿಕ್‌ ಲುಕ್‌ನ ಎಸ್‌ಯುವಿ ಇದು ಅಂತ ಕಂಪೆನಿ ಬೆನ್ನು ತಟ್ಟಿಕೊಂಡಿದೆ.

ನಿಸಾನ್ ಮ್ಯಾಗ್ನೈಟ್ ಕಾರು, ಸದ್ಯ ಮಾರುಕಟ್ಟೆಯಲ್ಲಿರುವ ಮಾರುತಿ ಬ್ರೆಜಾ, ಟಾಟಾ ನೆಕ್ಸಾನ್, ಹ್ಯುಂಡೈ ವೆನ್ಯೂ, ಕಿಯಾ ಸೊನೆಟ್, ಮಹೀಂದ್ರ ಎಕ್ಸ್‌ಯುವಿ 300 ಸೇರಿದಂತೆ ಸಬ್ ಕಾಂಪಾಕ್ಟ್ SUV ಕಾರುಗಳಿಗ ಪೈಪೋಟಿಯಾಗಿ ರಸ್ತೆಗಿಳಿದಿದೆ.